BMRCL: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಸೈಕಲ್​ ಕೊಂಡೊಯ್ಯಲು ಸಿಕ್ಕಿದೆ ಪರ್ಮಿಷನ್​

ಬಿಎಂಆರ್​ಸಿಎಲ್​ ಮೆಟ್ರೋ ಪ್ರಯಾಣಿಕರು ತಮ್ಮ ಪ್ರಯಾಣದ ಜೊತೆಗೆ ಮೆಟ್ರೋ ರೈಲಿನ ಕೊನೆಯ ಬೋಗಿಯಲ್ಲಿ ಮಡಚಬಹುದಾದ ಬೈಸಿಕಲ್​ ಅನ್ನು ಕೊಂಡೊಯ್ಯಬೇಕು. ಮಡಚಬಹುದಾದ ಬೈಸಿಕಲ್​ ಅನ್ನು ಕೊಂಡೊಯ್ಯಲು ಲಗೇಜ್​ ಶುಲ್ಕ ವಿನಾಯಿತಿ ನೀಡಿದೆ.

ನಮ್ಮ ಮೆಟ್ರೋ

ನಮ್ಮ ಮೆಟ್ರೋ

  • Share this:
ಬೆಂಗಳೂರು (ಜೂ 6): ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಮೆಟ್ರೋದಲ್ಲಿ ಇನ್ಮುಂದೆ ಸೈಕಲ್ ಕೊಂಡೊಯ್ಯಲು BMRCL ನಿಂದ ಅನುಮತಿ ದೊರೆತಿದೆ. ಮಡಚಬಹುದಾದ ಸೈಕಲ್ ಅನ್ನು (Folding Bicycle) ಮೆಟ್ರೋದ ಕೊನೆಯ ಭೋಗಿಯಲ್ಲಿ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. 60 mm × 45 mm × 25 mm ನ 15 kg ತೂಕದವರೆಗಿನ ಸೈಕಲ್ ಕೊಂಡೊಯ್ಯಬಹುದಾಗಿದೆ. ಸೈಕಲ್​ಗೆ (Bicycle) ಯಾವುದೇ ಲಗೇಜ್ ಚಾರ್ಜ್ ಇರೋದಿಲ್ಲ, ಇದು ಸಂಪೂರ್ಣ ಉಚಿತವಾಗಿದೆ. ಹಲವು ಸಂಘ ಸಂಸ್ಥೆಗಳಿಂದ (Association Organization) ಸೈಕಲ್ ರವಾನಿಸಲು ಅವಕಾಶ ಕೊಡುವಂತೆ ಹಲವು ಭಾರೀ ಮನವಿ ಮಾಡಿದ್ರು. ವಾಯುಮಾಲಿನ್ಯ ಹಾಗೂ ಟ್ರಾಫಿಕ್ ಸಮಸ್ಯೆಗೆ (Traffic Problem) ಮೂಲಕ ಪರಿಹಾರ ಸಿಗಲಿದೆ.

ಮೆಟ್ರೋದಲ್ಲಿ ಸೈಕಲ್​ ರವಾನೆಗೆ ಅವಕಾಶ

ಕಚೇರಿಗಳು ಸ್ವಲ್ಪ ದೂರವಿದ್ದಾಗ ಪ್ರಯಾಣಿಕರು ಬಸ್​, ಆಟೋ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಮನೆಗಳಲ್ಲಿ ಸೈಕಲ್​ ಇದ್ರೆ ಜೊತೆಯಲ್ಲೇ ಕೊಂಡೊಯ್ಯದು ನಿಮ್ಮ ನಿಮ್ಮ ಕಚೇರಿಗಳನ್ನು ಸೇರಬಹುದು, ಮಕ್ಕಳನ್ನು ಪಾರ್ಕ್​ಗಳಿಗೆ ಕರೆದೊಯ್ದ ವೇಳೆ ಮಕ್ಕಳು ಸೈಕಲ್​ ತೆಗೆದುಕೊಂಡು ಹೋಗಲು ಪಟ್ಟು ಹಿಡಿಯುತ್ತಾರೆ. ಇದೀಗ ಮಕ್ಕಳಿಗಾಗಿ ಅವರನ್ನು ಆಟವಾಡಿಸಲು ಸೈಕಲ್​ಗಳನ್ನು ಕೊಂಡೊಯ್ಯಬಹುದಾಗಿದೆ.

ಲಗೇಜ್​ ಶುಲ್ಕ ವಿನಾಯಿತಿ

ಹಸಿರು ಉಪಕ್ರಮವನ್ನು ಉತ್ತೇಜಿಸಲು ಬಿಎಂಆರ್​ಸಿಎಲ್​ ಮೆಟ್ರೋ ಪ್ರಯಾಣಿಕರು ತಮ್ಮ ಪ್ರಯಾಣದ ಜೊತೆಗೆ ಮೆಟ್ರೋ ರೈಲಿನ ಕೊನೆಯ ಬೋಗಿಯಲ್ಲಿ ಮಡಚಬಹುದಾದ ಬೈಸಿಕಲ್​ ಅನ್ನು ಕೊಂಡೊಯ್ಯಬೇಕು. ಮಡಚಬಹುದಾದ ಬೈಸಿಕಲ್​ ಅನ್ನು ಕೊಂಡೊಯ್ಯಲು ಲಗೇಜ್​ ಶುಲ್ಕ ವಿನಾಯಿತಿ ನೀಡಿದೆ. ಮೆಟ್ರೋ ಪ್ರಯಾಣಿಕರು ಮತ್ತು ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಮೇಲಿನ ಮಾಹಿತಿಯನ್ನು ತಮ್ಮ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ವ್ಯಾಪಕ ಪ್ರಚಾರವನ್ನು ನೀಡುವಂತೆ ಕೋರಿದೆ.

ಇದನ್ನೂ ಓದಿ: Namma Metro: ಮೊದಲ ಬಾರಿಗೆ ಇನ್ಫೋಸಿಸ್ ಮೆಟ್ರೋ ನಿಲ್ದಾಣಕ್ಕೆ ಸಿಗಲಿದೆ ಗ್ರೀನ್ ಟ್ಯಾಗ್

5 ದಿನದ ಮೆಟ್ರೋ ಪಾಸ್​ ಲಭ್ಯ 

ಟ್ರಾಫಿಕ್ (Traffic)​ ಕಿರಿಕಿರಿಯಿಂದ ತಪ್ಪಿಸಿ ಸುಖಕರ ಪ್ರಯಾಣದಿಂದ  ಜನರ ಮನಗೆದ್ದಿರೋ ನಮ್ಮ ಮೆಟ್ರೋ (Namma Metro), ಇದೀಗ ಪ್ರಯಾಣಿಕರಿಗಾಗಿ ಮತ್ತೊಂದು ಸಿಹಿಸುದ್ದಿ ನೀಡಿದೆ. ಇತ್ತೀಚೆಗಷ್ಟೆ 1 ಹಾಗೂ 3 ದಿನಗಳ ಪಾಸ್​ ಜಾರಿಗೆ ತಂದಿದ್ದ BMRCL, ಇದೀಗ 5 ದಿನಗಳ ಪಾಸ್​ನನ್ನು ಜಾರಿಗೆ ತಂದಿದೆ. ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲೆಂದು ಈ ಪಾಸ್ (Pass)​ ಬಿಡುಗಡೆ ಮಾಡಿರೋದಾಗಿ BMRCL ತಿಳಿಸಿದೆ.

5 ದಿನದ ಮೆಟ್ರೋ ಪಾಸ್​
 1 ದಿನ ಹಾಗೂ 3 ದಿನದ ಮೆಟ್ರೋ ಪಾಸ್​ಗಳನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಇದರ ಜೊತೆ ನಿಗಮವು ದಿನಾಂಕ 23-05-2022 ರಿಂದ ಜಾರಿಗೆ ಬರುವಂತೆ ಮತ್ತೊಂದು ರೀತಿಯ ಪಾಸ್​ ಎಂದರೆ 5 ದಿನದ ಪಾಸ್​ ಅನ್ನು ಪರಿಚಯಿಸುತ್ತಿದೆ. 5 ದಿನದ ಪಾಸ್ ಬೆಲೆ 550 ರೂ ಇರಲಿದೆ. ಮರುಪಾವತಿಸಬಹುದಾದ ಸ್ಮಾರ್ಟ್​ ಕಾರ್ಡ್​ ಭದ್ರತಾ ಠೇವಣಿ ರೂ 50 ರೂ ಇರಲಿದೆ.

ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯ

ಈ ಸ್ಮಾರ್ಟ್​ ಕಾರ್ಡ್​ನನ್ನು ಯಾವುದೇ ಮೆಟ್ರೋ ನಿಲ್ದಾಣಗಳಲ್ಲಿ ಖರೀದಿಸಬಹುದಾಗಿದೆ. ಪ್ರಯಾಣಿಕರು ಖರೀದಿಸಿದ ದಿನಾಂಕದಿಂದ 5 ದಿನಗಳವರೆಗೆ ಯಾವುದೇ  ಮೆಟ್ರೋ  ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ಅನಿಯಮಿತವಾಗಿ ಪ್ರಯಾಣಿಸಬಹುದಾಗಿದೆ.

ಮತ್ತಷ್ಟು ಹೈಟೆಕ್​ ಆಗಲಿದೆ ನಮ್ಮ ಮೆಟ್ರೋ

ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಸಿಲಿಕಾನ್​ ಮಂದಿಗೆ ವರದಾನವಾಗಿದೆ. ನಿತ್ಯ ಟ್ರಾಫಿಕ್ (Traffic)​ ಜರ್ನಿ ಸಾಕಾಗಿದ್ದ ಜನರಿಗೆ ನಮ್ಮ ಮೆಟ್ರೋ ಸುಖಕರ ಪ್ರಯಾಣ ಅಚ್ಚುಮೆಚ್ಚಾಗಿದೆ. ಇದೀಗ ಮೆಟ್ರೋ ಸ್ಟೇಷನ್​ಗಳಿಗೆ ಹೊಸ ರೂಪ ಕೊಡಲು ಮುಂದಾಗಿದ್ದಾರೆ. ವಿದೇಶದಲ್ಲಿರುವಂತೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲೂ ಕೂಡ ಮಿನಿ ಶಾಪಿಂಗ್ (Mini shopping) ವ್ಯವಸ್ಥೆಗೆ ಚಿಂತನೆ ಮಾಡಲಾಗಿದೆ. ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲೆಂದೇ ಈ ಯೋಜನೆ ರೂಪಸಿಲಾಗ್ತಿದೆ. ಈಗಾಗಲೇ ಈ ಮಿನಿ ಶಾಪಿಂಗ್ ಅಂಗಡಿಗಳನ್ನು ಸ್ಥಾಪಿಸಲು BMRCL ನಿಂದ ಟೆಂಡರ್ ಗೂ ಆಹ್ವಾನ ನೀಡಿದೆ.

ಇದನ್ನೂ ಓದಿ: Namma Metro: ಮೊದಲ ಬಾರಿಗೆ ಇನ್ಫೋಸಿಸ್ ಮೆಟ್ರೋ ನಿಲ್ದಾಣಕ್ಕೆ ಸಿಗಲಿದೆ ಗ್ರೀನ್ ಟ್ಯಾಗ್

ನಮ್ಮ ಮೆಟ್ರೋ ಮತ್ತಷ್ಟು ಹೈಟೆಕ್
 ನಮ್ಮ ಮೆಟ್ರೋ ಬೆಂಗಳೂರಿನ ಅಭಿವೃದ್ಧಿಗೆ ಇಟ್ಟಿರುವ ಹೊಸ ಮೈಲುಗಲ್ಲುಆಗಿದೆ. ಒಂದು ಮೆಟ್ರೋ ಬೆಂಗಳೂರಿನ ಬಹುದೊಡ್ಡ ಟ್ರಾಫಿಕ್ ಕಿರಿಕಿರಿ ಅಲ್ಪ ಮಟ್ಟಿನ ಪರಿಹಾರವಂತು ತಂದುಕೊಟ್ಟಿದೆ. ಇದೀಗ ಹೊಸದಾಗಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ನಲ್ಲಿ ಫೇಸ್ 3ಕ್ಕೆ ಅನುಮತಿ ಕೊಟ್ಟಿದ್ದು, ಬರೋಬ್ಬರಿ 11 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿ ಅನುದಾನಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ನಡುವೆ BMRCL ಅದಾಯ ತಂದುಕೊಳ್ಳಲು ನೂತನ ದಾರಿ ಕಂಡುಕೊಂಡಿದೆ.

Published by:Pavana HS
First published: