ಆನ್​ಲೈನ್​ ತರಗತಿಗಳಿಗೆ ಸರ್ಕಾರದ ಹೊಸ ಮಾರ್ಗಸೂಚಿ ಬಿಡುಗಡೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಆನ್ ಲೈನ್ ಶಿಕ್ಷಣದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲೆಗಳಿಗೆ ಆದೇಶ ನೀಡಲಾಗಿದೆ. ಈ ಬಗ್ಗೆ ಆನ್ ಲೈನ್ ಶಿಕ್ಷಣದ ಮಾರ್ಗಸೂಚಿ ಆದೇಶ ಹೊರಡಿಸುವಂತೆ ಸಾರ್ವಜನಿಕ ಶಿಕ್ಷಣ ‌ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ.

news18-kannada
Updated:October 22, 2020, 11:39 AM IST
ಆನ್​ಲೈನ್​ ತರಗತಿಗಳಿಗೆ ಸರ್ಕಾರದ ಹೊಸ ಮಾರ್ಗಸೂಚಿ ಬಿಡುಗಡೆ; ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಅ.22): ಕೊರೋನಾ ಸೋಂಕಿನ ಭೀತಿಯಿಂದ ಸರ್ಕಾರವು ಆನ್​ಲೈನ್​ ತರಗತಿಗಳ ಮೊರೆ ಹೋಗಿತ್ತು. ಆದರೆ ಆನ್​ಲೈನ್ ಶಿಕ್ಷಣದಿಂದ ಮಕ್ಕಳಿಗೆ ಕಣ್ಣಿನ ಸಮಸ್ಯೆ ಉಂಟಾಗುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಸರ್ಕಾರ ಈ ಕುರಿತು ನೇತ್ರ ತಜ್ಞರ ಅಭಿಪ್ರಾಯವನ್ನು ಕೇಳಿದ್ದು, ಆನ್​ ಲೈನ್ ತರಗತಿಗಳನ್ನು ಹೊಸ ಮಾರ್ಗಸೂಚಿ ನೀಡಲು ನಿರ್ಧರಿಸಿದೆ.  ತಜ್ಞರು ನೀಡಿರುವ ವರದಿ ಮತ್ತು ಸಲಹೆ ಮೇರೆಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಬಿಡುಗಡೆಗೆ ಮುಂದಾಗಿದೆ. ಮಾರ್ಗದರ್ಶಿ ಹಾಗೂ ವರದಿಯ ಆಧಾರದ ಮೇರೆಗೆ ಆನ್​ಲೈನ್​ ಕ್ಲಾಸ್ ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. ಜೊತೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ವಿವರವಾದ ಸುತ್ತೊಲೆ ಹೊರಡಿಸುವಂತೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಆನ್ ಲೈನ್ ತರಗತಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಆನ್ ಲೈನ್ ಶಿಕ್ಷಣದಿಂದಾಗಿ ಮಕ್ಕಳ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತಿದೆ, ಆದರೂ ಸಹ ಕೆಲ ಶಾಲೆಗಳಲ್ಲಿ ತಜ್ಞರು ನೀಡಿರುವ ವರದಿಯನ್ನು ಅಳವಡಿಸಿಕೊಂಡಿಲ್ಲ. ತಮಗೆ ಬೇಕಾದಂತ ರೀತಿಯಲ್ಲಿ ಮಕ್ಕಳಿಗೆ ಆನ್ ಲೈನ್ ‌ಪಾಠ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಕಣ್ಣುಗಳಿಗೆ ತೊಂದರೆಯಾಗುತ್ತಿದೆ ಎಂದು ಪೋಷಕರು ಶಿಕ್ಷಣ ‌ಇಲಾಖೆಗೆ ದೂರು ನೀಡಿದ್ದರು.

ಡ್ರಗ್ಸ್​ ಸೇವಿಸಿ ವರದಕ್ಷಿಣೆ ಕಿರುಕುಳ; ಗಂಡನ ವಿರುದ್ಧ ದೂರು ನೀಡಿದ ಹೆಂಡತಿ

ಆನ್ ಲೈನ್ ಶಿಕ್ಷಣದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲೆಗಳಿಗೆ ಆದೇಶ ನೀಡಲಾಗಿದೆ. ಈ ಬಗ್ಗೆ ಆನ್ ಲೈನ್ ಶಿಕ್ಷಣದ ಮಾರ್ಗಸೂಚಿ ಆದೇಶ ಹೊರಡಿಸುವಂತೆ ಸಾರ್ವಜನಿಕ ಶಿಕ್ಷಣ ‌ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ. ಆನ್​​ಲೈನ್​ ಶಿಕ್ಷಣದ ಮಾರ್ಗಸೂಚಿಯನ್ನು ತಜ್ಞರು ಸರ್ಕಾರಕ್ಕೆ ಸಲ್ಲಿಸಿದ ಮೇಲೆ ಈ ಹೊಸ ಕ್ರಮ ಕೈಗೊಳ್ಳಲಾಗಿದೆ.

ವರದಿಯಲ್ಲಿ ಆನ್ ಲೈನ್ ಶಿಕ್ಷಣ ಪೂರಕವಾಗಿರಲಿ ಜೊತೆಗೆ ಆಫ್ ಲೈನ್ ಶಿಕ್ಷಣಕ್ಕೂ ಆದ್ಯತೆ ನೀಡಬೇಕು.  ಈಗಾಗಲೇ ಕೇಂದ್ರ ಆನ್​ಲೈನ್ ಮಾರ್ಗಸೂಚಿಯಂತೆ ರಾಜ್ಯ ಆನ್ ಲೈನ್ ಶಿಕ್ಷಣ ಮಾರ್ಗಸೂಚಿ ಅಳವಡಿಕೆ ಶಿಫಾರಸ್ಸು ಮಾಡಲಾಗಿದೆ.

ಸಮಿತಿ ನೀಡಿರುವ ವರದಿಯಲ್ಲಿನ ಪ್ರಮುಖ ಅಂಶಗಳು

  • ಆನ್ ಲೈನ್ ಶಿಕ್ಷಣ ಮಿತಿಯಲ್ಲಿರಬೇಕು, ದಿನಪೂರ್ತಿ ಆನ್ ಲೈನ್ ತರಗತಿಗಳನ್ನ ನಡೆಸಬಾರದು.

  • ಆನ್ ಲೈನ್ ಹಾಗೂ ಆಫ್ ಲೈನ್ ಎರಡರಲ್ಲಿಯೂ ತರಗತಿಗಳನ್ನ ನಡೆಸಬೇಕು.

  • ಆನ್ ಲೈನ್ ಶಿಕ್ಷಣ ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಪರಿಗಣಿಸಬೇಕು. ಇದು ಶಾಶ್ವತ ಪರಿಹಾರವಲ್ಲ.

  • ಅಧಿಕೃತವಾಗಿ ಶಾಲೆಗಳು ಆರಂಭವಾದ ನಂತರ ಆನ್ ಲೈನ್ ಶಿಕ್ಷಣ ನೀಡಬಾರದು.

  • ಸದ್ಯದ ಮಟ್ಟಿಗೆ ಕೇಂದ್ರ ಮಾರ್ಗಸೂಚಿ ಸೂಚಿಸಿರುವ ಪ್ರಕಾರವೇ ಆನ್ ಲೈನ್ ಶಿಕ್ಷಣ ನೀಡಬೇಕು.

  • ಪೂರ್ವ ಪ್ರಾಥಮಿಕ‌ ಶಾಲೆ 30 ನಿಮಿಷ ಮೀರದಂತೆ ಪಾಲಕರ ಜೊತೆ ವಾರದಲ್ಲಿ ಒಂದು ದಿನ ಆನ್ ಲೈನ್ ಸಂವಹನ ನಡೆಸುವುದು.

  • 1 ರಿಂದ 5 ನೇ ತರಗತಿ- 30 ರಿಂ 55 ನಿಮಿಷಗಳ ಎರಡು ಅವಧಿಗೆ ಮೀರದಂತೆ ದಿನ ಬಿಟ್ಟು ದಿನ ವಾರದಲ್ಲಿ ಗರಿಷ್ಠ ಮೂರು ದಿನ ತರಗತಿ.

  • 6 ರಿಂದ 8 ನೇ ತರಗತಿ 30-45 ನಿಮಿಷಗಳ 2 ಅವಧಿಗೆ ಮೀರದಂತೆ ವಾರದಲ್ಲಿ ಗರಿಷ್ಠ 5 ದಿನ ತರಗತಿ ನಡೆಸುವುದು.

  • 9 ರಿಂದ 10 ನೇ ತರಗತಿ 30 ರಿಂದ 45 ನಿಮಿಷಗಳ 4 ಅವಧಿಗೆ ಮೀರದಂತೆ ವಾರದಲ್ಲಿ ಗರಿಷ್ಠ 5 ದಿನಗಳ ಆನ್ ಲೈನ್ ಶಿಕ್ಷಣ ನೀಡಬಹುದು.

Published by: Latha CG
First published: October 22, 2020, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading