ಕಾನೂನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ವಿ ಎಸ್ ಉಗ್ರಪ್ಪ

ತಮ್ಮನ್ನ ಸೋಲಿಸುವ ಪ್ರಯತ್ನ ನಡೆದಿತ್ತು. ತಾನು ಹಣ ನೀಡಿ ಗೆದ್ದು ಬಂದಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಹೇಳಿಕೆ ಕೊಡುತ್ತಾರೆ. ಯತ್ನಾಳ್ ಹೇಳಿಕೆ ಕೂಡ ಅಪರಾಧವಾಗುತ್ತದೆ.

ಮಾಜಿ ಸಂಸದ ವಿ. ಎಸ್ ಉಗ್ರಪ್ಪ.

ಮಾಜಿ ಸಂಸದ ವಿ. ಎಸ್ ಉಗ್ರಪ್ಪ.

  • Share this:
ಬೆಂಗಳೂರು(ಜ. 21): ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಸಿಕ್ಕಿದೆ. ಸಾರ್ವಜನಿಕ ಸ್ಥಳಗಳ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಆದರೆ ಈ ಎಲ್ಲಾ ಘಟನೆಗಳು ನೋಡಿದ್ರೆ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. 

ಮಸೀದಿಗಳಲ್ಲಿ ಬಂದೂಕು ಇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳುತ್ತಾರೆ. ಅಲ್ಲದೆ ಅಲ್ಪಸಂಖ್ಯಾತರ ನೆರವಿಗೆಂದು ಇರುವ ಹಣವನ್ನು ಇನ್ನೊಂದು ಇಲಾಖೆಗೆ ಕೊಡುತ್ತೇವೆ ಅಂತಾರೆ. ನಮ್ಮ ಸಂವಿಧಾನದಲ್ಲಿ ಇಂತಹ ಉಲ್ಲೇಖ ವಿದೆಯೇ? ಧರ್ಮಾಧಾರಿತ ರಾಜಕಾರಣ ಮಾಡ್ತಿರೋದು ಸರಿಯೇ? ಮಸೀದಿಗಳಲ್ಲಿ ಆಯುಧಗಳಿದ್ದರೆ ಕೇಸ್ ಯಾಕೆ ಹಾಕಿಲ್ಲ? ಆರ್​​ಎಸ್​​ಎಸ್​ ಕಚೇರಿಯಲ್ಲಿ ದಂಡ ಬಳಸುತ್ತಾರೆ. ಹಾಗಂತ ಸಮಾಜದ ಮೇಲಿನ ದಾಳಿಗೆ ಬಳಸುತ್ತಾರೆ ಅಂತ ಹೇಳೋಕೆ ಆಗುತ್ತಾ? ಬಿಜೆಪಿಯವರು ಸಮಾಜ ಒಡೆದು ಆಳುವ ಕೆಲಸ ಮಾಡುತ್ತಾರೆ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಕೆಂಗೇರಿಯ ಚರ್ಚ್ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಚರ್ಚ್ ನಲ್ಲಿದ್ದ ಪ್ರಾರ್ಥನೆ ಮಾಡುವ ವಸ್ತುಗಳನ್ನು ಧ್ವಂಸಮಾಡಿದ್ದಾರೆ. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಭದ್ರತೆ ಇದ್ದರೂ ಅಲ್ಲಿ ಬಾಂಬ್ ಸಿಕ್ಕಿದೆ ಅಂದರೆ ಹೇಗೆ? ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು? ಮಣ್ಣು ತಿನ್ನುತ್ತಿದ್ದರಾ? ಇದನ್ನ ನೋಡಿದರೆ ಭದ್ರತಾ ವೈಫಲ್ಯವಾಗಿದೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗೃಹ ಸಚಿವ ಬೊಮ್ಮಾಯಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಉಗ್ರಪ್ಪ ಸಿಟ್ಟು ಹೊರಹಾಕಿದರು.

ಇದನ್ನೂ ಓದಿ : ಮಹಾರಾಷ್ಟ್ರ ಮಾದರಿಯಲ್ಲೇ ಕರ್ನಾಟಕದಲ್ಲೂ ಸ್ಥಾನ ಹಂಚಿಕೆಯಾಗಲಿ - ಸಿದ್ದರಾಮಯ್ಯಗೆ ಹೆಚ್.ಕೆ. ಪಾಟೀಲ್ ಪರೋಕ್ಷ ತಿರುಗೇಟು

ತಮ್ಮನ್ನ ಸೋಲಿಸುವ ಪ್ರಯತ್ನ ನಡೆದಿತ್ತು. ತಾನು ಹಣ ನೀಡಿ ಗೆದ್ದು ಬಂದಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಹೇಳಿಕೆ ಕೊಡುತ್ತಾರೆ. ಯತ್ನಾಳ್ ಹೇಳಿಕೆ ಕೂಡ ಅಪರಾಧವಾಗುತ್ತದೆ. ಚುನಾವಣಾ ಆಯೋಗ ಬಲಿಷ್ಠವಾಗಿದೆಯೇ? ಬಲಿಷ್ಠವಾಗಿದ್ದರೆ ಸುಮೊಟೋ ಕೇಸ್ ದಾಖಲಿಸಬೇಕಿತ್ತು ಎಂದು ಯತ್ನಾಳ್ ಹೇಳಿಕೆ ವಿರುದ್ಧ ಉಗ್ರಪ್ಪ ವಾಗ್ದಾಳಿ ನಡೆಸಿದರು.
First published: