HOME » NEWS » State » GOLD RATE TODAY BANGALORE GOLD RATE CROSSED 52000 GOLD PRICE IN INDIA SILVER RATE TODAY SCT

Gold Rate: ಬೆಂಗಳೂರಿನಲ್ಲಿ 52 ಸಾವಿರ ದಾಟಿದ ಚಿನ್ನದ ಬೆಲೆ; ಪ್ರಮುಖ ನಗರಗಳ ಇಂದಿನ ಚಿನ್ನದ ದರ ಹೀಗಿದೆ

Gold Price in Bangalore: ಬೆಂಗಳೂರಿನಲ್ಲಿ 2 ದಿನಗಳ ಹಿಂದೆ 24 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 51 ಸಾವಿರ ಇದ್ದ ಚಿನ್ನದ ಬೆಲೆ ಇಂದು 52,370ಕ್ಕೆ ಏರಿಕೆಯಾಗಿದೆ.

news18-kannada
Updated:January 8, 2021, 3:39 PM IST
Gold Rate: ಬೆಂಗಳೂರಿನಲ್ಲಿ 52 ಸಾವಿರ ದಾಟಿದ ಚಿನ್ನದ ಬೆಲೆ; ಪ್ರಮುಖ ನಗರಗಳ ಇಂದಿನ ಚಿನ್ನದ ದರ ಹೀಗಿದೆ
Gold
  • Share this:
Gold Price Today |ನಾಲ್ಕೈದು ದಿನಗಳ ಕೆಳಗೆ ಕಡಿಮೆಯಾಗಿದ್ದ ಚಿನ್ನದ ಬೆಲೆ 4 ದಿನಗಳಿಂದ ಮತ್ತೆ ಹೆಚ್ಚಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ 10 ಗ್ರಾಂಗೆ 49 ಸಾವಿರ ಇದ್ದ Gold ಬೆಲೆ ಇದೀಗ 51 ಸಾವಿರ ದಾಟಿದೆ. ದೇಶದ ನಾನಾ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 53,500 ರೂ. ದಾಟಿದೆ. ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಇಂದು ಯಾವ ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ಏರಿಕೆಯಾಗಿದ್ದು, ಇಂದು 52,370 ರೂ. ಆಗಿದೆ. 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 48,010 ರೂ. ಆಗಿದೆ. ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ Gold Rate 50,340 ರೂ. ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 51,340 ರೂ. ಆಗಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ. ಬೆಂಗಳೂರಿನಲ್ಲಿ 2 ದಿನಗಳ ಹಿಂದೆ 24 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 51 ಸಾವಿರ ಇದ್ದ ಚಿನ್ನದ ಬೆಲೆ ಇಂದು 52,370ಕ್ಕೆ ಏರಿಕೆಯಾಗಿದೆ. ಹಾಗೇ, 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಇಂದು 48,010 ರೂ. ಆಗಿದೆ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ.

ನಾಲ್ಕೈದು ದಿನಗಳಿಂದ ಚಿನ್ನದ ಬೆಲೆ ಬೆಂಗಳೂರಿನಲ್ಲಿ ಏರಿಕೆಯಾಗುತ್ತಲೇ ಇದೆ. ಆದರೆ, ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಈ ನಗರಗಳಲ್ಲಿ ಚಿನ್ನದ ಬೆಲೆ 54 ಸಾವಿರ ದಾಟಿದೆ.

ಇದನ್ನೂ ಓದಿ: Bird Flu: ಹಕ್ಕಿ ಜ್ವರದಿಂದ ಕೇರಳದಲ್ಲಿ 50 ಸಾವಿರ ಪಕ್ಷಿಗಳ ಹತ್ಯೆಗೆ ನಿರ್ಧಾರ; ಕರ್ನಾಟಕದ ಗಡಿಯಲ್ಲಿ ಕಟ್ಟೆಚ್ಚರ

ಭಾರತದಲ್ಲಿ ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದೆ. 1 ಕೆಜಿ ಬೆಳ್ಳಿಯ ಬೆಲೆ 2 ದಿನಗಳಲ್ಲಿ 1 ಸಾವಿರ ರೂ. ಹೆಚ್ಚಳವಾಗಿದೆ. ಇಂದು 1 ಕೆಜಿ ಬೆಳ್ಳಿಗೆ 70,200 ರೂ. ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಇಂದು 1 ಕೆಜಿ ಬೆಳ್ಳಿಗೆ 70,200 ರೂ. ಆಗಿದೆ. ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ ಇದೇ ಮೊದಲ ಬಾರಿಗೆ 74,000 ರೂ. ದಾಟಿದೆ.

ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವುದು ಈಗಿನ ಪದ್ಧತಿಯಲ್ಲ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಕೊರೋನಾದಿಂದಾಗಿ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಹೇಗೆ ಕಡಿಮೆಯಾಯಿತೋ ಅದೇರೀತಿ ಚಿನ್ನದ ಪೂರೈಕೆಯಲ್ಲಿಯೂ ವ್ಯತ್ಯಯವಾಯಿತು. ಇದರಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು.
ಕೊರೋನಾ ವೈರಸ್​ ಹರಡುವಿಕೆ ಹೆಚ್ಚಾದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್​ಡೌನ್​ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. 10 ದಿನಗಳಿಂದ ಚಿನ್ನದ ಬೆಲೆಯಲ್ಲೂ ಏರಿಳಿತಗಳು ಉಂಟಾಗುತ್ತಿದೆ.
Published by: Sushma Chakre
First published: January 6, 2021, 10:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories