• Home
  • »
  • News
  • »
  • state
  • »
  • Gold Rate Today: ಚಿನ್ನದ ಬೆಲೆ 49 ಸಾವಿರಕ್ಕೆ ಇಳಿಕೆ; ಬೆಳ್ಳಿ ದರದಲ್ಲೂ ದಾಖಲೆಯ ಇಳಿಕೆ

Gold Rate Today: ಚಿನ್ನದ ಬೆಲೆ 49 ಸಾವಿರಕ್ಕೆ ಇಳಿಕೆ; ಬೆಳ್ಳಿ ದರದಲ್ಲೂ ದಾಖಲೆಯ ಇಳಿಕೆ

ಚಿನ್ನ

ಚಿನ್ನ

Gold Silver Price: ಬೆಂಗಳೂರಿನಲ್ಲಿ 3 ದಿನಗಳ ಹಿಂದೆ 24 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 52 ಸಾವಿರ ಇದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು, 50,510 ರೂ. ಆಗಿದೆ. ಭಾರತದಲ್ಲಿ 5 ದಿನಗಳ ಹಿಂದೆ 71 ಸಾವಿರವಿದ್ದ 1 ಕೆಜಿ ಬೆಳ್ಳಿಯ ಬೆಲೆ ಇಂದು 63,900 ರೂ.ಗೆ ಇಳಿದಿದೆ.

  • Share this:

    Gold Price Today | ಮೂರ್ನಾಲ್ಕು ದಿನಗಳ ಹಿಂದೆ 10 ಗ್ರಾಂಗೆ 51 ಸಾವಿರ ಇದ್ದ Gold ಬೆಲೆ ಇದೀಗ 49 ಸಾವಿರಕ್ಕೆ ಇಳಿದಿದೆ. ಆದರೂ ದೇಶದ ನಾನಾ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 52,000 ರೂ. ದಾಟಿದೆ. ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಇಂದು ಯಾವ ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ಇಳಿಕೆಯಾಗಿದ್ದು, ಇಂದು 50,510 ರೂ. ಆಗಿದೆ. 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 46,310 ರೂ. ಆಗಿದೆ. ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ Gold Rate 48,470 ರೂ. ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 49,470 ರೂ. ಆಗಿದೆ.


    ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ. ಬೆಂಗಳೂರಿನಲ್ಲಿ 3 ದಿನಗಳ ಹಿಂದೆ 24 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 52 ಸಾವಿರ ಇದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು, 50,510 ರೂ. ಆಗಿದೆ. ಹಾಗೇ, 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಇಂದು 46,310 ರೂ. ಆಗಿದೆ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ.


    ನಾಲ್ಕೈದು ದಿನಗಳಿಂದ ಚಿನ್ನದ ಬೆಲೆ ಬೆಂಗಳೂರಿನಲ್ಲಿ ಏರಿಕೆಯಾಗುತ್ತಲೇ ಇದೆ. ಆದರೆ, ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಈ ನಗರಗಳಲ್ಲಿ ಚಿನ್ನದ ಬೆಲೆ 52 ಸಾವಿರ ದಾಟಿದೆ.


    ಇದನ್ನೂ ಓದಿ: Raksha Ramaiah: ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅವಿರೋಧ ಆಯ್ಕೆ ಸಾಧ್ಯತೆ


    ಭಾರತದಲ್ಲಿ ಬೆಳ್ಳಿ ಬೆಲೆಯಲ್ಲಿಯೂ ಭಾರೀ ಇಳಿಮುಖವಾಗಿದೆ. 5 ದಿನಗಳ ಹಿಂದೆ 71 ಸಾವಿರವಿದ್ದ 1 ಕೆಜಿ ಬೆಳ್ಳಿಯ ಬೆಲೆ ಇಂದು 63,900 ರೂ.ಗೆ ಇಳಿದಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಇಂದು 1 ಕೆಜಿ ಬೆಳ್ಳಿಗೆ 69,000 ರೂ. ಆಗಿದೆ. ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 69 ಸಾವಿರದ ಆಸುಪಾಸಿನಲ್ಲಿದೆ.


    ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವುದು ಈಗಿನ ಪದ್ಧತಿಯಲ್ಲ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಕೊರೋನಾದಿಂದಾಗಿ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಹೇಗೆ ಕಡಿಮೆಯಾಯಿತೋ ಅದೇರೀತಿ ಚಿನ್ನದ ಪೂರೈಕೆಯಲ್ಲಿಯೂ ವ್ಯತ್ಯಯವಾಯಿತು. ಇದರಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು.


    ಕೊರೋನಾ ವೈರಸ್​ ಹರಡುವಿಕೆ ಹೆಚ್ಚಾದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್​ಡೌನ್​ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ.

    Published by:Sushma Chakre
    First published: