ಪ್ರತಿನಿತ್ಯದ ವಹಿವಾಟಿನ ಮೇಲೆ ಪರಿಣಾಮ ಬೀರುವ ಪೆಟ್ರೋಲ್​, ಚಿನ್ನದ ದರ ಇಂದು ಎಷ್ಟಿದೆ ಗೊತ್ತಾ?

ಇಂದು ಪೆಟ್ರೋಲ್​ ಹಾಕುಸುತ್ತೀರಾ ಇಲ್ಲ ಚಿನ್ನ ಕೊಳ್ಳಲು ಮುಂದಾಗುತ್ತೀರಾ ಎಂದಾದರೆ ಇಂದಿನದ ದರ ತಿಳಿಯುವುದು ಅವಶ್ಯಕ

Seema.R | news18
Updated:March 12, 2019, 10:14 AM IST
ಪ್ರತಿನಿತ್ಯದ ವಹಿವಾಟಿನ ಮೇಲೆ ಪರಿಣಾಮ ಬೀರುವ ಪೆಟ್ರೋಲ್​, ಚಿನ್ನದ ದರ ಇಂದು ಎಷ್ಟಿದೆ ಗೊತ್ತಾ?
ಸಾಂದರ್ಭಿಕ ಚಿತ್ರ
  • News18
  • Last Updated: March 12, 2019, 10:14 AM IST
  • Share this:
ಜಾಗತಿಕ ಕಚ್ಛಾ ತೈಲ ಬೆಲೆ ಆಧಾರಿಸಿ ದೇಶದಲ್ಲಿ ಪ್ರತಿನಿತ್ಯವೂ ಪೆಟ್ರೋಲ್​ ದರದಲ್ಲಿ ಬದಲಾವಣೆಯಾಗುತ್ತಿರುತ್ತದೆ. ಸದ್ಯದ ಮಟ್ಟಿಗೆ ಪೆಟ್ರೋಲ್​ ಸಮಸ್ಥಿತಿಯನ್ನು ಕಾಯ್ದುಗೊಂಡು ಬಂದಿದ್ದು, ದರದಲ್ಲಿ ದೊಡ್ಡ ವ್ಯತ್ಯಾಸವೇನು ಕಂಡು ಬಂದಿಲ್ಲ.

ಅಂತರಾಷ್ಟ್ರೀಯ ಕಚ್ಛಾ ತೈಲ ಮಾರುಕಟ್ಟೆ ಹಾಗೂ ರೂಪಾಯಿ ಬೆಲೆಗಳು ಕೂಡ ಪೆಟ್ರೋಲ್​ ಬೆಲೆ ಮೇಲೆ ಪ್ರಭಾವಹೊಂದಿದೆ. ಈ ದರಗಳು ಪ್ರತಿನಿತ್ಯ ಬದಲಾವಣೆಯಾಗುತ್ತಿದ್ದು, ರಾಜ್ಯಗಳ ತೆರಿಗೆ ಆಧಾರಿಸಿ ದರದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ದೂರದೂರು ಪ್ರಯಾಣಿಸುವ ಗ್ರಾಹಕರಿಗೆ  ಪೆಟ್ರೋಲ್​ ಬೆಲೆ ಬಗ್ಗೆ ಅರಿವಿರುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಪೆಟ್ರೋಲ್​ ಬೆಲೆ ಬಗ್ಗೆ ಇಲ್ಲಿದೆ ಕೊಂಚ ಮಾಹಿತಿ.

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್​ ದರ 72.31 ರೂ ಇದ್ದರೆ, ಡಿಸೇಲ್​ ದರ 67.54 ರೂ ಇದೆ. ಇನ್ನು ರಾಜ್ಯದಲ್ಲಿ 74.71 ರೂ ಇದ್ದರೆ, ಡಿಸೇಲ್​ ದರ 69.78 ರೂ ಇದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಪ್ರತಿ ಬ್ಯಾರಲ್​ಗೆ 3894 ರೂ ಇದೆ.

ಇದನ್ನು ಓದಿ: ಕಡಿಮೆ ಬೆಲೆಗೆ ವಿದೇಶದಿಂದ ಚಿನ್ನ ತರುವುದು ಎಷ್ಟು ಸುಲಭ ಗೊತ್ತಾ!

ಬಂಗಾರ ಕೂಡ ಕೇವಲ ಮಹಿಳೆಯರ ಆಭರಣಕ್ಕೆ ಸೀಮಿತವಾಗಿರದೇ ಹಣದುಬ್ಬರದೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಬಂಡಾವಳ ಹೂಡಿಕೆದಾರರ ಪ್ರಮುಖ ಆಸ್ತಿ ಕೂಡ ಈ ಚಿನ್ನವಾಗಿದೆ. ಜೊತೆಗೆ ಮದುವೆ ಸುಗ್ಗಿಯ ಸಂದರ್ಭದಲ್ಲಿ ಮಹಿಳೆಯರು ಚಿನ್ನದ ಮೇಲೆ ಹೂಡಿಕೆ ಮಾಡಲು  ಮುಂದಾಗಿದ್ದಾರೆ.  ಸುರಕ್ಷತೆ ದೃಷ್ಟಿಯಿಂದಲೂ ಹೂಡಿಕೆ ಮಾಡಬಹುದಾದ ಈ ಚಿನ್ನ ದರ ಕೂಡ ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ಪ್ರಭಾವ ಹೊಂದಿದ್ದು, ಪ್ರತಿನಿತ್ಯ ದರದಲ್ಲಿ ಬದಲಾವಣೆ ಹೊಂದುತ್ತಿರುತ್ತದೆ.

ಸೋಮವಾರಕ್ಕೆ ಹೋಲಿಸಿದರೆ ಅಂತಹ ಬದಲಾವಣೆ ಇಂದು ಕಂಡು ಬಂದಿಲ್ಲವಾದರೂ, ಕೊಂಚ ಇಳಿಕೆ ಕಂಡು ಬಂದಿದೆ. 22 ಕ್ಯಾರೆಟ್​ ಚಿನ್ನದ ಬೆಲೆ 30.250 ರೂ ಆಗಿದ್ದು, ನಿನ್ನೆಗಿಂತ ಇಂದು 50 ರೂ ಕಡಿಮೆ ಯಾಗಿದೆ.

First published:March 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ