• Home
  • »
  • News
  • »
  • state
  • »
  • Bengaluru: ಮೋದಿ ಬಂದು ಹೋದ ಮೇಲೆ ಕಿತ್ತು ಹೋದ ರಸ್ತೆ; ಅಂದು ಸುಮ್ಮನಿದ್ದ, ಸರ್ಕಾರ ಇಂದು ಕೇಳಿದ್ಯಾಕೆ?

Bengaluru: ಮೋದಿ ಬಂದು ಹೋದ ಮೇಲೆ ಕಿತ್ತು ಹೋದ ರಸ್ತೆ; ಅಂದು ಸುಮ್ಮನಿದ್ದ, ಸರ್ಕಾರ ಇಂದು ಕೇಳಿದ್ಯಾಕೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾಳಾದಾಗ ಯಾವುದೇ ಕ್ರಮ ಕೈಗೊಳ್ಳದ ನಗರಾಭಿವೃದ್ಧಿ ಇಲಾಖೆ, ಇದೀಗ ಬಿಲ್ ಪಾವತಿ ವೇಳೆ ರಸ್ತೆ ಗುಣಮಟ್ಟ ಪರಿಶೀಲಿಸುವಂತೆ ಸೂಚಿಸಿದೆ. ಖುದ್ದು ಮುಖ್ಯ ಆಯುಕ್ತರು ಪರಿಶೀಲಿಸಬೇಕು ಎಂದು ಅದೇಶದಲ್ಲಿ ಹೇಳಲಾಗಿದೆ.

  • Share this:

ಜೂನ್​ನಲ್ಲಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪ್ರಧಾನಿಗಳು ಪ್ರಯಾಣಿಸಿದ ಮಾರ್ಗಕ್ಕೆ ರಾತ್ರೋರಾತ್ರಿ ಡಾಂಬಾರು ಹಾಕಿ ರಿಪೇರಿ (Road Repair) ಮಾಡಲಾಗಿತ್ತು. ಆದ್ರೆ ಪ್ರಧಾನಿಗಳು ಬಂದು ಹೋದ ಮರುದಿನವೇ ರಸ್ತೆ (Potholes) ಕಿತ್ತುಹೋಗಿ ಕಳಪೆ ಕಾಮಗಾರಿ ಬಟಾಬಯಲಾಗಿತ್ತು. ಈ ವಿಷಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಅಂದು ಸುಮ್ಮನಾಗಿದ್ದ ಬಿಬಿಎಂಪಿ (BBMP) ಈಗ ರಸ್ತೆಯ ಗುಣಮಟ್ಟದ ಬಗ್ಗೆ ವರದಿ ಕೇಳಿದೆ. ಪ್ರಧಾನಿ ನರೇಂದ್ರ ಮೋದಿ ನಗರಕ್ಕಾಗಮಿಸಿದಾಗ ಮಾಡಲಾಗಿದ್ದ ರಸ್ತೆ ದುರಸ್ತಿ ಗುಣಮಟ್ಟ (Road Quality) ಪರಿಶೀಲಿಸುವಂತೆ ರಾಜ್ಯ ಸರ್ಕಾರ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಅದೇಶ ನೀಡಿದೆ.


ವಿವಿಧ ಕಾಮಗಾರಿಗಳ ಅನುಷ್ಠಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ಜೂನ್‌ನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ನಗರದ 14 ಕಿಮೀ ಉದ್ದದ ರಸ್ತೆಯನ್ನು ದುರಸ್ತಿ ಮಾಡಿ ಮರುಡಾಂಬರೀಕರಣ ಮಾಡಲಾಗಿತ್ತು. ಅದರಲ್ಲಿ ಕೊಮ್ಮಘಟ್ಟ ವ್ಯಾಪ್ತಿಯಲ್ಲಿ ಮಾಡಲಾಗಿದ್ದ ದುರಸ್ತಿ ಕಾಮಗಾರಿ ಪ್ರಧಾನಿ ನಗರಕ್ಕೆ ಬಂದು ಹೋದ ಮರು ದಿನವೇ ಕಿತ್ತು ಹೋಗಿತ್ತು.


23.5 ಕೋಟಿ ರೂ. ವೆಚ್ಚದಲ್ಲಿ 14 ಕಿಮೀ ಉದ್ದದ ರಸ್ತೆ ಕಾಮಗಾರಿ


ಕಳಪೆ ಕಾಮಗಾರಿ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಆ ಕಾಮಗಾರಿಗೆ ಸಂಬಂಧಿಸಿದಂತೆ ಗುಣಮಟ್ಟ ಪರಿಶೀಲನೆಗೆ ರಾಜ್ಯ ಸರ್ಕಾರ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನಗರಕ್ಕಾಗಮಿಸಿದ ಸಂದರ್ಭದಲ್ಲಿ 23.5 ಕೋಟಿ ರೂ. ವೆಚ್ಚದಲ್ಲಿ 14 ಕಿಮೀ ಉದ್ದದ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಬೆಂಗಳೂರು ವಿವಿ ರಸ್ತೆ, ತುಮಕೂರು ರಸ್ತೆ ಹಾಗೂ ಕೊಮ್ಮಘಟ್ಟ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು.


government asks for report of road where potholes found after pm modi visit mrq
ಫೈಲ್ ಫೋಟೋ


ರಸ್ತೆ ಗುಣಮಟ್ಟ ಪರಿಶೀಲಿಸುವಂತೆ ಸೂಚನೆ


ಇದರಲ್ಲಿ ಕೊಮ್ಮಘಟ್ಟ ವ್ಯಾಪ್ತಿಯ ರಸ್ತೆಯಲ್ಲಿ ಗುಂಡಿ ಕಾಣಿಸಿಕೊಂಡಿತ್ತು. ಕಾಮಗಾರಿ ನಡೆದು ನಾಲ್ಕು ತಿಂಗಳಾಗುತ್ತಿದ್ದು, ಕಾಮಗಾರಿ ನಡೆದ ಎರಡೇ ದಿನದಲ್ಲಿ ರಸ್ತೆ ಕಿತ್ತು ಬಂದಿತ್ತು. ಹಾಳಾದಾಗ ಯಾವುದೇ ಕ್ರಮ ಕೈಗೊಳ್ಳದ ನಗರಾಭಿವೃದ್ಧಿ ಇಲಾಖೆ, ಇದೀಗ ಬಿಲ್ ಪಾವತಿ ವೇಳೆ ರಸ್ತೆ ಗುಣಮಟ್ಟ ಪರಿಶೀಲಿಸುವಂತೆ ಸೂಚಿಸಿದೆ. ಖುದ್ದು ಮುಖ್ಯ ಆಯುಕ್ತರು ಪರಿಶೀಲಿಸಬೇಕು ಎಂದು ಅದೇಶದಲ್ಲಿ ಹೇಳಲಾಗಿದೆ.


ಜತೆಗೆ ಸಂಬಂಧಪಟ್ಟ ಮುಖ್ಯ ಎಂಜಿನಿಯರ್‌ರಿಂದ ಕಾಮಗಾರಿ ಗುಣಮಟ್ಟ ಪರಿಶೀಲಿಸಬೇಕು. ಹಾಗೆಯೇ ಪ್ರತಿಷ್ಠಿತ ಸಂಸ್ಥೆಯಿಂದ ರಸ್ತೆ ದುರಸ್ತಿ ಕಾಮಗಾರಿಯ ಗುಣಮಟ್ಟ ತಪಾಸಣೆ ನಡೆಸಿ ವರದಿ ನೀಡುವಂತೆ ಬಿಬಿಎಂಪಿ ಅಯುಕ್ತರಿಗೆ ಸೂಚನೆ ನೀಡಲಾಗಿದೆ.


ಇದನ್ನೂ ಓದಿ:  Bengaluru Potholes: ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP


ಬಿಬಿಎಂಪಿ ಮುಖ್ಯ ಆಯುಕ್ತರ ಪ್ರತಿಕ್ರಿಯೆ


ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ಸರ್ಕಾರದ ಸೂಚನೆ ಬಂದಿದೆ, ಸೂಚನೆ ಮೇರೆಗೆ ವರದಿ ಕೊಡುತ್ತೇವೆ. ಸರ್ಕಾರದ ಆದೇಶವನ್ನ ಪಾಲನೆ ಮಾಡೋದು ನಮ್ಮ ಕರ್ತವ್ಯವಾಗಿದೆ. ಆದಷ್ಟು ಬೇಗ ವರದಿ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.


government asks for report of road where potholes found after pm modi visit mrq
ಸಾಂದರ್ಭಿಕ ಚಿತ್ರ


ನ್ಯೂಸ್ 18 ಕನ್ನಡದ ವರದಿ ಪ್ರಸಾರ ಆದ ಒಂದೇ ತಾಸಿಗೆ ಮರು ಡಾಂಬರೀಕರಣ !


ಪ್ರಧಾನಿ ಮೋದಿ ನಗರಕ್ಕೆ ಬಂದು ಹೋದ ಮೂರೇ ದಿನಕ್ಕೆ ಜ್ಞಾನಭಾರತಿಯ ಮರಿಯಪ್ಪನಪಾಳ್ಯದಲ್ಲಿ ರಸ್ತೆ ಮೇಲಿನ ಡಾಂಬರು ಕಿತ್ತು ಬಂದಿತ್ತು. ಇದು ರಾಷ್ಟ್ರ ವ್ಯಾಪಿ ಚರ್ಚೆಗೆ ಗ್ರಾಸವಾಗಿತ್ತು. ಅದಾಗಿ ಈ ಸಂಬಂಧ ಪ್ರಧಾನಿ ಕಚೇರಿಯಿಂದ ಕಾರಣ ಕೇಳಿ ವರದಿಗೆ ಸೂಚಿಸಿತ್ತು.


ಕೆಂಗೇರಿ ಮೆಟ್ರೋ ಸ್ಟೇಷನ್ ಮುಂಭಾಗದಲ್ಲಿ ಮೋದಿ ಓಡಾಡಿದ ರಸ್ತೆಯ ಡಾಂಬರು ಕಳಪೆ 


ಮರಿಯಪ್ಪನಪಾಳ್ಯದಲ್ಲಿ ಅದ್ಯಾವಾಗ ರಸ್ತೆ ಟಾರು ಕಿತ್ತು ಬಂತೋ ಆಗಲೇ ಪಾಲಿಕೆ‌ ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್, ಗುತ್ತಿಗೆದಾರರಿಗೆ ದಂಡ ಹಾಕಿ ಮೋದಿ ಆ ರಸ್ತೆಯಲ್ಲೇ ಓಡಾಡಿಲ್ಲ ಅಂತ ಪಾಲಿಕೆ ನುಣುಚಿಕೊಂಡಿತ್ತು. ಅದರ ಬಿಸಿ ಮಾಸುವ ಮುನ್ನವೇ ಈಗ ಕೆಂಗೇರಿ ಮೆಟ್ರೋ ಸ್ಟೇಷನ್ ಮುಂಭಾಗದಲ್ಲೇ ರಸ್ತೆ ಮೇಲಿನ ಡಾಂಬರು ಕಿತ್ತು ಬಂದಿತ್ತು.


ಇದನ್ನೂ ಓದಿ:  Potholes: ಮಂಗಳೂರಿಗೆ ಮೋದಿ, ರಾತ್ರೋ ರಾತ್ರಿ ಮಾಯವಾಗಿದ್ದ ರಸ್ತೆ ಗುಂಡಿಗಳು ಹತ್ತೇ ದಿನದಲ್ಲಿ ಪ್ರತ್ಯಕ್ಷ!


ಇದೇ ಮಾರ್ಗದ ಮೂಲಕ ಕೊಮ್ಮಘಟ್ಟದಿಂದ ಬೇಸ್ ಕ್ಯಾಂಪಸ್ ಗೆ ಮೋದಿ ಓಡಾಡಿದ್ದರು. ಈಗ ಮೋದಿ ಓಡಾಡಿದ ಒಂದೇ ವಾರಕ್ಕೆ ರಸ್ತೆ ಡಾಂಬರು ಕಿತ್ತು ಬಂದಿದೆ. ಆದರೆ ರಾತ್ರೋ ರಾತ್ರಿ ಪಾಲಿಕೆ ಪ್ಯಾಚ್ ವರ್ಕ್ ಮಾಡಿ, ಈ ರಸ್ತೆ BMRCL ಅಧೀನದಲ್ಲಿದೆ ಅಂತ ಇದರಿಂದಲೂ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ

Published by:Mahmadrafik K
First published: