Metro Pass: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; BMRCLನಿಂದ 5 ದಿನಗಳ ಪಾಸ್ ಬಿಡುಗಡೆ

1 ದಿನ ಹಾಗೂ 3 ದಿನದ ಮೆಟ್ರೋ ಪಾಸ್​ಗಳನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಇದರ ಜೊತೆ ನಿಗಮವು ದಿನಾಂಕ 23-05-2022 ರಿಂದ ಜಾರಿಗೆ ಬರುವಂತೆ ಮತ್ತೊಂದು ರೀತಿಯ ಪಾಸ್​ ಎಂದರೆ 5 ದಿನದ ಪಾಸ್​ ಅನ್ನು ಪರಿಚಯಿಸುತ್ತಿದೆ.

5 ದಿನದ ಮೆಟ್ರೋ ಪಾಸ್​ ರಿಲೀಸ್​

5 ದಿನದ ಮೆಟ್ರೋ ಪಾಸ್​ ರಿಲೀಸ್​

  • Share this:
ಬೆಂಗಳೂರು (ಮೇ 20): ಟ್ರಾಫಿಕ್ (Traffic)​ ಕಿರಿಕಿರಿಯಿಂದ ತಪ್ಪಿಸಿ ಸುಖಕರ ಪ್ರಯಾಣದಿಂದ  ಜನರ ಮನಗೆದ್ದಿರೋ ನಮ್ಮ ಮೆಟ್ರೋ (Namma Metro), ಇದೀಗ ಪ್ರಯಾಣಿಕರಿಗಾಗಿ ಮತ್ತೊಂದು ಸಿಹಿಸುದ್ದಿ ನೀಡಿದೆ. ಇತ್ತೀಚೆಗಷ್ಟೆ 1 ಹಾಗೂ 3 ದಿನಗಳ ಪಾಸ್​ ಜಾರಿಗೆ ತಂದಿದ್ದ BMRCL, ಇದೀಗ 5 ದಿನಗಳ ಪಾಸ್​ನನ್ನು ಜಾರಿಗೆ ತಂದಿದೆ. ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲೆಂದು ಈ ಪಾಸ್ (Pass)​ ಬಿಡುಗಡೆ ಮಾಡಿರೋದಾಗಿ BMRCL ತಿಳಿಸಿದೆ.  

5 ದಿನದ ಮೆಟ್ರೋ ಪಾಸ್​

1 ದಿನ ಹಾಗೂ 3 ದಿನದ ಮೆಟ್ರೋ ಪಾಸ್​ಗಳನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಇದರ ಜೊತೆ ನಿಗಮವು ದಿನಾಂಕ 23-05-2022 ರಿಂದ ಜಾರಿಗೆ ಬರುವಂತೆ ಮತ್ತೊಂದು ರೀತಿಯ ಪಾಸ್​ ಎಂದರೆ 5 ದಿನದ ಪಾಸ್​ ಅನ್ನು ಪರಿಚಯಿಸುತ್ತಿದೆ. 5 ದಿನದ ಪಾಸ್ ಬೆಲೆ 550 ರೂ ಇರಲಿದೆ. ಮರುಪಾವತಿಸಬಹುದಾದ ಸ್ಮಾರ್ಟ್​ ಕಾರ್ಡ್​ ಭದ್ರತಾ ಠೇವಣಿ ರೂ 50 ರೂ ಇರಲಿದೆ.

ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯ

ಈ ಸ್ಮಾರ್ಟ್​ ಕಾರ್ಡ್​ನನ್ನು ಯಾವುದೇ ಮೆಟ್ರೋ ನಿಲ್ದಾಣಗಳಲ್ಲಿ ಖರೀದಿಸಬಹುದಾಗಿದೆ. ಪ್ರಯಾಣಿಕರು ಖರೀದಿಸಿದ ದಿನಾಂಕದಿಂದ 5 ದಿನಗಳವರೆಗೆ ಯಾವುದೇ  ಮೆಟ್ರೋ  ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ಅನಿಯಮಿತವಾಗಿ ಪ್ರಯಾಣಿಸಬಹುದಾಗಿದೆ.

ಇದನ್ನೂ ಓದಿ: Supreme Court: ಕರ್ನಾಟಕದ 3 ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ರಪ್ತಿಗೆ ಸುಪ್ರೀಂ ಕೋರ್ಟ್​ನಿಂದ ಗ್ರೀನ್ ಸಿಗ್ನಲ್

50 ರೂ ಭದ್ರತಾ ಠೇವಣಿ

ಪಾಸ್​ ಮಾನ್ಯತೆಯ ಅವಧಿಯೊಳಗೆ ಸ್ಮಾರ್ಟ್​ ಕಾರ್ಡ್ ಅನ್ನು ಉತ್ತಮ ಸ್ಥಿತಿಯಲ್ಲಿ ಯಾವುದೇ ಮೆಟ್ರೋ ನಿಲ್ದಾಣದ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಸಲ್ಲಿಸುವ ಮೂಲಕ ರೂ 50 ರೂಪಾಯಿ ಭದ್ರತಾ ಠೇವಣಿಯನ್ನು ಹಿಂಪಡೆಯಬಹುದು.

ಬೈಯಪ್ಪನ ಹಳ್ಳಿಯಿಂದ ವೈಟ್​ಫೀಲ್ಡ್​ಗೆ ಶೀಘ್ರವೇ ಮೆಟ್ರೋ ಸಂಚಾರ

ಬೆಂಗಳೂರಿನಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರಿಗೆ ಟ್ರಾಫಿಕ್‌  ಕಿರಿಕಿರಿಯಿಂದ ಮುಕ್ತಿ ನೀಡಿರುವ ನಮ್ಮ ಮೆಟ್ರೋ  ವಿಸ್ತರಣೆ   ಕಾರ್ಯ ಮತ್ತಷ್ಟು ಚುರುಕುಗೊಂಡಿದೆ.  ಹಲವು ಐಟಿ-ಬಿಟಿ ಕಂಪನಿಗಳನ್ನು ಹೊಂದಿರುವ ವೈಟ್​ಫೀಲ್ಡ್​​ ಗೂ ಶೀಘ್ರವೇ ಮೆಟ್ರೋ ವಿಸ್ತರಣೆ ಆಗಲಿದೆ. ಮೆಟ್ರೋ ಪ್ರಯಾಣಿಕರಿಗೆ ಸಂಚಾರ ಮತ್ತಷ್ಟು ಸರಳವಾಗಲಿದೆ.  2  ವರ್ಷಗಳಿಂದ ವಿಳಂಬಗೊಂಡಿದ್ದ ಮೆಟ್ರೋ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಹಾಗೂ ವೈಟ್‌ಫೀಲ್ಡ್  ನಡುವಿನ ಕಾಮಗಾರಿಯನ್ನು BMRCL ಇದೀಗ ಚುರುಕುಗೊಳಿಸಿದೆ. ಮುಂದಿನ ವರ್ಷ ಮಾರ್ಚ್​ನಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್​ಫೀಲ್ಡ್​ ವರೆಗೂ ಮೆಟ್ರೋ ಸಂಚಾರ ಪಾರಂಭವಾಗಲಿದೆ.

ಮತ್ತಷ್ಟು ಚುರುಕುಗೊಂಡ BMRCL ಕಾಮಗಾರಿ
 2020ರಲ್ಲೇ ಮುಗಿಯಬೇಕಿದ್ದ ಕಾಮಗಾರಿ, ಹಲವು ಅಡಚಣೆಯಿಂದ ವಿಳಂಬ ಆಗಿತ್ತು. ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿ ವರೆಗಿನ ನೇರಳೆ ಮಾರ್ಗದ ವಿಸ್ತರಣೆಯಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ಕಾಮಗಾರಿಗೆ ಇದ್ದ ಎಲ್ಲ ಅಡಚಣೆ ಕ್ಲಿಯರ್ ಆಗಿದ್ದು, ವೈಟ್‌ಫೀಲ್ಡ್ ವರೆಗೂ  ಶೇಕಡಾ 99 ರಷ್ಟು ಕಾಮಗಾರಿ ಕಂಪ್ಲೀಟ್ ಆಗಿದೆ. ಮೆಟ್ರೋ ಕಾಮಗಾರಿ ನಡೆಸಲು ಭೂಸ್ವಾಧೀನ ಮತ್ತು ಮರ ಕಟಾವು ಪ್ರಕ್ರಿಯೆಗೆ  ಕೊರೊನಾ ಅಡ್ಡಿ ಪಡಿಸಿತ್ತು.
14 ಮೆಟ್ರೋ ನಿಲ್ದಾಣಗಳು ಬರಲಿವೆ 

ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್‌ ಏರಿಯಾದ ತನಕ ಕಾಮಗಾರಿಗೆ ಅಡ್ಡಿಯಾಗುವ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಬೆನ್ನಿಗಾನಹಳ್ಳಿ, ಕೆ.ಆರ್.ಪುರಂ, ಚನ್ನಸಂದ್ರ, ವೈಟ್ ಫೀಲ್ಡ್ ಸೇರಿ 14 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿದ್ದು, 2022ರ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವನ್ನು BMRCL ವ್ಯಕ್ತಪಡಿಸಿದೆ.

ಇದನ್ನೂ ಓದಿ: CM Visit: ಮಳೆ ಹಾನಿ ಪ್ರದೇಶಗಳಿಗೆ ಬಸವರಾಜ ಬೊಮ್ಮಾಯಿ ವಿಸಿಟ್; ಅತ್ತ ಎಚ್‌ಡಿಕೆ ಪ್ರತ್ಯೇಕ ಭೇಟಿ

ಟ್ರಾಫಿಕ್ ಸಮಸ್ಯೆಯಿಂದ ಸಿಗಲಿದೆ ಮುಕ್ತಿ

ಜಿಲ್ಲೆಯಿಂದ ನಿತ್ಯ ಬೆಂಗಳೂರಿಗೆ ಉದ್ಯೋಗ ಮತ್ತು ಶಿಕ್ಷಣಕ್ಕೆಂದು ಸಂಚರಿಸುವ ಬಸ್‌ ಪ್ರಯಾಣಿಕರಿಗೆ ನಿತ್ಯ ಬೆಂಗಳೂರಿನ ಹೆಬ್ಬಾಳ, ಮೇಕ್ರಿವೃತ್ತ, ಪ್ಯಾಲೇಸ್‌ ಗುಟ್ಟಹಳ್ಳಿ, ಮಾದಾವರ, ಕೆ.ಆರ್‌.ಪುರಂ ಟ್ರಾಫಿಕ್‌ ತೀವ್ರ ಪ್ರಯಾಸ ಸೃಷ್ಟಿಸುತ್ತಿತ್ತು. ಈ ಟ್ರಾಫಿಕ್‌ನಿಂದಾಗಿ ಗಂಟೆಗಟ್ಟಲೇ ತಡವಾಗುತ್ತಿದ್ದ ಹಿನ್ನೆಲೆ ಅನೇಕರಿಗೆ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಸದ್ಯ, ಇದೇ ಮಾರ್ಗಗಳವರೆಗೆ ಮೆಟ್ರೋ ವಿಸ್ತರಣೆಗೊಳ್ಳುತ್ತಿರುವ ಹಿನ್ನೆಲೆ ಅನೇಕರಲ್ಲಿ ಸಂತಸ ಮೂಡಿಸಿದೆ. ಜತೆಗೆ, ಕಾಮಗಾರಿ ನೆಪದಲ್ಲಿ ಪುನಃ ಒಂದೆರಡು ವರ್ಷ ಹೆಚ್ಚಾದ ಟ್ರಾಫಿಕ್‌ ಕಿರಿಕಿರಿ ಅನುಭವಿಸಬೇಕಾಗುತ್ತದೆ ಎನ್ನುವ ಚಿಂತೆಯೂ ಅನೇಕರಲ್ಲಿ ಮೂಡಿದೆ.

Published by:Pavana HS
First published: