Gold Price Today: ರಾಜ್ಯದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ -ಪ್ರಮುಖ ನಗರಗಳ ಚಿನ್ನದ ದರ ಹೀಗಿದೆ..

Gold And Silver Price Today: ಬೆಂಗಳೂರು ದಕ್ಷಿಣ ಭಾರತದಲ್ಲಿ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯನ್ನು ಖರೀದಿಸಲು ಯೋಜಿಸುವಾಗ, ಬ್ರಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Gold Rate on September 21 2021: ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ನಿನ್ನೆ ಮತ್ತೆ ಚಿನ್ನದ ರೇಟ್ ಕಮ್ಮಿಯಾಗಿತ್ತು. ಆದರೆ ಇಂದು ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದ್ದು, ಆದರೆ ಹೆಚ್ಚೇನೂ ವ್ಯತ್ಯಾಸವಾಗದ ಹಿನ್ನಲೆ  ಚಿನ್ನ ಖರೀದಿಸಲು ಇದೇ ಸಕಾಲವಾಗಿದೆ. 10 ಗ್ರಾಂ ಚಿನ್ನಕ್ಕೆ 200 ರೂಪಾಯಿ ಏರಿಕೆ ಕಂಡಿದೆ.

ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,130 ರೂ. ಇತ್ತು. ಇಂದು 10 ಗ್ರಾಂ ಚಿನ್ನದ ಬೆಲೆ 45,330 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯೂ  ಹೆಚ್ಚಾಗಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,130 ರೂ. ಇತ್ತು. ಇಂದು 46,330 ರೂಪಾಯಿ ಆಗಿದೆ.

ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) ಇಂದು 47,460 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ 43,500 ರೂ.ಇದೆ. ಹಾಗೆಯೇ ಮೈಸೂರು ಹಾಗೂ ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ವಿವಿಧ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್​ ಚಿನ್ನದ ಬೆಲೆ

ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ, ವಿಶಾಖಪಟ್ಟಣಂ, ವಿಜಯವಾಡ, ಮುಂಬೈ 45, 330, ಹೈದರಾಬಾದ್ 43,500, ಭುವನೇಶ್ವರ, ಅಹಮದಾಬಾದ್, ಕೇರಳ 43, 500, ಪುಣೆ ₹44,670,  ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ 43, 740 ದೆಹಲಿ 45, 650,  ಕೊಲ್ಕತ್ತಾ 45, 550, ಲಕ್ನೋ 45, 650, ಕೊಯಮತ್ತೂರು 43, 740, ಮಧುರೈ, ಜೈಪುರ, ಅಹಮದಾಬಾದ್​ನಲ್ಲಿ ಹೆಚ್ಚು ಕಡಿಮೆ ಇದೇ ಬೆಲೆ ಇದೆ. ಚಂಡೀಗಢದಲ್ಲಿ 22 ಕ್ಯಾರೆಟ್​ ಚಿನ್ನದ ಬೆಲೆ 44,990 ರೂ.ಇದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ; ನಿಮ್ಮ ನಗರದಲ್ಲಿ ಇಂದಿನ ಬೆಲೆ ಎಷ್ಟು?

ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.

ನಿನ್ನೆಯಿಂದ ಬೆಳ್ಳಿ ಬೆಲೆಯೂ (Silver Rate) ಯಥಾಸ್ಥಿತಿ ಕಾಯ್ದುಕೊಳ್ಳುತ್ತಿದ್ದ ಬೆಳ್ಳಿ ಬೆಲೆ. ಇಂದೂ ಸ್ವಲ್ಪ ಕಡಿಮೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 60,000 ರೂ. ಇತ್ತು. ಇಂದೂ 59, 800 ರೂ ಆಗಿದ್ದು 200 ರೂ ಕಡಿಮೆಯಾಗಿದೆ. . ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ ಇಂದು 60,000 ರೂ. ಇದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 64,800 ರೂ. ಆಸುಪಾಸಿನಲ್ಲಿದೆ.

ಬೆಳ್ಳಿ ದರಗಳಿಗೆ ಸಂಬಂಧಿಸಿದಂತೆ ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ ಅವುಗಳು ಹೇಗೆ ಬದಲಾಗುತ್ತದೆ ಎಂದು ಖಚಿತವಾಗಿ ತಿಳಿದಿಲ್ಲ. ಬೆಳ್ಳಿಯನ್ನು ಕಡಿಮೆ ಮಟ್ಟದಲ್ಲಿ ಹೂಡಿಕೆ ಮಾಡುವುದು ಮತ್ತು ಉನ್ನತ ಮಟ್ಟದಲ್ಲಿ ಮಾರಾಟ ಮಾಡುವುದು ಅತ್ಯಂತ ಕಷ್ಟಕರವಾಗಿದೆ. ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ ಬೆಂಗಳೂರಿನಲ್ಲಿ ಬೆಳ್ಳಿ ದರಗಳು ಕೆಲವು ಹಂತಗಳಲ್ಲಿ ಹೆಚ್ಚಾಗುತ್ತದೆ.

ಬೆಂಗಳೂರು ದಕ್ಷಿಣ ಭಾರತದಲ್ಲಿ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯನ್ನು ಖರೀದಿಸಲು ಯೋಜಿಸುವಾಗ, ಬ್ರಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸುವುದು ಉತ್ತಮ. ಬೆಂಗಳೂರಿನಲ್ಲಿ ಹೂಡಿಕೆ ಉದ್ದೇಶಗಳಿಗಾಗಿ ಬೆಳ್ಳಿ ಅತ್ಯಂತ ಜನಪ್ರಿಯ ವಸ್ತು.

ಇದನ್ನೂ ಓದಿ: ಇಂದು ಮತ್ತೆ ಇಳಿಕೆ ಕಂಡ ಚಿನ್ನ; ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ..!

ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.
Published by:Sandhya M
First published: