• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BMTC ನೌಕರರಿಗೆ ಗುಡ್​ ನ್ಯೂಸ್​; 5 ಲಕ್ಷ ರೂ. ಆರೋಗ್ಯ ವಿಮೆ ಘೋಷಿಸಿದ ಶ್ರೀರಾಮುಲು

BMTC ನೌಕರರಿಗೆ ಗುಡ್​ ನ್ಯೂಸ್​; 5 ಲಕ್ಷ ರೂ. ಆರೋಗ್ಯ ವಿಮೆ ಘೋಷಿಸಿದ ಶ್ರೀರಾಮುಲು

ಬಿ. ಶ್ರೀರಾಮುಲು

ಬಿ. ಶ್ರೀರಾಮುಲು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ನೌಕರರಿಗೆ ಆಯುಷ್ಮಾನ್ ಯೋಜನೆಯಡಿ 5 ಲಕ್ಷ ಆರೋಗ್ಯ ವಿಮೆ ನೀಡ್ತಿದೆ ಎಂದು ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.

  • Share this:

ಬೆಂಗಳೂರು (ಡಿ.14): ಬಿಎಂಟಿಸಿ (BMTC) ನೌಕರರಿಗೆ ಸಾರಿಗೆ ಸಚಿವ ಶ್ರೀರಾಮುಲು (SriRamulu) ಗುಡ್​ ನ್ಯೂಸ್​ ನೀಡಿದ್ದಾರೆ. ಆರೋಗ್ಯ ರಕ್ಷಾ ಯೋಜನೆಯಡಿ (Health Protection Scheme) ಬಿಎಂಟಿಸಿಯ  35 ಸಾವಿರ ನೌಕರರಿಗೆ 5 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯವನ್ನು ಸಚಿವ ಶ್ರೀರಾಮುಲು (Minister SriRamulu) ಘೋಷಿಸಿದ್ದಾರೆ. ಈ ಯೋಜನೆಯಡಿ ನೌಕರರು ಖಾಸಗಿ ಆಸ್ಪತ್ರೆಗಳಲ್ಲೂ (Hospital) ಚಿಕಿತ್ಸೆ ಪಡೆಯಬಹುದಾಗಿದೆ. ಇನ್ಮುಂದೆ ಮಹಾನಗರ ಸಾರಿಗೆ ಸಂಸ್ಥೆ ನೌಕರರು  ಚಿಕಿತ್ಸೆ ಸಿಕ್ಕಿಲ್ಲ ಅಂತ ಆಸ್ಪತ್ರೆಗೆ ಅಲೆಯಬೇಕಿಲ್ಲ. ಸಿಬ್ಬಂದಿಗೆ ಆರೋಗ್ಯ ರಕ್ಷಾ ಯೋಜನೆಯ ಸೌಲಭ್ಯ ನೀಡಲಿದೆ.


ಆಯುಷ್ಮಾನ್ ಯೋಜನೆಯಡಿ 5 ಲಕ್ಷ ಆರೋಗ್ಯ ವಿಮೆ


ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ನೌಕರರಿಗೆ ಆಯುಷ್ಮಾನ್ ಯೋಜನೆಯಡಿ 5 ಲಕ್ಷ ಆರೋಗ್ಯ ವಿಮೆ ನೀಡ್ತಿದೆ ಎಂದು ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಹಾಗೂ ಕುಟುಂಬದವ್ರು ಯಾವುದೇ ಅನಾರೋಗ್ಯಕ್ಕೊಳಗಾದ್ರೆ ಈ ಯೋಜನೆಯಡಿ ಅವರು ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಈ ಸಂಬಂಧ ಆರೋಗ್ಯ ಸಚಿವರು ಹಾಗೂ ಇಲಾಖೆ ಜೊತೆ ಈಗಾಗಲೇ ಬಿಎಂಟಿಸಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.


Bike rider died in accident tries to overtake bmtc bus mrq


 5 ಲಕ್ಷದವರೆಗೆ ಆಸ್ಪತ್ರೆ ಖರ್ಚು ಭರಿಸಲಿದೆ ಇಲಾಖೆ

ನೌಕರರು ದೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೃದಯ ಬೈಪಾಸ್ ಸರ್ಜರಿ ಸೇರಿ ಹಲವು ಕಾಯಿಲೆಗಳಿಂದ ನೌಕರರು ಬಳಲುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ನೌಕರರಿಗೆ ಚಿಕಿತ್ಸೆ ಸಿಗದೆ ಅನೇಕ ನೌಕರರು ಪರದಾಡುತ್ತಿದ್ದಾರೆ. ಹೀಗಾಗಿ ಆರೋಗ್ಯ ವಿಮೆ ಯೋಜನೆಗೆ ಬಿಎಂಟಿಸಿ ನಿರ್ಧರಿಸಿದೆ.


ಸಾರಿಗೆ ಸಿಬ್ಬಂದಿಗೆ  ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ


ಸಾರಿಗೆ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳು ಸಿಗಬೇಕು ಎನ್ನುವ ಕಾರಣಕ್ಕೆ ಆರೋಗ್ಯ ಯೋಜನೆ ಜಾರಿಗೆ ತರಲಾಗುತ್ತಿದೆ. ನೌಕರರ ಕುಟುಂಬವೊಂದಕ್ಕೆ ವಾರ್ಷಿಕ 5 ಲಕ್ಷದವರೆಗೆ ಆಸ್ಪತ್ರೆ ಖರ್ಚು ಭರಿಸಲಿದೆ ಈ ಯೋಜನೆ. ಚಾಲಕರು ಮತ್ತು ನಿರ್ವಾಹಕರು ಅತಿ ಹೆಚ್ಚು ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಭಾಗ್ಯಕ್ಕೆ ನಿಗಮ ಈ ನಿರ್ಧಾರಕ್ಕೆ ಮುಂದಾಗಿದೆ.


KSRTC ಸಿಬ್ಬಂದಿಗೆ 1 ಕೋಟಿ ವಿಮಾ


ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕೆ ಎಸ್ ಆರ್ ಟಿ ಸಿ  (KSRTC) ಸಿಬ್ಬಂದಿಗೆ  1 ಕೋಟಿ ರೂ ಮೊತ್ತದ ಅಪಘಾತ ವಿಮಾ (Accident Insurance) ಯೋಜನೆ ಸೌಲಭ್ಯ ಜಾರಿಗೆ ತಂದಿತ್ತು. ಈಗಾಗಲೇ ರೂ 50 ಲಕ್ಷ ವಿಮೆ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅವರಿಂದ (State Bank of India) ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರವರಿಂದ ಮಾಡಿಕೊಂಡ ಒಡಂಬಡಿಕೆಯ 50 ಲಕ್ಷ ರೂ ಸೇರಿ ಒಟ್ಟು 1 ಕೋಟಿ ರೂ ಅಪಘಾತ (Accident) ವಿಮೆ ಇದಾಗಿದೆ.


50 ರೂ ಲಕ್ಷಗಳ ಪರಿಹಾರ


KSRTC ನಿಗಮದ ಸಿಬ್ಬಂದಿಗಳು ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ ಅಥವಾ ಶಾಶ್ವತ / ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ  ಅವರಿಗೆ 50 ಲಕ್ಷಗಳ ಪರಿಹಾರ ನೀಡಲಿದೆ. ಪ್ರೀಮಿಯಂ ರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಜಾರಿಗೆ ತರಲಾಗಿದೆ.


ಇದನ್ನೂ ಓದಿ: Janardhana Reddy: ಗಣಿ ಧಣಿ ಜನಾರ್ದನ ರೆಡ್ಡಿ ಗೃಹ ಪ್ರವೇಶ, ಇಲ್ಲಿವೆ ನೋಡಿ ನೂತನ ಮನೆಯ ಫೋಟೋಸ್​


ವಾರ್ಷಿಕ 885 ರೂ ಪ್ರೀಮಿಯಂ ಪಾವತಿಸಬೇಕು


ಇದರ ಮುಂದುವರಿದ ಭಾಗವಾಗಿ, ಇಂದು ನಿಗಮವು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿ. ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು , ಅದರಂತೆ  ಸಿಬ್ಬಂದಿಗಳಿಗೆ ರೂ.50 ಲಕ್ಷದವರೆಗೆ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ.

Published by:ಪಾವನ ಎಚ್ ಎಸ್
First published: