Gold Price Today: ತುಸು ಏರಿಕೆ ಕಂಡ ಚಿನ್ನ , ಬೆಳ್ಳಿ- ಬೆಂಗಳೂರಿನ ಇಂದಿನ ಚಿನ್ನದ ಬೆಲೆ ಹೀಗಿದೆ

Gold And Silver Price : ಬೆಂಗಳೂರು ದಕ್ಷಿಣ ಭಾರತದ ಎಲ್ಲೆಡೆಯೂ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯನ್ನು ಖರೀದಿಸಲು ಯೋಜಿಸುವಾಗ, ಬ್ರಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಲು ಸೂಚಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Gold Rate  September 16 : ನಿನ್ನೆಯಿಂದ ಚಿನ್ನ(Gold) ಮತ್ತು ಬೆಳ್ಳಿ (Silver)ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಬಂಗಾರ ಖರೀದಿಗೆ ಇದೇ  ಸರಿಯಾದ ಸಮಯ.   ನಿನ್ನೆ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ತುಸು ಏರಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,000 ರೂ. ಇತ್ತು. ಇಂದು 46, 330 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯೂ ಕಡಿಮೆಯಾಗಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 47,000 ರೂ. ಇತ್ತು. ಇಂದು 47,330 ರೂಪಾಯಿ ಆಗಿದೆ. 10 ಗ್ರಾಂ ಚಿನ್ನಕ್ಕೆ 330  ರೂಪಾಯಿ ಏರಿಕೆ ಕಂಡಿದೆ.

ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ  ಇಲ್ಲಿದೆ ಪೂರ್ಣ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 48,330 ರೂ.ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ 43,330 ರೂ.ಇದೆ. ಹಾಗೆಯೇ ಮೈಸೂರು ಹಾಗೂ ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನ ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು ಕೂಡ.

 ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಬೆಲೆ ಏರಿಕೆಯಾಗಿದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ.

ಇದನ್ನೂ ಓದಿ: ಬದಲಾವಣೆ ಕಾಣದ ಪೆಟ್ರೋಲ್-ಡೀಸೆಲ್ ದರ; ಜಿಎಸ್​ಟಿ ವ್ಯಾಪ್ತಿಗೆ ಸೇರಲಿದೆಯೇ ತೈಲ ಬೆಲೆ?

ನಿನ್ನೆಯಿಂದ ಬೆಳ್ಳಿ ಬೆಲೆಯೂ ಗಣನೀಯ ಇಳಿಕೆ ಕಾಣುತ್ತಿದ್ದ ಬೆಳ್ಳಿ ಇಂದು ಸ್ವಲ್ಪ ಮಟ್ಟಿನ ಏರಿಕೆ ಕಂಡಿದೆ.  ನಿನ್ನೆ 1 ಕೆಜಿ ಬೆಳ್ಳಿಗೆ 200 ರೂಪಾಯಿ ಕುಸಿದಿತ್ತು. ಇಂದು ಮತ್ತೆ 200 ರೂಪಾಯಿ ಏರಿಕೆಯಾಗಿದೆ.  ನಿನ್ನೆ 1 ಕೆಜಿ ಬೆಳ್ಳಿಗೆ 63,200 ರೂ. ಇತ್ತು. ಇಂದು 1 ಕೆಜಿ ಬೆಳ್ಳಿಗೆ 63, 400  ರೂ ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ ಇಂದು 63, 400 ರೂ. ಆಗಿದೆ. ಉಳಿದಂತೆ ಚೆನ್ನೈನಲ್ಲಿ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ ರೂ. 67,700 ಇದೆ.

ಬೆಂಗಳೂರು ದಕ್ಷಿಣ ಭಾರತದ ಎಲ್ಲೆಡೆಯೂ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯನ್ನು ಖರೀದಿಸಲು ಯೋಜಿಸುವಾಗ, ಬ್ರಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಲು ಸೂಚಿಸಲಾಗುತ್ತದೆ. ಬೆಂಗಳೂರಿನಲ್ಲಿ, ಬೆಳ್ಳಿಯನ್ನು ಹಳದಿ ಲೋಹಕ್ಕೆ ಸಂಪೂರ್ಣ ಬದಲಾಗಿ  ಬಳಸಲಾಗುತ್ತದೆ. ಇದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಕೊರೋನಾ ವೈರಸ್ ಹರಡುವಿಕೆ ಹೆಚ್ಚಾದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್ ಎಸ್ಟೇಟ್ ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್ಡೌನ್ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಚಿನ್ನ ಖರೀದಿಯ ವಿಚಾರದಲ್ಲಿ ಜಿಎಸ್ಟಿ ಅಥವಾ ಸೇವಾ ತೆರಿಗೆ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಟೈಮ್ಸ್​ 100 ಜನ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ- ಮಮತಾ

ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.
Published by:Sandhya M
First published: