• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Kannada Google: ಕನ್ನಡಿಗರ ಸ್ವಾಭಿಮಾನಕ್ಕೆ ಮಣಿದ ಗೂಗಲ್​; ಕೊಳಕು ಭಾಷೆ ಪ್ರಮಾದಕ್ಕೆ ಅಂತ್ಯ

Kannada Google: ಕನ್ನಡಿಗರ ಸ್ವಾಭಿಮಾನಕ್ಕೆ ಮಣಿದ ಗೂಗಲ್​; ಕೊಳಕು ಭಾಷೆ ಪ್ರಮಾದಕ್ಕೆ ಅಂತ್ಯ

ತಪ್ಪು ಸರಿಪಡಿಸಿಕೊಂಡ ಗೂಗಲ್​​

ತಪ್ಪು ಸರಿಪಡಿಸಿಕೊಂಡ ಗೂಗಲ್​​

ದೀಗ ಯಾವುದು ಕೊಳಕು ಭಾಷೆ ಎಂದು ಗೂಗಲ್​ನಲ್ಲಿ ಟೈಪ್​ ಮಾಡಿದರೆ, ಪ್ರತಿಯೊಂದು ಭಾಷೆಯೂ ತನ್ನದೇ ಆದ ಗೌರವವಿದೆ ಎಂಬ ಅಭಿಪ್ರಾಯ ಗೂಗಲ್​ನಲ್ಲಿ ಕಾಣಿಸುತ್ತಿದೆ

 • Share this:

  ನಾಡು, ನುಡಿಯ ವಿಚಾರದಲ್ಲಿ ಕನ್ನಡಿಗರು ಎಂದಿಗೂ ಸ್ವಾಭಿಮಾನಿಗಳು. ಅಂತಹ ಸ್ವಾಭಿಮಾನವನ್ನು ಕೆಣಕುವಂತಹ ಕೆಲಸವನ್ನು ಇಂದು ಗೂಗಲ್​ ಮಾಡಿತು. ಭಾರತದ ಕೊಳಕು ಭಾಷೆ (ugliest language in inda) ಯಾವುದು ಎಂಬ ಪ್ರಶ್ನೆಯನ್ನು ಗೂಗಲ್​ನಲ್ಲಿ ಸರ್ಚ್​ ಮಾಡಿದಾಕ್ಷಣ ಅದು ಕನ್ನಡ (Kannada) ಎಂದು ತೋರಿಸುತ್ತಿತ್ತು. ಈ ವಿಚಾರ ಕನ್ನಡಿಗರ ರೋಷವನ್ನು ಬಡಿದೆಬ್ಬಿಸಿತು. ಗೂಗಲ್​ನ ಈ ಕಾರ್ಯದ ವಿರುದ್ಧ ತಿರುಗಿಬಿದ್ದ ಕನ್ನಡಿಗರು ಅದಕ್ಕೆ ಪ್ರತ್ಯುತ್ತರವನ್ನು ನೀಡಿದ್ದಾರೆ. ಇದರ ಪ್ರತಿಫಲವಾಗಿ ಗೂಗಲ್​ ಈಗ ತನ್ನ ಪ್ರಮಾದ ಅರಿತು, ತಪ್ಪು ತಿದ್ದುಕೊಂಡಿದೆ. ಕಳೆದ ಎರಡು ಮೂರು ಗಂಟೆಗಳಲ್ಲಿ ದೇಶದಲ್ಲಿ ಅದರಲ್ಲಿಯೂ ರಾಜ್ಯದಲ್ಲಿ ಸಂಚಲ ಮೂಡಿಸಿದ್ದ ಗೂಗಲ್​ಗೆ ಕನ್ನಡಿಗರು ತಕ್ಕ ಉತ್ತರ ನೀಡಿ ಫೀಡ್​ ಬ್ಯಾಕ್​ (feedback) ನೀಡಿದ್ದಾರೆ. ಕನ್ನಡಿಗರು ನಿರಂತರವಾಗಿ ಇದಕ್ಕೆ ಫೀಡ್​ಬ್ಯಾಕ್​ ನೀಡಿದ ಹಿನ್ನಲೆ ಗೂಗಲ್​ನ ತನ್ನ ಪ್ರಮಾದ ಅರಿತು ತಪ್ಪು ಸರಿಪಡಿಸಿದೆ.  ಕೊಳಕು ಭಾಷೆ ಯಾವುದು ಎಂದು ಗೂಗಲ್​ನಲ್ಲಿ ಟೈಪ್​ (Google type) ಮಾಡಿದಾಕ್ಷಣ ಕನ್ನಡ ಎಂದು ಬರುತ್ತಿದ್ದ ಹಿನ್ನಲೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಈ ತಪ್ಪಿನ ಕುರಿತು ವಾರ್ತಾ ಇಲಾಖೆ ಸೇರಿದಂತರ ರಾಜ್ಯ ಸರ್ಕಾರದ ಗಮನ ಸೆಳೆಯುವ ಯತ್ನಗಳು ನಡೆದಿದ್ದವು. ಸಿನಿಮಾ ತಾರೆಯರು ಸೇರಿದಂತೆ ನಾಡಿನ ಜನರು ಗೂಗಲ್​ನ ಈ ವಿಷದ ಕುರಿತು ಅಲ್ಲಿಯೇ ಫೀಡ್​ಬ್ಯಾಕ್​ ಮೂಲಕ ಪ್ರತಿಕ್ರಿಯಿಸಿ ದೈತ್ಯ ಸಂಸ್ಥೆ ಗೂಗಲ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.


  ಇದಕ್ಕೆ ಪರ್ಯಾಯವಾಗಿ ಗೂಗಲ್​ನಲ್ಲಿ ಕ್ವೀನ್​ ಆಫ್​​ ಲಾಂಗ್ವೇಜ್​., ಭಾಷೆಯ ರಾಣಿ ಎಂಬ ಹುಡುಕಾಟ ಕೂಡ ಹೆಚ್ಚಾಗಿ ನಡೆಯಿತು. ಅತಿ ಹೆಚ್ಚು ವರ್ಣಮಾಲೆ, ಸಾಹಿತ್ಯ, ಭಾಷಾ ಸೊಗಡನ್ನು ಹೊಂದಿರುವ ಬಗ್ಗೆ ಕೂಡ ಹುಡುಕಾಟ ನಡೆಸಲಾಯಿತು. ವಿಶ್ವ ಲಿಪಿಗಳ ರಾಣಿ ಎಂದೇ ಬಣ್ಣನೆಯಾಗಿರುವ ಕನ್ನಡವನ್ನು ಅದು ಹೇಗೆ ಕೊಳಕು ಭಾಷೆ ಎನ್ನಲಾಯಿತು ಎಂದು ಗೂಗಲ್​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ತರಾಟೆ ಕೂಡ ನಡೆಸಿದರು. 2000 ಇತಿಹಾಸ ಹೊಂದಿರುವ ಕನ್ನಡ ಭಾಷೆ ವೈಜ್ಞಾನಿಕವಾಗಿಯೂ ತಾರ್ಕಿಕವಾಗಿಯೂ ಶ್ರೀಮಂತವಾಗಿದೆ ಎಂದು ತಿರುಗೇಟು ನೀಡಿದರು. ಅಲ್ಲದೇ, ಈ ಕುರಿತು ಗೂಗಲ್​ ಕ್ಷಮೆಯಾಚಿಸಬೇಕು ಎಂದು ಕೂಡ ಒತ್ತಾಯಿಸಿದರು.


  ಇದನ್ನು ಓದಿ: ಭಾರತದ ಅತ್ಯಂತ ಕೊಳಕು ಭಾಷೆ ಕನ್ನಡ!; ಗೂಗಲ್ ವಿರುದ್ಧ ರೊಚ್ಚಿಗೆದ್ದ ಕನ್ನಡಿಗರು


  ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಅರಿವಿಗೆ ಬಂದ ಗೂಗಲ್​ ಇದನ್ನು ಸರಿಪಡಿಸಿದೆ. ಇದೀಗ ಯಾವುದು ಕೊಳಕು ಭಾಷೆ ಎಂದು ಗೂಗಲ್​ನಲ್ಲಿ ಟೈಪ್​ ಮಾಡಿದರೆ, ಪ್ರತಿಯೊಂದು ಭಾಷೆಯೂ ತನ್ನದೇ ಆದ ಗೌರವವಿದೆ ಎಂಬ ಅಭಿಪ್ರಾಯ ಕಾಣಿಸುತ್ತಿದೆ.


  ತಪ್ಪು ಸರಿಪಡಿಸಿದ ಕನ್ನಡಿಗರು:
  ಗೂಗಲ್​ ನಲ್ಲಿ ಯಾವುದೇ ವಿಚಾರದ ಕುರಿತು ಯಾರು ಅತಿ ಹೆಚ್ಚು ಜನರ ಅಭಿಪ್ರಾಯಗಳನ್ನು ಅದು ತೋರಿಸುತ್ತದೆ. ಮಾಹಿತಿ ಕುರಿತು ಬಳಕೆದಾರರು ನೀಡಿದ ಫೀಡ್​ ಬ್ಯಾಕ್​ ಆಧಾರ ಅದು ಫಲಿತಾಂಶವನ್ನು ಅದು ತೋರಿಸುತ್ತದೆ. ಇದೇ ಹಿನ್ನಲೆ ಕನ್ನಡಿಗರು ಸ್ವಯಂ ಆಗಿ ಈ ತಪ್ಪನ್ನು ಅಳಿಸಲು ಮುಂದಾದರು. ಗೂಗಲ್​ನಲ್ಲಿ Ugliest Language in India ಎಂದು ಸರ್ಚ್​ ಮಾಡಿದಾಕ್ಷಣ ಬಂದ ಉತ್ತರದ ಕೆಳಗೆ ಫೀಡ್​ಬ್ಯಾಕ್ (feed back)​ ಎಂದು ಕ್ಲಿಕ್​ ಮಾಡಿದರೆ, ಅದರಲ್ಲಿ ಬರುವ ಆಯ್ಕೆಗಳನ್ನು ಸೆಲೆಕ್ಟ್​ ಮಾಡಿದಾಕ್ಷಣ ಮೂಡುವ ಆಯ್ಕೆಯಲ್ಲಿ ಇದು ಅಪರಾಧ (its hateful ) ಎಂಬ ಆಯ್ಕೆಯನ್ನು ಕ್ಲಿಕ್​ ಮಾಡಿ ಅಭಿಪ್ರಾಯ ತಿಳಿಸುವ ಆಯ್ಕೆ ಇದೆ. ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಇದಕ್ಕೆ ವರದಿ ಮಾಡಿದ ಹಿನ್ನೆಲೆ ಗೂಗಲ್​ ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ.

  Published by:Seema R
  First published: