PSI Recruitment Scam: ಮರುಪರೀಕ್ಷೆಗೆ ಸರ್ಕಾರದ ನಿರ್ಧಾರ, ನಮಗೆ ಅನ್ಯಾಯವಾಗಿದೆ ಎಂದು ಅಭ್ಯರ್ಥಿಗಳ ಕಣ್ಣೀರು

ಯಾರೋ ಮಾಡಿದ್ದ ತಪ್ಪಿಗೆ ಇನ್ಯಾರಿಗೋ ಶಿಕ್ಷೆಯಾದಂತಾಗಿದೆಯೆಂದು ನೊಂದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಷ್ಟಪಟ್ಟು ನೌಕರಿ ಕೂಡ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಸರಕಾರದ ನಿರ್ಧಾರದಿಂದ ಅಭ್ಯರ್ಥಿಗಳು ಕಣ್ಣೀರು ಹಾಕುವಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾದಗಿರಿ (ಏ.29): ಪಿಎಸ್ ಐ ನೇಮಕಾತಿ (PSI Recruitment) ಅಕ್ರಮ ಪ್ರಕರಣದ ತನಿಖೆ ಸಿಐಡಿಯು ನಡೆಸುತ್ತಿದ್ದೆ. ಈಗಾಗಲೇ ಕಿಂಗ್ ಪಿನ್ (King Pin) ಗಳು ಸೇರಿದಂತೆ ಅಕ್ರಮ ನೇಮಕಾತಿ ಹಗರಣದಲ್ಲಿ (Scam) ಭಾಗಿಯಾದ ಆರೋಪಿಗಳನ್ನು ಸಿಐಡಿ ತಂಡ ಬಂಧಿಸಿ ವಿಚಾರಣೆ (Investigation) ನಡೆಸುತ್ತಿದೆ. ತನಿಖೆ ಇನ್ನು ವಿಚಾರಣೆ ಹಂತದಲ್ಲಿರುವಾಗಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 545 ಪಿಎಸ್ ಐ ನೇಮಕಾತಿ ರದ್ದು ಮಾಡಿ ಮರು ಪರೀಕ್ಷೆಗೆ ನಿರ್ಧಾರ ಮಾಡಿದ್ದಾರೆ. ಸರಕಾರದ ನಿರ್ಧಾರದಿಂದ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಗಲು ರಾತ್ರಿಯನ್ನದೇ ಕಷ್ಟ ಪಟ್ಟು ಓದಿ ಪಿಎಸ್ ಐ ನೇಮಕಾತಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳು ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಪರೀಕ್ಷೆ ಬರೆದ ಅಭ್ಯರ್ಥಿಗಳ ಕಣ್ಣೀರು

ಯಾರದೋ ಮಾಡಿದ್ದ ತಪ್ಪಿಗೆ ಇನ್ಯಾರಿಗೋ ಶಿಕ್ಷೆಯಾದಂತಾಗಿದೆಯೆಂದು ನೊಂದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ ಸರ್ವಿಸ್  ನಲ್ಲಿದ್ದು ಕಷ್ಟಪಟ್ಟು ನೌಕರಿ ಕೂಡ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಸರಕಾರದ ನಿರ್ಧಾರದಿಂದ ಅಭ್ಯರ್ಥಿಗಳು ಕಣ್ಣೀರು ಹಾಕುವಂತಾಗಿದೆ.  ಸಿಐಡಿ ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ ಇನ್ನು ಪಿಎಸ್ ಐ ನೇಮಕಾತಿ ಹಗರಣದಲ್ಲಿ ಅದೆಷ್ಟು ಜನ ಭಾಗಿಯಾಗಿದ್ದಾರೋ ಎನೋ ಆದರೆ, ಸಿಐಡಿ ಅಧಿಕಾರಿಗಳು ತನಿಖೆ ಜಾಡು ಹಿಡಿದು ಅಕ್ರಮದಲ್ಲಿ ಭಾಗಿಯಾದವರ ಶೋಧ ನಡೆಸುತ್ತಿದ್ದಾರೆ. ಇನ್ನೂ ತನಿಖೆ ಹಂತದಲ್ಲಿರುವಾಗಲೇ ಸರಕಾರ ಮರು ಪರೀಕ್ಷೆಗೆ ನಿರ್ಧಾರ ಮಾಡಿದ್ದು ಅಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: PSI Recruitment Scam: ಒಂದು ಹೆಣ್ಣು ಮಗಳನ್ನು ಹಿಡಿಯಲು 20 ದಿನ ಬೇಕಾ? ಅಕ್ರಮದಲ್ಲಿ BJP ನಾಯಕರು ಭಾಗಿ-ಕಾಂಗ್ರೆಸ್ ಕಿಡಿ

ಮರುಪರೀಕ್ಷೆ ನಿರ್ಧಾರಕ್ಕೆ ಅಭ್ಯರ್ಥಿಗಳ ಆಕ್ರೋಶ

ಯಾದಗಿರಿ ಜಿಲ್ಲೆಯಲ್ಲಿ ಕೂಡ ಪಿಎಸ್ ಐ ನೇಮಕವಾದ ಅಭ್ಯರ್ಥಿಗಳು ಸರಕಾರದ ನಡೆಯಿಂದ ಅಕ್ರೋಶಗೊಂಡಿದ್ದಾರೆ.ಪಿಎಸ್ ಐ ನೇಮಕಾತಿ ಹಗರಣದಲ್ಲಿ ಭಾಗಿಯಾದ ಅಭ್ಯರ್ಥಿಗಳು ಇರಲಿ ಯಾರೆ ಇರಲಿ ಸಿಐಡಿ ಅಧಿಕಾರಿಗಳು ಇದನ್ನು ತನೀಖೆ ನಡೆಸುತ್ತಿದೆ. ಆಯ್ಕೆಯಾದವರಿಗೆ ಸಾವಿರ ಬಾರಿ ಕರೆದು ವಿಚಾರಣೆ ನಡೆಸಿ ನಮಗೆ ಅಭ್ಯಂತರವಿಲ್ಲ. ತಪ್ಪಿತಸ್ಥರಸ್ಥರನ್ನು ಪತ್ತೆ ಹಚ್ಚಿ ಅವರಿಗೆ ತಕ್ಕ ಶಿಕ್ಷೆ ನೀಡಿ, ಕಷ್ಟ ಪಟ್ಟು ಹಗಲು ರಾತ್ರಿಯನ್ನದೇ ಓದಿ ನೌಕರಿ ಗಿಟ್ಟಿಸಿಕೊಂಡವರಿಗೆ ಸರಕಾರ ಮರು ಪರೀಕ್ಷೆ ನಡೆಸಿ ಅನ್ಯಾಯ ಮಾಡಿದರೆ ಹೇಗೆ. ನಾನು ನಿಯತ್ತಾಗಿ ಓದಿ ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದೆ.ಸರಕಾರ ಇಂತಹ ನಿರ್ಧಾರ ಮಾಡಿದ್ದು ನಿಜವಾದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ.

ನಮಗೆ ನ್ಯಾಯ ಕೊಡಿಸಬೇಕು

ಸರಕಾರ ಈ ಬಗ್ಗೆ ಪರಿಶೀಲನೆ ಮಾಡಿ ನಿಜವಾದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕೆಂದು ಅಭ್ಯರ್ಥಿ ಶರಣಗೌಡ ನೋವು ತೊಡಿಕೊಂಡಿದ್ದಾನೆ. ಯಾದಗಿರಿ ಜಿಲ್ಲೆಯ ಮೂಲದವರು  ಎಳು ಜನರು ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದರು  ಎನ್ನಲಾಗಿದೆ. ನಾಗರತ್ನ, ಸಾಲಿಬಾಯಿ, ಅನೀತಾ ಜಾಧವ,  ರೇಣುಕಾ ರಾಠೋಡ, ಸಿದ್ದಪ್ಪ ಜಂಗ್ಲಿ,ಶರಣಗೌಡ,ಸೋಮಶೇಖರಯಾದಗಿರಿ ಜಿಲ್ಲೆಯ ಮೂಲದವರು ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸಿಐಡಿಯು ತನೀಖೆ ನಡೆಸುತ್ತಿದೆ. ಈಗಾಗಲೇ  ಸಿಐಡಿ ನೀಡಿದ್ದ ನೊಟೀಸ್ ಗೆ ವಿಚಾರಣಗೆ ಹಾಜರಾಗಿ ಬಂದಿದ್ದೆವೆ ನಾವು ಯಾವುದೇ ತಪ್ಪು ಮಾಡಿಲ್ಲ.ನಾವು ಕಷ್ಟಪಟ್ಟು ಓದಿದ್ದೆವೆ. ಓದಿದವರ ಪರಿಸ್ಥಿತಿ ಹೀಗಾದರೆ ಹೇಗೆ ಎಂದು ನೊಂದ ಅಭ್ಯರ್ಥಿ ನಾಗರತ್ನ ನೋವು ತೊಡಿಕೊಂಡಿದ್ದಾಳೆ.

ಇದನ್ನೂ ಓದಿ:  Murugesh Nirani: ಕನ್ನಡ ಪ್ರಾದೇಶಿಕ ಭಾಷೆಯಾದ್ರೆ, ಹಿಂದಿ ರಾಷ್ಟ್ರೀಯ ಭಾಷೆ: ಸಚಿವ ಮುರುಗೇಶ್ ನಿರಾಣಿ

ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಿ

ಈ ಬಗ್ಗೆ ನಾಗರತ್ನ ಮಾತನಾಡಿ, ಸರ್ ನಾವು ಕಷ್ಟಪಟ್ಟು ಓದಿದ್ದೆವೆ ಯಾರೋ ಕೆಲವರು ಮಾಡಿದ್ದ ತಪ್ಪಿಗೆ ನಮಗೆ ಅನ್ಯಾಯವಾದರೆ ಹೇಗೆ. ಸಿಐಡಿ ತನಿ ಖೆ ನಡೆಯುವ ಹಂತದಲ್ಲಿಯೇ ಸರಕಾರ ಎಕಾಎಕಿ ಮರು ಪರೀಕ್ಷೆಗೆ ನಿರ್ಧಾರ ಮಾಡಿದ್ದು ಸರಿಯಲ್ಲ‌. ಕಷ್ಟಪಟ್ಟು ಓದಿದವರಿಗೆ ಇದು ಅನ್ಯಾಯವಾಗುತ್ತದೆ. ಸರಕಾರ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ತಕ್ಕ ಪಾಠ ಕಲಿಸಬೇಕಿತ್ತು. ಆದರೆ, ಈಗ ಯಾವುದು ತಪ್ಪು ಮಾಡದವರು ಮತ್ತೆ ಮರು ಪರೀಕ್ಷೆ ಬರೆಯಬೇಕೆಂದರೆ ಹೇಗೆ. ಕಾರಣ, ಸರಕಾರ ನಿಜವಾದ ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ನೊಂದ ಅಭ್ಯರ್ಥಿ ನಾಗರತ್ನ ನೋವು ತೊಡಿಕೊಂಡಿದ್ದಾಳೆ.
Published by:Pavana HS
First published: