• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BMTC ಪ್ರಯಾಣಿಕರಿಗೆ ಗುಡ್ ನ್ಯೂಸ್, ಇನ್ಮೇಲೆ ಯಾವ ದಿನಾಂಕಕ್ಕೆ ಬೇಕಿದ್ರೂ ಪಾಸ್ ಕೊಳ್ಳಬಹುದು!

BMTC ಪ್ರಯಾಣಿಕರಿಗೆ ಗುಡ್ ನ್ಯೂಸ್, ಇನ್ಮೇಲೆ ಯಾವ ದಿನಾಂಕಕ್ಕೆ ಬೇಕಿದ್ರೂ ಪಾಸ್ ಕೊಳ್ಳಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರಯಾಣಿಕರಿಗೆ ಅನುಕೂಲವಾಗಲು ಬಿಎಂಟಿಸಿ ಬಸ್ ಮಾಸಿಕ ಪಾಸ್ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ.

  • Share this:

ಬೆಂಗಳೂರು (ಮೇ,24): ಬಿಎಂಟಿಸಿ ಪ್ರಯಾಣಿಕರಿಗೆ (BMTC Passengers) ಸಾರಿಗೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಬಿಎಂಟಿಸಿ (BMTC) ಬಸ್ ನಲ್ಲಿ (Bus) ಪ್ರಯಾಣಿಕರಿಗೆ ದಿನ ಹಾಗೂ ತಿಂಗಳಿನ ಪಾಸ್ ಅನ್ನು ನೀಡಲಾಗುತ್ತಿತ್ತು. ಈ ವ್ಯವಸ್ಥೆ ಅನೇಕ ಪ್ರಯಾಣಿಕರಿಗೆ ಅದೆಷ್ಟೋ ಅನುಕೂಲಕರವಾಗಿದೆ ಎಂದರೂ ತಪ್ಪಾಗಲಾರದು. ಅಲ್ಲದೇ ಕೆಲ ದಿನಗಳ ಹಿಂದೆಯಷ್ಟೇ ಇನ್ಮುಂದೆ ಪ್ರಯಾಣಿಕರಿಗೆ ಬಿಎಂಟಿಸಿ ಮೊಬೈಲ್ ಪಾಸ್ (Mobile Pass)​ ಎಂಬ ಪರಿಕಲ್ಪನೆ ಪರಿಚಯಿಸಿತ್ತು. ಇದೀಗ ಮತ್ತೊಂದು ಹೊಸ ಹಾಗೂ ಪ್ರಯಾಣಿಕರಿಗೆ ಅನಕೂಲಕರವಾಗುವಂತಹ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಹೌದು, ಇದೀಗ ಬಿಎಂಟಿಸಿ ಬಸ್ ಮಾಸಿಕ ಪಾಸ್ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ.


BMTC ಪಾಸ್ ನಿಯಮದಲ್ಲಿ ಮಹತ್ವದ ಬದಲಾವಣೆ:


BMTC ಬಸ್ ಮಾಸಿಕ ಪಾಸ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡುವುದಾಗಿ ತಿಳಿದುಬಂದಿದೆ. ಹೌದು, ಈ ಹಿಂದೆ ಮಾಸಿಕ ಪಾಸ್ ಕ್ಯಾಲೆಂಡರ್ ಆಧಾರದಲ್ಲಿ ವಿತರಣೆ ಮಾಡಲಾಗ್ತಿತ್ತು. ಆದರೆ ಇದೀಗ ದಿನಾಂಕವಾರು ಮಾಸಿಕ ಪಾಸ್ ವಿತರಿಸಲು ಬಿಎಂಟಿಸಿ ಮುಂದಾಗಿದೆ. ಅಂದರೆ ಈ ಹಿಂದಿನ ನಿಯಮದ ಪ್ರಕಾರ ತಿಂಗಳ ಯಾವುದೇ ದಿನಾಂಕದಲ್ಲಿ ಪಾಸ್ ಕೊಂಡಿದ್ದರೂ ಪಾಸ್ ಅವಧಿ 30 ಕ್ಕೆ ಮುಕ್ತಾಯವಾಗುತ್ತಿತ್ತು.


ಆದರೀಗ ಜಾರಿಯಅಗಲಿರುವ ಹೊಸ ನಿಯಮದ ಪ್ರಕಾರ ಯಾವ ದಿನಾಂಕದಂದು ಪಾಸ್ ಕೊಂಡರೂ ಮುಂದಿನ ತಿಂಗಳ ಅದೇ ದಿನಾಂಕದ ವರೆಗೂ ಪಾಸ್ ಚಾಲ್ತಿಯಲ್ಲಿರಲಿದೆ. ಅಲ್ಲದೇ ಈ ನಿಯಮವು ಬಿಎಂಟಿಸಿಯ ಸಾಮಾನ್ಯ ಸಾರಿಗೆ, ವಜ್ರ ಮತ್ತು ವಾಯುವಜ್ರ ಬಸ್ ಮಾಸಿಕ ಪಾಸ್​ ಗಳಿಗೆ ಅನ್ವಯವಾಗಲಿದೆ ಎಂದು ಬಿಎಂಟಿಸಿ ತಿಳಿಸಿದೆ.


ಇದನ್ನೂ ಓದಿ: Hubballi Accident: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಮೋದಿ, ಸಾವನ್ನಪ್ಪಿದವರು ನಮ್ಮವರಲ್ಲ ಎಂದ ಹಾಲಪ್ಪ


ಜುಲೈ 1 ರಿಂದ ಹೊಸ ನಿಯಮ ಜಾರಿ:


ಇನ್ನು, ಮಾಸಿಕ ಬಸ್ ಪಾಸ್​ ನಿಯಮದಲ್ಲಿನ ಬದಲಾವಣೆಯ ಹೊಸ ನಿಯಮವು 2022 ಜುಲೈ 1 ರಿಂದ ಬಿಎಂಟಿಸಿಯ ಹೊಸ ನಿಯಮ ಜಾರಿಯಾಗಲಿದೆ ಎಂದು BMTC ಅಧಿಕೃತ ಸುತ್ತೋಲೆ ಹೊರಡಿಸಿದೆ. ಇದರೊಂದಿಗೆ ಹೊಸ ಪಾಸ್ ನಿಯಮದಂತೆ ಬಿಎಂಟಿಸಿ ವಿತರಿಸೋ ಗುರುತಿನ ಚೀಟಿ ಅಗತ್ಯವಿಲ್ಲ. ಬದಲಾಗಿ ವೈಯಕ್ತಿಕ ಗುರುತಿನ ಚೀಟಿ ಬಳಸಿ ಪಾಸ್ ತೋರಿಸಿ ಪ್ರಯಾಣಕ್ಕೆ ಅವಕಾಶ ಕಲ್ಪಸಲಾಗುತ್ತದೆ ಎಂದು ತಿಳಿಸಿದೆ. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಇತರೆ ಐಡಿ ಕಾರ್ಡ್ ಇದ್ದರೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿದೆ.


ಬಿಎಂಟಿಸಿಯಿಂದ ಮೊಬೈಲ್ ಬಸ್ ಪಾಸ್:


ಬಿಎಂಟಿಸಿ ಈಗಾಗಲೇ ಪಾಸ್ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಮೊಬೈಲ್ ಬಸ್ ಪಾಸ್ ಪರಿಚಯಿಸಿದೆ. ಮೊಬೈಲ್‌ ಆ್ಯಪ್‌ನನ್ನು ಬಸ್‌ನ ನಿರ್ವಾಹಕರ ಬಳಿಯ ಎಲೆಕ್ಟ್ರಾನಿಕ್‌ ಟಿಕೆಟ್‌ ಮಿಷನ್‌ (ETM) ನಲ್ಲಿ ಸ್ಕ್ಯಾನ್‌ ಮಾಡಿ ಪ್ರಯಾಣಿಬಹುದಾಗಿದೆ. ಇದರಿಂದ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್‌ ಖರೀದಿಸುವ ಅಗತ್ಯವಿಲ್ಲವಾಗಲಿದೆ. ಇಷ್ಟು ದಿನ ಪೇಪರ್​ ರೂಪದಲ್ಲಿ ಬಿಎಂಟಿಸಿ ಬಸ್​ ನೀಡಲಾಗ್ತಿತ್ತು. ಇದೀಗ ಪಾಸ್​ ನನ್ನು ಮೊಬೈಲ್​ನಲ್ಲೇ ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡ್ಬಹುದು.


ಇದನ್ನೂ ಓದಿ: BMTC ಪ್ರಯಾಣಿಕರಿಗೆ ಗುಡ್​ ನ್ಯೂಸ್; ನಾಳೆಯಿಂದಲೇ ‘ಮೊಬೈಲ್​ ಪಾಸ್​’ ಯೋಜನೆ ಜಾರಿ


ಬಸ್​ಗಳಲ್ಲಿ ಕ್ಯೂಆರ್​ ಕೋಡ್​ ವ್ಯವಸ್ಥೆ ಹೇಗಿದೆ?:


ವೊಲ್ವೋ ಬಸ್‌ಗಳ ನಿರ್ವಾಹಕರಿಗೆ ಇಟಿಎಂ ಮಿಷನ್‌ಗಳಿರಲಿದ್ದು, ಅದರಲ್ಲಿ ಮೊಬೈಲ್‌ನಲ್ಲಿನ ಕ್ಯೂಆರ್‌ಕೋಡ್‌ ಸ್ಕ್ಯಾನ್‌(QR Code Scan) ಮಾಡಬಹುದಾಗಿದೆ. ಆದರೆ, ಸಾಮಾನ್ಯ ಬಸ್‌ಗಳಲ್ಲಿ ನಿರ್ವಾಹಕರ ಬಳಿ ಇರುವ ಕ್ಯುಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಪ್ರಯಾಣಿಸಬಹುದಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಎಲ್ಲ ವೋಲ್ವೋ ಬಸ್‌ಗಳು ಹಾಗೂ ಸುಮಾರು 200 ಸಾಮಾನ್ಯ ಬಸ್‌ಗಳಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಎಂದು ಬಿಎಂಟಿಸಿ ನಿರ್ದೇಶಕ(ಐಟಿ) ಸೂರ್ಯಸೇನ್‌ ಮಾಹಿತಿ ನೀಡಿದರು.

Published by:shrikrishna bhat
First published: