ಬೆಳಗಾವಿ(ಸೆಪ್ಟೆಂಬರ್ 20): ನೋಟ್ ಬ್ಯಾನ್, ಜಿ ಎಸ್ ಟಿ ಅನ್ವಯದಿಂದ ನೇಕಾರಿಕೆ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಲಾಕ್ ಡೌನ್ ಎಫೆಕ್ಟ್ ನಿಂದ ಇಡೀ ಉದ್ಯಮ ಕುಸಿದು ಹೋಗಿದೆ. ನೇಕಾರಿಕೆ ನಂಬಿಕೊಂಡು ಜೀವನ ನಡೆಸುತ್ತಿದ್ದು ಕುಟುಂಬಗಳಿಗೆ ಇದು ದೊಡ್ಡ ಪೆಟ್ಟು ನೀಡಿದೆ. ನೇಕಾರರು ಸರ್ಕಾರದ ತಮ್ಮ ನೆರವಿಗೆ ಬರುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಅದು ಹುಸಿಯಾಗಿದ್ದು, ಇದೀಗ ಉದ್ಯಮ ನಂಬಿದ ಜನರ ಬದುಕು ಮತ್ತಷ್ಟು ದುಸ್ತರವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಇದ್ದಾರೆ. ಜಿಲ್ಲೆಯೊಂದರಲ್ಲಿ 26 ಸಾವಿರ ಮಗ್ಗಗಳು ಇದ್ದು, 1.20 ಲಕ್ಷ ಕುಟುಂಬಗಳು ಉದ್ಯಮವನ್ನು ನಂಬಿಕೊಂಡು ಸಾವಿರಾರು ವರ್ಷಗಳಿಂದ ಜೀವನ ನಡೆಸುತ್ತಿವೆ. ಇದೀಗ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಪೆಟ್ಟು ಬಿದಿದ್ದು, ನೇಕಾರರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ನೇಕಾರರ ಸಮಸ್ಯೆಗೆ ಸಂಧಿಸಲು ರಾಜ್ಯ ಸರ್ಕಾರ ಅನೇಕ ಯೋಜನೆ ಭರವಸೆ ನೀಡಿತ್ತು. ಆದರೆ ಯಾವ ಭರವಸೆಯೂ ಇನ್ನೂ ಈಡೇರಿಲ್ಲ. ಹೀಗಾಗಿ ನೇಕಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಲಾಕ್ ಡೌನ್ ನಿಂದ ಸಂಪೂರ್ಣವಾಗಿ ಕುಸಿದಿರೋ ಉದ್ಯಮಕ್ಕೆ ಚೇತರಿಕೆ ನೀಡಲು ಸರ್ಕಾರ ಅನೇಕ ಭರವಸೆ ನೀಡಿತ್ತು. ಪ್ರಮುವಾಗಿ ನೇಕಾರರ ಬಳಿ ಇರುವ ಸೀರೆ ಖರೀದಿಗೆ ಯೋಜನೆಯನ್ನೂ ರೂಪಿಸಲಾಗಿತ್ತು. ರಾಜ್ಯದಲ್ಲಿ ನೇಕಾರರ ಬಳಿ ಉಳಿದಿರೋ 15 ಲಕ್ಷ ಸೀರೆಗಳ ಖರಿದೀಗೆ 60 ಕೋಟಿ ರೂಪಾಯಿ ನೀಡುವ ಭರವಸೆ ನೀಡಿತ್ತು. ನಂತರ ಇದು ಬದಲಾಗಿ 6 ಲಕ್ಷ ಸೀರೆಗಳ ಖರೀದಿಗೆ 38 ಕೋಟಿ ರೂಪಾಯಿ ನೀಡೋ ಆಶ್ವಾಸನೆಯನ್ನು ಸರ್ಕಾರ ನೀಡಿತ್ತು. ಆದರೆ ಈ ಪ್ರಸ್ತಾವನೆಯನ್ನು ಸಹ ಆರ್ಥಿಕ ಇಲಾಖೆ ತಿರಸ್ಕಾರ ಮಾಡಿದೆ ಎನ್ನುವ ಸಂಶಯ ಇದೀಗ ವ್ಯಕ್ತವಾಗಿದೆ.
ರಾಜ್ಯಸಭೆಯಲ್ಲಿ ದುರ್ವರ್ತನೆ ಕಾರಣಕ್ಕೆ 8 ಸಂಸದರ ಅಮಾನತು
ಉದ್ಯಮದಲ್ಲಿ ಸಂಕಷ್ಟ, ಸಾಲಭಾದೆಯಿಂದ ಬೇಸತ್ತು ರಾಜ್ಯದಲ್ಲಿ 16 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ನೇಕಾರರ ಕುಟುಂಬಗಳಿಗೆ 2 ಲಕ್ಷ ಪರಿಹಾರ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಈವರೆಗೆ ಯಾವುದೇ ಪರಿಹಾರದ ಹಣ ನೀಡಿಲ್ಲ. ಇದರಿಂದ ಆತಂಕದಲ್ಲಿಯೇ ನೇಕಾರರು ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿಯ ಸರ್ಕಾರ ತನ್ನ ನಡುವಳಿಕೆಯನ್ನು ಮುಂದುವರೆಸಿದರೆ ಅನಿವಾರ್ಯವಾಗಿ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ನೇಕಾರರ ಮುಖಂಡ ಪರುಶುರಾಮ್ ಡಗೆ ಎಚ್ಚರಿಕೆ ನೀಡಿದ್ದಾರೆ.
ಅನೇಕ ನೇಕಾರರು ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗದೆ ಕೈ ಚೆಲ್ಲಿದ್ದಾರೆ. ಬೆಳಗಾವಿಯ ವಡಗಾವಿ, ಶಹಾಪುರ ಭಾಗದಲ್ಲಿ 40ಕ್ಕೂ ಹೆಚ್ಚು ನೇಕಾರರ ಮನೆಗಳಿಗೆ ಇದೀಗ ವಿದ್ಯುತ್ ಕಟ್ ಮಾಡಲಾಗಿದೆ. ನೇಕಾರರು ಉದ್ಯಮವನ್ನು ಬಿಟ್ಟು ತರಕಾರಿ ಮಾರಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. 6 ತಿಂಗಳಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಇನ್ನೂ ಹೇಗೆ ಹೆಸ್ಕಾಂ ಬಿಲ್ ತುಂಬಲು ಸಾಧ್ಯ ಎಂದು ಗಣಪತಿ ಭಂಡಾರಿ ಎಂಬ ನೇಕಾರ ಸಂಷ್ಟವನ್ನು ತೋಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ