ಕಲ್ಲು ಸ್ಪೋಟ ನಿಷೇಧ ಹಿನ್ನೆಲೆ; ಕೋಲಾರದಲ್ಲಿ ಸರ್ಕಾರಿ ಕಾಮಗಾರಿಗಳು ಬಂದ್, ಆತಂಕದಲ್ಲಿ ಗುತ್ತಿಗೆದಾರರು

ಕೋಲಾರದಲ್ಲಿ ಒಂದು ಅಡಿ ಜೆಲ್ಲಿಗೆ 14 ರೂಪಾಯಿಯಂತೆ ಬೆಲೆಯಿದೆ, ಆದರೆ ಕ್ರಷರ್​ಗಳು ಬಂದ್ ಆಗಿರುವ ಕಾರಣ ತಮಿಳುನಾಡಿನಲ್ಲಿ, ಒಂದು ಅಡಿ ಜೆಲ್ಲಿಗೆ 22 ರೂಪಾಯಿಗೆ ಏರಿಕೆ ಮಾಡಿದ್ದಾರೆ. ಈ ಮೊದಲು 14 ಸಾವಿರಕ್ಕೆ ಸಿಗುತ್ತಿದ್ದ ಒಂದು ಟಿಪ್ಪರ್ ಎಮ್ ಸ್ಯಾಂಡ್, ಈಗ 24 ಸಾವಿರಕ್ಕೆ ದಾಟಿದ್ದು ಗುತ್ತಿಗೆದಾರರು ಕೆಲಸ ಮಾಡದೆ ಹೈರಾಣಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋಲಾರ(ಮಾ.23): ರಾಜ್ಯದಲ್ಲಿ ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲೆಟಿನ್ ಸ್ಪೋಟದಿಂದ ಹತ್ತಾರು ಮಂದಿ ಸಾವನ್ನಪ್ಪಿದ ಹಿನ್ನಲೆ,  ಕಲ್ಲು ಗಣಿಗಾರಿಕೆಯಲ್ಲಿ ತಾತ್ಕಾಲಿಕವಾಗಿ ಜಿಲೆಟಿನ್ ಬಳಸದಂತೆ ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿ ಜಿಲೆಟಿನ್ ದುರಂತದ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಈಗಾಗಲೇ ಜಿಲೆಟಿನ್ ಕಡ್ಡಿ ಬಳಸದಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಹಿನ್ನಲೆ ಕೋಲಾರ ಜಿಲ್ಲೆಯ 33 ಕ್ರಷರ್ ಗಳು ಕಾರ್ಯ ನಿರ್ವಹಣೆ ಮಾಡದೆ ಸ್ತಗಿತವಾಗಿದ್ದು, ಇದರ ಪರಿಣಾಮವಾಗಿ ಸರ್ಕಾರಿ ಕಾಮಗಾರಿಗಳಿಗೆ ಹೊಡೆತ ಬಿದ್ದಿದೆ.

ರಸ್ತೆ, ಚರಂಡಿ, ಕಟ್ಟಡಗಳ ಕಾಮಗಾರಿಗಳನ್ನ ನಡೆಸ್ತಿರುವ ಗುತ್ತಿಗೆದಾರರಿಗೆ ಇದೀಗ ಸಮಯಕ್ಕೆ, ಜೆಲ್ಲಿ, ಎಮ್ ಸ್ಯಾಂಡ್ ಸಿಗುತ್ತಿಲ್ಲ, ಬಂಡೆ ಸಿಡಿಸಿದಂತೆ ಸರ್ಕಾರ ಆದೇಶಿಸಿದ ಹಿನ್ನಲೆ, ಕಲ್ಲು ಇಲ್ಲದೆ ಕ್ರಷರ್​​ಗಳನ್ನ ನಡೆಸದೆ ಮಾಲೀಕರು ಸುಮ್ಮನಾಗಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ನೆರೆಯ ಆಂಧ್ರ ಮತ್ತು ತಮಿಳುನಾಡು ಕ್ರಷರ್ ಮಾಲೀಕರು,  ದುಪ್ಪಟ್ಟು ಹಣ ಪೀಕಲು ಶುರು ಮಾಡಿದ್ದು, ಹಲವೆಡೆ ಗುತ್ತಿಗೆದಾರರು ಕೆಲಸವನ್ನ ನಿಲ್ಲಿಸಿದ್ದಾರೆ.

ಕೋಲಾರದಲ್ಲಿ ಒಂದು ಅಡಿ ಜೆಲ್ಲಿಗೆ 14 ರೂಪಾಯಿಯಂತೆ ಬೆಲೆಯಿದೆ, ಆದರೆ ಕ್ರಷರ್​ಗಳು ಬಂದ್ ಆಗಿರುವ ಕಾರಣ ತಮಿಳುನಾಡಿನಲ್ಲಿ, ಒಂದು ಅಡಿ ಜೆಲ್ಲಿಗೆ 22 ರೂಪಾಯಿಗೆ ಏರಿಕೆ ಮಾಡಿದ್ದಾರೆ. ಈ ಮೊದಲು 14 ಸಾವಿರಕ್ಕೆ ಸಿಗುತ್ತಿದ್ದ ಒಂದು ಟಿಪ್ಪರ್ ಎಮ್ ಸ್ಯಾಂಡ್, ಈಗ 24 ಸಾವಿರಕ್ಕೆ ದಾಟಿದ್ದು ಗುತ್ತಿಗೆದಾರರು ಕೆಲಸ ಮಾಡದೆ ಹೈರಾಣಾಗಿದ್ದಾರೆ.

Private Schools Protest - ಶಿಕ್ಷಣ ಸಚಿವರ ಸಂಧಾನ ಯಶಸ್ವಿ; ಧರಣಿ ಕೈಬಿಟ್ಟ ಖಾಸಗಿ ಶಾಲೆಗಳು

ಜಿಲ್ಲೆಯಾದ್ಯಂತ ಒಟ್ಟು 200 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವಿವಿದಧೆಡೆ ರಸ್ತೆ ಕಾಮಗಾರಿಗಳನ್ನ ನಡೆಸುತ್ತಿದ್ದು, ಜೆಲ್ಲಿ, ಎಮ್ ಸ್ಯಾಂಡ್‍ಗಾಗಿ ಗುತ್ತಿಗೆದಾರರು ಪರದಾಡುತ್ತಿದ್ದಾರೆ, ಈ ಬಗ್ಗೆ ಮಾತನಾಡಿರುವ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿ ಚಂದ್ರಶೇಖರ್ ಅವರು , ಕ್ರಷರ್‍ಗಳು ಬಂದ್ ಆಗಿರುವ ಕಾರಣ ಜಿಲ್ಲೆಯಾದ್ಯಂತ ಕಾಮಗಾರಿಗಳಿಗೆ ಅಡಚಣೆಯಾಗಿದೆ, ಸರ್ಕಾರದ ಆದೇಶದಂತೆ ಸಮಸ್ಯೆ ಎದುರಾಗಿದ್ದು, ರಾಜ್ಯ ಸರ್ಕಾರ ಹಾಗು ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇನ್ನು ಈ ಕುರಿತು ಮಾತನಾಡಿರುವ ಕ್ರಷರ್ ಮಾಲೀಕರಾದ ಮಾಲೂರು ಶಾಸಕ ಕೆವೈ ನಂಜೇಗೌಡ, ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ, ಬೇರೆ ರಾಜ್ಯದಲ್ಲಿ ಬ್ಲಾಸ್ಟಿಂಗ್ ಮೊದಲಿಂದಲು ನಡೆಯುತ್ತಿದೆ, ನಮ್ಮಲ್ಲಿಯೂ ಇಷ್ಟು ದಿನ ಬ್ಲಾಸ್ಟಿಂಗ್ ನಡೆಯುತ್ತಿತ್ತು, ಆದರೆ ಕೆಲವರ ಬೇಜವಾಬ್ದಾರಿಯಿಂದ ಎಲ್ಲರಿಗೂ ಹೊಡೆತ ಬಿದ್ದಿದೆ. ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಲಿ ಎಂದು ಆಗ್ರಹಿಸಿದರು, ಇನ್ನು ಈ ಬಗ್ಗೆ ಮಾತನಾಡಿರುವ ಕ್ಲಾಸ್ 1 ಗುತ್ತಿಗೆದಾರ ನವೀನ್ ಎನ್ನುವರು, ಸರ್ಕಾರವೇ ಗಣಿಗಾರಿಕೆಯನ್ನ ನಿಲ್ಲಿಸಿದೆ. ನೆರೆಯ ರಾಜ್ಯದ ಜಿಲ್ಲೆಯಿಂದ ವಸ್ತುಗಳನ್ನು ಕೊಂಡು, ಕೆಲಸ ಮಾಡಲು ಸಾಧ್ಯವಿಲ್ಲ ನಮಗೂ ಹೆಂಡತಿ ಮಕ್ಕಳಿದ್ದಾರೆ, ನಾವು ಜೀವನ ಮಾಡಬೇಕು ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ಕೇವಲ ಕಲ್ಲು ಸ್ಪೋಟವನ್ನ ಮಾತ್ರ ನಿಲ್ಲಿಸಿದ್ದು, ಗಣಿಗಾರಿಕೆಯನ್ನ ನಿಲ್ಲಿಸುವಂತೆ ಆದೇಶ ಹೊರಡಿಸಿಲ್ಲ. ಆದರೆ ಬ್ಲಾಸ್ಟಿಂಗ್ ಕುರಿತಾಗ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಿದ್ದು, ಇದಕ್ಕೆ ಕ್ರಷರ್ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ನಿಯಮಗಳನ್ನು ಸಡಿಲಿಕೆ ಮಾಡುವ ಸಲುವಾಗಿ ಕ್ರಷರ್ ಗಳನ್ನ ಮಾಲೀಕರು ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದಾರೆ ಎನ್ನಲಾಗುತ್ತಿದೆ.
Published by:Latha CG
First published: