Rohini Sindhuri Vs D Roopa: ಮಹಿಳಾಧಿಕಾರಿಗಳ ಕಿತ್ತಾಟಕ್ಕೆ ಸರ್ಕಾರಿ ಮೂಗುದಾರ?

ಡಿ. ರೂಪಾ v/s ರೋಹಿಣಿ ಸಿಂಧೂರಿ

ಡಿ. ರೂಪಾ v/s ರೋಹಿಣಿ ಸಿಂಧೂರಿ

IAS Vs IPS: ಇಬ್ಬರು ಅಧಿಕಾರಿಗಳ ಕಿತ್ತಾಟಕ್ಕೆ ತಾತ್ಕಲಿಕ ಬ್ರೇಕ್ ಬಿದ್ದಿದೆ. ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ವರದಿ ಕೇಳಿದ್ದಾರೆ. ವರದಿ ಬಳಿಕ ಸರ್ಕಾರ ಮುಂದೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಅನ್ನೋದರ ಮಾಹಿತಿ ಇಲ್ಲಿದೆ.

  • Share this:

ಬೆಂಗಳೂರು: ಕಳೆದೆರಡು ದಿನಗಳಿಂದ ಐಪಿಎಸ್‌ ಅಧಿಕಾರಿ ಡಿ.ರೂಪಾ (IPS Officer D Roopa) ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ನಡವಿನ ಬೀದಿ ಜಗಳಕ್ಕೆ ಸರ್ಕಾರ (Government) ಬ್ರೇಕ್‌ ಹಾಕಿದೆ.‌ ಇಬ್ಬರು ಮಹಿಳಾ ಅಧಿಕಾರಿಗಳ ಬೀದಿ ರಂಪಾಟದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ಆಕ್ಷೇಪದ ಬಂದಿತ್ತು. ಆದ್ದರಿಂದ ಯಾವುದೇ ಕಾರಣಕ್ಕೂ ಇನ್ಮುಂದೆ ಸಾರ್ವಜನಿಕವಾಗಿ, ಸಾಮಾಜಿಕ ಜಾಲತಾಣ (Social Media), ಮಾಧ್ಯಮಗಳಿಗೆ (Media) ಹೇಳಿಕೆ ನೀಡುವಂತಿಲ್ಲ ಎಂದು ರೋಹಿಣಿ ಸಿಂಧೂರಿ, ಡಿ. ರೂಪಾಗೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.


ಸಿಬಿಐ ರಿಪೋರ್ಟ್ ಮುನ್ನೆಲೆಗೆ


ದಿವಂಗತ ಡಿ‌.ಕೆ ರವಿ ಸಾವಿನ ಸಿಬಿಐ ರಿಪೋರ್ಟ್ ಮತ್ತೆ ಮುನ್ನೆಲೆಗೆ ಬಂದಿದೆ. ಡಿ. ರೂಪಾ ತಮ್ಮ ಆರೋಪಗಳಲ್ಲಿ ಡಿ‌.ಕೆ ರವಿ ಸಾವಿನ ಬಗ್ಗೆ ಸಿಬಿಐ ರಿಪೋರ್ಟ್​ನಲ್ಲಿರುವ ಅಂಶವನ್ನು ಪ್ರಸ್ತಾಪಿಸಿದ್ದರು.


ಡಿ.ಕೆ ರವಿ ತೊಂದರೆ ಕೊಡ್ತಿದ್ರೆ ನಂಬರ್ ಯಾಕೆ ಬ್ಲಾಕ್ ಮಾಡಲಿಲ್ಲ ಎಂದು ಡಿ.ರೂಪಾ ಪ್ರಶ್ನಿಸಿದ್ರು. ಇದೀಗ ಡಿ.ರೂಪಾಗೆ ವಕೀಲ ಸೂರ್ಯ ಮುಕುಂದರಾಜ್ ಬೆಂಬಲ ನೀಡಿದ್ದಾರೆ. ರೋಹಿಣಿ ಮೇಲೆ ಆತ್ಮಹತ್ಯೆ ಪ್ರಚೋದನೆ ದಾಖಲಾಗಬೇಕಿತ್ತು ಎಂದಿದ್ದಾರೆ.


ಇಬ್ಬರು ಅಧಿಕಾರಿಗಳ ಕಿತ್ತಾಟಕ್ಕೆ ತಾತ್ಕಲಿಕ ಬ್ರೇಕ್ ಬಿದ್ದಿದೆ. ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ವರದಿ ಕೇಳಿದ್ದಾರೆ. ವರದಿ ಬಳಿಕ ಸರ್ಕಾರ ಮುಂದೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಅನ್ನೋದರ ಮಾಹಿತಿ ಇಲ್ಲಿದೆ.


ಸರ್ಕಾರದ ಮುಂದಿರುವ ಆಯ್ಕೆಗಳೇನು?


1.ಇಬ್ಬರು ಅಧಿಕಾರಿಗಳನ್ನ ಕೇಂದ್ರ ಸರ್ಕಾರದ ಸೇವೆಗೆ ಕಳುಹಿಸಬಹುದು.


2.ಇಬ್ಬರಲ್ಲಿ ಒಬ್ಬರನ್ನು ಕೇಂದ್ರ ಸೇವೆಗೆ ಕಳುಹಿಸಬಹುದು. ಒಬ್ಬರು ರಾಜ್ಯ ಸೇವೆಯಲ್ಲೇ ಇರ್ತಾರೆ.


3.ಇಬ್ಬರು ಅಧಿಕಾರಿಗಳ ಹುದ್ದೆಗೆ ಬೇರೆಯವರನ್ನ ವರ್ಗಾವಣೆ ಮಾಡಿ, ಇಬ್ಬರನ್ನೂ ಕೇಂದ್ರ ಕಚೇರಿಗೆ ರಿಪೋರ್ಟ್ ಮಾಡಿಕೊಳ್ಳಲು ಸೂಚಿಸುವುದು.


4.ಒಬ್ಬರಿಗೆ ಮಾತ್ರ ಕೇಂದ್ರ ಕಚೇರಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚನೆ ನೀಡಬಹುದು.


5.ಕಡ್ಡಾಯ ರಜೆ ಅಥವಾ ತನಿಖೆ ವರದಿ ಬಂದ ಬಳಿಕ ಒಬ್ಬರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಬಹುದು.


ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ಹಿಡಿತ ಇಲ್ಲ


ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ಹಿಡಿತ ಇಲ್ಲ. ಹಿಡಿತ ಸಡಿಲ ಆಗಿದೆ, ಅದಕ್ಕೆ ಹೀಗೆಲ್ಲಾ ಆಗ್ತಿದೆ. ಈ ಸರ್ಕಾರದಲ್ಲಿ ಅಧಿಕಾರಿಗಳಿಗೆ ಭಯ ಅನ್ನೋದೆ ಇಲ್ಲ ಎಂದು ಮಹಿಳಾಧಿಕಾರಿಗಳ ಕಿತ್ತಾಟಕ್ಕೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ (JDS MLA Raveendra Sirkanthaiah) ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ: Rohini Sindhuri: ರೋಹಿಣಿ ದೂರಿನ ಬೆನ್ನಲ್ಲೇ CS​ಗೆ ಸ್ಕ್ರೀನ್​ಶಾಟ್ ಸಮೇತ ರೂಪಾ ದೂರು; ಏನೆಲ್ಲಾ ಆರೋಪ ಮಾಡಿದ್ದಾರೆ? ಇಲ್ಲಿದೆ ಕಂಪ್ಲೀಟ್​ ಮಾಹಿತಿ


ಸರ್ಕಾರ ಸ್ವಾರ್ಥಕ್ಕೆ ತೆಗೆದುಕೊಳ್ಳುವ ನಿರ್ಧಾರಗಳಿಂದ ಇಂತಹ ಪ್ರಕರಣಗಳು ನಡೆಯುತ್ತವೆ. ಸರ್ಕಾರದ ಈ ನಿಲುವುಗಳಿಂದ ಅಧಿಕಾರಿಗಳು ಇಂತಹವನ್ನ ಈಸಿಯಾಗಿ ತೆಗೆದುಕೊಳ್ತಾರೆ. ಭಯವಿಲ್ಲದೆ ಅಧಿಕಾರಿಗಳು ಈ ಮಟ್ಟಕ್ಕೆ ಇಳಿಯುತ್ತಾರೆ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದ ರವೀಂದ್ರ ಶ್ರೀಕಂಠಯ್ಯ ಇದು ಹೀಗೆ ಮುಂದುವರಿದರೆ ಮುಂದೆ ಯಾವುದೇ ಕಂಟ್ರೋಲ್ ಸಿಗಲ್ಲ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿದರು.




‘ರೋಹಿಣಿ ನನ್ನ ಬಳಿ ಕ್ಷಮೆ ಕೇಳಿದ್ದಾರೆ’


ರೋಹಿಣಿ ಸಿಂಧೂರಿ ನನ್ನ ಬಳಿ ಕ್ಷಮೆಯಾಚಿಸಿದ್ದಾರೆ. ವಿಷಾದ ವ್ಯಕ್ತಪಡಿಸಿರೋ ಪತ್ರ ಬರೆದು ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಬಾಂಬ್ ಸಿಡಿಸಿದ್ದಾರೆ.


ಗೋಮಾಳದಲ್ಲಿ ಕನ್ವನ್ಸನ್ ಹಾಲ್ ಇದೆ ಎಂದು ಆರೋಪ ಮಾಡಿದ್ರು. ದಿಶಾ ಆ್ಯಪ್ ನಲ್ಲಿ ತಪ್ಪಾಗಿತ್ತು ಹಾಗಾಗಿ ಗೊತ್ತಾಗಿಲ್ಲ ಎಂದಿದ್ದಾರೆ. ಸಿಎಂ ಹಾಗೂ ಮಖ್ಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಮೇಲೆ ಕ್ರಮ ಕೈಗೊಳ್ಳಬೇಕು. ರೋಹಿಣಿ, ರೂಪ ನಡುವಿನ ಜಗಳದಲ್ಲಿ ನನ್ನ ಪಾತ್ರ ಇಲ್ಲ ಎಂದು ಸಾರಾ ಮಹೇಶ್ ಸ್ಪಷ್ಟಪಡಿಸಿದ್ದಾರೆ.

Published by:Mahmadrafik K
First published: