ಬೆಂಗಳೂರು: ನೀವು ಎಸ್ಎಸ್ಎಲ್‌ಸಿ ಸ್ಟೂಡೆಂಟಾ (SSLC Students) ? ಅಥವಾ ನಿಮ್ಮ ಮನೆಯಲ್ಲಿ 10ನೇ ತರಗತಿ (10th Class) ಮುಗಿಸಿದ ವಿದ್ಯಾರ್ಥಿಗಳಿದ್ದಾರಾ? ನೀವು ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ (Marks) ಪಡೆದು ಪಾಸಾಗಿದ್ದೀರಾ? ಹಾಗಿದ್ರೆ ನಿಮಗೆ ಇಲ್ಲಿದೆ ನೋಡಿ ಒಂದು ಗುಡ್ ನ್ಯೂಸ್ (Good News). ಅದೇನಪ್ಪಾ ಅಂದ್ರೆ 2021-22ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಒಂದು ಬಿಗ್ ಆಫರ್ (Big Offer) ಕೊಡ್ತಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು 25 ಸಾವಿರ ರೂಪಾಯಿ ಪ್ರೋತ್ಸಾಹ ಧನದ ರೂಪದಲ್ಲಿ ಕ್ಯಾಶ್ ಪ್ರೈಸ್ (Cash Prize) ಕೊಡುತ್ತಿದೆ. ಹಾಗಿದ್ರೆ ಇದನ್ನು ಪಡೆಯೋದಕ್ಕೆ ಏನು ಮಾಡಬೇಕು? ಯಾವೆಲ್ಲಾ ಅರ್ಹತೆಗಳು ಇರಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…
ಬಿಬಿಎಂಪಿಯಿಂದ ವಿದ್ಯಾರ್ಥಿಗಳಿಗೆ 25,000 ರೂಪಾಯಿ ಬಹುಮಾನ
ಬಿಬಿಎಂಪಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಗುಡ್ ನ್ಯೂಸ್ ಒಂದನ್ನ ನೀಡಿದೆ. ಬಿಬಿಎಂಪಿ ಪ್ರೌಢಶಾಲೆಗಳ ಶಾಲೆಯಲ್ಲಿ ಓದಿ, ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ಪ್ರೋತ್ಸಾಹಧನ ನೀಡಿ ಗೌರವಿಸಲು ತೀರ್ಮಾನಿಸಿದೆ. ಇದು ಬಿಬಿಎಂಪಿ ವ್ಯಾಪ್ತಿಯ 144 ವಿದ್ಯಾರ್ಥಿಗಳಿಗೆ ಸಿಗಲಿದೆ.
144 ವಿದ್ಯಾರ್ಥಿಗಳಿಗೆ 25 ಸಾವಿರ ಪ್ರೋತ್ಸಾಹ ಧನ
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 33 ಪ್ರೌಢಶಾಲೆಗಳಿವೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 1,991 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 1,419 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡ. 71 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 1,991 ವಿದ್ಯಾರ್ಥಿಗಳ ಪೈಕಿ ಉತ್ತೀರ್ಣರಾಗಿರುವ 472 ವಿದ್ಯಾರ್ಥಿಗಳಲ್ಲಿ 41 ಹಾಗೂ 951 ವಿದ್ಯಾರ್ಥಿನಿಯರಲ್ಲಿ 103 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಬಿಬಿಎಂಪಿ ವಿದ್ಯಾ ಇಲಾಖೆಯಡಿ ತಲಾ 25 ಸಾವಿರ ಪ್ರೋತ್ಸಾಹಧನ ನೀಡಿ ಗೌರವಿಸಲು ತೀರ್ಮಾನಿಸಿದೆ.
ಇದನ್ನೂ ಓದಿ: 2nd PUC ಫಲಿತಾಂಶಕ್ಕೆ ಮುಹೂರ್ತ ಫಿಕ್ಸ್! ಶಿಕ್ಷಣ ಸಚಿವ ನಾಗೇಶ್ ಕೊಟ್ರು ಮಾಹಿತಿ
ಮೇ 27ರಿಂದ ಜೂನ್ 4ರವರೆಗೆ ಪೂರಕ ಪರೀಕ್ಷೆ
ಎಸ್ಎಸ್ಎಲ್‌ಸಿಯಲ್ಲಿ ಈ ವರ್ಷ ಶೇ 85.63ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ 8.53 ಲಕ್ಷ ವಿದ್ಯಾರ್ಥಿಗಳ ಪೈಕಿ 7.38 ಲಕ್ಷ ವಿದ್ಯಾರ್ಥಿಗಳು (Student) ಪಾಸಾಗಿದ್ದಾರೆ. ಈ ಪೈಕಿ 145 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕಗಳನ್ನು (Out Off Marks) ಪಡೆದಿದ್ದಾರೆ. ಫೇಲ್ ಆದ ವಿದ್ಯಾರ್ಥಿಗಳಿಗೆ ಮೇ 27ರಿಂದ ಜೂನ್ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ.
ಜೂನ್ 3ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ
ವಿದ್ಯಾರ್ಥಿಗಳ ಬದುಕಿನಲ್ಲಿ ಮತ್ತೊಂದು ಮಹತ್ವದ ಘಟ್ಟವಾದ ದ್ವಿತೀಯ ಪಿಯುಸಿ (2nd PUC) ಪರೀಕ್ಷಾ ಫಲಿತಾಂಶ ಪ್ರಕಟಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಕುರಿತಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (Minister BC Nagesh) ಮಾಹಿತಿ ನೀಡಿದ್ದಾರೆ. ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ನಿನ್ನೆ ಹತ್ತನೇ ತರಗತಿ ಫಲಿತಾಂಶ ಪ್ರಕಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ: Supplementary Exam: ಫೇಲ್ ಆಗಿದ್ದಕ್ಕೆ ಭಯ ಬೇಡ, ನಿಮಗಿದೆ ಇನ್ನೊಂದು ಚಾನ್ಸ್; ಮೇ 27ರಿಂದ SSLC ಪೂರಕ ಪರೀಕ್ಷೆ
ಇದೇ 24ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಲಿದ್ದು, ಜೂನ್ 16ರೊಳಗೆ ಮೌಲ್ಯಮಾಪನ ಮುಗಿಯಲಿದೆ. ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದರು. ಮೌಲ್ಯಮಾಪಕರ ಸಂಭಾವನೆ ಹೆಚ್ಚಿಸುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ