HOME » NEWS » State » GOVERNMENT GAVE 2 CRORE 79 LAKH AMOUNT FOR 21 GUNTA EARTH FOR GHATAPRABHA RIVER WATER SHARING CANAL CONSTRUCTION RBK LG

ಘಟಪ್ರಭಾ ಬಲದಂಡೆ ನೀರು ಹಂಚುವ ಕಾಲುವೆ ನಿರ್ಮಾಣ;  21 ಗುಂಟೆ ಭೂಸ್ವಾಧೀನಕ್ಕೆ 2 ಕೋಟಿ 79 ಲಕ್ಷ ಪರಿಹಾರ ಮಂಜೂರು 

ಪುಟ್ಟದಾದ ಹಳ್ಳಿಯ ವ್ಯಾಪ್ತಿಗೆ ಬರುವ ಈವರೆಗೂ ಅಲ್ಲಿ ಕೈಗಾರಿಕಾ ಪ್ರದೇಶದ ನಿವೇಶನದ ಬೆಲೆ ನಿರ್ಧಾರ ಆಗದೇ ಇರುವ ಗ್ರಾಮದ ಹೊರ ವಲಯದ ನಿವೇಶನಕ್ಕೆ ಸಿಕ್ಕಿರುವ ಪರಿಹಾರ ಇತರೆ ರೈತರಲ್ಲಿ ಅಚ್ಚರಿ ಮೂಡಿಸಿದೆ. ಕೇವಲ 21 ಗುಂಟೆ ಎಕರೆ ಕೃಷಿಯೇತರ ಜಮೀನಿಗೆ ಬರೋಬ್ಬರಿ 2.79 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. 

news18-kannada
Updated:April 20, 2021, 8:29 AM IST
ಘಟಪ್ರಭಾ ಬಲದಂಡೆ ನೀರು ಹಂಚುವ ಕಾಲುವೆ ನಿರ್ಮಾಣ;  21 ಗುಂಟೆ ಭೂಸ್ವಾಧೀನಕ್ಕೆ 2 ಕೋಟಿ 79 ಲಕ್ಷ ಪರಿಹಾರ ಮಂಜೂರು 
ಮಣ್ಣು-ಮುಳ್ಳುಗಳಿಂದ ತುಂಬಿ ಹೋಗಿರುವ ಕಾಲುವೆ
  • Share this:
ಬಾಗಲಕೋಟೆ (ಏ.19): ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ನೀರಾವರಿ ಯೋಜನೆ ನೀರು ಹಂಚುವ ಕಾಲುವೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿರುವ ಕೃಷಿಯೇತರ ಜಮೀನು ಕೇವಲ 21 ಗುಂಟೆ ಗೆ ಬರೋಬ್ಬರಿ 2ಕೋಟಿ 79ಲಕ್ಷ ಪರಿಹಾರ ಮಂಜೂರು ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬಾದಾಮಿ ತಾಲೂಕಿನ ಕೆರಕಲಮಟ್ಟಿಯಿಂದ ಬಾಗಲಕೋಟೆ ತಾಲೂಕಿನ ಛಬ್ಬಿ ಗ್ರಾಮ ಬಳಿ ಹಾದು ಹೋಗಿರುವ ಘಟಪ್ರಭಾ ಬಲದಂಡೆ ನೀರು ಹಂಚುವ  ಕಾಲುವೆ ನಿರ್ಮಾಣವಾಗಿ ಒಮ್ಮೆಯೂ ನೀರು ಹರಿದಿಲ್ಲ. ಆದರೆ ಕಾಲುವೆ ನಿರ್ಮಾಣಕ್ಕಾಗಿ ಕೋಟಿ ಕೋಟಿ ಪರಿಹಾರ ಮಾತ್ರ ನೀಡಲಾಗಿದೆ. ಕಾಲುವೆಗೆ ನೀರು ಹರಿಯದ ಹಿನ್ನೆಲೆಯಲ್ಲಿ ಮಣ್ಣು, ಮುಳ್ಳುಗಳಿಂದ ತುಂಬಿ ಹೋಗಿದೆ. ಕೋಟ್ಯಾಂತರ ಹಣ ಖರ್ಚು ಮಾಡಿ ಕಾಲುವೆ ನಿರ್ಮಾಣ ಮಾಡಿದರೆ ಏನು ಉಪಯೋಗ ಎನ್ನುವಂತಾಗಿದೆ.

ಇನ್ನು ಈ  ಕಾಲುವೆ ಹರಿದಿರುವ ಜಮೀನುಗಳ ಪೈಕಿ ಕೆಲ ರೈತರಿಗೆ ಮೂರ್ನಾಲ್ಕು ವರ್ಷಗಳ ಹಿಂದೆ ಸರ್ಕಾರ ಪರಿಹಾರ ನೀಡಿದೆ. ಆದರೆ, ಸರ್ಕಾರ ಒಬ್ಬರಿಗೆ ನೀಡಿರುವ ಪರಿಹಾರ ಮೊತ್ತ ಮಾತ್ರ ಹುಬ್ಬೇರಿಸುವಂತೆ ಮಾಡಿದ್ದಲ್ಲದೇ ಪರಿಹಾರ ವಿತರಣೆಯಲ್ಲಿ  ಗೋಲ್ಮಾಲ್ ನಡೆದಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಯಾಕಂದ್ರೆ ಪುಟ್ಟದಾದ ಹಳ್ಳಿಯ ವ್ಯಾಪ್ತಿಗೆ ಬರುವ ಈವರೆಗೂ ಅಲ್ಲಿ ಕೈಗಾರಿಕಾ ಪ್ರದೇಶದ ನಿವೇಶನದ ಬೆಲೆ ನಿರ್ಧಾರ ಆಗದೇ ಇರುವ ಗ್ರಾಮದ ಹೊರ ವಲಯದ ನಿವೇಶನಕ್ಕೆ ಸಿಕ್ಕಿರುವ ಪರಿಹಾರ ಇತರೆ ರೈತರಲ್ಲಿ ಅಚ್ಚರಿ ಮೂಡಿಸಿದೆ. ಕೇವಲ 21 ಗುಂಟೆ ಎಕರೆ ಕೃಷಿಯೇತರ ಜಮೀನಿಗೆ ಬರೋಬ್ಬರಿ 2.79 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ.

Crime News: ಪ್ರೀತಿಗೆ ಅಡ್ಡಿಪಡಿಸ್ತಿದಾನೆಂದು ಯುವಕನ ಬರ್ಬರ ಹತ್ಯೆ; ನಾಲ್ವರು ಆರೋಪಿಗಳು ವಶಕ್ಕೆ

ಬಾಗಲಕೋಟೆ ತಾಲ್ಲೂಕಿನ ಛಬ್ಬಿ ಗ್ರಾಮದ ವ್ಯಾಪ್ತಿಯ ಬರುವ ಶೇಖರಯ್ಯ ಹಿರೇಮಠ ಎಂಬುವರು ಇಟ್ಟಂಗಿ ಭಟ್ಟಿಗಾಗಿ ಕೃಷಿ ಜಮೀನನ್ನು ಕೃಷಿಯೇತರ ಜಮೀನಾಗಿ ಪರಿವರ್ತಸಿದ್ದಾರೆ. ಅವರಿಗೆ ಹೊಸ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ  2018 ರಲ್ಲಿ ಭೂಸ್ವಾಧೀನಕ್ಕೊಳಪಡುವ ಒಟ್ಟು ಜಮೀನು 21ಗುಂಟೆ, 1ಆಣೆ, ಭೂಸ್ವಾಧೀನದ ಒಟ್ಟು ಮಾರುಕಟ್ಟೆ ಬೆಲೆ 67,14824 ರೂಪಾಯಿ. ಕಟ್ಟಡವಿಲ್ಲ, ಗಿಡಮರಗಳಿಲ್ಲ. ಬಾವಿ, ಕೊಳವೆ ಬಾವಿ ಕಿಮ್ಮತ್ತು-54,951 , ಗ್ರಾಮೀಣ ಭೂಸ್ವಾಧೀನ ಕ್ಷೇತ್ರದ ಮೌಲ್ಯ 2ಪಟ್ಟುನಂತೆ  2 ಕೋಟಿ 79 ಲಕ್ಷ 47 ಸಾವಿರದ 172 ರೂಪಾಯಿಯನ್ನು ಮಲಪ್ರಭಾ ಯೋಜನೆಯ ಅಂದಿನ ವಿಶೇಷ ಭೂಸ್ವಾಧೀನಾಧಿಕಾರಿ ದಿನೇಶ್ ಕುಮಾರ್ ಜಿ ಟಿ  ಐತೀರ್ಪು ಹೊರಡಿಸಿ ಪರಿಹಾರ ಮೊತ್ತವಾಗಿ ನೀಡಿದ್ದಾರೆ.

ಹೀಗೆ ಕೋಟಿ ಕೋಟಿ ದುಡ್ಡು ಹರಿಸಿದ್ದರೂ ಸಹ ಈ ಕಾಲುವೆಯಲ್ಲಿ ಮಾತ್ರ ಹನಿ ನೀರು ಹರಿದು ಜಮೀನು ಹಸಿರಾಗಿರುವುದಿಲ್ಲ‌. ಹೀಗಾಗಿ ನೀರು ಹರಿಯದ ಕಾಲುವೆ ಇಷ್ಟೊಂದು ದುಡ್ಡು ಖರ್ಚು ಮಾಡುವುದಾದರೂ ಏಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಮುಳ್ಳುಗಳಿಂದ ತುಂಬಿರುವ ಕಾಲುವೆಯಲ್ಲಿ ದುಡ್ಡು ಹೊಡೆಯೋ ಯೋಜನೆ ಆಗ್ತಿದೆ, ಪರಿಹಾರ ತಾರತಮ್ಯ ಜೊತೆಗೆ ವಿತರಣೆ ಆಗಿರುವ ಪರಿಹಾರದ ಬಗ್ಗೆ ತನಿಖೆಯಾಗಲಿ  ಎಂದು ಹೋರಾಟಗಾರ  ಮುತ್ತಣ್ಣ ಬೆಣ್ಣೂರ ಆಗ್ರಹಿಸಿದ್ದಾರೆ.

ಇನ್ನು ಘಟಪ್ರಭಾ ನೀರಾವರಿ ಯೋಜನೆ ಹೀಗೆ ಹಳ್ಳ ಹಿಡಿದಿದ್ದರೂ ಸಹ ಇಂದಿಗ ಕಾಲುವೆ ನಿರ್ಮಾಣಕ್ಕೆಂದು ಕೋಟಿ ಕೋಟಿ ಅನುದಾನ ಖರ್ಚು ಮಾಡುವುದು ಹಾಗೂ ಪರಿಹಾರ ವಿತರಿಸುತ್ತಿರುವುದು ನಡೆದೇ ಇದೆ. ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಸಿಗಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ, ನೀರು ಬಾರದೇ ಹೀಗೆ ಸರ್ಕಾರದ ದುಡ್ಡು ಪೋಲು ಆಗುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಅವರು, ಜನಪ್ರತಿನಿಧಿಗಳು ಪ್ರಶ್ನೆ ಮಾಡದಿರುವುದು ಅನುಮಾನ ವ್ಯಕ್ತವಾಗಿದೆ.ಇನ್ನು ಪರಿಹಾರ ಹಣ ನಿಗದಿಪಡಿಸುವ ವಿಚಾರದಲ್ಲೂ ಕೆಲ ಪ್ರಭಾವಿಗಳ ಬೆಂಬಲಿಗರಿಗೆ ಹೆಚ್ಚಿನ ಪರಿಹಾರ ಸಿಕ್ಕರೆ ಮತ್ತೆ ಕೆಲ ರೈತರಿಗೆ ತೀರ್ಪು ಹೊರಡಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಸಂಸದರ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ತಮಗೆ ಮಾಹಿತಿ ಇಲ್ಲ. ಪರಿಹಾರದಲ್ಲಿ ತಾರತಮ್ಯ ಆಗಿರುವ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಅಲ್ಲದೇ ಘಟಪ್ರಭಾ ಮತ್ತು ಮಲಪ್ರಭಾ ಯೋಜನೆಗಳ ಕಾಲುವೆಗಳು ನೀರು ಹರಿಯದಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಇಲಾಖೆ ಸಚಿವರ ಗಮನಕ್ಕೆ ತಂದು ಕಾಲುವೆಗೆ ನೀರು ಹರಿಸಿ, ರೈತರ ಜಮೀನಿಗೆ ನೀರು ದೊರೆಯುವಂತೆ ಮಾಡಲಾಗುವುದು ಎಂದು ಸಂಸದ ಪಿ ಸಿ ಗದ್ದಿಗೌಡರ ತಿಳಿಸಿದರು. ಇನ್ನು ಪ್ರಸ್ತುತವಿರುವ ಮಲಪ್ರಭಾ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಬಸಪ್ಪ ಪೂಜಾರಿ, ಈ ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ನ್ಯೂಸ್ 18ಗೆ ತಿಳಿಸಿದರು.

ಒಟ್ಟಿನಲ್ಲಿ ನೀರಾವರಿ ಹೆಸರಿನಲ್ಲಿ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕಾಲುವೆ ನಿರ್ಮಾಣ ಮಾಡುತ್ತಾರಾದರೂ ಬಳಿಕ ಆ ಕಾಲುವೆಯಲ್ಲಿ ನೀರು ಹರಿದಿದೆಯಾ? ಫಲಾನುಭವಿ ರೈತರ ಬದುಕು ಹಸನಾಗಿದೆಯಾ? ಈ ಬಗ್ಗೆ ಕಿಂಚಿತ್ತು ಗಮನ ಹರಿಸಲ್ಲ. ನೀರಾವರಿ ಯೋಜನೆ ಹೆಸರಲ್ಲಿ ಮಾತ್ರ ಕೋಟಿ ಕೋಟಿ ಹಣ ಸರ್ಕಾರದ ದುಡ್ಡು ಪೋಲು ಆಗುತ್ತಲೇ ಇದೆ. ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡು ಹೀಗೆ ಬೇಕಾಬಿಟ್ಟಿ ಯೋಜನೆ ರೂಪಿಸಿ, ದುಡ್ಡು ಪೋಲು ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕಿದೆ.
Published by: Latha CG
First published: April 20, 2021, 8:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories