ಕೋಟ್ಯಧಿಪತಿಯಾಗುವ ಆಸೆಯಿಂದ ಶಂಖ-ಜಾಗಟೆ ಕದ್ದ ಮೂಢರು..!

ಎರಡು ತಲೆ ಹಾವು, 8 ಕಾಲಿನ ಆಮೆ, ಅಪರೂಪದ ಶಂಖವನ್ನು ಪೂಜೆ ಮಾಡಿದರೆ ಅದೃಷ್ಟ ಬರುತ್ತೆ,ಕೋಟ್ಯಧಿಪತಿ ಆಗುತ್ತೀರಾ ಎಂದು ಯಾವ ಕಳ್ಳ ಜ್ಯೋತಿಷಿ ಹೇಳಿದನೋ ಗೊತ್ತಿಲ್ಲ. ಆದರೆ ಇಂತಹ ವದಂತಿ ಹರಡಿದ್ದೆ ತಡ ಶಂಖ ಬಳಸಿ ದಂಧೆ ಮಾಡುವ ಗುಂಪುಗಳು ಎಲ್ಲೆಂದರಲ್ಲಿ ಹುಟ್ಟಿಕೊಂಡಿವೆ.

Latha CG | news18
Updated:February 12, 2019, 5:58 PM IST
ಕೋಟ್ಯಧಿಪತಿಯಾಗುವ ಆಸೆಯಿಂದ ಶಂಖ-ಜಾಗಟೆ ಕದ್ದ ಮೂಢರು..!
ಸಾಂಧರ್ಬಿಕ ಚಿತ್ರ
Latha CG | news18
Updated: February 12, 2019, 5:58 PM IST
ಡಿಎಂಜಿಹಳ್ಳಿಅಶೋಕ್

ಹಾಸನ,(ಫೆ.12): ಶಂಖವನ್ನು ಪೂಜಾ ಕಾರ್ಯಕ್ಕೆ, ಅಲಂಕಾರಿಕ ಹಾಗೂ ಸಾಂಪ್ರದಾಯಕ ವಸ್ತುವನ್ನಾಗಿ ಬಳಕೆ ಮಾಡೋದು ಸಾಮಾನ್ಯ.  ಅಲ್ಲದೇ ಇತ್ತೀಚೆಗೆ ಶಂಖವನ್ನು ಅದೃಷ್ಟದ ವಸ್ತು ಎಂದು ದಂಧೆ ಮಾಡುವ ಗುಂಪುನ್ನೂ ನೋಡಿದ್ದೇವೆ. ಆದರೆ ಇಲ್ಲಿ ಮನೆಯಲ್ಲಿ ಸಾಂಪ್ರದಾಯಿಕ ಶಾಸ್ತ್ರಕ್ಕೆ ಇಟ್ಟಿದ್ದ ಶಂಕುವನ್ನು ದುಷ್ಕರ್ಮಿಗಳ ತಂಡ ನಡು ರಾತ್ರಿಯಲ್ಲಿ ಮನೆಗೆ ನುಗ್ಗಿ, ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಮಾಜಿ ಪ್ರಧಾನಿ ದೇವೇಗೌಡರ ಹುಟ್ಟೂರಿನ ಪಕ್ಕದಲ್ಲಿ.

'ಎರಡು ತಲೆ ಹಾವು, 8 ಕಾಲಿನ ಆಮೆ, ಅಪರೂಪದ ಶಂಖವನ್ನು ಪೂಜೆ ಮಾಡಿದರೆ ಅದೃಷ್ಟ ಬರುತ್ತೆ,ಕೋಟ್ಯಧಿಪತಿ ಆಗುತ್ತೀರಾ' ಎಂದು ಯಾವ ಕಳ್ಳ ಜ್ಯೋತಿಷಿ ಹೇಳಿದನೋ ಗೊತ್ತಿಲ್ಲ. ಆದರೆ ಇಂತಹ ವದಂತಿ ಹರಡಿದ್ದೆ ತಡ ಶಂಖ ಬಳಸಿ ದಂಧೆ ಮಾಡುವ ಗುಂಪುಗಳು ಎಲ್ಲೆಂದರಲ್ಲಿ ಹುಟ್ಟಿಕೊಂಡಿವೆ. ಇಷ್ಟಲ್ಲದೇ ಸಾಂಪ್ರದಾಯಿಕ ಕಾರ್ಯಕ್ಕೆ ಶಂಖ ಜಾಗಟೆ ಬಳಸುತ್ತಿರುವ ವ್ಯಕ್ತಿಗಳ ಟಾರ್ಗೆಟ್ ಮಾಡುತ್ತಿರುವ ಖದೀಮರು, ಶಂಖು ಜಾಗಟೆ ಗಳನ್ನ ಕದ್ದು ಮಾರಾಟ ಮಾಡುತ್ತಿದ್ದಾರೆ.

ಇಂತಹ ಮೂಢನಂಬಿಕೆ ಹೊಂದಿದ್ದ ನಾಲ್ವರ ತಂಡ ತಡರಾತ್ರಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ತೆರಣ್ಯ ಗ್ರಾಮದ ಹೊರಗಿರುವ ಹನುಮಂತಯ್ಯ ಎಂಬುವರ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ ಮಂದಿಗೆಲ್ಲ ಕಣ್ಣಿಗೆ ಕಾರದ ಪುಡಿ ಎರಚಿ ಮಾರಕಾಸ್ತ್ರ ತೋರಿಸಿ ಹಲ್ಲೆ ನಡೆಸಿದ್ಧಾರೆ. ಬಳಿಕ ಪೂಜಾ ಕಾರ್ಯಕ್ಕೆ ಬಳಸುತ್ತಿದ್ದ ಶಂಖ ಹಾಗೂ ಜಾಗಟೆ ಜೊತೆಗೆ ಮನೆಯಲ್ಲಿ ಇದ್ದ 10 ಗ್ರಾಂ ಚಿನ್ನ ಹಾಗೂ 40 ಸಾವಿರ ಹಣ ಕದ್ದು ಪರಾರಿಯಾಗಿದ್ದಾರೆ.

ಸೈನಿಕರ ಭದ್ರತೆಯಲ್ಲಿ ನಾರಾಯಣಗೌಡ ಹೌಸ್​ ಅರೆಸ್ಟ್​..? ಹೊರಟ್ಟಿಗೆ ಫೋನ್​ ಮಾಡಿ ಹೇಳಿದ್ರಾ ಕೆ.ಆರ್​.ಪೇಟೆ ಶಾಸಕ

ಕಳೆದ ವಾರ ಯಾರೋ ಅಪರಿಚಿತರು ಮಾತುಕತೆ ನಡೆಸಿ ಶಂಖ-ಜಾಗಟೆ ಖರಿದೀಸಲು ಬಂದಿದ್ದಾರೆ. ಆದರೆ ಹನುಮಂತಯ್ಯ ಮನೆಯವರು ಶಂಖ ಜಾಗಟೆ ಕೊಡಲು ನಿರಾಕರಿಸಿದ ಹಿನ್ನೆಲೆ ಸಣ್ಣ ಶಂಖ ಕದ್ದು ಪರಾರಿಯಾಗಿದ್ದರು. ಆದರೆ ಅದು ಸಾಮಾನ್ಯ ಶಂಖ ಪ್ರಯೋಜನ ಇಲ್ಲ ಎಂದು ತಿಳಿದ ಕಳ್ಳರ ತಂಡ, ತಡರಾತ್ರಿ ಖಾರದಪುಡಿ ಎರಚಿ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಹನುಮಂತಯ್ಯ ಹಾಗೂ ಮಗನ ಮೇಲೆ ರಾಡಿನಿಂದ ಹಲ್ಲೆ ಮಾಡಿದ್ದಾರೆ. ಕಳ್ಳರ ಉಪಟಳಕ್ಕೆ ಮನೆಯಲ್ಲಿದ್ದ ಮಹಿಳೆ ಹಾಗೂ ವೃದ್ದೆ ಕೂಗಾಡಿದ ಹಿನ್ನೆಲೆ ನೆರೆಹೊರೆಯವರು ಬರುವ ಭಯಕ್ಕೆ ಖದೀಮರು ಪರಾರಿಯಾಗಿದ್ದಾರೆ. ದಾಳಿಕೋರರ ಹಲ್ಲೆಯಿಂದ ಗಾಯಗೊಂಡಿರುವ ತಂದೆ ಮಗ ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Loading...

ಇನ್ನು ಶಂಖ-ಜಾಗಟೆಯನ್ನು ಕರಗಿಸಿದರೆ, ಅದರಲ್ಲಿ ಬೆಲೆ ಬಾಳುವ ವಸ್ತು ಸಿಗಲಿದೆ ಎಂದು ನಂಬಿಕೆಯಿಂದ ಖದೀಮರ ತಂಡ ಕಳವು ಮಾಡಿದ್ದು, ಕಳ್ಳರ ಹುಚ್ಚಾಟಕ್ಕೆ ಬಡ ಕುಟುಂಬ ತತ್ತರಿಸಿ ಹೋಗಿದೆ. ಪೊಲೀಸ್ ಇಲಾಖೆ ನಮಗೆ ಸೂಕ್ತ ರಕ್ಷಣೆ ನೀಡಿ ಕಳ್ಳರನ್ನು ಬಂಧಿಸುವಂತೆ ಹನುಮಂತಯ್ಯನ ಕುಟುಂಬ ಒತ್ತಾಯ ಮಾಡಿದೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...