'ಕನ್ನಡಿಗರು ಹರಾಮಿಗಳು' ಎಂದ ಗೋವಾ ಸಚಿವ ವಿನೋದ್ ಪಾಲ್ಯೇಕರ್!


Updated:January 14, 2018, 7:18 PM IST
'ಕನ್ನಡಿಗರು ಹರಾಮಿಗಳು' ಎಂದ ಗೋವಾ ಸಚಿವ ವಿನೋದ್ ಪಾಲ್ಯೇಕರ್!

Updated: January 14, 2018, 7:18 PM IST
-ನ್ಯೂಸ್ 18 ಕನ್ನಡ

ಗೋವಾ(ಜ.14): ಮಹದಾಯಿ ವಿಚಾರದಲ್ಲಿ ನೀರು ನೀಡಲು ಒಪ್ಪದ ಗೋವಾ ಸರ್ಕಾರ ಕರ್ನಾಟಕದೊಂದಿಗೆ ಡಬಲ್ ಗೇಮ್ ಆಡುತ್ತಿದ್ದಾರೆ. ಅತ್ತ ಗೋವಾ ಸಿಎಂ ಯಡಿಯೂರಪ್ಪರೊಂದಿಗೆ ಈ ವಿಚಾರದಲ್ಲಿ ಮಾತನಾಡಿದ್ದೇನೆ ಎಂದರೆ, ಜಲ ಸಂಪನ್ಮೂಲ ಸಚಿವರು ನೀರು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೀಗ ಈ ವಿಚಾರ ಅತಿರೇಕಕ್ಕೆ ತಿರುಗಿದ್ದು, 'ಕನ್ನಡಿಗರು ಹರಾಮಿಗಳು' ಎಂದು ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಹೇಳಿಕೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇವರ ಈ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ನಿನ್ನೆ ಕಣಕುಂಬಿಗೆ ಭೇಟಿ ನೀಡಿದ್ದ ಗೋವಾ ಸಚಿವ ವಿನೋದ್ ಪಾಲ್ಯೇಕರ್ 'ಕರ್ನಾಟಕದವರು ಏನು ಬೇಕಾದ್ರೂ ಮಾಡ್ತಾರೆ ಹೀಗಾಗಿ ನಾನು ಭದ್ರತೆಯೊಂದಿಗೆ ಕರ್ನಾಟಕಕ್ಕೆ ಬಂದಿದ್ದೆ. ಕನ್ನಡಿಗರು ಹರಾಮಿಗಳು ಎಂಬ ಹೇಳಿಕೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಸಚಿವರು ಕೆಟ್ಟ ಪದ ಬಳಕೆ ಮಾಡಿ ನಿಂದಿಸಿರುವುದು, ಕನ್ನಡಿಗರನ್ನು ಕೆರಳಿಸಿವೆ. ಇದೇ ಸಂದರ್ಭದಲ್ಲಿ ತಾನು ಕರ್ನಾಟಕಕ್ಕೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿ ಹೇಗಿದೆ ಎಂಬುವುದನ್ನು ಅವಲೋಕಿಸಿರುವುದಾಗಿ ಗೋವಾ ಮಿನಿಸ್ಟರ್ ಫೋಟೋ ಸಮೇತವಾಗಿ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.


Loading...

ಈ ವಿಷಯಕ್ಕೆ ಸಂಬಂಧಿಸಿದಂತೆಯೂ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಮಹಾದಾಯಿ ವಿಚಾರ ಇನ್ನೂ ನ್ಯಾಯಾಂಗದಲ್ಲಿ ಇದೆ, ಹೀಗಿರುವಾಗ ಗೋವಾ ಸಚಿವರು ಯಾರ ಅನುಮತಿ ಪಡೆದು ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ ಎಂದೂ ಪ್ರಶ್ನಿಸಿದ್ದಾರೆ.
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ