HOME » NEWS » State » GOLD COINS RAINED IN BANGALORE RURAL DISTRICT ANEKAL HERE IS THE SHOCKING NEWS SCT

ಆನೇಕಲ್ ಬಳಿ ಚಿನ್ನದ ಮಳೆ!; ಉರ್ದು ಭಾಷೆ ಮುದ್ರಿಸಿದ ನಾಣ್ಯಗಳಿಗೆ ಮುಗಿಬಿದ್ದ ಜನರು

ಆನೇಕಲ್ ಗ್ರಾಮದ ರಸ್ತೆ ಅಕ್ಕಪಕ್ಕದ ನಿವಾಸಿಗಳಿಗೆ ಉರ್ದು ಭಾಷೆ ಮುದ್ರಿಸಿದ ಕೆಲ ನಾಣ್ಯಗಳು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಬಾಗಲೂರು ಬಳಿ ನಿನ್ನೆ ಸಂಜೆ ಮಳೆ ಸುರಿದಿದ್ದು, ಜೊತೆಗೆ ಚಿನ್ನದ ನಾಣ್ಯಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

news18-kannada
Updated:October 11, 2020, 11:28 AM IST
ಆನೇಕಲ್ ಬಳಿ ಚಿನ್ನದ ಮಳೆ!; ಉರ್ದು ಭಾಷೆ ಮುದ್ರಿಸಿದ ನಾಣ್ಯಗಳಿಗೆ ಮುಗಿಬಿದ್ದ ಜನರು
ಆನೇಕಲ್ ಬಳಿ ಚಿನ್ನದ ನಾಣ್ಯಗಳನ್ನು ಹೆಕ್ಕಲು ಮುಗಿಬಿದ್ದ ಜನರು
  • Share this:
ಆನೇಕಲ್ (ಅ. 11): ಇತ್ತೀಚಿನ ವರ್ಷಗಳಲ್ಲಿ ಅಮ್ಲ ಮಳೆ ಸುರಿದ ಬಗ್ಗೆ, ಮಳೆ ಜೊತೆ ಮೀನುಗಳು ಸುರಿದ ಬಗ್ಗೆ ಕೇಳಿದ್ದೇವೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ನಿನ್ನೆ ಸಂಜೆ ಚಿನ್ನದ ಮಳೆಯಾಗಿದೆ!. ಆನೇಕಲ್ ಗ್ರಾಮದ ರಸ್ತೆ ಅಕ್ಕಪಕ್ಕದ ನಿವಾಸಿಗಳಿಗೆ ಉರ್ದು ಭಾಷೆ ಮುದ್ರಿಸಿದ ಕೆಲ ನಾಣ್ಯಗಳು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ.  ಹೌದು, ಆನೇಕಲ್ ಸಮೀಪದಲ್ಲಿರುವ, ತಮಿಳುನಾಡಿಗೆ ಸೇರಿರುವ ಬಾಗಲೂರು ಬಳಿ ನಿನ್ನೆ ಸಂಜೆ ಮಳೆ ಸುರಿದಿದ್ದು, ಜೊತೆಗೆ ಚಿನ್ನದ ನಾಣ್ಯಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಬಾಗಲೂರು ಮತ್ತು ಹೊಸೂರು ಹೆದ್ದಾರಿ ಅಕ್ಕಪಕ್ಕದಲ್ಲಿ ಚಿನ್ನದ ನಾಣ್ಯಗಳನ್ನು ಕಂಡ ಸ್ಥಳೀಯರು ಮುಗಿ ಬಿದ್ದು ಬಾಚಿಕೊಂಡಿದ್ದಾರೆ. ಒಂದು ಗ್ರಾಂ ತೂಕದ ನೂರಾರು ಉರ್ದು ಭಾಷೆ ಮುದ್ರಿತ ನಾಣ್ಯಗಳು ಸ್ಥಳೀಯರಿಗೆ ದೊರೆತಿವೆ. ಮಳೆಯಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಚಿನ್ನದ ನಾಣ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ. 

ಚಿನ್ನದ ಮಳೆ ವಿಚಾರವನ್ನು ಅಲ್ಲಗಳೆದಿರುವ ಧರ್ಮಪುರಿ ಜಿಲ್ಲಾಡಳಿತ ಪತ್ತೆಯಾಗಿರುವ ನಾಣ್ಯಗಳ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿದೆ. ಈಗಾಗಲೇ ಸ್ಥಳೀಯರಿಂದ ನಾಣ್ಯಗಳನ್ನು ಸಂಗ್ರಹಿಸಿರುವ ಅಧಿಕಾರಿಗಳ ನಾಣ್ಯಗಳು ಅಸಲಿತನ ತಿಳಿಯಲು ಜಿಲ್ಲಾ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಸ್ಥಳೀಯ ಬಾಗಲೂರು ಪೊಲೀಸರು ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪತ್ತೆಯಾದ ನಾಣ್ಯಗಳನ್ನು ಸ್ಥಳೀಯ ಅಕ್ಕಸಾಲಿಗರ ಬಳಿ ಪರಿಶೀಲನೆಗೆ ಒಳಪಡಿಸಿದ್ದು, ನಕಲಿ ಚಿನ್ನದ ನಾಣ್ಯಗಳು ಎಂದು ತಿಳಿದು ಬಂದಿದೆ ಎನ್ನಲಾಗಿದೆ.

Gold Coins Rained in Bangalore Rural District Anekal here is the Shocking News
ಆನೇಕಲ್ ಬಳಿ ಸಿಕ್ಕಿದ ಚಿನ್ನದ ನಾಣ್ಯಗಳು


ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ಇಂದು ಕೂಡ ಮಳೆ ಸಾಧ್ಯತೆ; ಆರೆಂಜ್ ಅಲರ್ಟ್​ ಘೋಷಣೆ

ಅಂದಹಾಗೆ ಆಂಧ್ರ ಪ್ರದೇಶ ಗಡಿ ಮತ್ತು ತಮಿಳುನಾಡು ಗಡಿಯಲ್ಲಿ ನಕಲಿ ಚಿನ್ನ ಮಾರಾಟ ಧಂಗೆಕೋರರು ಸಕ್ರಿಯವಾಗಿದ್ದಾರೆ. ಅವರು ಜನಸಾಮಾನ್ಯರನ್ನು ವಂಚಿಸಲು ಇಂತಹ ಚಿನ್ನದ ಬಣ್ಣ ಲೇಪಿತ ನಾಣ್ಯಗಳನ್ನು ತೋರಿಸಿ ವಂಚಿಸುತ್ತಾರೆ. ತಮಗೆ ನಿಧಿ ರೂಪದಲ್ಲಿ ಚಿನ್ನದ ನಾಣ್ಯಗಳು ದೊರೆತಿವೆ ಎಂದು ವಂಚಿಸಿರುವ ಪ್ರಕರಣಗಳು ಸಹ ಸಾಕಷ್ಟು ನಡೆದಿದ್ದು, ಇದು ಅದರ ಭಾಗವಾಗಿರಬಹುದು. ಹಾಗಾಗಿ ಚಿನ್ನದ ನಾಣ್ಯ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಬಾಗಲೂರು ಪೊಲೀಸರು ತಿಳಿಸಿದ್ದಾರೆ.
Youtube Video

ಒಟ್ಟಿನಲ್ಲಿ, ಸಿಕ್ಕಿರುವ ನಾಣ್ಯಗಳು ನಕಲಿಯೋ ಅಸಲಿಯೋ ಗೊತ್ತಿಲ್ಲ. ಆದರೆ ಬಾಗಲೂರು ಸುತ್ತಮುತ್ತಲಿನ ಜನ ಮಾತ್ರ ಇಂದು ಸಹ ಚಿನ್ನದ ನಾಣ್ಯಗಳ ಬೇಟೆ ಮುಂದುವರಿಸಿದ್ದು, ಜನ ಮಾತ್ರ ಗುಂಪು ಗುಂಪಾಗಿ ಬಾಗಲೂರಿನತ್ತ ಬರುವುದು ಮಾತ್ರ ನಿಂತಿಲ್ಲ.
Published by: Sushma Chakre
First published: October 11, 2020, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories