ಕೊಪ್ಪಳದಲ್ಲಿ ಮತ್ತೊಬ್ಬ ಟ್ಯಾಲೆಂಟೆಡ್ ಸಿಂಗರ್: ಶಿಕ್ಷಕನ 'ಬರ'ದ ಹಾಡು ಆಗಿದೆ ವೈರಲ್

news18
Updated:August 4, 2018, 7:09 PM IST
ಕೊಪ್ಪಳದಲ್ಲಿ ಮತ್ತೊಬ್ಬ ಟ್ಯಾಲೆಂಟೆಡ್ ಸಿಂಗರ್: ಶಿಕ್ಷಕನ 'ಬರ'ದ ಹಾಡು ಆಗಿದೆ ವೈರಲ್
news18
Updated: August 4, 2018, 7:09 PM IST
- ಬಸವರಾಜ ಕರುಗಲ್, ನ್ಯೂಸ್ 18 ಕನ್ನಡ

ಕೊಪ್ಪಳ ( ಆಗಸ್ಟ್.04) : ರಾಜ್ಯದಲ್ಲಿ ಈ ಬಾರಿ ಹಲವೆಡೆ ಉತ್ತಮ ಮಳೆಯಾಗಿದ್ದರೂ ಈ ಜಿಲ್ಲೆಯ ರೈತರು ಮಾತ್ರ ಅಕ್ಷರಶ ಬರದಿಂದ ನಳಲುತ್ತಿದ್ದಾನೆ. ಅದರ ಜತೆಗೆ ಸರ್ಕಾರ, ಜಿಲ್ಲಾಡಳಿತ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಇದನೆಲ್ಲ ಗಮನಿಸಿದ ಶಿಕ್ಷಕನೋರ್ವ ರೈತರ ಸಂಕಷ್ಟವನ್ನು ಎಳೆ ಎಳೆಯಾಗಿ ಬಿಡಿಸುವ ಹಾಡೊಂದು ಹಾಡುವ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದಾನೆ.

ಈ ಶಿಕ್ಷಕ ಜನಪ್ರಿಯ ಸಿನಿಮಾ ರೈತ ಗೀತೆಗಳಿಗೆ ಮಾಡರ್ನ್ ಟಚ್ ಕೊಟ್ಟು ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾನೆ. ಕೊಪ್ಪಳ ಜಿಲ್ಲೆಯ ಬಹದ್ದೂರ್ ಬಂಡಿ ಕ್ಲಸ್ಟರ್​ನ ಸಿಆರ್​ಪಿ ಹನುಮಂತಪ್ಪ ಕುರಿ ಈ ಕೆಲಸ ಮಾಡುತ್ತಿದ್ದು, ರೈತರ ಅನುಭವಿಸುತ್ತಿರುವ ನರಕಯಾತನೆಯನ್ನ ಎಳೆ ಎಳೆಯಾಗಿ ತನ್ನ ಹಾಡುಗಳ ಮೂಲಕ ಬಿಡಿಸಿಡುತ್ತಿದ್ದಾನೆ. ಹೊಲದಲ್ಲಿ ಸ್ವತಃ ತಾನೇ ಕುಳಿತು ರೈತರು ಸಂಕಷ್ಟ ಅನುಭವಿಸುತ್ತಿರುವ‌ ರೈತ ಗೀತೆಗಳನ್ಮು ಹಾಡುತ್ತಿದ್ದಾನೆ. ಈ ಹಾಡುಗಳು ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ಪುಲ್ ವೈರಲ್ ಆಗಿದ್ದು ಸಕತ್ ಸೌಂಡ್ ಮಾಡುತ್ತಿವೆ.

ಈ ಹಿಂದೆ ಈ ಶಿಕ್ಷಕರು ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ನಾನಾ ಗೀತೆಗಳನ್ನು ರಚಿಸಿ ಮಕ್ಕಳನ್ನು ಕರೆತರುವ ಕೆಲಸ ಮಾಡುತ್ತಿದ್ದರು. ಈಗ ರೈತ ಗೀತೆಗಳನ್ನು ಹಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿರುವುದು ಉತ್ತಮ ಸಂಗತಿಯಾಗಿದೆ. ಇನ್ನೂ ಇದೇ ಜಿಲ್ಲೆಯವರಾದ ಗಂಗಮ್ಮ ಸಹ ಸಾಮಾಜಿಕ ಜಾಲತಾಣದಲ್ಲಿ ಹಾಡಿ ಸಕತ್ ವೈರಲ್ ಆಗಿದ್ದರು. ನಮ್ಮ ನ್ಯೂಸ್ 18 ಕನ್ನಡ ಫೆಸ್ಬುಕ್ ಪೇಜ್​ ನಲ್ಲಿ 3 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಕಳೆದೆರೆಡು ತಿಂಗಳಿಂದ ಮಳೆ ಬಾರದ ಹಿನ್ನೆಲೆ, ಬೆಳೆ ನಾಶ ಕಂಡು ರೈತರು ಕಣ್ಣಿರು ಇಡುತ್ತಿದ್ದಾರೆ. ರೈತರಿಗೆ ಪರಿಹಾರ ನೀಡುವಂತೆ ಗೀತೆಯ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತಿರುವ ಶಿಕ್ಷಕನ ಕಾರ್ಯ ಮೆಚ್ಚಲೇಬೇಕು.


 
Loading...

 

 

 
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...