ವರ ಮಹಾಲಕ್ಷ್ಮಿಯಂದು ಭಕ್ತರಿಗಿಲ್ಲ ಗೊರವನಹಳ್ಳಿ ಲಕ್ಷ್ಮಿದೇವಿ ದರ್ಶನ

ಜಿಲ್ಲಾಡಳಿತದ ಸೂಚನೆಯಂತೆ ನಾಳೆ ಗೊರವನಳ್ಳಿ ಲಕ್ಷ್ಮೀ ದೇವಾಲಯದಲ್ಲಿ ಪೂಜೆಪುನಸ್ಕಾರಗಳು ಬಂದ್

 ಗೊರವನಹಳ್ಳಿ ಲಕ್ಷ್ಮಿದೇವಿ

ಗೊರವನಹಳ್ಳಿ ಲಕ್ಷ್ಮಿದೇವಿ

  • Share this:
ತುಮಕೂರು ( ಆ. 19):  ನಾಳೆ ವರಮಹಾಲಕ್ಷ್ಮಿ ಹಬ್ಬ. ವರಮಹಾಲಕ್ಷ್ಮಿ ಸಂಭ್ರಮ ಜಿಲ್ಲೆಯ ಗೊರವನಹಳ್ಳಿಯಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ಈ ವಿಶೇಷ ದಿನದಂದು ದೇವಾಲಯದಲ್ಲಿ ವಿಶೇಷ ಅಲಂಕೃತಗೊಂಡಿರುವ ದೇವಿ ದರ್ಶನಕ್ಕೆ ದೂರದೂರುಗಳಿಂದ ಭಕ್ತರು ಹರಿದು ಬರುತ್ತಾರೆ. ಆದರೆ ಈ ಬಾರಿ  ಗೊರವನಹಳ್ಳಿ ಲಕ್ಷ್ಮಿ ದೇವಾಲಯದಲ್ಲಿ  ಅದ್ದೂರಿಯಾಗಿ ನಡೆಯಬೇಕಿದ್ದ ಪೂಜೆ ಪುನಸ್ಕಾರಕ್ಕೆ ಜಿಲ್ಲಾಡಳಿತ ತಡೆ ನೀಡಲಾಗಿದೆ. ಕೇವಲ ಅರ್ಚಕರು ಮಾತ್ರ ಪೂಜೆ ಕಾರ್ಯ ನಡೆಸಲಿದ್ದು, ಭಕ್ತರಿಗೆ ಯಾವುದೇ ಪೂಜೆ ಪುನಸ್ಕರದಲ್ಲಿ ಭಾಗಿಯಾಗಲು ಅವಕಾಶ ನೀಡಿಲ್ಲ. ಈ ಹಿನ್ನಲೆಯಲ್ಲಿ ಭಕ್ತರು ದೇವಾಲಯಕ್ಕೆ ಬಾರದಂತೆ ಆಡಳಿತ ಮಂಡಳಿ ತಿಳಿಸಿದೆ. ವರಮಹಾಲಕ್ಷ್ಮಿಯ ಸಂದರ್ಭದಲ್ಲಿ ಭಕ್ತರ ದಂಡೇ ದೇವಾಲಯಕ್ಕೆ ಹರಿದು ಬರುತ್ತದೆ. ಆದರೆ, ಕೋವಿಡ್​ ಸೋಂಕಿನ ಹಿನ್ನಲೆ ಈಗಾಗಲೇ ಜಿಲ್ಲಾಡಳಿತ ಕಟ್ಟು ನಿಟ್ಟಿನ ನಿಯಮ ಕೈಗೊಂಡಿದ್ದು, ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. 

ವರಮಹಾಲಕ್ಷ್ಮಿಯ ಮುಂಚಿತ ದಿನವಾದ ಇಂದು ಬಂದು ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದು, ಯಾವುದೇ ತರಹಸ ಪೂಜೆ, ಹೋಮ ಹವನ, ಅಲಂಕಾರ, ಅಭಿಷೇಕಗಳಿಗೆ ಯಾವುದೇ ಅನುಮತಿ ನೀಡಿಲ್ಲ. ಊರಿನ ಜನರು ಕೂಡ ನಾಳೆಯ ದೇವಾಲಯಕ್ಕೆ ಅವಕಾಶವಿಲ್ಲ ಎಂದು ಊರ ತುಂಬಾ ಡಂಗೂರ ಹೊಡೆಸಲಾಗಿದೆ. ಇನ್ನು ಬೇರೆ ಬೇರೆ ಊರುಗಳಿಂದ ಬರುವ ಭಕ್ತರಿಗೂ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದ್ದು, ದೇವಾಲಯದ ಮುಂದೆ ಭಿತ್ತಿ ಪತ್ರವನ್ನು ಅಂಟಿಸಲಾಗಿದೆ.

ನಾಳೆ ದೇವಾಲಯ ಸಂಪೂರ್ಣ ಬಂದ್ ಇರುವುದರಿಂದ  ಬೆಳಗ್ಗೆ 5ಗಂಟೆಗೆ ಕೇವಲ ಅರ್ಚಕರು ಮಾತ್ರ ಪ್ರವೇಶ ನೀಡಲಿದ್ದು, ಅರ್ಧಗಂಟೆಗಳ ಕಾಲ ಮಾತ್ರ ಪೂಜೆಗೆ ಅವಕಾಶ ನೀಡಲಾಗಿದೆ. ಬಳಿಕ ವಾರಾಂತ್ಯದಲ್ಲಿ ರಜೆ ಇದ್ದು, ಮುಂದಿನ ಮಂಗಳವಾರವೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಇನ್ನು ಕೋವಿಡ್ ನಿಯಮಾನುಸಾರ ಜಿಲ್ಲೆಯ ಎಲ್ಲಾ ಪ್ರಮುಖ ದೇವಾಲಯಗಳಾದ  ದೇವರಾಯಾನ ದುರ್ಗದ ನರಸಿಂಹಸ್ವಾಮಿ ದೇವಸ್ಥಾನ, ಎಡೆಯೂರು ಶ್ರೀ‌ಸಿದ್ದಲಿಂಗೇಶ್ವರ ದೇವಾಲಯ, ಗುಬ್ಬಿ‌ ಚನ್ನಬಸವೇಶ್ವರ, ಕುಣಿಗಲ್ ನ ಹುಲಿಯೂರಮ್ಮ ದೇವಾಲಯ, ಪಾವಗಡದ ಶೇನೇಶ್ಚರ‌‌ ದೇವಸ್ಥಾನ ಸೇರಿದಂತೆ ಎಲ್ಲಾ ದೇವಾಲಯಗಳು ಕೋವಿಡ್ ನಿಯಮಗಳನ್ನ ಕಟ್ಡುನಿಟ್ಟಾಗಿ ಪಾಲಿಸಬೇಕು.  ಒಂದು ವೇಳೆ‌ ಲೋಪವಾದರೆ ಅಂಥಾ ದೇವಾಲಯಗಳ ಆಡಳಿತ ಮಂಡಳಿಯವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಜಿಲ್ಲಾಡಳಿತ‌ ಎಚ್ಚರಿಕೆ ನೀಡಿದೆ.. ಈಗಾಗಲೇ ದೇವರಾಯನದುರ್ಗ ಸಂಪರ್ಕಿಸೋ ಬೆಟ್ಟದ ಕೆಳಗಡೆಯೇ ಪೊಲೀಸ್ ಬ್ಯಾರಕೇಡ್ ಹಾಕಿದ್ದ ಭಕ್ತಾದಿಗಳಿಗೆ ಮೂರು ಕಿಲೋಮೀಟರ್ ಹಿಂದೆಯೇ ನಿಷೇಧ ಹೇರಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: