• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Cauvery: ಕಾವೇರಿ ನದಿಪಾತ್ರದ ಒತ್ತುವರಿ ಜಾಗ ತೆರವಿಗೆ ನಿರ್ಧಾರ; ಇತ್ತ ಸ್ಥಳೀಯರಿಂದ ಆಕ್ರೋಶ

Cauvery: ಕಾವೇರಿ ನದಿಪಾತ್ರದ ಒತ್ತುವರಿ ಜಾಗ ತೆರವಿಗೆ ನಿರ್ಧಾರ; ಇತ್ತ ಸ್ಥಳೀಯರಿಂದ ಆಕ್ರೋಶ

ಸಭೆ

ಸಭೆ

ಯಾವುದೇ ಕಾರಣಕ್ಕೂ ಮನೆ ನಿರ್ಮಿಸಲು ಅವಕಾಶ ನೀಡದಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತೀ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಗಳಲ್ಲೂ ನಿರ್ಣಯ ಮಾಡಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

  • Share this:

ಕೊಡಗು: ಕನ್ನಡನಾಡಿನ ಜೀವನದಿ ಕಾವೇರಿ (Cauvery River) ಅರ್ಧ ರಾಜ್ಯದ ಜನರ ದಾಹ ನೀಗಿಸುವ ತಾಯಿ. ಆದರೆ ಕಳೆದ ಹಲವು ವರ್ಷಗಳಿಂದ ಈ ನದಿ ಜಾಗವೇ ಸಾಕಷ್ಟು ಒತ್ತುವರಿಯಾಗಿದೆ. ತವರು ಜಿಲ್ಲೆ ಕೊಡಗಿನ (Kodagu) ಚೆರಿಯಪರಂಬು ಗ್ರಾಮದಿಂದ ಆರಂಭವಾಗಿ ಗಡಿ ಭಾಗ ಕುಶಾಲನಗರದವರೆಗೆ (Kushalanagara) ಹಲವು ಹಳ್ಳಿ, ಪಟ್ಟಣಗಳ ಸಾವಿರಾರು ಕುಟುಂಬಗಳು ನದಿ ತಟದಲ್ಲಿಯೇ (River Bank) ಮನೆಗಳನ್ನು (House) ಕಟ್ಟಿಕೊಂಡು ಜೀವನ ನಡೆಸುತ್ತಿವೆ. ಹೀಗಾಗಿಯೇ ಕಾವೇರಿ ನದಿಯು ಕಳೆದ ನಾಲ್ಕು ವರ್ಷಗಳಿಂದ ಉಕ್ಕಿ ಹರಿದು ತನ್ನ ಗಡಿ ಯಾವುದೆಂದು ಗುರುತಿ ಸಿಕೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಸರ್ಕಾರ ಮತ್ತು ಜಿಲ್ಲಾಡಳಿತ ಕೊನೆಗೂ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ ಕಾವೇರಿಯನ್ನು ಸಂರಕ್ಷಿಸಲು ಮುಂದಾಗಿದೆ.


ಈ ಕುರಿತು ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ (Ravi Kushalappa) ಅವರು ತಮ್ಮ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಕಾವೇರಿ ಒತ್ತುವರಿ ಜಾಗವನ್ನು ತೆರವು ಮಾಡುವುದಕ್ಕೆ ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದ್ದಾರೆ.


ಬಫರ್ ಝೋನ್ ಜಾಗ ಗುರುತು


ಈ ಕುರಿತು ನೀರಾವರಿ ನಿಗಮದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ರವಿ ಕುಶಾಲಪ್ಪ ನದಿಯ ಮಧ್ಯಭಾಗದಿಂದ 50 ಮೀಟರ್ ದೂರದವರೆಗೆ ಅದು ಬಫರ್ ಝೋನ್ ಜಾಗವಾಗಿದ್ದು, ಅದನ್ನು ಕೂಡಲೇ ಗುರುತು ಮಾಡಬೇಕು ಎಂದು ಸೂಚಿಸಿದರು.


ಇದನ್ನೂ ಓದಿ:  Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ


ಯಾವುದೇ ಕಾರಣಕ್ಕೂ ಮನೆ ನಿರ್ಮಿಸಲು ಅವಕಾಶ ನೀಡದಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತೀ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಗಳಲ್ಲೂ ನಿರ್ಣಯ ಮಾಡಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


ಬೋಪಯ್ಯ ಖಡಕ್ ಸೂಚನೆ


ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ (Virajapete MLA KG Bopaiah) ಅವರು ಕೂಡ ಕಾವೇರಿ ನದಿಯ ಸಂರಕ್ಷಿತ ಜಾಗದಲ್ಲಿ ಯಾವುದೇ ಕಾರಣಕ್ಕೂ ಮನೆ ನಿರ್ಮಿಸಲು ಅವಕಾಶ ನೀಡಬಾರದು ಒಂದು ವೇಳೆ ಮನೆ ನಿರ್ಮಿಸಿದ್ದರೆ ಅಂತ ಮನೆಗಳಿಗೆ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಕೂಡದು ಎಂದು ಸೂಚನೆ ನೀಡಿದರು.


ಜಿಲ್ಲಾಡಳಿತದ ವಿರುದ್ಧ ಸ್ಥಳೀಯರ ಆಕ್ರೋಶ


ರವಿಕುಶಾಲಪ್ಪ ಇದು ಕೇವಲ ನಿರ್ಣಯವಾಗಿ ಉಳಿದರೆ ಸಾಲದು ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ಅವರಿಗೆ ತಿಳಿಸಿದರು. ಜಿಲ್ಲಾಡಳಿತ ಕೈಗೊಳ್ಳುತ್ತಿರುವ ನಿರ್ಣಯವೇನೋ ಒಳ್ಳೆಯದೇ. ಆದರೆ ನದಿ ತಟಗಳಲ್ಲಿ ಮನೆ ನಿರ್ಮಿಸಿಕೊಂಡು ಹತ್ತಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ಜನರು ಮಾತ್ರ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.


ಪಾಪದ ಜನರು ಎಲ್ಲಿಗೆ ಹೋಗಬೇಕು?


ತಮ್ಮ ರಾಜಕೀಯ ಲಾಭಕ್ಕಾಗಿ ಕೆಲವು ವರ್ಷಗಳ ಹಿಂದೆ ಜನಪ್ರತಿನಿಧಿಗಳೇ ನಮ್ಮನ್ನು ನದಿ ತಟಗಳಲ್ಲಿ ಕೂರಿಸಿದರು. ಕಳೆದ ನಾಲ್ಕು ವರ್ಷಗಳಿಂದ ಪ್ರವಾಹ ಬಂದಾಗಿನಿಂದ ಬಂದು ಮನೆ ಖಾಲಿ ಮಾಡಿ ಅಂತವೇನೋ ಹೇಳುತ್ತಿದ್ದಾರೆ. ಆದರೆ ನಮ್ಮ ನಾಲ್ಕು ವರ್ಷಗಳಿಂದ ನಮಗೆ ನಿವೇಶನ, ಮನೆ ಕೊಡುವುದಾಗಿ ಹೇಳುತ್ತಿದ್ದಾರೆ ಅಷ್ಟೇ. ಅತ್ತ ನಿವೇಶನ ಮನೆಗಳನ್ನು ಕೊಡದೆ, ಇತ್ತ ಮನೆ ಖಾಲಿ ಮಾಡಿಸುತ್ತೇವೆ ಎಂದರೆ ಪಾಪದ ಜನರು ಎಲ್ಲಿಗೆ ಹೋಗಬೇಕು ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.


ಇದನ್ನೂ ಓದಿ:  Karnataka Politics: ಸಿದ್ಧರಾಮಯ್ಯ ಎಡಬಿಡಂಗಿ, ರಾಹುಲ್ ಗಾಂಧಿ ಕೌಲ ಬ್ರಾಹ್ಮಣ ಅನ್ನೋದು ಸುಳ್ಳು; ಸಿ ಟಿ ರವಿ ವಾಗ್ದಾಳಿ


ಇಷ್ಟಕ್ಕೂ ಕಾವೇರಿ ನದಿ ತಟವೊಂದೇ ಅಲ್ಲ, ಜಿಲ್ಲೆಯ ಎಲ್ಲಾ ನದಿಗಳ ಜಾಗಗಳನ್ನು ಸಂರಕ್ಷಿಸಬೇಕು. ಜೊತೆಗೆ ರಾಜ್ಯದ ಎಲ್ಲಾ ನದಿಗಳ ಜಾಗಗಳನ್ನು ಸಂರಕ್ಷಿಸಬೇಕು. ಇದು ಕೊಡಗು ಜಿಲ್ಲೆಯಿಂದಲೇ ಆರಂಭ ಎಂದು ರವಿಕುಶಾಲಪ್ಪ ಹೇಳಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು