ದುಷ್ಟ ಶಕ್ತಿಯನ್ನು ಕಿತ್ತೆಸೆಯಲು ನನ್ನನ್ನು ಬೆಂಬಲಿಸಿ ; ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ

ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ‌ಗೆ ಕ್ಷೇತ್ರದಲ್ಲೀಗ ಜನಬೆಂಬಲ ಸಿಗುತ್ತಿಲ್ಲ. ಮಾವ- ಅಳಿಯ ಈಗ ಜಂಟಿಯಾಗಿ ಕ್ಷೇತ್ರಕ್ಕೆ ಬರಲಿ, ಜನಬೆಂಬಲ ಎಷ್ಟಿದೆ ಎಂಬುದು ಗೊತ್ತಾಗುತ್ತೆ. ಈ ಕಾರಣಕ್ಕೆ ಬಿಜೆಪಿಯ ರಾಜ್ಯ ನಾಯಕರು ಪ್ರಚಾರಕ್ಕೆ ಬರುತ್ತಿದ್ದಾರೆ.

news18-kannada
Updated:November 26, 2019, 6:27 PM IST
ದುಷ್ಟ ಶಕ್ತಿಯನ್ನು ಕಿತ್ತೆಸೆಯಲು ನನ್ನನ್ನು ಬೆಂಬಲಿಸಿ ; ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ
ಲಖನ್ ಜಾರಕಿಹೊಳಿ- ರಮೇಶ್ ಜಾರಕಿಹೊಳಿ
  • Share this:
ಬೆಳಗಾವಿ(ನ.26): ಮತ ಸೆಳೆಯಲು ಕೆಲವರು ಆಮೀಷವೊಡ್ಡುತ್ತಿದ್ದಾರೆ. ಅದಕ್ಕೆ ಯಾರೂ ಬಲಿಯಾಗಬಾರದು. ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ನನ್ನನ್ನು ಗೆಲ್ಲಿಸಿ ಕೊಡಬೇಕು. ಗೋಕಾಕ್ ಕ್ಷೇತ್ರದಲ್ಲಿರುವ ದುಷ್ಟಶಕ್ತಿಯನ್ನು ಕಿತ್ತೆಸೆಯಬೇಕಿದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ವಿರುದ್ಧ ಲಖನ್ ಜಾರಕಿಹೊಳಿ ಪರೋಕ್ಷ ವಾಗ್ದಾಳಿ‌ ನಡೆಸಿದರು. 

ಗೋಕಾಕ್​ ಕ್ಷೇತ್ರದ ಖನಗಾಂವ್ ಗ್ರಾಮದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,  ಖನಗಾಂವ ಜಿಪಂ ಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಆಧ್ಯತೆ ನೀಡುತ್ತೇನೆ. ಗುದ್ದಲಿ ಪೂಜೆಗೆ ಬರುತ್ತಿದ್ದ ಬಿಜೆಪಿ ಅಭ್ಯರ್ಥಿ ರಮೇಶ್  ಅವರ ಪ್ರೀತಿಯ ಅಳಿಯ ಈಗೆಲ್ಲಿ. ಅಂಬಿರಾವ್ ರನ್ನು ಪ್ರಚಾರಕ್ಕೆ ಕಳಿಸದಂತ ಸ್ಥಿತಿ ರಮೇಶ್ ಅವರಿಗೆ ಬಂದಿದೆ ಎಂದರು

ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ‌ಗೆ ಕ್ಷೇತ್ರದಲ್ಲೀಗ ಜನಬೆಂಬಲ ಸಿಗುತ್ತಿಲ್ಲ. ಮಾವ- ಅಳಿಯ ಈಗ ಜಂಟಿಯಾಗಿ ಕ್ಷೇತ್ರಕ್ಕೆ ಬರಲಿ, ಜನಬೆಂಬಲ ಎಷ್ಟಿದೆ ಎಂಬುದು ಗೊತ್ತಾಗುತ್ತೆ. ಈ ಕಾರಣಕ್ಕೆ ಬಿಜೆಪಿಯ ರಾಜ್ಯ ನಾಯಕರು ಪ್ರಚಾರಕ್ಕೆ ಬರುತ್ತಿದ್ದಾರೆ. ಆದರೆ ನಮಗೆ ಕ್ಷೇತ್ರದ ಮತದಾರರೇ ರಾಜ್ಯ ನಾಯಕರಿದ್ದ ಹಾಗೆ. ಮಾವ ಅಳಿಯ ಈಗ ಒಬ್ಬಂಟಿಗರಾಗಿದ್ದಾರೆ ಎಂದು ಹೇಳಿದರು.

ಲಖನ್ ಪರವಾಗಿ ಮತ ಚಲಾಯಿಸುವಂತೆ ಹೇಳುವ ಪರಿಸ್ಥಿತಿ ರಮೇಶ್ ಅವರಿಗೆ ಬರಲಿದೆ. ಭ್ರಷ್ಟಾಚಾರ ವಿರುದ್ಧ ಹೋರಾಡಲು ನಾನು ಕಣಕ್ಕೀಳಿದಿದ್ದೇನೆ. ಇಷ್ಟು ದಿನ ನೀವು ರಮೇಶಗೆ ಮತ ಹಾಕಿ ಗೆಲ್ಲಿಸಿದ್ರಿ. ಆದರೆ ಅಂಬಿರಾವ್ ಮತ್ತು ಪಟಾಲಂ ಬಂದು ದರ್ಬಾರ್ ನಡೆಸುತ್ತಿತ್ತು. ಇಂಥ ಪರಿಸ್ಥಿತಿ ಇನ್ಮುಂದೆ ಕ್ಷೇತ್ರದಲ್ಲಿ ಬಂದ್ ಆಗಲಿದೆ. ಬಿಜೆಪಿ ಹೈಕಮಾಂಡ್ ಈಗಾಗಲೇ ರಮೇಶ ಬಾಯಿಗೆ ಬೀಗ ಹಾಕಿದೆ ಎಂದರು.

ಇದನ್ನೂ ಓದಿ : ನಮ್ಮಪ್ಪನ ಮನೆಯಿಂದ ಹಣ ತಂದು ರೈತರ ಸಾಲ ಮನ್ನಾ ಮಾಡಲಿಲ್ಲ - ನಿಮ್ಮ ಹಣದಿಂದ್ಲೇ ಸಾಲ ಮನ್ನಾ ಮಾಡಿದೆ; ಸಿದ್ಧರಾಮಯ್ಯ

ನನಗೆ ಕ್ಷೇತ್ರದಲ್ಲಿ ಜನಬೆಂಬಲ ಸಿಗುತ್ತಿದ್ದು, ಹೆಚ್ಚಿನ ಮತಗಳ ಅಂತರದ ಗೆಲುವು ನನ್ನದಾಗಲಿದೆ. ಗೆಲುವಿನ ಅಂತರ  ಡಿಸೆಂಬರ್​ 6 ರಂದು ಹೇಳುತ್ತೇನೆ, ಈಗ ಹೇಳಿದ್ರೆ ಎದುರಾಳಿಗಳು ಅಲರ್ಟ್ ಆಗುತ್ತಾರೆ‌  ಎಂದು ಹೇಳಿದರು.
First published:November 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading