Dasara 2022: ಈ ಬಾರಿ ಅದ್ಧೂರಿ ದಸರಾ; ಅ.5ಕ್ಕೆ ಜಂಬೂ ಸವಾರಿ; ಸರ್ಕಾರದಿಂದ ಭರ್ಜರಿ ತಯಾರಿ

ನಾಡಹಬ್ಬ ದಸರಾವನ್ನು ಈ ಬಾರಿ ಅದ್ದೂರಿಯಾಗಿ ಮಾಡುವುದು ಶಾಸಕರ ಅಭಿಲಾಷೆಯಾಗಿದೆ. ಮೈಸೂರು ದಸರಾ, ಕರ್ನಾಟಕದ ಪರಿವರ್ತನೆಯ ಹಬ್ಬವಾಗಬೇಕು. ಕೊರೊನಾದಿಂದ 2 ವರ್ಷ ಸರಳ ದಸರಾ ಆಚರಿಸಲಾಯ್ತು. ಆದ್ರೆ ಈ ಬಾರಿ ಅದ್ಧೂರಿ ದಸರಾ ಆಚರಿಸಲು ನಿರ್ಧರಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಈ ಬಾರಿ ಅದ್ಧೂರಿ ದಸರಾ

ಈ ಬಾರಿ ಅದ್ಧೂರಿ ದಸರಾ

  • Share this:
ಬೆಂಗಳೂರು (ಜು.19): ಈ ಬಾರಿ ನಾಡಹಬ್ಬ ದಸರಾವನ್ನು (Dasara) ಅದ್ಧೂರಿಯಾಗಿ ಆಚರಿಸಲು (Grand Celebration) ನಿರ್ಧರಿಸಿರೋದಾಗಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಮೈಸೂರು ದಸರಾ ಹಬ್ಬದ ದಿ ಸಮೀಪಿಸುತ್ತಿರುವ ಹಿನ್ನಲೆ ವಿಧಾನಸೌಧದಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಸಲಾಯ್ತು. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಎಸ್ ಟಿ ಸೋಮಶೇಖರ್, (S.T Somashekhar) ಶಾಸಕ ಜಿ.ಟಿ ದೇವೇಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ತನ್ವೀರ್ ಸೇಠ್,  ಸಾರಾ ಮಹೇಶ್, ಹರ್ಷವರ್ಧನ್, ರಾಮ್ ದಾಸ್, ಪರಿಷತ್ ಸದಸ್ಯ ವಿಶ್ವನಾಥ್, ಸೇರಿದಂತೆ ಮೈಸೂರು, ಮಂಡ್ಯ ಭಾಗದ ಜನಪ್ರತಿನಿಧಿಗಳು ಭಾಗಿಯಾಗಿದ್ರು.

ಮೈಸೂರು ಜಿಲ್ಲಾಧಿಕಾರಿ ಗೌತಮ್‌ ಬಗದಿ, ಮೈಸೂರು ಪೊಲೀಸ್ ಕಮಿಷನರ್, ಮಂಡ್ಯ ಜಿಲ್ಲಾಧಿಕಾರಿ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ರು. ಸಭೆಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೈರಾಗಿದ್ರು. ಸಭೆಯಲ್ಲಿ ದಸರಾ ಆಚರಣೆಯ ಸಮಿತಿ, ದಸರಾ ಉದ್ಘಾಟನೆಗೆ ಆಹ್ವಾನಿತರ ಬಗ್ಗೆ ಚರ್ಚೆ ನಡೆಸಲಾಗಿದೆ

ಈ ಬಾರಿ ಅದ್ಧೂರಿ ನಾಡಹಬ್ಬ

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾಡಹಬ್ಬ ದಸರಾವನ್ನು ಈ ಬಾರಿ ಅದ್ದೂರಿಯಾಗಿ ಮಾಡುವುದು ಶಾಸಕರ ಅಭಿಲಾಷೆಯಾಗಿದೆ. ಮೈಸೂರು ದಸರಾ, ಕರ್ನಾಟಕದ ಪರಿವರ್ತನೆಯ ಹಬ್ಬವಾಗಬೇಕು. ಕೊರೊನಾದಿಂದ 2 ವರ್ಷ ಸರಳ ದಸರಾ ಆಚರಿಸಲಾಯ್ತು. ಆದ್ರೆ ಈ ಬಾರಿ ಅದ್ಧೂರಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ದಸರಾ ಕುರಿತು ಹೆಚ್ಚಿನ ಪ್ರಚಾರ ಕೊಡಲು ತೀರ್ಮಾನ ಮಾಡಲಾಗಿದೆ.

ಇದನ್ನೂ ಓದಿ: Karnataka Politics: ಡಿಕೆಶಿ-HDK ದೋಸ್ತಿ, ಡಿಕೆಗಾಗಿ ಕಾದು ಕುಳಿತ ಕುಮಾರಣ್ಣ; ನೀವೇ ನನ್ನ ಬ್ರದರ್ ಎಂದ್ರು ಡಿಕೆ ಶಿವಕುಮಾರ್

15 ದಿನ ಮುಂಚೆ ವಸ್ತು ಪ್ರದರ್ಶನ

ದಸರಾ ಬ್ರಾಂಡ್ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ತೀರ್ಮಾನ ಮಾಡಿದ್ದೇವೆ. ಅಲ್ಲಿನ ವಸ್ತು ಪ್ರದರ್ಶನ 15 ದಿನದ ಮುಂಚೆಯೇ ನಡೆಸಲು ತೀರ್ಮಾನ ಮಾಡಿದ್ದೇವೆ. ಸ್ಥಳೀಯ ಕಲಾಕಾರರಿಗೆ ಹೆಚ್ಚು ಒತ್ತು ಕೊಡ್ತೀವಿ. ದಿನಕ್ಕೆ ಒಬ್ಬರು ರಾಷ್ಟ್ರೀಯ ಕಲಾಕಾರರನ್ನು ಮುಖ್ಯ ಆಕರ್ಷಕರಾಗಿ ಕರೆಯಲು ತೀರ್ಮಾನ ಮಾಡಲಾಗಿದೆ. ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರದಲ್ಲೂ ದಸರಾ ಆಚರಣೆ ಮಾಡಲು ತೀರ್ಮಾನ ಮಾಡಿದ್ದೇವೆ.

ಮೈಸೂರು ಮತ್ತು ಹಂಪಿ ಟೂರಿಸಂ ಸರ್ಕ್ಯಿಟ್​​ಗೆ ಆದೇಶ ಹೊರಡಿಸಲಾಗುವುದು. ಅದರಂತೆ ಒಂದೇ ಟಿಕೆಟ್​​ನಲ್ಲಿ ಹಂಪಿ ಮತ್ತು ಮೈಸೂರು ನೋಡಬಹುದು. ವಿದೇಶದಿಂದ ಟಿಕೆಟ್ ಬುಕ್ ಮಾಡೋರಿಗೆ ಹೊರಗಡೆಯಿಂದ ಬರೋರಿಗೆ ಅನುಕೂಲ ಮಾಡಿಕೊಡಲಾಗುವುದು. 26 /9 ಕ್ಕೆ ದಸರಾ ಆರಂಭವಾದರೆ, 5/10 ಕ್ಕೆ ವಿಜಯದಶಮಿ, 5/10ಕ್ಕೆ ಧ್ವಜ ಪೂಜೆ, 5/10 ಕ್ಕೆ ನಂದಿ ಪೂಜೆ ನೆರವೇರಲಿದೆ. 7/8/22 ಕ್ಕೆ ಗಜಪಯಣ ,10/8/22 ಅರಮನೆಯ ಪ್ರವೇಶ , 7/10 ಕ್ಕೆ ಗಜಪಡೆ ನಿರ್ಗಮನವಾಗಲಿದೆ ಎಂದು ವಿವರಿಸಿದರು.

ಇದನ್ನೂ ಓದಿ: Student Arrest: ಎಕ್ಸಾಂ ಮುಂದೂಡಲು ಬಾಂಬ್​ ಬೆದರಿಕೆ; ಅದೇ ಶಾಲೆಯ ಬಾಲಕ ಪೊಲೀಸ್​ ವಶಕ್ಕೆ

ದಸರಾ ಉದ್ಘಾಟನೆಗೆ ಆಹ್ವಾನಿತರ ಆಯ್ಕೆ ವಿಚಾರ

ಕಳೆದ ಎರಡು ವರ್ಷ ಸರಳವಾಗಿ ದಸರಾ ಆಚರಣೆ ಮಾಡಿದ್ದೇವೆ. ಈ ಬಾರಿ ಮಳೆ, ಬೆಳೆ ಎಲ್ಲಾ ಚೆನ್ನಾಗಿ ಆಗಿದೆ. ಹೀಗಾಗಿ ಈ ಬಾರಿ ದಸರಾವನ್ನು ಅದ್ಧೂರಿಯಾಗಿ, ಸಾಂಪ್ರದಾಯಿಕವಾಗಿ ಆಚರಣೆ ಮಾಡಲು ಶಾಸಕರು ಹೇಳಿದ್ದಾರೆ. ಮೂರು ತಿಂಗಳು ದಸರಾ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಸಿಗಲ್ಲ ಅಂತಾ ಹೇಳಿದ್ದಾರೆ. ದಸರಾ ಸಂದರ್ಭದಲ್ಲಿ ಜನರಿಗೆ ಸಮಸ್ಯೆ ಆಗದ ರೀತಿ ಅಧಿಕಾರಿಗಳು ಕೆಲಸ ಮಾಡುವಂತೆ ಸಿಎಂ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಪ್ಯಾಲೇಸ್ ಆವರಣದ ಒಳಗೆ ನಡೆಯುವ ಕಾರ್ಯಕ್ರಮ ಅರಮನೆ ಆಡಳಿತ ಮಂಡಲಿ ತೀರ್ಮಾನ ಮಾಡಲಾಗುತ್ತದೆ. ದಸರಾ ಉದ್ಘಾಟನೆಗೆ ಆಹ್ವಾನಿತರ ಆಯ್ಕೆ ಬಗ್ಗೆ ಸಿಎಂ ನಿರ್ಧರಿಸುತ್ತಾರೆ ಎಂದು ಸೋಮಶೇಖರ್ ಹೇಳಿದ್ದಾರೆ.
Published by:Pavana HS
First published: