ಗೂಗಲ್​ನ ಡೂಡಲ್​ನಲ್ಲಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ: ರಾಷ್ಟ್ರಕವಿಗೆ ಗೂಗಲ್​ ವಿಶೇಷ ಗೌರವ


Updated:December 29, 2017, 3:47 PM IST
ಗೂಗಲ್​ನ ಡೂಡಲ್​ನಲ್ಲಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ: ರಾಷ್ಟ್ರಕವಿಗೆ ಗೂಗಲ್​ ವಿಶೇಷ ಗೌರವ
ರಾಷ್ಟ್ರಕವಿ ಕುವೆಂಪುರವರಿಗೆ ಗೌರವ ಸಲ್ಲಿಸಿ ಗೂಗಲ್ ನಿರ್ಮಿಸಿರುವ ಡೂಡಲ್

Updated: December 29, 2017, 3:47 PM IST
ಕನ್ನಡ ಸಾಹಿತ್ಯ ಕ್ಷೇತ್ರದ ಹೆಮ್ಮೆ, ರಾಷ್ಟ್ರಕವಿ ಕುವೆಂಪುರವರ 113ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ವಿಶೇಷವಾದ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

ಇಂದು(ಡಿಸೆಂಬರ್ 29ರಂದು) ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನವಾಗಿದ್ದು, ಇದರ ಅಂಗವಾಗಿ ಖ್ಯಾತ ಅಂತರ್ಜಾಲ ತಾಣ ಗೂಗಲ್ ತನ್ನ ಮುಖಪುಟದಲ್ಲಿ ಕನ್ನಡದ ರಾಷ್ಟ್ರಕವಿಗೆ ಕನ್ನಡದಲ್ಲೇ 'ಗೂಗಲ್' ಎಂದು ಬರೆದಿರುವ ವಿಶೇಷ ಡೂಡಲ್ ಒಂದನ್ನು ರಚಿಸಿ ಗೌರವ ಸಲ್ಲಿಸಿದೆ.

ತೀರ್ಥಹಳ್ಳಿಯ ಪುಟ್ಟ ಊರಾದ ಕುಪ್ಪಳ್ಳಿಯಲ್ಲಿ ಹಚ್ಚಹಸುರಿನ ಪ್ರಕೃತಿ ಮಡಿಲಿನಲ್ಲಿ ವೆಂಕಟಪ್ಪ ಪುಟ್ಟಪ್ಪ 1904 ಡಿಸೆಂಬರ್‌ 29ರಂದು ಜನಿಸಿದ್ದರು. ಈ ಹಿನ್ನೆಲೆಯಲ್ಲಿ ಸುಂದರ ಪ್ರಕೃತಿಯ ಮಡಿಲಿನಲ್ಲಿ, ಹಚ್ಚ ಹಸುರಿನ ಗಿರಿ ಶಿಖರಗಳ ನಡುವೆ ಬಂಡೆಯೊಂದರ ಮೇಲೆ ಬಿಳಿ ಪಂಚೆ ಹಾಗೂ ಜುಬ್ಬ ಧರಿಸಿ, ಬರವಣಿಗೆಯಲ್ಲಿ ಮಗ್ನರಾಗಿರುವ ಕುವೆಂಪುರವರ ಭಾವಚಿತ್ರವನ್ನು ಗೂಗಲ್ ತನ್ನ ಡೂಡಲ್ ಆಗಿ ನಿರ್ಮಿಸಿದೆ.

ಇವರ ಶ್ರೀರಾಮಯಣ ದರ್ಶನಂ ಕೃತಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿದ್ದು, ಮಲೆಗಳಲ್ಲಿ ಮದುಮಗಳುನಂತಹ ಮೇರು ಕೃತಿಗಳನ್ನು ಇವರು ರಚಿಸಿದ್ದಾರೆ. ಅಲ್ಲದೇ ನಾಟಕ, ವಿಮರ್ಶೆ, ಪ್ರೇಮಗೀತೆ, ಕಾದಂಬರಿ, ಕಾವ್ಯ, ವಿಮರ್ಶಾತ್ಮಕ ಪ್ರಬಂಧ, ಮಕ್ಕಳ ನಾಟಕ, ಸಾನೆಟ್ಟುಗಳು, ಮಹಾಕಾವ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ಇವರು ಕನ್ನಡ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ದವರಲ್ಲಿ ಪ್ರಮುಖರಾಗಿದ್ದಾರೆ.

 
First published:December 29, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ