ಕೊನೆಯ ಅಂಕದಲ್ಲಿ ರಾಜೀನಾಮೆ ನಾಟಕ; ಇಂದು ಸ್ಪೀಕರ್​ ಖುದ್ದು ಭೇಟಿಯಾಗಿ ಶಾಸಕ ಸ್ಥಾನ ತ್ಯಜಿಸಲಿರುವ ರಮೇಶ್ ಜಾರಕಿಹೊಳಿ?

ಸ್ಪೀಕರ್​ ಭೇಟಿಯಾಗಿ ಶಾಸಕ ಸ್ಥಾನಕ್ಕೆ ಖುದ್ದು ರಾಜೀನಾಮೆ ನೀಡುವ ಬಗ್ಗೆ ರಮೇಶ್​ ಜಾರಕಿಹೊಳಿ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ. ಕಾರಣ ಅವರ ಬೆಂಬಲಿಗರು ಸಾಮೂಹಿಕ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿರುವುದು.

Seema.R | news18
Updated:July 3, 2019, 12:08 PM IST
ಕೊನೆಯ ಅಂಕದಲ್ಲಿ ರಾಜೀನಾಮೆ ನಾಟಕ; ಇಂದು ಸ್ಪೀಕರ್​ ಖುದ್ದು ಭೇಟಿಯಾಗಿ ಶಾಸಕ ಸ್ಥಾನ ತ್ಯಜಿಸಲಿರುವ ರಮೇಶ್ ಜಾರಕಿಹೊಳಿ?
ಸ್ಪೀಕರ್​ ರಮೇಶ್​ ಮತ್ತು ರಮೇಶ್​ ಜಾರಕಿಹೊಳಿ
  • News18
  • Last Updated: July 3, 2019, 12:08 PM IST
  • Share this:
ಬೆಂಗಳೂರು (ಜು.03): ಆನಂದ್​ ಸಿಂಗ್​ ಬಳಿಕ ಶಾಸಕ ಸ್ಥಾನ ತೊರೆಯಲು ನಿರ್ಧರಿಸಿದ  ರಮೇಶ್​ ಜಾರಕಿಹೊಳಿ ರಾಜೀನಾಮೆ ಪತ್ರ ಇನ್ನು ಸ್ಪೀಕರ್​ ಕೈ ಸೇರಿಲ್ಲ. ಫ್ಯಾಕ್ಸ್​ ಮೂಲಕ ರಾಜೀನಾಮೆ ಸಲ್ಲಿಸಿದ್ದ ರಮೇಶ್​ ಜಾರಕಿಹೊಳಿಗೆ ಈಗಾಗಲೇ ಸ್ಪೀಕರ್​ ರಮೇಶ್​ ಕುಮಾರ್​ ಕ್ಲಾಸ್​ ತೆಗೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರು ಇಂದು ಖುದ್ದಾಗಿ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ರಾಜೀನಾಮೆ ನೀಡುವ ಬಗ್ಗೆ ರಮೇಶ್​ ಜಾರಕಿಹೊಳಿ ಗೊಂದಲದಲ್ಲಿದ್ದಾರೆ ಎಂಬ ಮಾತುಗಳ ಸಹ ಕೇಳಿಬರುತ್ತಿವೆ. ಕಾರಣ ಕಾಂಗ್ರೆಸ್​ ಪಕ್ಷದ ಅತೃಪ್ತ ಶಾಸಕರು ಹಾಗೂ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರು  ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿರುವುದು.

RAMESH-JARAKIHOLI
ರಮೇಶ್ ಜಾರಕಿಹೊಳಿ


ಈ ಹಿಂದಿನಿಂದಲೂ ತನ್ನ ಬೆಂಬಲಿಗ ಪಡೆಯೊಂದಿಗೆ ರಾಜೀನಾಮೆ ನೀಡಲು ಹತೊರೆಯುತ್ತಿದ್ದ ರಮೇಶ್​ ಜಾರಕಿಹೊಳಿಗೆ ಈಗ ಸಂಕಷ್ಟ ಎದುರಾಗಿದೆ. ಇಬ್ಬರು ಶಾಸಕರು ರಾಜೀನಾಮೆ ನೀಡಿದರೂ ಮೈತ್ರಿ ಪಕ್ಷದ ನಾಯಕರು ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದಿರುವುದು ಅತೃಪ್ತ ಶಾಸಕರನ್ನು ಮತ್ತಷ್ಟೂ ಆತಂಕ ಮೂಡಿಸಿದೆ.

ಅಲ್ಲದೇ, ಗೋಕಾಕ್​ ಶಾಸಕರನ್ನು ನಂಬಿ ರಾಜೀನಾಮೆ ನೀಡಿದರೆ ಮುಂದೇನು?, ಬಿಜೆಪಿ ಸರ್ಕಾರ ರಚಿಸುತ್ತಾ? ಅಥವಾ ಮಧ್ಯಂತರ ಚುನಾವಣೆ ಎದುರಾಗುತ್ತಾ? ರಾಜೀನಾಮೆ ನೀಡಿ ಪಕ್ಷಾಂತರ ಮಾಡಿದ್ದಲ್ಲಿ ಸ್ಪೀಕರ್​ ತಮ್ಮ ಸ್ಥಾನವನ್ನು ಅನುರ್ಜಿತಗೊಳಿಸಿದರೆ? ಮುಂದೇನು ಕತೆ ಎಂಬ ಆತಂಕ ಅತೃಪ್ತರನ್ನು ಕಾಡಿತ್ತಿದೆ. ಇದರಿಂದಾಗಿ ಸಾಮೂಹಿಕ ರಾಜೀನಾಮೆಯಿಂದ ಅತೃಪ್ತರು ಹಿಂದೆ ಸರಿದಿದ್ದಾರೆ.  ಇದು ಗೋಕಾಕ್​ ಶಾಸಕರಲ್ಲಿ ಹತಾಶೆ ಮೂಡಿಸಿದ್ದು, ಮತ್ತೊಮ್ಮೆ ಅವರ ಮನವೊಲಿಕೆ ಪ್ರಯತ್ನವನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದೇ ಕಾರಣದಿಂದ ರಮೇಶ್​ ಜಾರಕಿಹೊಳಿ ಕೂಡ ಫ್ಯಾಕ್ಸ್​ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಇದನ್ನು ಓದಿ: ರಾಜೀನಾಮೆಗೂ ಮುನ್ನ ರಮೇಶ್​ ಜಾರಕಿಹೊಳಿಗೆ ಅತೃಪ್ತ ಶಾಸಕರಿಂದ ಸಾಲು ಸಾಲು ಪ್ರಶ್ನೆಈಗಾಗಲೇ ರಾಜೀನಾಮೆ ಘೋಷಿಸಿ ಮಾತಿನಿಂದ ಹಿಂದೆ ಸರಿದರೆ ರಮೇಶ್​ ಜಾರಕಿಹೊಳಿಗೆ ಮುಖಭಂಗವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಅವರು ಇಂದು ಸ್ಪೀಕರ್​ ಅವರನ್ನು ಖುದ್ದು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ. ಈ ಮೂಲಕ  ಮೈತ್ರಿ ನಾಯಕರ ವಿರುದ್ಧ ಹೊಂದಿರುವ ಅಸಮಾಧಾನ ಹಾಗೂ ಇಷ್ಟು ದಿನ ನಡೆಸಿದ ತೆರೆಮರೆ ಪ್ರಯತ್ನಗಳಿಗೆ ಇತಿಶ್ರೀ ಹಾಡಲಿದ್ದಾರೆ ಎನ್ನಲಾಗುತ್ತಿದೆ

ತಮ್ಮೊಬ್ಬರ ರಾಜೀನಾಮೆಯಿಂದ ಮೈತ್ರಿ ಸರ್ಕಾರಕ್ಕೆ ಏನು ಆಗುವುದಿಲ್ಲ ಎಂಬುದನ್ನು ಅರಿತ ಅವರು ,  ಇದಕ್ಕೂ ಮುನ್ನ ತಮ್ಮ ಆಪ್ತರ ಜೊತೆ ಚರ್ಚಿಸಿ ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

First published: July 3, 2019, 11:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading