Gold Price Today: ಜಾಸ್ತಿಯಾಗಿಲ್ಲ ಚಿನ್ನದ ಬೆಲೆ .. ಹಬ್ಬದ ದಿನ ಚಿನ್ನ- ಬೆಳ್ಳಿ ದರ ಹೀಗಿದೆ

ದೇಶಾದ್ಯಂತ 10 ಗ್ರಾಮ್ನ 24 ಕೆರೆಟ್ ಚಿನ್ನದ ದರ: ಚೆನ್ನೈ 48,370 ಮುಂಬೈ 47000, ದೆಹಲಿ 50,300 ಕೋಲ್ಕತಾ 49, 240 ಪುಣೆ 48,740 ಅಹ್ಮದಾಬಾದ್ 47000 ರೂ ಇದೆ. ಬೆಂಗಳೂರಿನಂತೆ ಹೈದರಾಬಾದ್​ನಲ್ಲೂ 48000 ರೂ ಬೆಲೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Gold Rate on September 07 2021 | ಬಂಗಾರದ(Gold) ಮೇಲೆ ಹೂಡಿಕೆ ಮಾಡೋದು ಒಂದು ರೀತಿ ಭದ್ರತೆಯ ಪ್ರತೀಕ. ಇಂದು ಕೊಂಡ ಒಂದಿಷ್ಟೇ ಬಂಗಾರ ಕೆಲ ಸಮಯದ ನಂತರ ಭಾರೀ ಲಾಭ ತಂದುಕೊಡುತ್ತದೆ. ಬಹುಶಃ ಹಣದುಬ್ಬರದ ಪ್ರತೀ ಏರಿಳಿಕೆಯಲ್ಲೂ ಉತ್ತಮ ಬೆಲೆ ಕಾಯ್ದಿರಿಸಿಕೊಂಡಿರುವ ಏಕೈಕ ವಸ್ತು ಚಿನ್ನವೇ. ಹಾಗಾಗಿ ಪ್ರತಿದಿನ ದಿನಕ್ಕೆರಡು ಬಾರಿ ಚಿನ್ನದ ಮಾರುಕಟ್ಟೆಯಲ್ಲಿ ಹಳದಿ ಲೋಹದ(Yellow Metal) ಬೆಲೆ ಏರಿಳಿತವಾದರೂ ಜನರಿಗೆ ಅದರಲ್ಲಿ ಆಸಕ್ತಿ ಒಂಚೂರೂ ಕಡಿಮೆ ಆಗೋದೇ ಇಲ್ಲ. ಒಂದು ಕಡೆ ಹೂಡಿಕೆಯ ರೂಪದಲ್ಲಿ ಚಿನ್ನಕ್ಕೆ ಡಿಮ್ಯಾಂಡ್ ಇದ್ದರೆ, ಮತ್ತೊಂದೆಡೆ ಆಭರಣ ಕೊಳ್ಳಲು ಭಾರತೀಯರೂ ಸೇರಿದಂತೆ ನಾನಾ ದೇಶಗಳ ಜನರಿಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಇವೆಲ್ಲವೂ ಸೇರಿ ಪ್ರತಿದಿನದ ಚಿನ್ನದ ಬೆಲೆಯ(Gold Price) ಮೇಲೆ ಎಲ್ಲರಿಗೂ ಒಂದು ಕಣ್ಣು ಇದ್ದೇ ಇರುತ್ತದೆ.

ಇಂದು ಸಹ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ 24 ಕೆರೆಟ್​​ನ 10 ಗ್ರಾಮ್ ಚಿನ್ನದ ಬೆಲೆ 48,110 ರೂ ಇತ್ತು, ಇಂದು 110 ರೂ ಕಡಿಮೆಯಾಗಿದ್ದು 4800 ಸಾವಿರವಾಗಿದೆ.

ದೇಶಾದ್ಯಂತ 10 ಗ್ರಾಮ್ನ 22 ಕೆರೆಟ್ ಚಿನ್ನದ ದರ: ಚೆನ್ನೈ 44,340 ಮುಂಬೈ 46000, ದೆಹಲಿ 46,100 ಕೋಲ್ಕತಾ 46500, ಪುಣೆ 45, 290 ಅಹ್ಮದಾಬಾದ್ 45080 ರೂ ಇದೆ. ಬೆಂಗಳೂರಿನಂತೆ ಕೇರಳ ಮತ್ತು ಹೈದರಾಬಾದ್​ನಲ್ಲೂ 44000 ರೂ ಬೆಲೆ ಇದೆ.

ಇದನ್ನೂ ಓದಿ: ಮತ್ತೆ ಹೆಚ್ಚಾದ ಚಿನ್ನದ ಬೆಲೆ; ಇಂದು ಬೆಂಗಳೂರಿನಲ್ಲಿ ಎಷ್ಟಿದೆ ಗೊತ್ತಾ ರೇಟ್?

ದೇಶಾದ್ಯಂತ 10 ಗ್ರಾಮ್ನ 24 ಕೆರೆಟ್ ಚಿನ್ನದ ದರ: ಚೆನ್ನೈ 48,370 ಮುಂಬೈ 47000, ದೆಹಲಿ 50,300 ಕೋಲ್ಕತಾ 49, 240 ಪುಣೆ 48,740 ಅಹ್ಮದಾಬಾದ್ 47000 ರೂ ಇದೆ. ಬೆಂಗಳೂರಿನಂತೆ ಹೈದರಾಬಾದ್​ನಲ್ಲೂ 48000 ರೂ ಬೆಲೆ ಇದೆ.

ಬೆಳ್ಳಿ ಬೆಲೆಯಲ್ಲಿ ಸಹ ಇಳಿಕೆಯಾಗಿದ್ದು ನಿನ್ನೆ ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ 6,480 ರೂ ಇತ್ತು ಇಂದು 6, 390 ರೂ ಆಗಿದೆ.

ದೇಶಾದ್ಯಂತ ಕೆಲ ಪ್ರಮುಖ ನಗರಗಳಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ ಹೀಗಿದೆ: ಮುಂಬೈ- 6, 390 , ಚೆನ್ನೈ  6, 830, ದೆಹಲಿ 6, 390, ಕೋಲ್ಕತಾ 6, 390, ಪುಣೆ 6, 390 , ವಡೋದರಾ 6, 390, ಅಹ್ಮದಾಬಾದ್ 6, 390.

ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ.

ಕೊರೋನಾ ವೈರಸ್ ಹರಡುವಿಕೆ ಹೆಚ್ಚಾದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್ ಎಸ್ಟೇಟ್ ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್ಡೌನ್ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಚಿನ್ನ ಖರೀದಿಯ ವಿಚಾರದಲ್ಲಿ ಜಿಎಸ್ಟಿ ಅಥವಾ ಸೇವಾ ತೆರಿಗೆ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ.

ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವುದು ಈಗಿನ ಪದ್ಧತಿಯಲ್ಲ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಕೊರೋನಾದಿಂದಾಗಿ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಹೇಗೆ ಕಡಿಮೆಯಾಯಿತೋ ಅದೇ ರೀತಿ ಚಿನ್ನದ ಪೂರೈಕೆಯಲ್ಲಿಯೂ ವ್ಯತ್ಯಯವಾಯಿತು. ಇದರಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು

ಇದನ್ನೂ ಓದಿ: ಹೆಚ್ಚೇನೂ ಜಾಸ್ತಿಯಾಗಿಲ್ಲ ಚಿನ್ನದ ಬೆಲೆ; ಇಂದಿನ ದರ ಹೀಗಿದೆ ನೋಡಿ

ಆಯಾ ರಾಜ್ಯಗಳು ವಿಧಿಸುವ ಪ್ರತ್ಯೇಕ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ.
Published by:Sandhya M
First published: