Gold Mine: ಕೊಪ್ಪಳದ ಕುಷ್ಟಗಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ? ಕೆಲವೇ ದಿನಗಳಲ್ಲಿ ರೈತರ ಭೂಮಿಗೆ ಬಂಗಾರದ ಬೆಲೆ

ಕೊಪ್ಪಳದ ಕುಷ್ಟಗಿ ಭಾಗದಲ್ಲಿ ಚಿನ್ನದ ಅದಿರು ಪತ್ತೆ ವಿಷಯ ಚರ್ಚೆಗೆ ಗ್ರಾಸವಾಗಿದೆ. ಚಿನ್ನದ ಅದಿರು ಇರೋದು ನಿಜವಾದರೆ  ಹಿಂದುಳಿದಿರುವ ಕುಷ್ಟಗಿ ತಾಲೂಕಿನ ಗ್ರಾಮದ ಭೂಮಿಗೆ ಬಂಗಾರದ ಬೆಲೆ ಬರೋದಂತೂ ಪಕ್ಕಾ.

ಚಿನ್ನದ ನಿಕ್ಷೇಪಕ್ಕಾಗಿ ಶೋಧನೆ

ಚಿನ್ನದ ನಿಕ್ಷೇಪಕ್ಕಾಗಿ ಶೋಧನೆ

  • Share this:
ಕೊಪ್ಪಳ(ಅ.15): ಕೊಪ್ಪಳ(Koppal) ಜಿಲ್ಲೆಯ ಕುಷ್ಟಗಿ(Kushtagi) ತಾಲೂಕನ್ನು ಬರಡು ಭೂಮಿಯನ್ನು ಹೊಂದಿರುವ ತಾಲೂಕು ಎನ್ನುತ್ತಾರೆ. ಆದರೆ ಈ ತಾಲೂಕಿನ ಭೂ ಗರ್ಭದಲ್ಲಿ ಚಿನ್ನ(Gold), ಮ್ಯಾಂಗನೀಸ್(Manganese) ಸೇರಿದಂತೆ ವಿವಿಧ ಖನಿಜ ಸಂಪತ್ತು ಇದೆ ಎಂದು ಮೊದಲಿನಿಂದಲೂ ಜನ ಹೇಳುತ್ತಾರೆ. ಅದಕ್ಕೆ ಇಂಬು ಕೊಡುವಂತೆ ಈಗಿನ ಕೇಂದ್ರ ಸರಕಾರದ(Central Government) ಸಂಸ್ಥೆಯೊಂದು ಸಮೀಕ್ಷೆ ನಡೆಸುತ್ತಿದ್ದು, ಇಲ್ಲಿ ಚಿನ್ನವಿದೆ ಎಂಬ ಮಾಹಿತಿ ಇದೆ. ಆದರೆ ಈ ಚಿನ್ನ ಎಷ್ಟು ಪ್ರಮಾಣದಲ್ಲಿದೆ? ಚಿನ್ನದ ಗಣಿಗಾರಿಕೆ ಮಾಡುವಷ್ಟು ಇದೆಯೆ? ಇಲ್ಲಿ ಯಾವ ಪ್ರಮಾಣದಲ್ಲಿ ಚಿನ್ನವಿದೆ ಎಂಬ ಅಧ್ಯಯನ ನಡೆಯುತ್ತಿದೆ. ಈಗಲೇ ಇಲ್ಲಿ ಚಿನ್ನದ ನಿಕ್ಷೇಪ ಸಿಕ್ಕಿದೆ ಎಂದು ಹೇಳೋದು ಕಷ್ಟವೆಂದು ಕೊಪ್ಪಳ ಜಿಲ್ಲಾಧಿಕಾರಿಗಳು(Koppal DC) ಹೇಳಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆ ಆಗಿದೆಯಂತೆ. ರೈತರ ಭೂಮಿಗೆ ಬಂಗಾರದ ಬೆಲೆ ಬಂತು ನೋಡಿ ಎಂಬ ಚರ್ಚೆಗಳು ಕೊಪ್ಪಳ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದೆ. ಹಾಗಾದ್ರೆ ವಾಸ್ತವದಲ್ಲಿ  ಆಗಿದ್ದೇನೂ ಅಂದ್ರೆ ಈಗಷ್ಟೇ ಸರ್ವೆ ನಡೆದಿದೆ. ಚಿನ್ನದ ನಿಕ್ಷೇಪ ಸಿಕ್ಕಿದೆ ಎಂಬ ಸ್ಥಳ ಪರಿಶೀಲನೆಯನ್ನು ಕುಷ್ಟಗಿಯ ತಹಶೀಲ್ದಾರ್ ಮಾಡುತ್ತಿದ್ದಾರೆ. ಪರೀಕ್ಷೆಗೆ ಅದಿರು ಮಾದರಿಯು ಸಿದ್ದಗೊಂಡಿವೆ. ಈ ದೃಶ್ಯಗಳನ್ನು  ಕುತೂಹಲದಿಂದ ಜನ ನೋಡುತ್ತಿದ್ದಾರೆ. ಇಂಥ  ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಾರಿನಾಳ ಗ್ರಾಮದಲ್ಲಿ.

ಭಾರತ ಸರ್ಕಾರದ ಜೀಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಸಿಬ್ಬಂದಿ ಕಳೆದ 15 ದಿನದಿಂದ ನಾರಿನಾಳ ಗ್ರಾಮದಲ್ಲಿ ಅದಿರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಾರಿನಾಳ ಗ್ರಾಮದ ಸರ್ವೆ ನಂಬರ್ 38ರಲ್ಲಿ 133 ಅಡಿ ಆಳದಲ್ಲಿ ಡಿಗ್ಗಿಂಗ್ ಮಾಡಿ, ಅದಿರು ಮಾದರಿ ತೆಗೆದಿದ್ದಾರೆ. ಹೀಗೆ ನಮ್ಮ ಭಾಗದಲ್ಲಿ ಅದಿರು ಮಾದರಿ ಪರೀಕ್ಷೆಗೆ ಕಳುಹಿಸುವುದು ಇದೇ ಮೊದಲಲ್ಲ ಅಂತಾರೆ ಸ್ಥಳೀಯರು.

ಇದನ್ನೂ ಓದಿ:Gold Price Today: ಆಭರಣ ಪ್ರಿಯರಿಗೆ ಕಹಿ ಸುದ್ದಿ, ಇಂದು ಮತ್ತೆ ಏರಿಕೆ ಕಂಡ ಚಿನ್ನ-ಬೆಳ್ಳಿ ಬೆಲೆ

ಕೇಂದ್ರ ಸರ್ಕಾರದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಕಾರ್ಮಿಕರು 15 ದಿನದಿಂದ ಕೆಲಸ ಮಾಡುತ್ತಿದ್ದಾರೆ. ಭೂ ಗರ್ಭದಲ್ಲಿನ ಅದಿರು ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಲು ಸಿದ್ದತೆ ಮಾಡಿಕೊಂಡಿದೆ. ಕುಷ್ಟಗಿ ತಾಲೂಕಿನ ಗಡಿಯಲ್ಲಿರುವ ಮ್ಯಾದರಡೊಕ್ಕಿ ಗ್ರಾಮದಲ್ಲಿ ಕಬ್ಬಿಣದ ಅದಿರು ಸಿಕ್ಕಿರುವುದು ಪಕ್ಕಾ ಆಗಿದ್ದು, ಇದರ ಬೆನ್ನೆಲ್ಲೆ ನಾರಿನಾಳ ಗ್ರಾಮ ಸೇರಿದಂತೆ ತಾವರಗೇರಾ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಬಂಗಾರದ ಅದಿರು ಇದ್ದು,  ‌ಶೋಧ ನಡೆಯುತ್ತಿದೆ ಎನ್ನಲಾಗುತ್ತಿದೆ‌.

ಜಿಯೋಲಾಜಿಕಲ್ ಸರ್ವೆ  ಆಫ್ ಇಂಡಿಯಾದ ಕಾರ್ಯಾಚರಣೆ ಬಗ್ಗೆ ಕೊಪ್ಪಳ ಜಿಲ್ಲೆಯಲ್ಲಿ ವಿಭಿನ್ನ ಚರ್ಚೆ ಹುಟ್ಟು ಹಾಕಿದೆ. ಈ ಭೂಮಿಯಲ್ಲಿ ಚಿನ್ನದ ಅದಿರು ಪತ್ತೆ ಆಗಿದೆ  ಎಂಬ  ವದಂತಿ ಹರಡಿದೆ. ಈ ಬಗ್ಗೆ ತಹಶೀಲ್ದಾರ್ ಕೊಪ್ಪಳ ಜಿಲ್ಲಾಧಿಕಾರಿಗಳು ಹೇಳಿದ್ದು, ಇಲ್ಲಿ ಸಮಿಕ್ಷೆ ನಡೆದಿದೆ. ಆದರೆ ಇನ್ನೂ ಚಿನ್ನ ಇರುವ ಬಗ್ಗೆ ಖಚಿತತೆ  ಇಲ್ಲ, ಇಲ್ಲಿ ಪರೀಕ್ಷೆಯ ನಂತರ ತಜ್ಞರು ವರದಿ ನೀಡಿದ ನಂತರ ಇಲ್ಲಿ ಸಾಕಷ್ಟು ಪ್ರಮಾಣದ ಚಿನ್ನ ಸಿಕ್ಕರೆ ಗಣಿಗಾರಿಕೆ ನಡೆಸಬಹುದು ಎಂದು ಹೇಳಿದ್ದಾರೆ. ಇದೇ ಅಭಿಪ್ರಾಯವನ್ನು ಕುಷ್ಟಗಿ ತಹಶೀಲ್ದಾರ್ ಸಹ ಹೇಳಿದ್ದಾರೆ.

ಕೊಪ್ಪಳದ ಕುಷ್ಟಗಿ ಭಾಗದಲ್ಲಿ ಚಿನ್ನದ ಅದಿರು ಪತ್ತೆ ವಿಷಯ ಚರ್ಚೆಗೆ ಗ್ರಾಸವಾಗಿದೆ. ಚಿನ್ನದ ಅದಿರು ಇರೋದು ನಿಜವಾದರೆ  ಹಿಂದುಳಿದಿರುವ ಕುಷ್ಟಗಿ ತಾಲೂಕಿನ ಗ್ರಾಮದ ಭೂಮಿಗೆ ಬಂಗಾರದ ಬೆಲೆ ಬರೋದಂತೂ ಪಕ್ಕಾ.
Published by:Latha CG
First published: