Summer: ದಕ್ಷಿಣ ಕನ್ನಡದಲ್ಲಿ ಉರಿ ಬಿಸಿಲು, ಹೆಚ್ಚಿದೆ ಬೇಸಿಗೆಯ ಶಾಖ

ದಕ್ಷಿಣಕನ್ನಡ ಜಿಲ್ಲೆಯ ಕೂಲ್ ಪ್ರದೇಶಗಳೆಂದೇ ಬಿಂಬಿತವಾಗಿದ್ದ ಪುತ್ತೂರು,ಬೆಳ್ತಂಗಡಿ ಹಾಗೂ ಸುಳ್ಯ ಇಂದು ಭಾರೀ ಉಷ್ಣತೆಯನ್ನು ಹೊರಸೂಸುತ್ತಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗ್ಲೋಬಲ್ ವಾರ್ಮಿಂಗ್ (Global Warming) ಸಮಸ್ಯೆಗಳ (Problems) ಬಗ್ಗೆ ಕಳೆದ ಹಲವು ದಶಕಗಳಿಂದ ಜನತೆಗೆ ಮಾಹಿತಿ ನೀಡುತ್ತಿದ್ದರೂ, ಜನ ಮಾತ್ರ ಇದು ತಮ್ಮ ಜವಾಬ್ದಾರಿಯೇ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹವಾಮಾನಕ್ಕೆ ಕಂಟಕವಾಗಿರುವ ವಾಹನಗಳನ್ನು (Vehicle) ಉಪೇಕ್ಷಿಸಿ ಎಂದರೆ, ಭಾರೀ ಡಿಸ್ಕೌಂಟ್ ಸಿಗುತ್ತಿದೆ ಎಂದು ಅಂಥ ವಾಹನಗಳನ್ನೇ ಖರೀದಿಸುತ್ತಿದ್ದಾರೆ, ಮರಗಳನ್ನು ನೆಟ್ಟು ಪರಿಸರ ಉಳಿಸಿ ಎಂದರೆ, ಇದ್ದ ಮರಗಳನ್ನು (Tree) ಕಡಿಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಇಂದು ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,  ದಕ್ಷಿಣಕನ್ನಡ (Dakshina kannada) ಜಿಲ್ಲೆಯ ಕೂಲ್ ಪ್ರದೇಶಗಳೆಂದೇ ಬಿಂಬಿತವಾಗಿದ್ದ ಪುತ್ತೂರು,ಬೆಳ್ತಂಗಡಿ ಹಾಗೂ ಸುಳ್ಯ ಇಂದು ಭಾರೀ ಉಷ್ಣತೆಯನ್ನು ಹೊರಸೂಸುತ್ತಿದೆ.

ಗ್ಲೋಬಲ್ ವಾರ್ಮಿಂಗ್ ನ ಪರಿಣಾಮ ಕೇವಲ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಹೆಚ್ಚಾಗಿ ತಟ್ಟುತ್ತದೆ ಎನ್ನುವುದು ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಲೆಕ್ಕಾಚಾರ ತಲೆಕೆಳಗಾಗಿದೆ ಎನ್ನುವ ರೀತಿಯಲ್ಲಿ ಬದಲಾಗುತ್ತಿದೆ. ನಗರ ಪ್ರದೇಶಗಳಿಗಿಂತ ಇಂದು ಗ್ರಾಮೀಣ ಪ್ರದೇಶಗಳಲ್ಲೇ (Village places) ಹೆಚ್ಚಿನ ಉಷ್ಣತೆ ಕಂಡು ಬರುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನೇ ಇದಕ್ಕೆ ಉದಾಹರಣೆಯಾಗಿ ಕೊಡಬಹುದೇನೋ.

ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲೂ ಧಗೆ

ಜಿಲ್ಲೆಯ ಕೂಲ್ ಪ್ರದೇಶಗಳೆಂದೇ ಕರೆಯಲ್ಪಡುತ್ತಿದ್ದ ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳು ಇತ್ತೀಚಿನ ದಿನಗಳಲ್ಲಿ ಉಷ್ಣ ಹವೆಯನ್ನು ಹೊರಸೂಸುತ್ತಿದೆ. ಹಸಿರಾದ ಕಾಡು, ಮರಗಳಿಂದ ಕಂಗೊಳಿಸುತ್ತಿದ್ದ, ಈ ಪ್ರದೇಶ ಇಂದು ರಬ್ಬರ್ ಕಾಡುಗಳಾಗಿ ಬದಲಾಗಿದೆ. ಒಂದೆಡೆ ರಬ್ಬರ್ ಮರಗಳ (Rubber Trees) ಉಷ್ಣತೆ ಇನ್ನೊಂದೆಡೆ ಬದಲಾದ ಜೀವನ ಶೈಲಿಯಿಂದಾಗಿ (Lifestyle) ಐಷಾರಾಮಿ ವಸ್ತುಗಳು ಹೆಚ್ಚಾಗಿ ಉಪಯೋಗಿಸಲ್ಪಡುತ್ತಿರುವುದರಿಂದ ವಾತಾವರಣದ ಉಷ್ಣತೆ (Heat) ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.

ಇದನ್ನೂ ಓದಿ: SSLC Exam: ಈ ಶಾಲೆಯಲ್ಲಿ ರಾತ್ರಿಯೂ ಪಾಠ, ಭಾನುವಾರವೂ ಕ್ಲಾಸ್! ಇದೇ ನೋಡಿ ಮಾದರಿ ಪಾಠಶಾಲೆ 

ಈ ಪ್ರದೇಶಗಳಲ್ಲಿ ತಾಪಮಾನ ಈಗಾಗಲೇ 40 ಡಿಗ್ರಿ  ಸೆಂಟಿಗ್ರೇಡ್ ನ ಗಡಿ ದಾಟಿದ್ದು, ಮುಂದಿನ ಎರಡು ತಿಂಗಳಿನಲ್ಲಿ ಮಳೆ ಬಾರದೇ ಹೋದಲ್ಲಿ ಇದು 40-45 ರ ಗಡಿ ದಾಟುವ ಭಯವೂ ಕಾಡುತ್ತಿದೆ.

ಬಿಸಿಲಿನ ತಾಪವನ್ನು ತಣಿಸಲು ಈ ಭಾಗಗಳಲ್ಲಿ ಹೆಚ್ಚಾಗಿ ಇದೀಗ ಕೊಡೆಗಳನ್ನು (Umbrella) ಆಶ್ರಯಿಸುವ ಜೊತೆಗೆ ತಂಪು ಪಾನೀಯಗಳು (cool Drinks), ಕಲ್ಲಂಗಡಿ ಹಣ್ಣುಗಳಂತ (Watermelon) ದೇಹಕ್ಕೆ ತಂಪೆರೆಯುವ ಪದಾರ್ಥಗಳ ಮೊರೆ ಹೋಗುತ್ತಿದ್ದಾರೆ. ವಾಹನಗಳಲ್ಲಿ ಸಂಚರಿಸುವವರು ಎರ್ ಕಂಡೀಶನ್ (Air Condition) ಇಲ್ಲದೆ ಹೋಗುವಂತಹ ಪರಿಸ್ಥಿತಿಯೇ ಇಲ್ಲದಂತಾಗಿದ್ದು, ಮಧ್ಯಾಹ್ನದ (Afternoon) ಸಮಯದಲ್ಲಿ ರಸ್ತೆಗಿಳಿಯುವುದು ಹರಸಾಹಸವೆಂಬಂತ ಪರಿಸ್ಥಿತಿ ಎದುರಾಗಿದೆ.

ಹಲವರು ಪ್ರಜ್ಞೆ ತಪ್ಪಿ ಬಿದ್ದ ಘಟನೆ

ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವ ಉಷ್ಣಂಶದಿಂದಾಗಿ ಹಲವರು ಪ್ರಜ್ಞೆ ತಪ್ಪಿ ಬಿದ್ದ (Unconscious) ಘಟನೆಗಳೂ ವರದಿಯಾಗಿದ್ದು, ಇದು ಉಷ್ಣತೆಯ ತೀವೃತೆಗೆ ಸಾಕ್ಷಿಯೂ ಆಗಿದೆ. ಒಂದೆಡೆ ಬಿಸಿಲಿನ ಝಳವಾದರೆ, ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಗೆ ಹಸಿರ ಹಾಸಿನಂತಿದ್ದ ಪಶ್ಚಿಮಘಟ್ಟ (Western Ghat) ಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿರುವುದೂ, ಜಿಲ್ಲೆಯ ತಾಪಮಾನ ಹೆಚ್ಚಾಗಲು ಕಾರಣ ಎನ್ನುತ್ತಾರೆ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ (Dinesh Holla).  ಎತ್ತಿನಹೊಳೆ ಮೊದಲಾದ ಪರಿಸರ ಮಾರಕ ಯೋಜನೆಗಳ ಪರಿಣಾಮಗಳನ್ನು (Project Effects) ದಕ್ಷಿಣಕನ್ನಡ ಜಿಲ್ಲೆಯ ಜನ ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಾಪಮಾನ (Temperature) ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ದಿನೇಶ್ ಹೊಳ್ಳ.
Published by:Divya D
First published: