HOME » NEWS » State » GKVK SCIENTISTS HAVE DISCOVERED IMMUNITY ENHANCING RICE RH SKTV

ಇಲ್ಲಿದೆ ಇಮ್ಯುನಿಟಿ ಹೆಚ್ಚಿಸುವ ಅಕ್ಕಿ; ಜಿಕೆವಿಕೆ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ ಕೊರೋನಾ ವಿರುದ್ಧ ಸಮರ ಸಾರುವ ಭತ್ತದ ತಳಿ

ದೇಹದಲ್ಲಿ ಕೊರತೆ ಇರುವ ಖನಿಜಗಳನ್ನು ಹೀಗೆ ಅಕ್ಕಿಯ ಮೂಲಕ ನೀಡೋದು ಅತ್ಯಂತ ಸಮರ್ಪಕ ಮಾರ್ಗ. ಜಿಂಕ್ ಅನ್ನು ಔಷಧದ ರೂಪದಲ್ಲಿ ಸೇವಿಸುವ ಬದಲು ಪೌಷ್ಟಿಕ್ 1 ಅಕ್ಕಿಯ ಬಳಕೆ ಆರಂಭಿಸಿದರೆ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಳ್ಳಬಹುದು.

news18-kannada
Updated:November 13, 2020, 7:16 PM IST
ಇಲ್ಲಿದೆ ಇಮ್ಯುನಿಟಿ ಹೆಚ್ಚಿಸುವ ಅಕ್ಕಿ; ಜಿಕೆವಿಕೆ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ ಕೊರೋನಾ ವಿರುದ್ಧ ಸಮರ ಸಾರುವ ಭತ್ತದ ತಳಿ
ಜಿಕೆವಿಕೆ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಇಮ್ಯುನಿಟಿ ಹೆಚ್ಚಿಸುವ ಅಕ್ಕಿ ತಳಿ.
  • Share this:
ಬೆಂಗಳೂರು; ಕೊರೋನಾ ಬಂದ ಮೇಲೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜನರು ಮಾಡದ ಸರ್ಕಸ್ ಇಲ್ಲ. ಕೆಲವರು ವಿಟಮಿನ್, ಜಿಂಕ್ ಮಾತ್ರೆಗಳ ಮೊರೆ ಹೋದರೆ, ಇನ್ನು ಹಲವರು ಕಷಾಯ, ತರಕಾರಿ ಹಣ್ಣುಗಳ ಬಳಕೆ ಹೆಚ್ಚಿಸಿಕೊಂಡಿದ್ದಾರೆ. ಆದರೆ ಇದ್ಯಾವುದೂ ಇಲ್ಲದೇ ದಿನಾ ನಾವು ತಿನ್ನುವ ಅನ್ನದ ಮೂಲಕವೇ ಇಮ್ಯುನಿಟಿ ಹೆಚ್ಚಾಗುವ ಹಾಗಾದರೆ? ಇಂಥಾ ಅದ್ಭುತ ಸಂಶೋಧನೆಯೊಂದನ್ನು ಬೆಂಗಳೂರಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ನಾವೆಲ್ಲರೂ ಪ್ರತಿದಿನ ತೃಪ್ತಿಯಿಂದ ತಿನ್ನುವ ಅನ್ನದೊಳಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪದಾರ್ಥ ಸೇರಿಸಿದ್ದಾರೆ ವಿಜ್ಞಾನಿಗಳು. ‌ಜಿಕೆವಿಕೆಯ ಸಂಶೋಧಕರು ಜಿಂಕ್ ಹೊಂದಿರುವ ಅಕ್ಕಿಯ ನೂತನ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ಈ ತಳಿ ಯಶಸ್ವಿಯಾಗಿ ಮಂಡ್ಯ, ಕುಣಿಗಲ್ ಮುಂತಾದೆಡೆ ರೈತರು ಬೆಳೆಯುತ್ತಿದ್ದಾರೆ.

ಇದನ್ನು ಓದಿ: ದೀಪಾವಳಿಗೆ ರಾಜ್ಯ ಸರ್ಕಾರದ ಕೊಡುಗೆ, ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜು: ಸಚಿವ ಡಾ.ಕೆ.ಸುಧಾಕರ್

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪೌಷ್ಟಿಕಾಂಶ ಹೊಂದಿರುವ ಒಟ್ಟು ಮೂರು ಅಕ್ಕಿಯ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಪೌಷ್ಟಿಕ್ 1 ಜಿಂಕ್ ಹೊಂದಿದ್ದರೆ, ಪೌಷ್ಟಿಕ್ 7 ಕಬ್ಬಿಣದ ಅಂಶ ಹೊಂದಿದೆ. ಅದೇ ರೀತಿ ಪೌಷ್ಟಿಕ್ 9 ತಳಿಯ ಅಕ್ಕಿಯಲ್ಲಿ ಪ್ರೋಟೀನ್ ಹೇರಳವಾಗಿದೆ. ಇದರಲ್ಲಿ ಜಿಂಕ್ ಇರುವ ಅಕ್ಕಿಯ ಸೇವನೆಯಿಂದ ಇಮ್ಯುನಿಟಿ ಹೆಚ್ಚುತ್ತದೆ. ಇದು ಕೊರೋನಾ ಸೇರಿದಂತೆ ಎಲ್ಲಾ ಖಾಯಿಲೆಗಳ ವಿರುದ್ಧ ಹೋರಾಡಲು ಸಹಕಾರಿ ಎನ್ನುತ್ತಾರೆ ಜಿಕೆವಿಕೆ ಕುಲಪತಿ ಡಾ ರಾಜೇಂದ್ರ ಪ್ರಸಾದ್.
Youtube Video

ಆಹಾರದಲ್ಲೇ ಔಷಧ ಹುಡುಕಿದ ಜಿಕೆವಿಕೆ ವಿಜ್ಞಾನಿಗಳು!

ದೇಹದಲ್ಲಿ ಕೊರತೆ ಇರುವ ಖನಿಜಗಳನ್ನು ಹೀಗೆ ಅಕ್ಕಿಯ ಮೂಲಕ ನೀಡೋದು ಅತ್ಯಂತ ಸಮರ್ಪಕ ಮಾರ್ಗ. ಜಿಂಕ್ ಅನ್ನು ಔಷಧದ ರೂಪದಲ್ಲಿ ಸೇವಿಸುವ ಬದಲು ಪೌಷ್ಟಿಕ್ 1 ಅಕ್ಕಿಯ ಬಳಕೆ ಆರಂಭಿಸಿದರೆ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಳ್ಳಬಹುದು.‌ ಆದರೆ ಯಾರ್ಯಾರ ದೇಹದ ಅವಶ್ಯಕತೆಗೆ ಎಷ್ಟೆಷ್ಟು ಪ್ರಮಾಣದಲ್ಲಿ ಈ ಅಕ್ಕಿಯ ಸೇವನೆ ಆಗಬೇಕು ಎನ್ನುವುದರ ಬಗ್ಗೆ ವೈದ್ಯಲೋಕ ಸಂಶೋಧನೆ ನಡೆಸಬೇಕಿದೆ. ಇದರ ಹೊರತಾಗಿ ಔಷಧೀಯ ಗುಣವುಳ್ಳ ಅಕ್ಕಿಯ ತಳಿಗಳು ಅಚ್ಚರಿಯ ಜೊತೆಗೆ ಅದ್ಭುತ ಎನ್ನುವುದಂತೂ ಸತ್ಯ.
Published by: HR Ramesh
First published: November 13, 2020, 7:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories