• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • KPTCL, ESCOM ನೌಕರರ ಬೇಡಿಕೆಗೆ ಸರ್ಕಾರದ ಒಪ್ಪಿಗೆ; ಶೇಕಡಾ 20ರಷ್ಟು ವೇತನ ಹೆಚ್ಚಳಕ್ಕೆ ಸಮ್ಮತಿ!

KPTCL, ESCOM ನೌಕರರ ಬೇಡಿಕೆಗೆ ಸರ್ಕಾರದ ಒಪ್ಪಿಗೆ; ಶೇಕಡಾ 20ರಷ್ಟು ವೇತನ ಹೆಚ್ಚಳಕ್ಕೆ ಸಮ್ಮತಿ!

ಶೇಕಡಾ 20ರಷ್ಟು ವೇತನ ಹೆಚ್ಚಳಕ್ಕೆ ಸಮ್ಮತಿ  (ಸಾದರ್ಭಿಕ ಚಿತ್ರ)

ಶೇಕಡಾ 20ರಷ್ಟು ವೇತನ ಹೆಚ್ಚಳಕ್ಕೆ ಸಮ್ಮತಿ (ಸಾದರ್ಭಿಕ ಚಿತ್ರ)

ಇದೀಗ ಶೇ.20ರಷ್ಟು ವೇತನ ಹೆಚ್ಚಳಕ್ಕೆ  ಶಿಫಾರಸ್ಸು ಮಾಡಿ ಸರ್ಕಾರಕ್ಕೆ (Government) ಪತ್ರ ಬರೆದಿದ್ದಾರೆ ಎಂಬ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಸಚಿವರು ನೀಡಿರುವ ಭರವಸೆಯನ್ನು ನೌಕರರ ಸಂಘದ ಕಾರ್ಯದರ್ಶಿ ಜಯರಾಮ್ ಸಹ ಒಪ್ಪಿಕೊಂಡಿದ್ದಾರೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ಬೆಂಗಳೂರು: ಮಾರ್ಚ್ 16ರಿಂದ ವೇತನ ಪರಿಷ್ಕರಣೆಗೆ ಆಗ್ರಹಿಸಿ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂ ನೌಕರರು (KPTCL And ESCOM Employees) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು. ಈ ಸಂಬಂಧ ಮಂಗಳವಾರ ಇಂಧನ ಸಚಿವ ಸುನಿಲ್ ಕುಮಾರ್ (Minister Sunil Kumar) ನೌಕರರ ಸಂಘದ ಕಾರ್ಯದರ್ಶಿ ಜಯರಾಮ್ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಇದೀಗ ಶೇ.20ರಷ್ಟು ವೇತನ ಹೆಚ್ಚಳಕ್ಕೆ  ಶಿಫಾರಸ್ಸು ಮಾಡಿ ಸರ್ಕಾರಕ್ಕೆ (Government) ಪತ್ರ ಬರೆದಿದ್ದಾರೆ ಎಂಬ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಸಚಿವರು ನೀಡಿರುವ ಭರವಸೆಯನ್ನು ನೌಕರರ ಸಂಘದ ಕಾರ್ಯದರ್ಶಿ ಜಯರಾಮ್ ಸಹ ಒಪ್ಪಿಕೊಂಡಿದ್ದಾರೆ.


ನಿನ್ನೆ ಅಧಿಕಾರಿಗಳು ಮತ್ತು ಇಂಧನ ಸಚಿವರ ಜೊತೆ ಸಭೆ ನಡೆದಿತ್ತು. ಇದೀಗ ಸಚಿವರು ಶೇ.20ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿದ್ದಾರೆ. ಶೇ.22ರಷ್ಟು ವೇತನ ಹೆಚ್ಚಳ ಮಾಡುವ ಬೇಡಿಕೆ ಇರಿಸಲಾಗಿತ್ತು. ಶೇ.20ರಷ್ಟು ವೇತನ ಹೆಚ್ಚಳಕ್ಕೆ ನಮ್ಮ ಒಪ್ಪಿಗೆ ಇದೆ. ಸಚಿವರು ಪತ್ರ ಬರೆದಿದ್ದಾರೆ ಅಂದ್ರೆ ವೇತನ ಹೆಚ್ಚಾಗಲಿದೆ ಎಂದು ನೌಕರರ ಸಂಘದ ಕಾರ್ಯದರ್ಶಿ ಜಯರಾಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಮಾರ್ಚ್ 21ಕ್ಕೆ ಬಸ್​​ ಬರಲ್ಲ


ಮಾರ್ಚ್ 21 ರಿಂದ ಸಾರಿಗೆ ನೌಕರರು ಕೂಡಾ ಅನಿರ್ದಿಷ್ಟಾವಧಿ ಮುಷ್ಕರ ನಡೆಸ್ತಾರೆ. ಅನಂತ್ ಸುಬ್ಬರಾವ್ ನೇತೃತ್ವದ ಸಂಘಟನೆಯ ಸಾರಿಗೆ ನೌಕರರು ಮುಷ್ಕರ ನಡೆಸಲಿದ್ದು, 23 ಸಾವಿರ ಬಸ್ ನಿಲ್ಲುತ್ತವೆ ಎಂದು ಸಿಎಂಗೂ ಪತ್ರ ಬರೆದು ಅನಂತ್ ಸುಬ್ಬರಾವ್ ಎಚ್ಚರಿಸಿದ್ದಾರೆ.


ಇನ್ನೊಂದೆಡೆ ಆರ್.ಚಂದ್ರಶೇಖರ್ ನೇತೃತ್ವದ ನೌಕರರ ಸಮಾನ ಮನಸ್ಕರ ವೇದಿಕೆಯು ಮಾರ್ಚ್ 5ರಂದೇ ಸಭೆ ನಡೆಸಿ ಮುಷ್ಕರಕ್ಕೆ ಕರೆ ನೀಡಿದೆ. ಎರಡೂ ಬಣದ ಬೇಡಿಕೆಗಳು ಭಿನ್ನವಾಗಿರೋದ್ರಿಂದ ಹೋರಾಟಕ್ಕೆ ತೊಡಕಾಗಿದೆ. ಆದರೆ, ನೌಕರರನ್ನ ಮನವೊಲಿಸುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.


ಪೊಲೀಸ್, ವಕೀಲರ ಬೀದಿ ರಂಪಾಟ


ಗದಗ ತಾಲೂಕಿನ ಲಕ್ಕುಂಡಿಯಲ್ಲಿ ವಕೀಲರು ಮತ್ತು ಪೊಲೀಸರು ಕಾಲರ್ ಹಿಡಿದು ಪರಸ್ಪರ ಎಳೆದಾಡಿಕೊಂಡಿದ್ದಾರೆ. ಅಕ್ರಮ ವಿಂಡ್ ಫ್ಯಾನ್ ನಿರ್ಮಾಣದ ವಿಚಾರಕ್ಕೆ ಕಂಪನಿ ಸಿಬ್ಬಂದಿಯನ್ನ ರೈತರು ಪಂಚಾಯತಿಯಲ್ಲಿ ಕೂಡಿಹಾಕಿದ್ರು.




NOC ಮಾಡಿಸದೇ ಪಂಚಾಯತಿಗೆ ತೆರಿಗೆ ವಂಚಿಸಿ ವಿಂಡ್ ಫ್ಯಾನ್ ನಿರ್ಮಿಸ್ತಿದ್ದಾರೆ. ಜಮೀನುಗಳನ್ನ ಲೀಜ್ ಪಡೆಯೋದ್ರಲ್ಲೂ ಗೋಲ್ಮಾಲ್ ಆಗಿದೆ ಎಂದು ಆರೋಪಿಸಿದ್ದಾರೆ. ಆಗ ಗದಗ ಗ್ರಾಮೀಣ ಠಾಣೆ ಪೊಲೀಸರು ಹಾಗೂ ವಕೀಲರ ಮಧ್ಯೆ ಬೀದಿ ರಂಪಾಟವಾಗಿದೆ.


ಒಂದೇ ಬೆಡ್, ಇಬ್ಬರು ರೋಗಿಗಳು


ಕಿಮ್ಸ್ ಆಸ್ಪತ್ರೆಯ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ. ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಡುವ ದೃಶ್ಯ ವೈರಲ್​ ಆಗಿದೆ. ಕಿಮ್ಸ್ ಆಸ್ಪತ್ರೆಯ 702ನೇ ವಾರ್ಡಿನಲ್ಲಿ ನರಕ ದರ್ಶನ ಕಂಡಿದೆ. ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳು ಮಲಗಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯ ವೈರಲ್ ಆಗಿದೆ.


ಒಂದೇ ಬೆಡ್‌ನಲ್ಲಿ ಮಧ್ಯವಯಸ್ಕ ಮಹಿಳೆಯರು ಎದುರುಬದುರಾಗಿ ಮಲಗಿದ್ದಾರೆ. ಒಬ್ಬರು ಇನ್ನೊಬ್ಬರನ್ನ ಸರಿಸುವಂತಿಲ್ಲ. ಸ್ವಲ್ಪ ಸರಿದ್ರೂ ರೋಗಿಗಳು ನೆಲಕ್ಕೆ ಬೀಳುವ ಸ್ಥಿತಿ ಇದೆ. ಹಾಗಾಗಿ ಬಡ ರೋಗಿಗಳು ಮೈ ಬಿಗಿ ಹಿಡಿದುಕೊಂಡು ಮಲಗಿದ್ದಾರೆ. ಸದ್ಯ ರೋಗಿಗಳು ನರಕ ಬರುತ್ತಿರುವ ವಿಡಿಯೋ ಹಾಗೂ ಪೋಟೋ ಈಗ ವೈರಲ್​ ಆಗಿದೆ.


ಇದನ್ನೂ ಓದಿ:  Kusuma Shivalli: ದಿಢೀರ್ ಸಿಎಂ ಭೇಟಿಗೆ ಮುಂದಾದ ‘ಕೈ’  ಶಾಸಕಿ; 3ನೇ ಬಾರಿಗೆ ಕುಂದಗೋಳದಲ್ಲಿ ಪ್ರಜಾಧ್ವನಿ ಯಾತ್ರೆ ರದ್ದು


ಕೊನೆಗೂ ತಣ್ಣಗಾಯ್ತು ರಟ್ಟಿಹಳ್ಳಿ


ಕಲ್ಲುತೂರಾಟಕ್ಕೆ ಸಾಕ್ಷಿಯಾಗಿದ್ದ ಹಾವೇರಿಯ ರಟ್ಟಿಹಳ್ಳಿಯಲ್ಲಿ ಪೊಲೀಸರು ನಿದ್ದೆಗೆಟ್ಟು ಪರಿಸ್ಥಿತಿ ತಹಬದಿಗೆ ತಂದಿದ್ದಾರೆ. ಕಲ್ಲು ತೂರಾಟ ಮಾಡಿ ಪರಾರಿಯಾಗಿದ್ದ ಯುವಕರ ಮನೆಗೆ ಪೊಲೀಸರು ಭೇಟಿ ನೀಡಿದ್ದಾರೆ. ಪರಾರಿಯಾಗಿದ್ದ ಯುವಕರು ಯಾರೂ ಕೂಡ ನಿನ್ನೆ ರಾತ್ರಿ ಮನೆಗೆ ಬಂದಿಲ್ಲ. ಇಂದು ರಟ್ಟಿಹಳ್ಳಿ ಪಟ್ಟಣಕ್ಕೆ ADGP ಅಲೋಕ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Published by:Mahmadrafik K
First published: