Hanuman Statue: ಕಾಫಿನಾಡ ಪ್ರವಾಸಿಗರಿಗೆ ಗುಡ್​ನ್ಯೂಸ್​, ದತ್ತಪೀಠ ಮಾರ್ಗದಲ್ಲಿ ತಲೆಎತ್ತಲಿದೆ 21 ಅಡಿ ಎತ್ತರದ ಆಂಜನೇಯನ ಮೂರ್ತಿ!

ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಥಟ್ ಅಂತ ನೆನಪಾಗೋದು ರಾಜ್ಯದ ಎತ್ತರದ ಶಿಖರ ಮುಳ್ಳಯ್ಯನಗಿರಿ. ಇದೀಗ ಮುಳ್ಳಯ್ಯನಗಿರಿ ಜೊತೆಗೆ ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಲು ಹೊರಟಿದ್ದಾನೆ ರಾಮನ ಭಕ್ತ ಹನುಮ. ಮುಳ್ಳಯ್ಯನಗಿರಿಗೂ ಆಂಜನೇಯನಿಗೂ ಎತ್ತಣ ಸಂಬಂಧ ಅಂತಾ ಅಚ್ಚರಿ ಪಡಬೇಡಿ. ಇಲ್ಲಿದೆ ನೋಡಿ ವಿವರ

ಹನುಮನ ಬೃಹತ್ ವಿಗ್ರಹಕ್ಕೆ ಸಿದ್ಧತೆ

ಹನುಮನ ಬೃಹತ್ ವಿಗ್ರಹಕ್ಕೆ ಸಿದ್ಧತೆ

  • Share this:
ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಥಟ್ ಅಂತ ನೆನಪಾಗೋದು ರಾಜ್ಯದ ಎತ್ತರದ ಶಿಖರ (High Peak)ಮುಳ್ಳಯ್ಯನಗಿರಿ (Mullayanagiri). ಇದೀಗ ಮುಳ್ಳಯ್ಯನಗಿರಿ ಜೊತೆಗೆ ಭಕ್ತರು (Devotees) ಹಾಗೂ ಪ್ರವಾಸಿಗರನ್ನು (Tourist) ಆಕರ್ಷಲು ಹೊರಟಿದ್ದಾನೆ ರಾಮನ ಭಕ್ತ ಹನುಮಂತ (Hanuman). ಅರೇ, ಮುಳ್ಳಯ್ಯನಗಿರಿಗೂ ಆಂಜನೇಯನಿಗೂ ಎತ್ತಣ ಸಂಬಂಧ ಅಂತಾ ಅಚ್ಚರಿ ಪಡಬೇಡಿ. ಚಿಕ್ಕಮಗಳೂರು (Chikkamagaluru) ತಾಲೂಕಿನ ದತ್ತಪೀಠಕ್ಕೆ ಸಾಗುವ ಮಾರ್ಗ ಮಧ್ಯೆ ಸಿಗುವ ಕವಿಕಲ್ ಗಂಡಿ ಗುಡ್ಡದ ಮೇಲೆ ಬರೋಬ್ಬರಿ 21 ಅಡಿಯ ವೀರ ಹನುಮನ ಏಕಶಿಲಾ ವಿಗ್ರಹ (Monolith) ಶೀಘ್ರದಲ್ಲೇ ತಲೆ ಎತ್ತಲಿದೆ. ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ತಾಲೂಕಿನ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ಪರ್ವತ ಆಂಜನೇಯನನ್ನ ನಿರ್ಮಿಸಲು ಯೋಜನೆ ಸಿದ್ದಗೊಂಡಿದೆ.

ಮುಳ್ಳಯ್ಯನಗಿರಿ ಶ್ರೇಣಿಯು ಸಮುದ್ರಮಟ್ಟದಿಂದ 1930 ಮೀಟರ್ ಎತ್ತರದಲ್ಲಿದೆ. ಹಿಮಾಲಯದಿಂದ ನೀಲಗಿರಿಯವರೆಗೆ, ಕೇವಲ ಚೆಂಬ್ರ, ಬನೊರ, ಮತ್ತು ವೆಲ್ಲರಿ ಮಾಲಾ ಶಿಖರಗಳನ್ನು ಹೊರತುಪಡಿಸಿದರೆ ಮುಳ್ಳಯ್ಯನಗಿರಿ ಶಿಖರ ಅತಿ ಎತ್ತರದ್ದೆಂದು ದಾಖಲಿಸಲಾಗಿದೆ. ಇಂತಹ ಮುಳ್ಳಯ್ಯನ ಗಿರಿ ಈಗ ಮತ್ತೊಂದು ರೀತಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಮುಂದಾಗಿದೆ. ಹೌದು ಇಲ್ಲಿ ಬರೋಬ್ಬರಿ 21 ಅಡಿಯ ವೀರ ಹನುಮನ ಏಕಶಿಲಾ ವಿಗ್ರಹ ತಲೆಎತ್ತಲಿದೆ.

ಏಕಶಿಲಾಕಲ್ಲಿಗೆ ಪೂಜೆ ಮಾಡಿ ಪುರಪ್ರವೇಶ

ಈಗಾಗಲೇ ಮೂರ್ತಿ ಕೆತ್ತನೆಗೆ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಭರದಿಂದ ಸಿದ್ಧತೆ ನಡೆದಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಕೃಷ್ಣಶಿಲೆ ಕಲ್ಲುಗಳು ಕೂಡ ಚಿಕ್ಕಮಗಳೂರು ನಗರಕ್ಕೆ ಆಗಮಿಸಿವೆ. ನಗರದ ದ್ವಾರಬಾಗಿಲು ದಾಸರಹಳ್ಳಿ ಬಳಿ ಏಕಶಿಲಾಕಲ್ಲಿಗೆ ಪೂಜೆ ಮಾಡಿ ಪುರಪ್ರವೇಶ ಮಾಡಿಕೊಳ್ಳಲಾಗಿದೆ.

Good news for chikkamangaluru tourists a 21 feet tall statue of Anjaneya in Dattapeeth road
ಆಂಜನೇಯನ ಮೂರ್ತಿಗೆ ತಯಾರಿ


ಇದನ್ನೂ ಓದಿ: ಬದುಕು ಕಟ್ಟಿಕೊಟ್ಟ ಗಣಪ! ಇದು ನಿಜಕ್ಕೂ ದೇವರು ನೀಡಿದ ವರ!

30 ಕಿ.ಮೀ. ದೂರಕ್ಕೂ ಕಾಣಲಿದೆ ಹನುಮನ ವಿಗ್ರಹ

ಕಲ್ಲಿನ ಜೊತೆ ಶಿಲ್ಪಿಗಳೂ ಕೂಡ ಆಗಮಿಸಿದ್ದಾರೆ. ಮೂರ್ತಿಯನ್ನ ಪ್ರತಿಷ್ಠಾಪಿಸುವ ಜಾಗದಲ್ಲೇ ಕೆತ್ತನೆ ಮಾಡಲು ಶಿಲ್ಪಿಗಳು ಸಜ್ಜಾಗಿದ್ದಾರೆ. ಈ ಮೂರ್ತಿ ಕವಿಕಲ್ ಗಂಡಿ ಬಳಿ ನೆಲೆ ನಿಂತರೇ ಸುತ್ತಮುತ್ತಲಿನ ಸುಮಾರು 30 ಕಿ.ಮೀ. ದೂರಕ್ಕೂ ಎದ್ದು ಕಾಣುತ್ತದೆ. ಆಂಜನೇಯನ ಏಕಶಿಲಾ ಮೂರ್ತಿ ನೆಲೆ ನಿಂತರೆ ಕಾಫಿನಾಡು ದೇಶದ ಅತ್ಯಂತ ಹೆಸರಾಂತ ಪ್ರವಾಸಿ ತಾಣವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Good news for chikkamangaluru tourists a 21 feet tall statue of Anjaneya in Dattapeeth road
ಏಕಶಿಲಾ ಕಲ್ಲಿಗೆ ಪೂಜೆ


ವಿಗ್ರಹ ಕೆತ್ತನೆಯ ಜಾಗದ ಬಗ್ಗೆ ಇನ್ನೂ ನಿರ್ಧಾರ ಮಾಡಲಾಗಿಲ್ಲ. ಮುಳ್ಳಯ್ಯನಗಿರಿಗೆ ಹೋಗುವ ಮಾರ್ಗ ಕಿರಿದಾಗಿರುವುದರಿಂದ ಶಿಲೆ ಅಲ್ಲಿಗೆ ತೆಗೆದುಕೊಂಡು ಹೋಗುವುದು ಕಠಿಣ ಸಾಧ್ಯ. ಈ ಬಗ್ಗೆ ಚರ್ಚೆಗಳಾಗುತ್ತಿದ್ದು, ಇನ್ನಷ್ಟೇ ಸ್ಥಳ ನಿಗದಿಯಾಗಬೇಕಿದೆ.

ಚುನಾವಣಾ ಗಿಮಿಕ್ ಅಂತಾ ಕಾಂಗ್ರೆಸ್ ಕಿಡಿ

ಚುನಾವಣೆ ಸಮಯದಲ್ಲಿ ಬಿಜೆಪಿಯವರು ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಮತವನ್ನ ಸೆಳೆಯಲು ಗಿಮಿಕ್ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿದ್ದಾರೆ. ಇನ್ನು ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡಲಿ ತೊಂದರೆ ಇಲ್ಲ. ಆದರೆ ಈ ಸಮಯದಲ್ಲಿ ಇದು ಬೇಕಿತ್ತಾ, ಅತಿವೃಷ್ಟಿ, ಅಭಿವೃದ್ಧಿ ಕೆಲಸಗಳಿಗೆ ಈ ಹಣವನ್ನ ಹಾಕಬಹುದಿತ್ತು ಎಂದು ಕಾಂಗ್ರೆಸಿಗರು ಪ್ರಶ್ನೆ ಮಾಡಿದ್ದಾರೆ.

Good news for chikkamangaluru tourists a 21 feet tall statue of Anjaneya in Dattapeeth road
ಮುಳ್ಳಯ್ಯನಗಿರಿ


ಮುಳ್ಳಯ್ಯನಗಿರಿಗೆ ಮತ್ತೊಂದು ಮುಕುಟ ಸೇರ್ಪಡೆ

ಇನ್ಮುಂದೆ ದೇಶಾದ್ಯಂತ ಇರೋ ಲಕ್ಷಾಂತರ ಆಂಜನೇಯ ಭಕ್ತರು ಕಾಫಿನಾಡ ಪ್ರಕೃತಿ ಸೌಂದರ್ಯದ ಆಂಜನೇಯ ದರ್ಶನವನ್ನೂ ಪಡೆಯಲಿದ್ದಾರೆ. ಪ್ರಕೃತಿಯ ಐಸಿರಿ ಮಧ್ಯೆ ಆಂಜನೇಯನ ಬೃಹತ್ ಮೂರ್ತಿ ತಲೆ ಎತ್ತುವುದರಿಂದ ಮುಳ್ಳಯ್ಯನಗಿರಿಗೂ ಮತ್ತೊಂದು ಮುಕುಟ ಸೇರ್ಪಡೆಯಾದಂತಾಗುತ್ತೆ.

ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಹೈಕೋರ್ಟ್ ಗ್ರೀನ್​ ಸಿಗ್ನಲ್!

ಡಿಸೆಂಬರ್ ವೇಳೆಗೆ ವಿಗ್ರಹ ಪ್ರತಿಷ್ಠಾಪನೆ

ವಿಗ್ರಹ ಇಡುವುದರಿಂದ ಮುಳ್ಳಯ್ಯನಗಿರಿ ದತ್ತ ಪೀಠಕ್ಕೆ ಬರುವ ಪ್ರವಾಸಿಗರಿಗೆ ಈ ಪ್ರದೇಶವು ಒಂದು ಆಕರ್ಷಣೀಯ ಸ್ಥಳವಾಗಲಿದೆ. ಡಿಸೆಂಬರ್ ಹೊತ್ತಿಗೆ ಪರ್ವತಾಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಇಷ್ಟು ದಿನ ಪವಿತ್ರ ಧಾರ್ಮಿಕ ಕ್ಷೇತ್ರದಲ್ಲಿ ದತ್ತಾತ್ರೇಯನ ದರ್ಶನ ಪಡೆಯುತ್ತಿದ್ದ ಭಕ್ತರು ಪರ್ವತ ಆಂಜನೇಯನ ಆಶೀರ್ವಾದ ಪಡೆಯಲು ಕಾತರರಾಗಿದ್ದಾರೆ. ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ಆಂಜನೇಯ ಮೂರ್ತಿ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ.
Published by:Thara Kemmara
First published: