News18 India World Cup 2019

ಎಸ್ ಬಿ ಐ ನಿಂದ ರೈತರಿಗೆ ಭರ್ಜರಿ ಅವಕಾಶ; ಒಂದೇ ಕಂತಿನಲ್ಲಿ ಸಾಲ ಕಟ್ಟಿದರೆ ಬಂಪರ್ ಆಫರ್!

G Hareeshkumar | news18
Updated:October 11, 2018, 6:03 PM IST
ಎಸ್ ಬಿ ಐ ನಿಂದ ರೈತರಿಗೆ ಭರ್ಜರಿ ಅವಕಾಶ; ಒಂದೇ ಕಂತಿನಲ್ಲಿ ಸಾಲ ಕಟ್ಟಿದರೆ ಬಂಪರ್ ಆಫರ್!
G Hareeshkumar | news18
Updated: October 11, 2018, 6:03 PM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಆ.11) :  ಸಿಎಂ ಹೆಚ್ ಡಿ ಕುಮಾರಸ್ವಾಮಿ ರೈತರ ಸಾಲಮನ್ನಾ ಘೋಷಣೆ ಮಾಡಿ ಹಲವು ತಿಂಗಳುಗಳೇ ಕಳೆದಿವೆ. ಅದರೆ ರೈತರಿಗೆ ಸಾಲಮನ್ನಾ ಭಾಗ್ಯ ದೊರೆತಿಲ್ಲ. ಗಣಿನಾಡು ಬಳ್ಳಾರಿಯಲ್ಲಿ ಸರ್ಕಾರ ಸಾಲಮನ್ನಾ ಘೋಷಣೆಗಿಂತ ರಾಷ್ಟ್ರೀಕೃತ ಬ್ಯಾಂಕ್ ವೊಂದು ರೈತರಿಗೆ ಭರ್ಜರಿ ಆಫರ್ ನೀಡಿದೆ. ಇದರ ಪ್ರಕಾರ ರೈತ ಸಾಲಮನ್ನಾ ಋಣಮುಕ್ತರಾಗಲು ಸುರ್ವಣಾವಕಾಶ ನೀಡಿದೆ. ಆದರೆ ಒಂದೇ ಕಂತಿನಲ್ಲಿ ಸಾಲ ಕಟ್ಟುವುದು ಅನ್ನದಾತನಿಗೆ ತುಸು ಸಂಕಷ್ಟ ತಂದಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಒಂದು ಲಕ್ಷದವರೆಗೆ ರೈತರಿಗೆ ಸಾಲಮನ್ನಾಕ್ಕೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಣೆಯೇನೋ ಮಾಡಿದ್ದಾರೆ. ಆದರೆ ಅದು ಬ್ಯಾಂಕ್, ಸಹಕಾರಿ ಸಂಸ್ಥೆಗಳಿಗೆ ಇದುವರೆಗೆ ಯಾವುದೇ ಅಧಿಕೃತ ಪತ್ರ ಬಾರದೆ ರಾಜ್ಯದ ರೈತರಿಗೆ ಸಾಲಮನ್ನಾ ಭಾಗ್ಯ ದೊರೆತಿಲ್ಲ. ಸರ್ಕಾರದ ಆದೇಶ ಈಗ ಬರುತ್ತೆ, ನಾಳೆ ಬರುತ್ತೆ ಎಂದು ಕಾದು ಕಾದು ರೈತರು ಸುಸ್ತಾಗಿದ್ದಾರೆ ಹೊರತು ರೈತರ ಸಾಲಮನ್ನಾ ಆಗಿಲ್ಲ. ಇಂಥ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ವೊಂದು ರೈತರಿಗೆ ಭರ್ಜರಿ ಆಫರ್ ನೀಡಿದೆ.

ಎಸ್ ಬಿ ಐ ಬ್ಯಾಂಕ್ ನಿಂದ ರೈತರಿಗೆ ಭರ್ಜರಿ ಅವಕಾಶ;

ಗಣಿನಾಡು ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಶಾಖೆಯ ಎಸ್ ಬಿ ಐ ಬ್ಯಾಂಕ್ ರೈತರಿಗೆ ಸುವರ್ಣಾವಕಾಶ ನೀಡಿದ್ದೇವೆ ಎಂದು ರೈತರಿಗೆ ತಿಳಿಸಿದೆ. 2018-19ರ ಋಣ ಇತ್ಯರ್ಥ ಯೋಜನೆಯಡಿ ಅನುತ್ಪಾದಕ ಆಸ್ತಿ ಹಾಗೂ ಕಟುಬಾಕಿ ಸಾಲದ ಕಂತನ್ನು ಏಕ ಕಂತಿನಲ್ಲಿ ಇಲ್ಲವೇ ಒಂದೇ ಬಾರಿಗೆ ಇತ್ಯರ್ಥಗೊಳಿಸಿದರೆ ಈ ಯೋಜನೆ ಅನ್ವಯವಾಗುತ್ತದೆ. ಈ ಯೋಜನೆಯ ಪ್ರಕಾರ ಒಂದೇ ಕಂತಿನಲ್ಲಿ ಬಾಕಿ ಇತ್ಯರ್ಥ ಮಾಡುವ ಗ್ರಾಹಕರಿಗೆ ಋಣ ಸಮಾಧಾನ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯ ಅನ್ವಯ ಭರಿಸಬೇಕಾದ ಬಡ್ಡಿಯ ಮನ್ನಾ ಹಾಗೂ 2018 ಮಾರ್ಚ್​ 31 ರಂದು ಬಾಕಿಯಿರುವ ಸಾಲದ ಮೊತ್ತದಲ್ಲಿ ಶೇ.30 ರಿಂದ ಶೇ.50ರಷ್ಟು ಬಾಕಿ ಪರಿಹಾರ ನೀಡುವ ಅವಕಾಶವಿದೆ ಎಂದು ಹಗರಿಬೊಮ್ಮನಹಳ್ಳಿ ತಾಲೂಕು ತಂಬ್ರಳ್ಳಿ ಎಸ್ ಬಿ ಐ ಬ್ಯಾಂಕ್ ರೈತರಿಗೆ ಸೂಚಿಸಿದೆ.


Loading...

ಋಣಭಾರ ಇತ್ಯರ್ಥ ಯೋಜನೆ ಮೂಲಕ ರೈತರಿಗೆ

ಋಣಭಾರ ಇತ್ಯರ್ಥ ಯೋಜನೆ ಮೂಲಕ ಎಸ್ ಬಿ ಐ ಬ್ಯಾಂಕ್ ಮೂಲಕ ರೈತರಿಗೆ ಹಲವು ವಿಶೇಷತೆಗಳನ್ನು ನೀಡಿದೆ. ಅರ್ಜಿಯೊಂದಿಗೆ ಶೇ.10ರಷ್ಟು ಮೊತ್ತವನ್ನು ಪಾವತಿಸಬೇಕು. 30 ದಿನಗೊಳಗಾಗಿ ಶೇ.20ರಷ್ಟು ಮೊತ್ತವನ್ನು ಪಾವತಿಸಬೇಕು. 90 ದಿನಗಳೊಳಗಾಗಿ ಉಳಿದ ಶೇ.70ರಷ್ಟು ಮೊತ್ತವನ್ನು ಪಾವತಿಸಬೇಕು. 30 ದಿನಗಳೊಳಗಾಗಿ ಇತ್ಯರ್ಥಪಡಿಸಿದ ಪೂರ್ತಿ ಮೊತ್ತವನ್ನು ಏಕ ಕಂತಿನಲ್ಲಿ ಪಾವಿತಿಸಿದಲ್ಲಿ ಮೊತ್ತದ ಶೇ.5ರಷ್ಟು ಹೆಚ್ಚುವರಿಯಾಗಿ ರಿಯಾಯತಿ ನೀಡಲಾಗುವುದು. ಸಾಲಗಾರರು ಮೃತಪಟ್ಟಿದ್ದಲ್ಲಿ ಅಥವಾ ಮಹಿಳಾ ಸಾಲಗಾರರಾಗಿದ್ದಲ್ಲಿ ಹೆಚ್ಚುವರಿ ಶೇ.5ರಷ್ಟು ರಿಯಾಯಿತಿಯನ್ನು ಕೊಡಲಾಗಿದೆ. ರೈತರ ಸಾಲದ ಅರ್ಧದಷ್ಟು ಮೊತ್ತವನ್ನು ಒಂದೇ ಕಂತಿನಲ್ಲಿ ತೀರಿಸಬೇಕು. ಬಡ್ಡಿಯನ್ನು ಕಟ್ಟುವ ಅವಶ್ಯಕತೆಯಿಲ್ಲ. ರೈತರು ಪೂರ್ತಿ ಬಾಕಿ ಸಂದಾಯ ಮಾಡಿದ ಮೇಲೆ ಋಣಭಾರ ರಹಿತ ಪತ್ರ/ಸಾಲ ತೀರುವಳಿ ಪತ್ರ ಯೋಜಯಡಿ ದೊರೆಯಲಿದೆ ಎಂದು ರೈತರಿಗೆ ಬ್ಯಾಂಕ್ ಮಾಹಿತಿ ನೀಡಿದೆ

ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಗದೆ ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ರೈತರಿಗೆ ನೀಡಿದ ಆಫರ್ ಚೆನ್ನಾಗಿಯೇ ಇದೆ. ಆದರೆ ಒಂದೇ ಕಂತಿನಲ್ಲಿ ಸಾಲ ಕಟ್ಟುವುದು ಕಷ್ಟ. ಮೇಲಾಗಿ ಸಮ್ಮಿಶ್ರ ಸರ್ಕಾರ ಘೋಷಿಸಿದ ಒಂದು ಲಕ್ಷ ಸಾಲಮನ್ನಾ ವ್ಯಾಪ್ತಿಗೆ ಒಳಪಡುತ್ತದೆಯೇ? ರೈತನ ಒಂದು ಲಕ್ಷ ಸಾಲ ಹೊರತುಪಡಿಸಿ ಉಳಿದ ಹಣದಲ್ಲಿ ಋಣಭಾರ ಪತ್ರ ನೀಡಲು ಸಾಧ್ಯವೇ ಎಂಬ ರೈತರ ಪ್ರಶ್ನೆಗೆ ಬ್ಯಾಂಕ್ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ. 
First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...