Bengaluru: ಚಲಿಸುತ್ತಿದ್ದ ಕಾರ್ ಮೇಲೆ ಬಿದ್ದ ಗಾಲ್ಫ್​ ಬಾಲ್; ಎಫ್​ಐಆರ್ ದಾಖಲು

ಕಾರ್ ಗ್ಲಾಸ್ ಮೇಲೆ ಬಿದ್ದ ಗಾಲ್ಫ್ ಬಾಲ್

ಕಾರ್ ಗ್ಲಾಸ್ ಮೇಲೆ ಬಿದ್ದ ಗಾಲ್ಫ್ ಬಾಲ್

Bengaluru Golf Club: ಪ್ರಾಣಕ್ಕೆ ಅಪಾಯವನ್ನುಂಟು ಮಾಡಿರುವ ಗಾಲ್ಫ್ ಕ್ಲಬ್ ಆಡಳಿತ ಅಧಿಕಾರಿಗಳು ಮತ್ತ ಆಟಗಾರರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ವಕೀಲ ಗಿರೀಶ್ ಮನವಿ ಮಾಡಿಕೊಂಡಿದ್ದಾರೆ.

  • Share this:

ಬೆಂಗಳೂರು: ಚಲಿಸುತ್ತಿದ್ದ ಕಾರ್ (Car) ಮುಂಭಾಗದ ಮೇಲೆ ಗಾಲ್ಫ್ ಬಾಲ್ (Golf Ball) ಬಿದ್ದ ಪರಿಣಾಮ  ಗ್ಲಾಸ್ ಒಡೆದಿದ್ದು, ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ (High Grounds Police Station) ದೂರು ದಾಖಲಾಗಿದೆ. ದೂರಿನ ಅನ್ವಯ ಪೊಲೀಸರು ಬೆಂಗಳೂರು ಗಾಲ್ಫ್ ಕ್ಲಬ್ (Bengaluru Golf Club) ವಿರುದ್ಧ ಎಫ್​ಐಆರ್ ದಾಖಲಾಗಿದೆ. ಗುರುವಾರ ಬೆಳಗ್ಗೆ ಸುಮಾರು 10.30ರ ವೇಳೆ ಈ ಘಟನೆ ನಡೆದಿದ್ದು, ಕಾರ್ ಮಾಲೀಕ, ವಕೀಲ ಗಿರೀಶ್ ಗಾಲ್ಫ್​ ಕ್ಲಬ್ ಆಡಳಿ ಮಂಡಳಿ ಮತ್ತು ಆಟಗಾರನ ವಿರುದ್ಧ ದೂರು ದಾಖಲಿಸಿದ್ದಾರೆ. ಸ್ಯಾಂಕಿ ರಸ್ತೆಯ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ ಬಳಿ ತೆರಳುತ್ತಿದ್ದ ವೇಳೆ ಕಾರ್ ಮುಂಭಾಗದ ಮೇಲೆ ಗಾಲ್ಫ್ ಬಾಲ್ ಬಿದ್ದಿದೆ.


ವಕೀಲ ಗಿರೀಶ್ ನೀಡಿದ ದೂರಿನಲ್ಲಿ ಏನಿದೆ?


ಏಪ್ರಿಲ್ 20, 2023ರಂದು ಬೆಳಗ್ಗೆ 10.42ರ  ಸಮಯದಲ್ಲಿ ಸ್ಯಾಂಕಿ ರಸ್ತೆಯಿಂದ ಓಲ್ಡ್​ ಹೈಗ್ರೌಂಡ್ಸ್ ಜಂಕ್ಷನ್ ಕಡೆಗೆ ತೆರಳುತ್ತಿದ್ದೆ. ಗಾಲ್ಫ್​ ಕ್ಲಬ್​ನ ಒಳಭಾಗದಿಂದ ಬಂದ ಗಾಲ್ಫ್​ ಬಾಲ್ ಕಾರಿನ ಮುಂಭಾಗದ ಗ್ಲಾಸ್​ಗೆ ಜೋರಾಗಿ ಬಂದು ಹೊಡೆದಿದೆ. ಇದರಿಂದ ಗ್ಲಾಸ್​ ಒಡೆದಿದೆ. ಜೊತೆಗೆ ಎಡಗೈ ಬೆರಳು ಗಾಯವಾಗಿದೆ.


ಅಜಾಗೃತೆಯಿಂದ ಕಾರ್​ಗೆ ಹಾನಿಯುಂಟು ಮಾಡಲಾಗಿದೆ. ಪ್ರಾಣಕ್ಕೆ ಅಪಾಯವನ್ನುಂಟು ಮಾಡಿರುವ ಗಾಲ್ಫ್ ಕ್ಲಬ್ ಆಡಳಿತ ಅಧಿಕಾರಿಗಳು ಮತ್ತ ಆಟಗಾರರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ವಕೀಲ ಗಿರೀಶ್ ಮನವಿ ಮಾಡಿಕೊಂಡಿದ್ದಾರೆ.




ಇದನ್ನೂ ಓದಿ:  Karnataka Election: ಸಿಎಂ ರೇಸ್​ನಲ್ಲಿರೋ ಬಿಜೆಪಿ ನಾಯಕರ ಹೆಸರು ಬಿಚ್ಚಿಟ್ಟ ಸುರ್ಜೇವಾಲಾ


ಗಾಲ್ಫ್ ಬಾಲ್ ಅವಾಂತರ


ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಸಿಎಂ ಆಗಿದ್ದಾಗ ಕೃಷ್ಣಾ, ಕಾವೇರಿ ನಿವಾಸಕ್ಕೆ ಗಾಲ್ಫ್​ ಚೆಂಡು ಬಿದ್ದಿತ್ತು. ಪರಮೇಶ್ವರ್ ಡಿಸಿಎಂ ಆಗಿದ್ದಾಗ ಅವರ ಕಾರಿನ ಗಾಜು ಒಡೆದಿತ್ತು. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಎತ್ತರದ ನೆಟ್ ಅಳವಡಿಸಲಾಗಿತ್ತು.

First published: