ಬೆಂಗಳೂರು (ಜ. 21): ಖಾತೆ ಹಂಚಿಕೆ ಬದಲಾವಣೆಯಿಂದ ಅಸಮಾಧಾನಿತಗೊಂಡಿರುವ ಸಚಿವರು ಸಂಪುಟ ಸಭೆಗೆ ಗೈರಾಗುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ಮುನಿಸು ಮುಂದುವರೆಸಿದ್ದಾರೆ. ಸಂಪುಟ ವಿಸ್ತರಣೆ ಬಳಿಕ ಹಾಲಿ ಸಚಿವರ ಖಾತೆಯಲ್ಲೂ ಕೂಡ ಬದಲಾವಣೆ ಮಾಡಿರುವ ಹಿನ್ನಲೆ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕ್ರಮಕ್ಕೆ ಸಚಿವ ಗೋಪಾಲಯ್ಯ ಹಾಗೂ ಸುಧಾಕರ್, ಎಂಟಿಬಿ ನಾಗರಾಜ್, ಮಾಧುಸ್ವಾಮಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾತೆ ಬದಲಾವಣೆ ಹಿನ್ನಲೆ ಅಸಮಾಧಾನಿತದ ಸಚಿವರಾದ ಗೋಪಾಲಯ್ಯ ಹಾಗೂ ಎಂಟಿಬಿ ನಾಗರಾಜ್ ಅವರನ್ನು ಒಂದೂವರೆ ಗಂಟೆಗಳ ಮುಖ್ಯಮಂತ್ರಿ ಸಮಾಧಾನ ಮಾಡಿ, ಓಲೈಸಿದರು. ಆದರೂ ಕೂಡ ಮುನಿಸು ಶಮನವಾಗದ ಹಿನ್ನಲೆ ಅವರು ಸಂಪುಟ ಸಭೆಗೆ ಗೋಪಾಲಯ್ಯ, ಎಂಟಿಬಿ ನಾಗರಾಜ್, ಕೆ ಸುಧಾಕರ್ ಗೈರಾಗುವ ಮೂಲಕ ಮತ್ತೆ ಸಿಎಂ ವಿರುದ್ಧ ಪರೋಕ್ಷ ಬಂಡಾಯ ನಡೆಸಿದ್ದಾರೆ.
ಇಂದು ಸಂಜೆ4.30ಕ್ಕೆ ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಂಪುಟ ಸಭೆ ನಡೆಸಲಾಗಿದೆ. ಸಭೆಯಲ್ಲಿ ನೂತನ ಸಚಿವರಾದ ಅರವಿಂದ್ ಲಿಂಬಾವಳಿ, ಸಿಪಿ ಯೋಗೇಶ್ವರ್ ಸೇರಿದಂತೆ ನೂತನ ಸಚಿವರು ಸಭೆಯಲ್ಲಿ ಹಾಜರಿದ್ದಾರೆ. ಆದರೆ ಎಂಟಿಬಿ ನಾಗರಾಜ್, ಗೋಪಾಲಯ್ಯ, ಸುಧಾಕರ್ ಗೈರಾಗುವ ಮೂಲಕ ಮತ್ತೆ ತಾವು ಕೇಳಿದ ಖಾತೆಯನ್ನೇ ಮತ್ತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈ ಹಿನ್ನಲೆ ಸಿಎಂ ಎಂಟಿಬಿ ನಾಗರಾಜ್ ಹಾಗೂ ಗೋಪಾಲಯ್ಯ ಗೆ ದೂರವಾಣಿ ಕರೆ ಮೂಲಕ ಸಚಿವ ಸಭೆಗೆ ಬರುವಂತೆ ಸೂಚನೆ ನೀಡಿದರು. ಈ ಹಿನ್ನಲೆ ಅಶೋಕ್ ಸಂಪುಟ ಸಭೆಯಿಂದ ಹೊರಬಂದು ಫೋನ್ ಮೂಲಕ ಅಶೋಕ್ ಸಂಧಾನ ನಡೆಸಿದರು. ನನ್ನ ಮಾತಿಗೆ ಬೆಲೆ ಕೊಟ್ಟು ಸಭೆಗೆ ಬನ್ನಿ. ಮುಂದೆ ಕುಳಿತು ಎಲ್ಲವನ್ನೂ ಮಾತನಾಡೋಣ
ಸಭೆಯಲ್ಲಿ ಸಿಎಂ ನಿಮ್ಮನ್ನು ಕೇಳುತ್ತಿದ್ದಾರೆ. ಸಚಿವ ಸಂಪುಟ ಸಭೆಗೆ ಗೈರಾದರೆ ಏನು ಸಂದೇಶ ಹೋಗುತ್ತದೆ . ನೀವು ಈಗ ಸಭೆಗೆ ಬನ್ನಿ, ಆಮೇಲೆ ಎಲ್ಲ ಮಾತಾಡುವ ಎಂದು ತಿಳಿಸಿದರು ಎಂದು ಮೂಲಗಳು ವರದಿ ಮಾಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ