Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಸೆಪ್ಟೆಂಬರ್​ನಿಂದ K R ಪುರಂವರೆಗೆ ಮೆಟ್ರೋ ಸಂಚಾರ

ಬೆಂಗಳೂರು ಮೆಟ್ರೋದ ಬಹುನಿರೀಕ್ಷಿತ ಪರ್ಪಲ್ ಲೈನ್ ವಿಸ್ತರಣೆಯ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕ ಚಾಲನೆ ಪ್ರಾರಂಭವಾಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಟ್ರಾಫಿಕ್​ ಜಂಜಾಟದಿಂದ ಮುಕ್ತಿ ನೀಡಿ ಮೆಟ್ರೋ ರೈಲು ಸಂಚಾರ ಇದೀಗ ಬೆಂಗಳೂರಿಗರ ಅಚ್ಚುಮೆಚ್ಚಾಗಿದೆ. ಹಲವೆಡೆ ಮೆಟ್ರೋ ಕಾಮಗಾರಿ ಕಾರ್ಯ ನಡೆಯುತ್ತಿದೆ. ಸಿಲಿಕಾನ್ ಸಿಟಿಯ ಮೆಟ್ರೋ(Namma Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್(BMRCL) ಸಿಹಿ ಸುದ್ದಿ ನೀಡಿದೆ. ಕೆಆರ್ ಪುರಂ (K.R Puram) ವರೆಗೆ ಬೆಂಗಳೂರು ಮೆಟ್ರೋ ನೇರಳೆ ಮಾರ್ಗ ವಿಸ್ತರಣೆಯಾಗಿದ್ದು ಇದರ ಪ್ರಾಯೋಗಿಕ ಓಡಾಟ ಸೆಪ್ಟೆಂಬರ್​ನಿಂದ ನಡೆಯಲಿದೆ. ಈ ವರ್ಷ ಡಿಸೆಂಬರ್‌ ವೇಳೆಗೆ ವೈಟ್‌ಫೀಲ್ಡ್‌ವರೆಗೆ ಮಾರ್ಗ ವಿಸ್ತರಣೆಯನ್ನು ಪೂರ್ಣಗೊಳಿಸಲು ಮೆಟ್ರೊ ರೈಲು ನಿಗಮವು ಪ್ರಯತ್ನಿಸುತ್ತಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋದ ಬಹುನಿರೀಕ್ಷಿತ ಪರ್ಪಲ್ ಲೈನ್ ವಿಸ್ತರಣೆಯ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕ ಚಾಲನೆ ಪ್ರಾರಂಭವಾಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ ನೇರಳೆ ಮಾರ್ಗದ ಪ್ರಯೋಗಿಕ ಓಡಾಟ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದ್ದು, ಬಿಎಂಆರ್‌ಸಿಎಲ್ ಡಿಸೆಂಬರ್ 2022 ರೊಳಗೆ ವೈಟ್‌ಫೀಲ್ಡ್‌ಗೆ ವಿಸ್ತರಣೆಯನ್ನು ಪೂರ್ಣಗೊಳಿಸಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಮೆಟ್ರೋ ಮೂರನೆ ಹಂತದ  34 ಕಿಲೋಮೀಟರ್ ಗೆ ಡಿಪಿಆರ್ ಸಿದ್ದ
ನಮ್ಮ‌ ಮೆಟ್ರೋ ಒಂದನೇ‌ ಹಂತ ಸಂಪೂರ್ಣ ‌ಕಂಪ್ಲೀಟ್ ಆಗಿ, ಎರಡನೇ ಹಂತದ ಕಾಮಗಾರಿ ಮುಂದುವರೆಯುತ್ತಿದೆ.‌ 72 ಕಿಲೋಮೀಟರ್ ಉದ್ದದ ಎರಡನೇ‌ ಹಂತದಲ್ಲಿ ಸುರಂಗ ಮಾರ್ಗ ಕೊರೆಯುವ ಕೆಲಸ ಬಹುತೇಕ ಮುಗಿದಿದ್ದು, ಎಲಿವೇಡೆಟ್ ಕಾಮಗಾರಿಯೂ ಭರದಿಂದ ಸಾಗ್ತಾಯಿದೆ.

ಇದನ್ನೂ ಓದಿ: BMRCL: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಸೈಕಲ್​ ಕೊಂಡೊಯ್ಯಲು ಸಿಕ್ಕಿದೆ ಪರ್ಮಿಷನ್​

ಇದರ ಜೊತೆಗೆ 34  ಕಿಲೋ ಮೀಟರ್ ಉದ್ದದ ಮೂರನೇ ಹಂತವನ್ನೂ ಆರಂಭ ಮಾಡಲು ಮೆಟ್ರೊ ನಿಗಮ‌ ಸಿದ್ದತೆ ಮಾಡಿಕೊಳುತ್ತಿದೆ. ಜೆಪಿ ನಗರ ದಿಂದ - ಔಟರ್ ರಿಂಗ್ ರೋಡ್ - ಯಶವಂತಪುರ - ಹೆಬ್ಬಾಳ - ಏರ್ ಪೋರ್ಟ್ ಮಾರ್ಗ ಹಾಗೂ  ಹೊಸಹಳ್ಳಿ - ಮಾಗಡಿ ಮಾರ್ಗದಲ್ಲಿ ಮೂರನೇ ಹಂತದ ಮೆಟ್ರೊ ಸಂಚಾರ ಮಾಡಲಿದೆ.‌ ಈ ಸಂಬಂಧ  ರೈಟ್ಸ್ ಸಂಸ್ಥೆ ಡಿಪಿಆರ್ ಸಿದ್ದಮಾಡಿದ್ದು, ಮೆಟ್ರೋ ನಿಗಮ  ಕೆಂದ್ರ ಸರ್ಕಾರಕ್ಕೆ ರಿಪೋರ್ಟ್ ಸಲ್ಲಿಕೆ ಮಾಡಿ ಅನುಮೋದನೆ ಪಡೆಯಲಿದೆ.‌

ಡಿಸೆಂಬರ್ ನಲ್ಲಿ ಕೆಂಗೇರಿ - ಚಲಘಟ್ಟ, ಬಯ್ಯಪ್ಪನಹಳ್ಳಿ - ವೈಟ್ ಫೀಲ್ಡ್ ಮಾರ್ಗ ಉದ್ಘಾಟನೆ

ಸದ್ಯ  ನಗರದಾದ್ಯಂತ ಎರಡನೇ ಹಂತದ ಕಾಮಗಾರಿಗಳು ಭರದಿಂದ ಸಾಗ್ತಾಯಿದ್ದು, 14 ನಿಲ್ದಾಣಗಳುಳ್ಳ 15 ಕಿಲೋಮೀಟರ್ ಉದ್ದದ ಬಯ್ಯಪ್ಪನಹಳ್ಳಿ - ವೈಟ್ ಫೀಲ್ಡ್ ಮಾರ್ಗ ಹಾಗೂ 1.8 ಕಿಲೋಮೀಟರ್ ಉದ್ದದ  ಕೆಂಗೇರಿ - ಚಲಘಟ್ಟ ಮಾರ್ಗದಲ್ಲಿ  ವಾಣಿಜ್ಯ ಸಂಚಾರ ಆರಂಭ ಮಾಡಲು ನಿಗಮ‌ ನಿರ್ಧರಿಸಿದ್ದು ಈಗಾಗಲೇ ಸ್ಟೇಷನ್ ಅಂಡ್ ಟ್ರ್ಯಾಕ್ ವರ್ಕ್ ನಡೆಯುತ್ತಿದೆ.‌


ಪೈಲಟ್ ರಹಿತ ನಮ್ಮ ಮೆಟ್ರೋ 
 ಬೆಂಗಳೂರಿನಲ್ಲಿ ಸಂಚರಿಸುವ ಮೆಟ್ರೋ ರೈಲುಗಳಲ್ಲಿ ಈ ಹಿಂದೆ ಪೈಲಟ್ ಗಳು ಇರುತ್ತಿದ್ದರು. ಆದರೆ ಇನ್ಮುಂದೆ ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳು ಓಡಾಟ ನಡೆಸಲಿವೆ. ಈ ರೈಲುಗಳನ್ನು ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸುವ ವ್ಯವಸ್ಥೆಯೂ ಇರಲಿದೆ.
ಚಾಲಕ ರಹಿತ ಮೆಟ್ರೋ ರೈಲು ಓಡಿಸಲು ತಯಾರಿ

ಮೆಟ್ರೋ ಚಾಲಕನ ಕೆಲ ತಪ್ಪುಗಳಿಂದ ನಗರದಲ್ಲಿ ಆಗಾಗ ಟ್ರೇನ್ ಗಳು ಸ್ಥಗಿತವಾಗುತ್ತಿದ್ದವು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.ಇದೀಗ ಚಾಲಕ ರಹಿತ ಮೆಟ್ರೋ ರೈಲು ಓಡಿಸಲು ನಮ್ಮ ಮೆಟ್ರೋ ನಿಗಮ ತಯಾರಿ ನಡೆಸಿದ್ದು, ಪೈಲಟ್ ರಹಿತ ನಮ್ಮ ಮೆಟ್ರೋ ಕಾರ್ಯಾಚರಣೆಗೆ ತಯಾರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published by:Pavana HS
First published: