Bengaluru Traffic: ಟ್ರಾಫಿಕ್ ಸಮಸ್ಯೆಗೆ ಗುಡ್‌ ಬೈ ಹೇಳಿ! ಗೂಗಲ್‌ ಜೊತೆ ಕೈ ಜೋಡಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು

ಬೆಂಗಳೂರಿನಲ್ಲಿ‌ ಟ್ರಾಫಿಕ್‌ ಸಮಸ್ಯೆ ಯಾರಿಗೆ ಗೊತ್ತಿಲ್ಲ ಹೇಳಿ. ಈ ಟ್ರಾಪಿಕ್‌ ಸಮಸ್ಯೆಗೆ ಗುಡ್‌ ಬೈ ಹೇಳಲು ಟ್ರಾಫಿಕ್ ಲೈಟ್ ಸಮಯವನ್ನು ಅತ್ಯುತ್ತಮವಾಗಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಗೂಗಲ್ ತನ್ನ ಪಾಲುದಾರಿಕೆಯನ್ನು ಪ್ರಕಟಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರು: ಗೂಗಲ್ (Google) ಈಗಾಗಲೇ ಎಲ್ಲ ಕಡೆ ತನ್ನ ಪ್ರಭಾವವನ್ನು ಬೀರುತ್ತಲೇ ಇದೆ. ಅದರ ಪ್ರಭಾವ ಈ ಸಲ ನಮ್ಮ ಬೆಂಗಳೂರಿನ ಟ್ರಾಫಿಕ್‌ (Bengaluru Traffic) ಮೇಲೆ ಆಗಿರುವುದು ವಿಶೇಷ. ಬೆಂಗಳೂರಿನಲ್ಲಿ‌ ಟ್ರಾಫಿಕ್‌ ಸಮಸ್ಯೆ ಯಾರಿಗೆ ಗೊತ್ತಿಲ್ಲ ಹೇಳಿ. ಈ ಟ್ರಾಫಿಕ್‌ ಸಮಸ್ಯೆಗೆ ಗುಡ್‌ ಬೈ ಹೇಳಲು ಟ್ರಾಫಿಕ್ ಲೈಟ್ ಸಮಯವನ್ನು ಅತ್ಯುತ್ತಮವಾಗಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ (Bengaluru Traffic Police) ಗೂಗಲ್ ತನ್ನ ಪಾಲುದಾರಿಕೆಯನ್ನು ಬುಧವಾರ ಪ್ರಕಟಿಸಿದೆ . "ಇದು ಸ್ಥಳೀಯ ಸಂಚಾರಿ ಪ್ರಾಧಿಕಾರವು ಪ್ರಮುಖ ಸರ್ಕಲ್‌ಗಳಲ್ಲಿ (Circle) ಇರುವ ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಂತಿಮವಾಗಿ ಇದನ್ನು ನಗರದಾದ್ಯಂತ ವಿಸ್ತರಿಸಲಾಗುತ್ತದೆ.

ಗೂಗಲ್‌ ಈ ಟ್ರಾಫಿಕ್‌ ಸಮಸ್ಯೆ ಪರಿಹರಿಸಲು ದೇಶದ ಮುಖ್ಯ ನಗರಗಳಾದ ಕಲ್ಕತ್ತಾ ಮತ್ತು ಹೈದ್ರಾಬಾದ್‌ ಸ್ಥಳೀಯ ಸಂಚಾರ ಪ್ರಾಧಿಕಾರಗಳೊಡನೆ ಪಾಲುದಾರಿಕೆ ಹಂಚಿಕೊಳ್ಳಲು ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ ಎಂದು ಗೂಗಲ್‌ ಕಂಪನಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಗೂಗಲ್ ಅಧಿಕಾರಿಗಳು ಏನು ಹೇಳಿದ್ರು
“ಸ್ಥಳೀಯ ಸಂಚಾರ ಪ್ರಾಧಿಕಾರಗಳ ಪ್ರಯತ್ನದ ಬೆಂಬಲದೊಂದಿಗೆ ನಾವು ನಮ್ಮ‌ ಗೂಗಲ್‌ ಕಡೆಯಿಂದ ಬೆಂಗಳೂರಿನಲ್ಲಿ ಸುರಕ್ಷಿತ ಚಾಲನೆಗಾಗಿ ಗೂಗಲ್‌ ಮ್ಯಾಪ್‌ ನ ವೇಗವನ್ನು ಹೆಚ್ಚಿಸಲು ಈ ಸಂಚಾರ ಪ್ರಾಧಿಕಾರಗಳಿಗೆ ಸಹಯೋಗ ನೀಡಲಿದ್ದೇವೆ” ಎಂದು ಗೂಗಲ್ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Mysuru Dasara: ಈ ಬಾರಿ ದಸರಾಗೆ ಆನೆಗಳು ಬರಲ್ವಾ? ಮಾವುತರ ನಿರ್ಧಾರವೇನು?

ಜೆನೆಸಿಸ್ ಇಂಟರ್‌ನ್ಯಾಶನಲ್ ಮತ್ತು ಟೆಕ್ ಮಹೀಂದ್ರಾ ಸಹಭಾಗಿತ್ವದಲ್ಲಿ ಭಾರತದಲ್ಲಿ ತನ್ನ ಗಲ್ಲಿ/ಹಾದಿಬೀದಿಗಳ ವೀಕ್ಷಣೆ ಅನುಭವವನ್ನು ಪ್ರಾರಂಭಿಸುವುದಾಗಿ ಗೂಗಲ್ ಘೋಷಿಸಿದೆ. ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ಭಾರತದ 10 ನಗರಗಳಾದ್ಯಂತ 150,000 ಕಿ.ಮೀ ಗಿಂತಲೂ ಹೆಚ್ಚು ವ್ಯಾಪ್ತಿಯ ಸ್ಥಳೀಯ ಪಾಲುದಾರರಿಂದ ಪರವಾನಗಿ ಪಡೆದ ಹೊಸ ಚಿತ್ರಗಳೊಂದಿಗೆ ಗೂಗಲ್‌ ಮ್ಯಾಪ್‌ನಲ್ಲಿ ಈಗಾಗಲೇ ಗಲ್ಲಿ ವೀಕ್ಷಣೆ ಲಭ್ಯವಿದೆ.

50 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವ ಬಯಕೆ
ಗೂಗಲ್‌ 2022 ರ ಅಂತ್ಯದ ವೇಳೆಗೆ ಈ ಯೋಜನೆಯನ್ನು 50 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವ ಬಯಕೆಯನ್ನು ಹೊಂದಿದೆ. ಈ ಭಾರತದ ಹೊಸ ಅನ್ವೇಷಣೆಯು ಪ್ರಪಂಚದಲ್ಲೇ ಮೊದಲ ಬಾರಿಗೆ ಗಲ್ಲಿ ವೀಕ್ಷಣೆಯನ್ನು ಸ್ಥಳೀಯ ಪಾಲುದಾರರಿಂದ ಈ ಯೋಜನೆ ಕೆಲಸ ಕಾರ್ಯಗಳು ಮುಗಿದಿರುವುದು ನಿಜಕ್ಕೂ ಒಂದು ಸಂತಸದ ಸುದ್ದಿ ಎಂದು ಪ್ರಕಟಣೆಯಲ್ಲಿ ಗೂಗಲ್‌ ತಿಳಿಸಿದೆ.

ಗೂಗಲ್‌ ನೊಂದಿಗೆ ಪೈಲಟ್ ಅನ್ನು ಪ್ರಾರಂಭಿಸಿದ ಮೊದಲ ಭಾರತೀಯ ನಗರ
“ಗೂಗಲ್ನೊಂದಿಗೆ ಪೈಲಟ್ ಅನ್ನು ಪ್ರಾರಂಭಿಸಿದ ಮೊದಲ ಭಾರತೀಯ ನಗರ ನಮ್ಮ ಬೆಂಗಳೂರು ಎಂಬುದು ನಿಜಕ್ಕೂ ಹೆಗ್ಗಳಿಕೆಯ ವಿಷಯ ಆಗಿದೆ. ಗೂಗಲ್‌ ಕಂಪನಿಯು ಒದಗಿಸಿದ ಮಾಹಿತಿಯ ಪ್ರಕಾರ, ಗೂಗಲ್‌ನ ಪರಿಷ್ಕೃತ ಯೋಜನೆಯು ಹಗಲು ಹೊತ್ತಿನ ಸಮಯದಲ್ಲಿ ಸರ್ಕಲ್‌ ಅನ್ನು ಹಾದು ಹೋಗುವಾಗ ಪ್ರತಿ ಚಾಲಕನಿಗೆ ಕಾಯುವ ಸಮಯವನ್ನು ಸರಾಸರಿ 20% ರಷ್ಟು ಕಡಿಮೆ ಮಾಡಿದೆ. ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ ಯೋಜನೆ ಎಂದು ಹೇಳಬಹುದು. ನಾವು ಇನ್ನು ಹೆಚ್ಚು ಉತ್ಸುಕರಾಗಿದ್ದೇವೆ. ಏಕೆಂದರೆ ಇದು ರಸ್ತೆಯಲ್ಲಿ ಉಂಟಾಗುವ ರಸ್ತೆ ದಟ್ಟಣೆ, ಇಂಧನ ಬಳಕೆ ಮತ್ತು ಹಸಿರು ಮನೆ ಅನಿಲ ಹೊರಸೂಸುವಿಕೆ ಎಲ್ಲವುಗಳನ್ನು ಕಡಿಮೆ ಮಾಡುವ ವಿಶೇಷ ಯೋಜನೆ ಇದಾಗಿದೆ” ಎಂದು ರವಿಕಾಂತೇಗೌಡ, ಜಂಟಿ ಪೊಲೀಸ್ ಕಮಿಷನರ್ (ಸಂಚಾರ),ಬೆಂಗಳೂರು, ಅವರು ಹೇಳಿದರು.

ಇದನ್ನೂ ಓದಿ:  Belagavi: ಒಂದು ಫೋಟೋ, 19 ಲಕ್ಷ; ಸೋಶಿಯಲ್ ಮೀಡಿಯಾ ಬಳಸೋ ಯುವತಿಯರೇ ಎಚ್ಚರ ಇಂಥಹವರು ಇರ್ತಾರೆ

ಇದಲ್ಲದೆ, “ಗೂಗಲ್‌ ಹೆಚ್ಚುವರಿಯಾಗಿ ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ ಸೇರಿದಂತೆ ಭಾರತದ ಎಂಟು ನಗರಗಳ ಜನರಿಗೆ ಸಹಾಯ ಮಾಡಲು ಸಂಚಾರಿ ಅಧಿಕಾರಿಗಳು ಮತ್ತು ಸಂಗ್ರಾಹಕರೊಂದಿಗೆ ಸಹಭಾಗಿತ್ವವನ್ನು ಹೊಂದಿದೆ, ಅವರಿಗೂ ಕೂಡ ನಮ್ಮ ಗೂಗಲ್‌ ಸಹಾಯ ಮಾಡುತ್ತದೆ. ರಸ್ತೆ ದಟ್ಟಣೆ ಮತ್ತು ರಸ್ತೆಯಲ್ಲಿ ಉಂಟಾಗುವ ಘಟನೆಗಳ ಕುರಿತು ಮಾಹಿತಿಯೊಂದಿಗೆ ರಸ್ತೆ ದಟ್ಟಣೆ ವಲಯಗಳನ್ನು ತಪ್ಪಿಸಬೇಕು ” ಎಂದು ಗೂಗಲ್‌ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ವರದಿಯನ್ನು ತಿಳಿಸಿದೆ.
Published by:Ashwini Prabhu
First published: