ಅಮಿತ್​ ಶಾ ಗೋ ಬ್ಯಾಕ್​ ಘೋಷಣೆ; ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಮಹದಾಯಿ ಅನುಷ್ಠಾನ ಕುರಿತು ಈ ಹಿಂದೆ ನೀಡಿದ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುವುದರ ಜೊತೆಗೆ ಅತಿವೃಷ್ಟಿ ಪರಿಹಾರದಲ್ಲಿಯೂ ಕೇಂದ್ರ ತಾರತಮ್ಯ ಮಾಡಿದೆ. ಈಗ ಸಿಎಎ ಕಾಯಿದೆ ರೂಪಿಸಿ ದೇಶವನ್ನು ಒಡೆದು ಆಳಲು ಮುಂದಾಗಿದ್ದಾರೆ ಎಂದು ಆರೋಪಿಸಿ ಇಂದು ಸಂವಿಧಾನ ರಕ್ಷಣಾ ಸಮಿತಿ ಗೋ ಬ್ಯಾಕ್​ ಚಳುವಳಿ ನಡೆಸಿದೆ. 

ಕೇಂದ್ರ ಗೃಹ ಸಚಿವ ಅಮಿತ್​ ಶಾ

ಕೇಂದ್ರ ಗೃಹ ಸಚಿವ ಅಮಿತ್​ ಶಾ

  • Share this:
ಹುಬ್ಬಳ್ಳಿ (ಜ.18): ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್​ಸಿಆರ್​ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿರುದ್ಧ ಗೋ ಬ್ಯಾಕ್​ ಕೂಗು ಕೇಳಿ ಬಂದಿದೆ. 

ಸಂವಿಧಾನ ರಕ್ಷಣಾ ಸಮಿತಿ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ, ತ್ರಿವರ್ಣ ಧ್ವಜ ಹಿಡಿದು   ಗೋ ಬ್ಯಾಕ್​ ಅಮಿತ್​ ಶಾ ಎನ್ನುವ ಘೋಷಣೆ ಕೂಗುವ ಮೂಲಕ ಅಮಿತ್​ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಹದಾಯಿ ಅನುಷ್ಠಾನ ಕುರಿತು ಈ ಹಿಂದೆ ನೀಡಿದ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುವುದರ ಜೊತೆಗೆ ಅತಿವೃಷ್ಟಿ ಪರಿಹಾರದಲ್ಲಿಯೂ ಕೇಂದ್ರ ತಾರತಮ್ಯ ಮಾಡಿದೆ. ಈಗ ಸಿಎಎ ಕಾಯಿದೆ ರೂಪಿಸಿ ದೇಶವನ್ನು ಒಡೆದು ಆಳಲು ಮುಂದಾಗಿದ್ದಾರೆ ಎಂದು ಆರೋಪಿಸಿ ಇಂದು ಸಂವಿಧಾನ ರಕ್ಷಣಾ ಸಮಿತಿ ಗೋ ಬ್ಯಾಕ್​ ಚಳುವಳಿ ನಡೆಸಿದೆ.

 

ನಗರದ ಕೋರ್ಟ್​ ಸರ್ಕಲ್​ನಿಂದ  ಕಾರ್ಯಕ್ರಮ ನಡೆಯಲಿರುವ ನೆಹರು ಮೈದಾನದ ವರೆಗೆ ಪ್ರತಿಭಟನಾಕಾರರು ಅಮಿತ್​ ಶಾ ವಿರುದ್ಧ ಮೆರವಣಿಗೆ ನಡೆಸಲು ಮುಂದಾದರು. ಈ ವೇಳೆ ಅವರನ್ನು ತಡೆದ ಪೊಲೀಸರು 20 ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನು ಓದಿ: ಅರಮನೆ ಮೈದಾನದಲ್ಲಿ ವಿವೇಕದೀಪಿನೀ ಕಾರ್ಯಕ್ರಮ; ಅಮಿತ್ ಶಾ ಭಾಗಿ

 

ಇನ್ನು ಸಮಾವೇಶ ನಡೆಯುವ ಸ್ಥಳದಲ್ಲಿ ಕೂಡ ಸಿಎಎ ಪ್ರತಿಭಟನಾಕಾರರು ಕಪ್ಪು ಬಲೂನ್​ ಹಾರಿಬಿಟ್ಟರು. ನೋ ಸಿಎಎ, ನೋ ಎನ್‌ಆರ್‌ಸಿ, ಅಮಿತ್ ಶಾ ಗೋಬ್ಯಾಕ್ ಎಂದು ಬರೆದ ಫಲಕದೊಂದಿಗೆ ಗ್ಯಾಸ್ ತುಂಬಿದ ಕಪ್ಪು ಬಲೂನ್ ಹಾರಿಬಿಟ್ಟರು.

 
First published: