ಕರೀಘಟ್ಟದಲ್ಲಿ ಲಿಥಿಯಂ ಪತ್ತೆ ಬೆನ್ನಲ್ಲೇ ಗೋಲ್ಡ್ ಮೈನ್ ಸುದ್ದಿ; ಬ್ರಿಟಿಷರ ಕಾಲದಲ್ಲೇ ಹುಂಜನಕೆರೆಯಲ್ಲಿತ್ತು ಚಿನ್ನ ನಿಕ್ಷೇಪ

ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇತ್ತು ಎನ್ನಲಾಗ್ತಿದ್ದು ಬ್ರಿಟೀಷದ ಕಾಲದಲ್ಲಿ ಇಲ್ಲಿ ಚಿನ್ನ ತೆಗೆಯಲು ತೋಡಿದ್ದ ಎರಡು ಮೂರು ಸುರಂಗಗಳು ಹಾಗೆಯೇ ಇವೆ.

news18-kannada
Updated:February 26, 2020, 11:06 AM IST
ಕರೀಘಟ್ಟದಲ್ಲಿ ಲಿಥಿಯಂ ಪತ್ತೆ ಬೆನ್ನಲ್ಲೇ ಗೋಲ್ಡ್ ಮೈನ್ ಸುದ್ದಿ; ಬ್ರಿಟಿಷರ ಕಾಲದಲ್ಲೇ ಹುಂಜನಕೆರೆಯಲ್ಲಿತ್ತು ಚಿನ್ನ ನಿಕ್ಷೇಪ
ಹುಂಜನಕೆರೆಯಲ್ಲಿ ಚಿನ್ನದ ಗಣಿಗಾರಿಕೆ ನಡೆದಿದ್ದಕ್ಕೆ ಕುರುಹು
  • Share this:
ಮಂಡ್ಯ: ಕೆಲ ದಿನಗಳ‌ ಹಿಂದೆಯಷ್ಟೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಹಾಗೂ ಮರಳಗಾಲ ಪ್ರದೇಶದಲ್ಲಿ ಎಲೆಕ್ಟ್ರಿಕಲ್ ವಾಹನ ತಯಾರಿಕೆಗೆ ಬೇಕಾದ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆಯಾಗಿತ್ತು. ಈಗಾಗಲೇ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಿಜ್ಞಾನಿಗಳ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಅತ್ಯಮೂಲ್ಯವಾದ ಖನಿಜ ಅಮೂಲ್ಯ ಖನಿಜ ಸಂಪತ್ತಾದ  ಚಿನ್ನದ ನಿಕ್ಷೇಪ ಕೂಡ ಇತ್ತೆಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಅದೂ ಸಹ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ತಪ್ಪಲಿನ ಸಾಲಿನಲ್ಲೆ ಇದೆ ಎನ್ನಲಾಗುತ್ತಿರುವುದು ಅಚ್ಚರಿಯ ಸಂಗತಿ.

ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇತ್ತು ಎನ್ನಲಾಗ್ತಿದ್ದು ಬ್ರಿಟೀಷದ ಕಾಲದಲ್ಲಿ ಇಲ್ಲಿ ಚಿನ್ನ ತೆಗೆಯಲು ತೋಡಿದ್ದ ಎರಡು ಮೂರು ಸುರಂಗಗಳು ಹಾಗೆಯೇ ಇವೆ. ಇಲ್ಲಿ‌ ಬ್ರಿಟೀಷರ ಕಾಲದಲ್ಲಿ ಚಿನ್ನದ ನಿಕ್ಷೇಪ ತೆಗೆಯುತ್ತಿದ್ದ ಬಗ್ಗೆ ಗೆಜೆಟಿಯರ್​ನಲ್ಲೂ ಮಾಹಿತಿ ಲಭ್ಯವಾಗಿದೆ.ಇತಿಹಾಸಕಾರರು ಕೂಡ ಈ ಬಗ್ಗೆ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಯುವತಿಯ ಶೂಟೌಟ್​ ಪ್ರಕರಣ​; ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ

ಇನ್ನು ಈ  ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎಂದು  ಜನರು ಇಂದಿಗೂ ಮಾತಾನಾಡಿಕೊಳ್ಳುತ್ತಾರೆ. ಹೀಗಾಗಿಯೇ ಈ ಅರಣ್ಯ ಪ್ರದೇಶವನ್ನು ಇಂದಿಗೂ ಇಲ್ಲಿನ ಜನರು ಬಂಗಾರದ ಗುಡ್ಡ ಅಂತಾನೂ ಕರೆಯುತ್ತಾರೆ. ಇದೀಗ ಈ ಅರಣ್ಯ ಪ್ರದೇಶದಲ್ಲಿ ಮೂರು ಸುರಂಗಗಳು ಪತ್ತೆಯಾಗಿವೆ. ಅವು ಬ್ರಿಟಿಷ್ ಕಾಲದಲ್ಲಿ ಚಿನ್ನವನ್ನು ಹೊರತೆಗೆಯಲು ಅಥವಾ ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಲು ಕೊರೆಯಲಾಗಿರುವ ಸುರಂಗಗಳಾಗಿವೆ. ಬ್ರಿಟಿಷ್ ವಿಜ್ಞಾನಿಗಳು 1882 ರಿಂದ 1913 ರವರೆಗೆ ಈ ಸ್ಥಳದಲ್ಲಿ ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಿದ್ದರು ಎಂದು ಸಹ ಹೇಳಲಾಗುತ್ತಿದೆ. ಈ ಸಂಶೋಧನೆ ಬಗ್ಗೆ ಮಂಡ್ಯ ಗೆಜೆಟ್‌ನಲ್ಲೂ ಸಹ ಉಲ್ಲೇಖ ಆಗಿರುವುದು ಗಮನಾರ್ಹವಾಗಿದೆ.

Mandya Gazettier
ಮಂಡ್ಯ ಗೆಜೆಟಿಯರ್


ಅಲ್ಲದೇ, ಇಂದಿಗೂ ಸಹ ಹುಂಜನಕೆರೆ ಅರಣ್ಯ ಪ್ರದೇಶವನ್ನು ಇಲ್ಲಿನ ಸ್ಥಳೀಯ ಜನರು ಬಂಗಾರದ ಗುಡ್ಡ ಎಂದೇ ಕರೆಯುತ್ತಾರೆ‌. ಇಲ್ಲಿ ಚಿನ್ನಕ್ಕಾಗಿ ನಡೆದ ಸಂಶೋಧನೆಯಿಂದಾಗಿ ಜನರು ಅಂದಿನಿಂದ ಇಂದಿನವರೆಗೂ ಇಲ್ಲಿ ಅಪಾರ ಪ್ರಮಾಣದ ಚಿನ್ನ ಇದೆ ಎಂದು ನಂಬಿಕೊಂಡಿದ್ದು ಆ ಕಾರಣಕ್ಕೆ ಬಂಗಾರದ ಗುಡ್ಡ ಎನ್ನುತ್ತಾರೆ. ಈ ಪ್ರದೇಶದ ನಕಾಶೆಯಲ್ಲೂ ಸಹ ಬಂಗಾರದ ಗಣಿ ಎಂದೇ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಅಂದು ಬ್ರಿಟಿ ಷ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪಳೆಯುಳಿಕೆಗಳು ಇಂದಿಗೂ ಸಹ ಇರುವುದು ಅಚ್ಚರಿಯಾಗಿದೆ. ಸದ್ಯ ಇಲ್ಲಿರುವ ಮೂರು ಸುರಂಗಗಳು  ಮುಚ್ಚಿಕೊಂಡಿದ್ದು, ಸ್ವಲ್ಪ ಮಾತ್ರ ಕಾಣಲು ಸಿಗುತ್ತಿದೆ. ಇವುಗಳನ್ನು ಮತ್ತಷ್ಟು ಉತ್ಖನನದ ಮೂಲಕ ಚಿನ್ನದ ನಿಕ್ಷೇಪ ಬಗ್ಗೆ ಸಂಶೋಧನೆ ಮಾಡುವ ಅಗತ್ಯ ಇದೆ ಎಂದು ಸ್ಥಳೀಯರು ಹೇಳುತ್ತಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:February 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ