ಗೋಲ್ಡನ್​ ಸ್ಟಾರ್​ ಗಣೇಶ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ

news18
Updated:July 2, 2018, 8:49 AM IST
ಗೋಲ್ಡನ್​ ಸ್ಟಾರ್​ ಗಣೇಶ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ
  • News18
  • Last Updated: July 2, 2018, 8:49 AM IST
  • Share this:
ನ್ಯೂಸ್​ 18 ಕನ್ನಡ
ಜನ ತಮ್ಮ ಹುಟ್ಟುಹಬ್ಬವನ್ನು ಗ್ರ್ಯಾಂಡಾಗಿ ಆಚರಿಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ತಮ್ಮ ನೆಚ್ಚಿನ ನಟ, ರಾಜಕಾರಣಿಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗೇ ಮಾಡುತ್ತಾರೆ.  ಅದೇ ರೀತಿ, ನಟ ಗೋಲ್ಡನ್ ಸ್ಟಾರ್ ಗಣೇಶ್​ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ಆರ್​.ಆರ್. ನಗರದ ಅವರ ಮನೆ ಮುಂದೆ ಜಮಾಯಿಸಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದರು.

ಗಣೇಶ್​ ಅವರ ಹುಟ್ಟುಹಬ್ಬದ ಪ್ರಯುಕ್ತ ಆರೆಂಜ್​ ಚಿತ್ರತಂಡ ಟೀಸರ್​ ಬಿಡುಗಡೆ ಮಾಡಲಿದ್ದು, ಗಣೇಶ್​ ಅವರು ನಾಳೆ ಬೆಳಗ್ಗೆ ಟೀಸರ್​ ಬಿಡುಗಡೆಗೊಳಿಸಲಿದ್ದಾರೆ. ಈಗಾಗಲೇ ಗೀತಾ ಸಿನಿಮಾದ ಫಸ್ಟ್​ ಲುಕ್ ಬಿಡುಗಡೆಯಾಗಿದ್ದು, ಗಣೇಶ್​ ಅವರ ಮನೆಯ ಮುಂದೆ ಅದನ್ನು ಕಟೌಟ್​ ಹಾಕಿಸಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

38ನೇ ವರ್ಷಕ್ಕೆ ಕಾಲಿಟ್ಟಿರುವ ಗಣೇಶ್​ ಅವರ ಅಭಿಮಾನಿಗಳು ಬರ್ತಡೇ ವಿಷ್​ ಸಾಂಗ್​ ಬಿಡುಗಡೆ ಮಾಡಿ ಸಂಭ್ರಮಿಸಿದರು. ತಮ್ಮ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಗಣೇಶ್​ ಅಭಿನಯದ  'ಗೀತಾ' ಸಿನಿಮಾವನ್ನೇ ಈ ವರ್ಷ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡುತ್ತಿರುವುದಾಗಿ ಗಣೇಶ್​ ಅವರ ಪತ್ನಿ ಶಿಲ್ಪಾ ಗಣೇಶ್​ ಹೇಳಿದ್ದಾರೆ.

 
First published: July 2, 2018, 8:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading