• Home
  • »
  • News
  • »
  • state
  • »
  • Education Department: ದೇವನೂರ ಮಹಾದೇವ ಸೇರಿದಂತೆ 7 ಲೇಖಕರ ಪಠ್ಯ ಕೈಬಿಟ್ಟ ಸರ್ಕಾರ; ಶಿಕ್ಷಣ ಇಲಾಖೆಯಿಂದ ಸುತ್ತೋಲೆ

Education Department: ದೇವನೂರ ಮಹಾದೇವ ಸೇರಿದಂತೆ 7 ಲೇಖಕರ ಪಠ್ಯ ಕೈಬಿಟ್ಟ ಸರ್ಕಾರ; ಶಿಕ್ಷಣ ಇಲಾಖೆಯಿಂದ ಸುತ್ತೋಲೆ

ದೇವನೂರ ಮಹಾದೇವ ಸೇರಿದಂತೆ ಏಳು ಲೇಖಕರ ಪಠ್ಯ ಕೈಬಿಟ್ಟ ಸರ್ಕಾರ

ದೇವನೂರ ಮಹಾದೇವ ಸೇರಿದಂತೆ ಏಳು ಲೇಖಕರ ಪಠ್ಯ ಕೈಬಿಟ್ಟ ಸರ್ಕಾರ

ದೇವನೂರ ಮಹಾದೇವ ಹಾಗೂ ಜಿ.ರಾಮಕೃಷ್ಣ ಸೇರಿ 7 ಲೇಖಕರು ಅನುಮತಿ ಹಿಂಪಡೆದಿರುವ ಗದ್ಯ ಮತ್ತು ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

  • Share this:

ಬೆಂಗಳೂರು (ಸೆ.24): ಪುಸ್ತಕ ಪರಿಷ್ಕರಣೆ ವಿವಾದದ ಬಳಿಕ ಅನೇಕ ಲೇಖಕರು ಶಾಲಾ ಪಠ್ಯ ಪುಸ್ತಕದಲ್ಲಿ ತಮ್ಮ ಪಠ್ಯಗಳನ್ನು ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ರು, ಇದೀಗ ಶಿಕ್ಷಣ ಇಲಾಖೆ (Education Departmen) ವಿಶೇಷ ಸುತ್ತೋಲೆ ಹೊರಡಿಸುವ ಮೂಲಕ 7 ಲೇಖಕರ ಪಠ್ಯವನ್ನು ಕೈಬಿಟ್ಟಿದೆ. ಲೇಖಕ ದೇವನೂರ ಮಹಾದೇವ (Devanur Mahadeva) ಹಾಗೂ ಜಿ.ರಾಮಕೃಷ್ಣ ಸೇರಿ 7 ಲೇಖಕರ ಪಠ್ಯವನ್ನು ಕೈಬಿಟ್ಟಿರುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ.


ಶಿಕ್ಷಣ ಇಲಾಖೆಯಿಂದ ವಿಶೇಷ ಸುತ್ತೋಲೆ


ಈ ಲೇಖಕರು ಅನುಮತಿ ಹಿಂಪಡೆದಿರುವ ಹಿನ್ನೆಲೆಯಲ್ಲಿ ಪಠ್ಯದಲ್ಲಿದ್ದ ಈ ಸಾಹಿತಿಗಳ ಗದ್ಯ ಮತ್ತು ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ವಿಶೇಷ ಸುತ್ತೋಲೆ ಹೊರಡಿಸಿದೆ.


ಹಲವು ಪಠ್ಯ ಕೈಬಿಟ್ಟ ಸರ್ಕಾರ


10ನೇ ತರಗತಿಯ ಪಠ್ಯದಲ್ಲಿನ  ದೇವನೂರ ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ' ಗದ್ಯ, ಜಿ.ರಾಮಕೃಷ್ಣ ಅವರ 'ಭಗತ್ ಸಿಂಗ್' ಪೂರಕ ಗದ್ಯ, 9ನೇ ತರಗತಿ ಪಠ್ಯದಲ್ಲಿನ (ತೃತೀಯ ಭಾಷೆ) ರೂಪ ಹಾಸನ ಅವರ 'ಅಮ್ಮನಾಗುವುದೆಂದರೆ' ಪೂರಕ ಪದ್ಯ 10ನೇ ತರಗತಿ ಪಠ್ಯದಲ್ಲಿನ (ತೃತೀಯ ಭಾಷೆ) ಈರಪ್ಪ ಎಂ.ಕಂಬಳಿ ಅವರ 'ಹೀಗೊಂದು ಬಸ್ ಪ್ರಯಾಣ' ಪೂರಕ ಗದ್ಯ, ಸತೀಶ್ ಕುಲಕರ್ಣಿ ಅವರ 'ಕಟ್ಟುತ್ತೇವ ನಾವು' ಪದ್ಯ, 10ನೇ ತರಗತಿ ಪಠ್ಯದಲ್ಲಿನ (ದ್ವಿತೀಯ ಭಾಷೆ) ಸುಕನ್ಯ ಮಾರುತಿ ಅವರ 'ಏಣಿ' ಪದ್ಯ, 6ನೇ ತರಗತಿ ಪಠ್ಯದಲ್ಲಿನ (ಪ್ರಥಮ ಭಾಷೆ) ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರ 'ಡಾ.ರಾಜ್ಕುಮಾರ್' ಗದ್ಯಗಳನ್ನು ಪರಿಗಣಿಸದಂತೆ ಶಿಕ್ಷಣ ಇಲಾಖೆ ತಿಳಿಸಿದೆ.


ಇದನ್ನೂ ಓದಿ: Bharat Jodo Yatra: ಸಂಸದ ಡಿ ಕೆ ಸುರೇಶ್ ನಿವಾಸದಲ್ಲಿ ಪೂರ್ವ ಸಿದ್ಧತಾ ಸಭೆ; ರಾಹುಲ್​ ಗಾಂಧಿ ಆಪ್ತ ಸಹಾಯಕರು ಭಾಗಿ


ಚಕ್ರತೀರ್ಥ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಾಹಿತಿ


ಪಠ್ಯ ಪರಿಶೀಲನೆಗೆ ರಚಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಾಹಿತಿಗಳು ತಮ್ಮ ಪಠ್ಯವನ್ನು ಕೈಬಿಡುವಂತೆ ಕೋರಿದ್ದರು. ಈ ಸಂಬಂಧ ಪತ್ರ ಸಹ ಬರೆದಿದ್ದರು, ಗದ್ಯ ಮತ್ತು ಪದ್ಯಗಳನ್ನು ಪಠ್ಯದಲ್ಲಿ ಉಳಿಸಿಕೊಳ್ಳಲು ಶಿಕ್ಷಣ ಇಲಾಖೆ ಈ ಲೇಖಕರ ಅನುಮತಿ ಕೋರಿತ್ತು. ಮನವಿಯನ್ನು ಲೇಖಕರು ತಿರಸ್ಕರಿಸಿದ್ದರು. ಈ ಹಿನ್ನೆಲೆ ಶಿಕ್ಷಣ ಇಲಾಖೆ ಈ ಸುತ್ತೋಲೆ ಹೊರಡಿಸಿದೆ.


ಸೆಪ್ಟೆಂಬರ್​ 2ರಂದು ಪರಿಷ್ಕೃತ ರ್ಯಾಂಕಿಂಗ್​ ಪಟ್ಟಿ


ಸಿಇಟಿ ರಾಂಕಿಂಗ್ ಬಿಕ್ಕಟ್ಟು ಶಮನಗೊಂಡಿದ್ದು, ಸೆಪ್ಟಂಬರ್ 29ರಂದು ಪರಿಷ್ಕೃತ ರಾಂಕಿಂಗ್ ಪಟ್ಟಿ ಪ್ರಕಟಗೊಳ್ಳಲಿದೆ. ಅಕ್ಟೋಬರ್ 3 ರಿಂದ ಕೌನ್ಸೆಲಿಂಗ್ ಆರಂಭಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ಮಾಹಿತಿ ನೀಡಿದ್ದಾರೆ. ವೃತಿಪರ ಕೋರ್ಸ್ ಗಳ ಸಿಇಟಿ ರಾಂಕಿಂಗ್ ನೀಡುವ ವೇಳೆ ರಿಪೀಟರ್ಸ್ ಪಿಯುಸಿ ಅಂಕ ಪರಿಗಣನೆ ಪಡೆಯದೇ ಕೆಇಎ ಫಲಿತಾಂಶ ಪ್ರಕಟಿಸಿತ್ತು.


ಇದರ ವಿರುದ್ದ ಪಿಯುಸಿ ರಿಪೀಟರ್ಸ್ ಕೋರ್ಟ್ ಮೊರೆ ಹೋಗಿದ್ದರು. ಸಮಸ್ಯೆಯನ್ನು ಬಗೆಹರಿಸಲು ಒಂದು ಸಮನ್ವಯ ಸೂತ್ರ ರೂಪಿಸುವಂತೆ ಕೋರ್ಟ್ ಸೂಚಿಸಿತ್ತು ವೃತಿಪರ ಕೋರ್ಸ್ ಗಳ ಸಿಇಟಿ ರಾಂಕಿಂಗ್ ಗೆ ಸಂಬಂಧಿಸಿದಂತೆ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಲು ರಾಜ್ಯ ಸರಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿದೆ.


ಇದನ್ನೂ ಓದಿ: CM Basavaraj Bommai: ಪೇಸಿಎಂ ಅಭಿಯಾನ ಡರ್ಟಿ ಪಾಲಿಟಿಕ್ಸ್; ಕಾಂಗ್ರೆಸ್​ಗೆ ವಾರ್ನಿಂಗ್​ ಕೊಟ್ಟ ಸಿಎಂ ಬೊಮ್ಮಾಯಿ


ಇದು ಸ್ವಾಗತಾರ್ಹವಾಗಿದ್ದು, ಪರಿಷ್ಕೃತ ಸಿಇಟಿ ರಾಂಕಿಂಗ್ ಪಟ್ಟಿಯನ್ನು ಇದೇ 29ರಂದು ಬಿಡುಗಡೆ ಮಾಡಲಾಗುವುದು. ಜತೆಗೆ ಅಕ್ಟೋಬರ್ 3ರಿಂದ ಪ್ರವೇಶಾತಿ ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಶುಕ್ರವಾರ ಈ ಬಗ್ಗೆ ಮಾತನಾಡಿರುವ ಅವರು, ಸಮಸ್ಯೆಯನ್ನು ಬಗೆಹರಿಸಲು ಒಂದು ಸಮನ್ವಯ ಸೂತ್ರ ರೂಪಿಸುವಂತೆ ಸೂಚಿಸಿತ್ತು.

Published by:ಪಾವನ ಎಚ್ ಎಸ್
First published: