School for Sale: ರಾಜಧಾನಿಯಲ್ಲಿ ಸರ್ಕಾರಿ ಶಾಲೆ ಮಾರಾಟಕ್ಕಿದೆಯಾ? 77 ವರ್ಷ ಹಳೆಯ ಸ್ಕೂಲ್‌ಗೆ ಇದೆಂಥಾ ಸ್ಥಿತಿ?

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮಾತ್ರ ಸರ್ಕಾರಿ ಶಾಲೆಯನ್ನೇ ಮಾರಾಟ ಮಾಡೋದಕ್ಕೆ ಸರ್ಕಾರನೇ ಮುಂದಾಗಿರೋ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಪೇಟೆಯಲ್ಲಿರುವ 77 ವರ್ಷಗಳಷ್ಟು ಹಳೆಯದಾದ ಸರ್ಕಾರಿ ಹೈಸ್ಕೂಲ್ ಒಂದನ್ನು ಜಾಗದ ಸಮೇತ ಮಾರಾಟ ಮಾಡೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ಯಂತೆ.

ಚಿಕ್ಕಪೇಟೆಯ ಸರ್ಕಾರಿ ಶಾಲೆ

ಚಿಕ್ಕಪೇಟೆಯ ಸರ್ಕಾರಿ ಶಾಲೆ

  • Share this:
ಬೆಂಗಳೂರು: ಕೊರೋನಾ (Corona) ಬಂದ ಬಳಿಕವಂತೂ ಖಾಸಗಿ ಶಾಲೆಗಳಿಗಿಂತ (Privet Schools) ಸರ್ಕಾರಿ ಶಾಲೆಗಳಿಗೇ (Government Schools) ಭಾರೀ ಡಿಮ್ಯಾಂಡ್ (Demand) ಬಂದಿತ್ತು. ಪೋಷಕರು (Parents) ತಮ್ಮ ಮಕ್ಕಳನ್ನು (Children) ಕಾನ್ವೆಂಟ್‌ಗಳಿಂದ (Convent) ಬಿಡಿಸಿ ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದರು. ಇತ್ತ ಸರ್ಕಾರಿ ಶಾಲೆಗಳು ಉಳಿಯಬೇಕು ಅಂತ ಸರ್ಕಾರನೇ (Government) ಹೇಳುತ್ತಿದೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿ (Bengaluru) ಮಾತ್ರ ಸರ್ಕಾರಿ ಶಾಲೆಯನ್ನೇ ಮಾರಾಟ ಮಾಡೋದಕ್ಕೆ ಸರ್ಕಾರನೇ ಮುಂದಾಗಿರೋ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಪೇಟೆಯಲ್ಲಿರುವ (Chikkapete) 77 ವರ್ಷಗಳಷ್ಟು ಹಳೆಯದಾದ ಸರ್ಕಾರಿ ಹೈಸ್ಕೂಲ್ (High School) ಒಂದನ್ನು ಜಾಗದ (Land) ಸಮೇತ ಮಾರಾಟ (Sale) ಮಾಡೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ಯಂತೆ. ಈ ಬಗ್ಗೆ ಬೆಂಗಳೂರು ಜಿಲ್ಲಾಧಿಕಾರಿಗಳು (DC) ಕಂದಾಯ ಇಲಾಖೆಗೆ (Revenue Department) ಪತ್ರ (Letter) ಬರೆದಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಚಿಕ್ಕಪೇಟೆಯಲ್ಲಿದೆ 77 ವರ್ಷಗಳಷ್ಟು ಹಳೆಯ ಸರ್ಕಾರಿ ಹೈಸ್ಕೂಲ್

ಬೆಂಗಳೂರು ಉತ್ತರ ತಾಲ್ಲೂಕು ಚಿಕ್ಕಪೇಟೆ ಒಟಿಸಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ 77 ವರ್ಷಗಳಷ್ಟು ಹಳೆಯದ್ದಾಗಿದೆ. 13,735 ಚದರಡಿ ವಿಸ್ತೀರ್ಣದ ಮೈದಾನದಲ್ಲಿ 1945ರಲ್ಲೇ ಪ್ರಾಥಮಿಕ, ಮಾಧ್ಯಮಿಕ ಶಾಲೆ ಆರಂಭವಾಗಿದ್ದವು. ಸ್ವಾತಂತ್ರ್ಯಾ ನಂತರ ಅದೇ ಜಾಗದಲ್ಲಿ ಪ್ರೌಢಶಾಲೆಯನ್ನೂ ತೆರೆಯಲಾಗಿತ್ತು. ಸದ್ಯ ಇಲ್ಲಿನ ಪ್ರತಿ ಚದರಡಿಗೆ 40 ಸಾವಿರ ರೂಪಾಯಿಗಳಷ್ಟು ಮಾರುಕಟ್ಟೆ ಮೌಲ್ಯ ಇದೆ. ಇದೇ ಶಾಲೆ ಮಾರಾಟಕ್ಕೆ ಈಗ ಪತ್ರ ಬರೆಯಲಾಗಿದ್ಯಂತೆ.

140ಕ್ಕೂ ಹೆಚ್ಚು ಮಕ್ಕಳಿಂದ ವ್ಯಾಸಂಗ

ಸದ್ಯ ಈ ಶಾಲೆಯಲ್ಲಿ 8, 9 ಮತ್ತು 10ನೇ ತರಗತಿ ನಡೆಯುತ್ತಿದೆ. ಈ ಮೂರು ತರಗತಿಗಳಲ್ಲಿ ಒಟ್ಟು 140ಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಇದೀಗ ಈ ಶಾಲಾ ಕಟ್ಟಡವನ್ನು ಜಾಗದ ಸಮೇತ ಮಾರಾಟ ಮಾಡುವ ಕುರಿತು ಬೆಂಗಳೂರು ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Bengaluru: ವಿಶ್ವದ 6 ಅತ್ಯುತ್ತಮ ನಗರಗಳಲ್ಲಿ ಬೆಂಗಳೂರು, ಈ ಊರೇ ಬೆಸ್ಟ್ ಎಂದ ವಲಸಿಗರು!

ಶಾಲೆ ಜಾಗ ಗುತ್ತಿಗೆ ನೀಡಿದ್ದ ಸರ್ಕಾರ

ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕೊಠಡಿಗಳನ್ನು ಕೆಡವಿ, ಹೊಸ ಕೊಠಡಿ ನಿರ್ಮಿಸಿಕೊಡಲು ಅವಕಾಶ ಕೋರಿ 1979ರಲ್ಲಿ ರಜತಾ ಎಂಟರ್‌ ಪ್ರೈಸಸ್‌ ಎಂಬ ಖಾಸಗಿ ಸಂಸ್ಥೆಯೊಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸಂಸ್ಥೆಯ ಮನವಿ ಪುರಸ್ಕರಿಸಿದ ಸರ್ಕಾರ ನೆಲ ಹಾಗೂ ಮೊದಲ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ಕಟ್ಟಲು, ಎರಡನೇ ಮಹಡಿಯಲ್ಲಿ ಶಾಲೆಗಳಿಗೆ ಕೊಠಡಿ ನಿರ್ಮಿಸಿಕೊಡಲು ಒಪ್ಪಂದ ಮಾಡಿಕೊಂಡು ತಿಂಗಳಿಗೆ  16,350 ರೂಪಾಯಿಯಂತೆ 26 ವರ್ಷಗಳಿಗೆ ಶಾಲಾ ಜಾಗವನ್ನು ಗುತ್ತಿಗೆ ನೀಡಿತ್ತು.

2021ರ ಜೂನ್‌ನಲ್ಲೇ ಗುತ್ತಿಗೆ ಅವಧಿ ಮುಕ್ತಾಯ

ಗುತ್ತಿಗೆ ಅವಧಿ 2005ಕ್ಕೆ ಮುಕ್ತಾಯ ವಾದ ನಂತರ ಕೋರ್ಟ್‌ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡು, ನಂತರ ರಜತಾ ಕಾಂಪ್ಲೆಕ್ಸ್‌ ಬಾಡಿಗೆದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ 2011ರಲ್ಲಿ ತಿಂಗಳು 6.41 ಲಕ್ಷಕ್ಕೆ 10 ವರ್ಷಗಳಿಗೆ ಗುತ್ತಿಗೆ ನೀಡಿತ್ತು. ಈ ಅವಧಿಯೂ 2021 ಜೂನ್‌ಗೆ ಮುಕ್ತಾಯವಾಗಿದೆ. ಶಾಲೆಯ ಜಾಗದಲ್ಲಿ ಪ್ರಸ್ತುತ ನಾಲ್ಕು ಮಹಡಿಗಳ ಕಟ್ಟಡವಿದೆ. ನೆಲ ಮಹಡಿಯಲ್ಲಿ 141 ಮಳಿಗೆಗಳಿವೆ. ಎರಡನೇ ಮಹಡಿಯಲ್ಲಿ ಶಾಲೆ ಇದ್ದರೆ, ಉಳಿದೆಡೆ ಬ್ಯಾಂಕ್‌, ವಸತಿ ಗೃಹಗಳಿವೆ.

ಶಾಲೆ ಮುಚ್ಚುವಂತೆ ಮನವಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಸಕ್ತ ವರ್ಷದಲ್ಲಿ ಸರ್ಕಾರಿ ಶಾಲೆ ಮತ್ತು ಕಾಲೇಜು ಆಸ್ತಿ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಕಟ್ಟಡವನ್ನು ಶಾಲೆಯ ಹೆಸರಿಗೆ ಖಾತೆ ಮಾಡಿಕೊಡುವಂತೆ ಶಾಲೆಯ ಮುಖ್ಯ ಶಿಕ್ಷಕರು ಸಲ್ಲಿಸಿದ ಮನವಿಯನ್ನೂ ಕಂದಾಯ ಇಲಾಖೆ ಪುರಸ್ಕರಿಸಿಲ್ಲ. ಇದೀಗ ಮಕ್ಕಳು ಶಾಲೆಗೆ ಅತ್ತಿ ಹೋಗಲು ಕಷ್ಟವಾಗುತ್ತೆ. ಹಾಗಾಗಿ ಈಶಾಲೆಯನ್ನ ಮುಚ್ಚಿ, ಬೇರೆಡೆ ಪ್ರಾರಂಭಿಸಿ. ನಮ್ಮ ಅಸೋಷಿಯೇನ್‌ಗೆ ಈ ಜಾಗವನ್ನು ಕೊಡಿ ಎಂದು ಮನವಿ ಮಾಡಿದೆಯಂತೆ.

ಕಂದಾಯ ಇಲಾಖೆಗೆ ಡಿಸಿ ಪತ್ರ

ಈ ಕುರಿತು ಡಿಸಿ ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರಂತೆ. ಇನ್ನೊಂದು ಮೂಲದ ಪ್ರಕಾರ ಇದು ಸರ್ಕಾರಿ ಶಾಲೆಯ ಜಾಗ ಎಂದು ದೃಢೀಕರಿಸಲೂ ಸೂಕ್ತ ದಾಖಲೆ ಇಲ್ಲದಂತಾಗಿದೆ. ಗುತ್ತಿಗೆ ಪಡೆದವರು ಈ ಜಾಗ ನಮ್ಮದೇ ಅಂತಿದ್ದಾರೆ. ಹೀಗಾಗಿ ಜಾಗ ಮಾರಾಟ ಮಾಡಲು ಕಂದಾಯ ಇಲಾಖೆ ಮುಂದಾಗಿದೆಯಂತೆ.

ಇದನ್ನೂ ಓದಿ: Ganesha Festival: ಶಾಲೆಯಲ್ಲಿ ಗಣಪತಿ ಕೂರಿಸಿದರೆ ಮುಸ್ಲಿಮರ ಹಬ್ಬಕ್ಕೂ ಅವಕಾಶ ಕೊಡಿ! ಮುಸ್ಲಿಂ ಸಂಘಟನೆಗಳ ಆಗ್ರಹ

ಶಿಕ್ಷಣ ಸಚಿವರು ಹೇಳುತ್ತಿರುವುದು ಏನು?

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆಯ ಜಾಗ ಶಿಕ್ಷಣ ಇಲಾಖೆಗೆ ಸೇರಿದ್ದಾಗಿದ್ದು, ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಪರಭಾರೆ ಮಾಡಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
Published by:Annappa Achari
First published: