ಬೆಂಗಳೂರು (ಜೂ 28) : ಕೊನೆಗೂ ಬಿಬಿಎಂಪಿಯ ಹೊರ ವಲಯಗಳಿಗೆ ಶಾಲೆ-ಕಾಲೇಜು (School And College) ಭಾಗ್ಯ ಸಿಕ್ಕಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಶಾಲಾ ಕಾಲೇಜುಗಳ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿದೆ. ಬರೋಬ್ಬರಿ 118 ಕೋಟಿ ಅನುದಾನದಲ್ಲಿ ಪಾಲಿಕೆಯ 110 ಹಳ್ಳಿಗಳಿಗೆ ಅನುಕೂಲವಾಗುವಂತೆ ಹೊಸ ಶಾಲೆ ಕಾಲೇಜುಗಳು ನಿರ್ಮಾಣವಾಗಲಿದೆ. ಬಿಬಿಎಂಪಿ (BBMP) ಹೊರವಲಯದ (Outside) ವಲಯಗಳಲ್ಲಿ ಈವರೆಗೆ ಪಾಲಿಕೆಗೆ ಶಾಲಾ, ಕಾಲೇಜು ನಿರ್ಮಾಣ ಸಾಧ್ಯ ಆಗಿರಲಿಲ್ಲ. ಇದೀಗ ಅಮೃತ ನಗರೋತ್ಥಾನ ಯೋಜನೆ (Nagarothana Scheme) ಅಡಿಯಲ್ಲಿ ಬಿಬಿಎಂಪಿ ಹೊಸ ಶಾಲೆ ಕಾಲೇಜುಗಳ ನಿರ್ಮಾಣ ಮಾಡಲಿದೆ.
ಅಭಿವೃದ್ಧಿ ಪಥದಲ್ಲಿರುವ ರಾಜಧಾನಿಗೆ ಹೊಸ ಶಾಲಾ ಕಾಲೇಜುಗಳ ನಿರ್ಮಾಣ !
ದಿನದಿಂದ ದಿನಕ್ಕೆ ರಾಜಧಾನಿ ಬೆಂಗಳೂರು ಅಭಿವೃದ್ಧಿ ಕಾಣುತ್ತಿದೆ. ಹೀಗಾಗಿ ನಗರದ ಸಾಕ್ಷರತೆ ಮಟ್ಟ ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಶಾಲೆ ಕಾಲೇಜುಗಳ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಸದ್ಯ ಬಿಬಿಎಂಪಿ ಕೇಂದ್ರ ವ್ಯಾಪ್ತಿಯಲ್ಲಿ ಮಾತ್ರ ಪಾಲಿಕೆ ಅಧೀನದ ಶಿಕ್ಷಣ ಸಂಸ್ಥೆಗಳಿವೆ. ಬಿಬಿಎಂಪಿ ಹೊರವಲಯದ ವಲಯಗಳಲ್ಲಿ ಈವರೆಗೆ ಪಾಲಿಕೆಗೆ ಶಾಲಾ, ಕಾಲೇಜು ನಿರ್ಮಾಣ ಸಾಧ್ಯ ಆಗಿರಲಿಲ್ಲ. ಇದೀಗ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಬಿಬಿಎಂಪಿ ಹೊಸ ಶಾಲೆ ಕಾಲೇಜುಗಳ ನಿರ್ಮಾಣ ಮಾಡಲಿದೆ.
118 ಕೋಟಿಯಲ್ಲಿ ಏಳು ಶಾಲೆ-ಕಾಲೇಜುಗಳ ನಿರ್ಮಾಣ !
ಹೊಸ ಶಾಲೆ, ಕಾಲೇಜುಗಳ ನಿರ್ಮಾಣ ಹಾಗೂ ಶಾಲೆ ಅಭಿವೃದ್ಧಿ ಪಡಿಸಲು 118 ಕೋಟಿ ಅನುದಾನ ಸರ್ಕಾರ ನೀಡಿದೆ. ಈ ಮೂಲಕ 110 ಹಳ್ಳಿಗಳಲ್ಲೂ ಶಾಲಾ ಕಾಲೇಜು ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. 118 ಕೋಟಿ ಪೈಕಿ 77 ಕೋಟಿಯಲ್ಲಿ 7 ಹೊಸ ಶಾಲೆ ಕಾಲೇಜುಗಳ ನಿರ್ಮಾಣ ಹಾಗೂ ಉಳಿದಂತೆ 33 ಕೋಟಿ ರೂಪಾಯಿಲ್ಲಿ ಪಾಲಿಕೆ ಶಾಲೆ ಕಾಲೇಜುಗಳ ಉನ್ನತೀಕರಣಕ್ಕೆ ಮೀಸಲಿಡಲಾಗಿದೆ.
ಇದನ್ನೂ ಓದಿ: BBMP: ಮೋದಿ ಬಂದು ಹೋದ 1 ವಾರಕ್ಕೆ ಮತ್ತೊಂದು ಕಡೆ ಕಿತ್ತು ಹೋಗಿದೆ ರಸ್ತೆ ಡಾಂಬರು
BBMP ಮೂರು ಕೇಂದ್ರ ವಲಯದಲ್ಲಿ 160 ಶಾಲಾ-ಕಾಲೇಜು
ಬಿಬಿಎಂಪಿ ವ್ಯಾಪ್ತಿಯ ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ಮಾತ್ರ ಪಾಲಿಕೆಗೆ ಶಾಲೆ ಕಾಲೇಜುಗಳಿವೆ. ಬಿಬಿಎಂಪಿಯ ಈ ಮೂರು ಕೇಂದ್ರ ವಲಯದಲ್ಲಿ ಒಟ್ಟು 160 ಶಾಲಾ ಕಾಲೇಜುಗಳಿವೆ. ಆದರೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳನ್ನು ಒಳಗೊಂಡ ಮಹಾದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿಯ ವಲಯದಲ್ಲಿ ಪಾಲಿಕೆಗೆ ಶಿಕ್ಷಣ ಕೇಂದ್ರಗಳಿಲ್ಲ. ಹೀಗಾಗಿ ಈ 110 ಹಳ್ಳಿಗಳಿಗೆ ಶಾಲಾ ಕಾಲೇಜು ನಿರ್ಮಾಣ ಮಾಡುವ ತುರ್ತು ಅಗತ್ಯವಿತ್ತು ಅಂತ ಬಿಬಿಎಂಪಿ ಶಿಕ್ಷಣ ವಿಭಾಗದ ಉಪ ಆಯುಕ್ತ ಉಮೇಶ್ ತಿಳಿಸಿದ್ದಾರೆ.
ಎಲ್ಲೆಲ್ಲಿ ಹೊಸ ಬಿಬಿಎಂಪಿ ಶಾಲೆ-ಕಾಲೇಜು..?
- ಶೆಟ್ಟಿಹಳ್ಳಿ : 9.60 ಕೋಟಿ
- ಅರಕೆರೆ : 7.60 ಕೋಟಿ
- ವಿಜ್ಞಾನಪುರ : 7.60 ಕೋಟಿ
- ರಘುನಹಳ್ಳಿ : 7.60 ಕೋಟಿ
- ಲಗ್ಗೆರೆ : 7.60 ಕೋಟಿ
- ಕೆಂಗೇರಿ (ಉಲ್ಲಾಳ) : 7.60 ಕೋಟಿ
- ಥಣಿಸಂಧ್ರ, ಅಗ್ರಹಾರ : 29.40 ಕೋಟಿ ಕಟ್ಟಿಗೇನಹಳ್ಳಿ, ಬಾಗಲೂರು ಕ್ರಾಸ್
ಇದನ್ನೂ ಓದಿ: Shivamogga: ಆಸ್ಪತ್ರೆಯಲ್ಲಿ ಕೊಟ್ಟ ಇಂಜೆಕ್ಷನ್ನಿಂದ 14 ಮಕ್ಕಳು ದಿಢೀರ್ ಅಸ್ವಸ್ಥ; ಸ್ಥಳಕ್ಕೆ ಶಾಸಕರ ದೌಡು
ಹೊಸ ಶಾಲೆ-ಕಾಲೇಜುಗಳ ನಿರ್ಮಾಣಕ್ಕೆ ಕಳೆದ ಡಿಸೆಂಬರ್ ನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ !
110 ಹಳ್ಳಿಗಳನ್ನು ಒಳಗೊಂಡಿರುವ ಹೊರ ವಲಯಗಳಲ್ಲಿ ಶಾಲಾ ಕಾಲೇಜುಗಳನ್ನು ನಿರ್ಮಾಣ ಮಾಡುವಂತೆ ಕಳೆದ ಡಿಸೆಂಬರ್ ನಲ್ಲೇ ಪಾಲಿಕೆ ಪ್ರಸ್ತಾವನೆ ಸಲ್ಲಸಿತ್ತು. ಈಗ ಅದಕ್ಕೆ ಸರ್ಕಾರ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಅಸ್ತು ಅಂದಿದ್ದು, ಒಂದೇ ಕಡೆ ನರ್ಸರಿಯಿಂದ ಪದವಿ ಪೂರ್ವ ಶಿಕ್ಷಣ ಲಭಿಸುವಂತೆ ಶಾಲೆ ಕಾಲೇಜು ನಿರ್ಮಾಣದ ಲೆಕ್ಕಾಚಾರದಲ್ಲಿದೆ ಬಿಬಿಎಂಪಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ