ರಾಮನಗರ: ವೈದ್ಯರನ್ನು (Doctor) ನಾರಾಯಣ ಅಂತಾರೆ. ಅಂದರೆ ವೈದ್ಯರು ದೇವರಿಗೆ (God) ಸಮಾನ ಎನ್ನುವುದು ಹಿರಿಯರ ಮಾತು. ಆದರೆ ಕೆಲವು ವೈದ್ಯರು ಹಣ (Money) ಮಾಡುವ ದುರಾಸೆಗೆ ಬಿದ್ದು, ರೋಗಿಯ (patient) ಪ್ರಾಣದ ಜೊತೆ ಚೆಲ್ಲಾಟ ಆಡುತ್ತಾರೆ. ಇನ್ನು ಕೊರೋನಾ (Corona) ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾಗ ಪ್ರಪಂಚದಾದ್ಯಂತ ವೈದ್ಯರು, ನರ್ಸ್ಗಳು (Nurse), ಆಸ್ಪತ್ರೆ ಸಿಬ್ಬಂದಿ (Hospitals staff) ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಈ ಮೂಲಕ ವೈದ್ಯಲೋಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯೆ ಹಣದಾಸೆಗೆ ಬಿದ್ದು, ಬಡ ರೋಗಿಗಳಿಂದ ಹಣ ವಸೂಲಿಗೆ ಇಳಿದಿದ್ದಾಳೆ. ಇಲ್ಲಿ ಬಡವರು ಬಂದು ಸರ್ಕಾರಿ ಆಸ್ಪತ್ರೆ (Government Hospital) ಸೇರಿದ್ರೆ, ಅವರಿಂದಲೇ ಈ ಧನದಾಹಿ ವೈದ್ಯೆ ಹಣ ಪೀಕುತ್ತಿದ್ದಾಳೆ. ಬಡವರಿಗೆ ಉತ್ತಮ ಆರೋಗ್ಯ ವ್ಯವಸ್ಥೆ ಸಿಗಲಿ, ಸರ್ಕಾರಿ ಆಸ್ಪತ್ರೆಯಲ್ಲೂ ಉತ್ತಮ ವೈದ್ಯಕೀಯ ವ್ಯವಸ್ಥೆ ಸಿಗಲಿ ಅಂತ ಸರ್ಕಾರವೇನೋ ಹಲವು ಯೋಜನೆ ರೂಪಿಸುತ್ತದೆ. ಆದರೆ ಸರ್ಕಾರದ ಉದ್ದೇಶ ಇಂತಹ ಲಂಚಬಾಕ ವೈದ್ಯರಿಂದ ಈಡೇರುವುದೇ ಇಲ್ಲ. ಇದೀಗ ಈ ಧನದಾಹಿ ವೈದ್ಯದ ಲಂಚಬಾಕತನದ ವಿಡಿಯೋ ವೈರಲ್ ಆಗಿದೆ.
ಬಿಡದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಂಚಬಾಕ ವೈದ್ಯೆ!
ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಂಚದಾಹಿ ವೈದ್ಯರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಶಶಿಕಲಾ ಎಂಬುವರ ವಿರುದ್ಧ ಇಂಥದ್ದೊಂದು ಗಂಭೀರ ಆರೋಪ ಕೇಳಿ ಬಂದಿದೆ.
ಹೆರಿಗೆಯಾದ ಮಹಿಳೆಯ ಡಿಸ್ಚಾರ್ಜ್ಗೆ 10 ಸಾವಿರ ರೂಪಾಯಿ!
ಬಿಡದಿ ನಿವಾಸಿಯಾಗಿರುವ, ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಮಂಜುನಾಥ್ ಎಂಬುವರು ತಮ್ಮ ಗರ್ಭಿಣಿ ಪತ್ನಿಯನ್ನು ಕರೆದುಕೊಂಡು ಹೋಗಿ, 5 ದಿನಗಳ ಹಿಂದೆ ಅದೇ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಮಹಿಳೆಗೆ ಅಲ್ಲೇ ಹೆರಿಗೆಯೂ ಆಗಿದೆ. ಇದೀಗ ಬಾಣಂತಿ ಹಾಗೂ ಹಸುಗೂಸನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಖುದ್ದು ವೈದ್ಯರೇ ಬರೋಬ್ಬರಿ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: Doctor: ಟ್ರಾಫಿಕ್ನಲ್ಲಿ ಕಾರು ಸಿಲುಕಿ ಪರದಾಟ, ರೋಗಿ ಉಳಿಸಲು ಆಸ್ಪತ್ರೆಗೆ ಓಡಿಕೊಂಡೇ ಬಂದ ಡಾಕ್ಟರ್!
2 ಸಾವಿರ ರೂಪಾಯಿ ಸಾಕಾಗುವುದಿಲ್ಲ ಎಂದ ವೈದ್ಯೆ!
10 ಸಾವಿರ ಹಣಕ್ಕೆ ವೈದ್ಯೆ ಶಶಿಕಲಾ ಬೇಡಿಕೆ ಇಟ್ಟಿದ್ದಾರೆ. ಇದನ್ನು ಕೇಳಿ ಶಾಕ್ಗೆ ಒಳಗಾದ ಮಂಜುನಾಥ್, 2 ಸಾವಿರ ರೂಪಾಯಿ ಕೊಡೋದಕ್ಕೆ ಮುಂದಾಗಿದ್ದಾರೆ. ಆಗ ವೈದ್ಯೆ ನಿರಾಕರಿಸಿದ್ದಾರೆ. ನಾನು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಬಡ ಕಾರ್ಮಿಕ ಮೇಡಂ, ಸಂಬಳ ಆಗಿಲ್ಲ, ಮುಂದಿನ ಬಾರಿ ಬಂದಾಗ ಹಣ ಕೊಡ್ತೀನಿ ಅಂತ ವಿನಂತಿಸಿದ್ದಾರೆ. ಆದರೆ ಲಂಚಬಾಕ ವೈದ್ಯೆಯ ಮನಸ್ಸು ಕರಗೋದಿಲ್ಲ.
ಎಲ್ಲರಿಗೂ ಲಂಚದ ಹಣ ಹಂಚಬೇಕು ಎಂದ ವೈದ್ಯೆ!
ಇನ್ನು 2 ಸಾವಿರ ಕೊಟ್ಟರೆ ಏನು ಮಾಡುವುದು? ಇಲ್ಲಿ ಎಲ್ಲರಿಗೂ 500 ರೂಪಾಯಿಯಾದರೂ ಹಣ ಕೊಡ್ಬೇಕು. ಹೀಗಾಗಿ 10 ಸಾವಿರ ರೂಪಾಯಿ ಹಣವನ್ನೇ ಕೊಡಬೇಕು ಅಂತ ವೈದ್ಯೆ ಕಡ್ಡಿ ಮುರಿದಂತೆ ಹೇಳಿದ್ದಾರೆ.
ವೈದ್ಯೆ ಲಂಚಕ್ಕೆ ಬೇಡಿಕೆ ಇಟ್ಟ ವಿಡಿಯೋ ವೈರಲ್
ಇನ್ನು ಸರ್ಕಾರಿ ಆಸ್ಪತ್ರೆ ಸ್ತ್ರೀರೋಗ ತಜ್ಞೆ ನಾಚಿಕೆ ಬಿಟ್ಟು 10 ಸಾವಿರ ರೂಪಾಯಿ ಲಂಚ ಕೇಳುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ. ಬಡ ವ್ಯಕ್ತಿ 2 ಸಾವಿರ ಕೊಡ್ತುತೀನಿ ಅಂತ ಮನವಿ ಮಾಡಿದ್ರೂ, ಅದಕ್ಕೆ ಒಪ್ಪದೇ 10 ಸಾವಿಕಕ್ಕೆ ಶಶಿಕಲಾ ಡಿಮ್ಯಾಂಡ್ ಮಾಡಿದ್ದಾರೆ. ಈ ಎಲ್ಲಾ ದೃಶ್ಯ, ಸಂಭಾಷಣೆ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈದ್ಯೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Hospital: ಇದು ಹೆಸರಿಗೆ ಮಾತ್ರ ಜಿಲ್ಲಾಸ್ಪತ್ರೆ; ಆದ್ರೆ ಬಾಣಂತಿಯರಿಗೆ ಬೆಡ್ ಸಿಗಲ್ಲ, ಬಿಸಿ ನೀರು ಕೊಡಲ್ಲ!
ಲಂಚಬಾಕ ವೈದ್ಯೆ ಅಮಾನತು
ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಸೂತಿ ತಜ್ಞೆ ಡಾ. ಶಶಿಕಲಾ ಹಾಗೂ ಡಾ. ಐಶ್ವರ್ಯ ಅವರನ್ನು ಅಮಾನತು ಮಾಡಿ ರಾಮನಗರ ಡಿಹೆಚ್ಓ ಆದೇಶ ನೀಡಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ ನೋಟೀಸ್ ನೀಡಲಾಗಿತ್ತು, ಲಂಚ ಪಡೆಯುತ್ತಿರುವ ಬಗ್ಗೆ ವೀಡಿಯೋದಲ್ಲಿ ಸ್ಪಷ್ಟವಾಗಿದೆ. ಹಾಗಾಗಿ ಇಬ್ಬರನ್ನೂ ಅಮಾನತು ಮಾಡಿದ್ದೇವೆ. ಈ ಬಗ್ಗೆ ಸಂಪೂರ್ಣ ವರದಿ ಸಂಗ್ರಹಿಸಿ ಕ್ರಮಕೈಗೊಳ್ಳುತ್ತೇವೆ ಅಂತ ಡಿಹೆಚ್ಓ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ