ಪತ್ರಕರ್ತರ ವಿಧಾನಸೌಧ ಪ್ರವೇಶಕ್ಕೆ ರಹದಾರಿ ಪತ್ರ ನೀಡಲು ಬಿಎಸ್​ವೈ ಆದೇಶ; ಅಧಿವೇಶನಕ್ಕೆ ನಿರ್ಬಂಧದ ಬಗ್ಗೆ ತುಟಿ ಬಿಚ್ಚದ ಸಿಎಂ

ಕಲಾಪಗಳಿಗೆ ಮಾಧ್ಯಮ ನಿರ್ಬಂಧ ಸಂಬಂಧ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ನಾಲ್ಕು ದಿನಗಳ ಹಿಂದೆ, ಆದೇಶ ಮರುಪರಿಶೀಲಿಸುವಂತೆ ಸ್ಪೀಕರ್ ಅವರಲ್ಲಿ ಮನವಿ ಮಾಡುವುದಾಗಿ ಟ್ವೀಟ್ ಮಾಡಿದ್ದರು. ಆದರೆ, ಟ್ವೀಟ್ ಮಾಡಿದ ಸ್ವಲ್ಪ ಹೊತ್ತಿನ ಬಳಿಕ ಆ ಟ್ವೀಟ್ ಅನ್ನು ಡಿಲೀಟ್​ ಮಾಡಿದ್ದರು. ಆನಂತರ ಆ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. 

HR Ramesh | news18-kannada
Updated:October 19, 2019, 5:10 PM IST
ಪತ್ರಕರ್ತರ ವಿಧಾನಸೌಧ ಪ್ರವೇಶಕ್ಕೆ ರಹದಾರಿ ಪತ್ರ ನೀಡಲು ಬಿಎಸ್​ವೈ ಆದೇಶ; ಅಧಿವೇಶನಕ್ಕೆ ನಿರ್ಬಂಧದ ಬಗ್ಗೆ ತುಟಿ ಬಿಚ್ಚದ ಸಿಎಂ
ಸಿಎಂ ಬಿಎಸ್​ವೈ ಹೊರಡಿಸಿರುವ ಆದೇಶ ಪ್ರತಿ
  • Share this:
ಬೆಂಗಳೂರು: ವಿಧಾನಸಭೆ ಜಂಟಿ ಸದನ ಅಧಿವೇಶನ ನೇರ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಸ್ಪೀಕರ್ ಹೊರಡಿಸಿರುವ ಆದೇಶದ ಬಗ್ಗೆ ಸಿಎಂ ಯಡಿಯೂರಪ್ಪ ಒಂದು ವಾರದಿಂದ ಯಾವುದೇ ಸ್ಪಷ್ಟನೆ ನೀಡದೆ ದಿವ್ಯ ಮೌನ ತಾಳಿದ್ದಾರೆ.

ಅಧಿವೇಶನ ನೇರಪ್ರಸಾರ ಮಾಡುವಂತಿಲ್ಲ ಎಂದು ಸ್ಪೀಕರ್ ಆದೇಶ ಹೊರಡಿಸಿದ ಬಳಿಕ, ಮಾಧ್ಯಮದವರಿಗೆ ಪೊಲೀಸರು ವಿಧಾನಸೌಧ ಪ್ರವೇಶಿಸುವುದಕ್ಕೂ ಕೂಡ ನಿರ್ಬಂಧ ವಿಧಿಸಿದ್ದರು. ಈ ಸಂಬಂಧ ಪತ್ರಕರ್ತರು ಪ್ರತಿಭಟನೆಯನ್ನೂ ನಡೆಸಿದ್ದರು. ಅಷ್ಟೇ ಅಲ್ಲದೇ. ಕಳೆದ ಒಂದು ವಾರದಿಂದ ಸಿಎಂ ಹಾಗೂ ಸಚಿವರ ಸುದ್ದಿಗೋಷ್ಠಿ, ಕಾರ್ಯಕ್ರಮಗಳಿಗೆ ಮಾಧ್ಯಮದವರು ಬಹಿಷ್ಕಾರ ಹಾಕಿ, ದೂರ ಉಳಿದಿದ್ದಾರೆ.

ಮಾಧ್ಯಮಗಳ ಬಹಿಷ್ಕಾರ ಬಳಿಕ ಜಾಣ್ಮೆ ನಡೆ ಪ್ರದರ್ಶಿಸಿರುವ ಸಿಎಂ ಬಿಎಸ್​ವೈ, ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ‌ ಕಟ್ಟಡಗಳಿಗೆ ಪತ್ರಕರ್ತರ ಪ್ರವೇಶಕ್ಕೆ ಅನುಕೂಲವಾಗುವಂತೆ ರಹದಾರಿ ಪತ್ರಗಳನ್ನು ನೀಡುವಂತೆ ಆದೇಶ ಹೊರಡಿಸಿದ್ದಾರೆ. ಆದರೆ, ಮುಖ್ಯವಾಗಿರುವ ಅಧಿವೇಶನದ ನೇರ ಪ್ರಸಾರ ಕುರಿತು ಸಿಎಂ ಮೌನ ತಾಳಿದ್ದಾರೆ. ಸ್ಪೀಕರ್ ನಿರ್ಧಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಸಿಎಂ ವರ್ತಿಸುತ್ತಿದ್ದಾರೆ.

ಇದನ್ನು ಓದಿ: ಸಿಎಂ ಕಾರ್ಯಕ್ರಮಗಳಿಗೂ ಮಾಧ್ಯಮಗಳಿಗೆ ನಿರ್ಬಂಧ; ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪತ್ರಕರ್ತರ ಧರಣಿ

ಕಲಾಪಗಳಿಗೆ ಮಾಧ್ಯಮ ನಿರ್ಬಂಧ ಸಂಬಂಧ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ನಾಲ್ಕು ದಿನಗಳ ಹಿಂದೆ, ಆದೇಶ ಮರುಪರಿಶೀಲಿಸುವಂತೆ ಸ್ಪೀಕರ್ ಅವರಲ್ಲಿ ಮನವಿ ಮಾಡುವುದಾಗಿ ಟ್ವೀಟ್ ಮಾಡಿದ್ದರು. ಆದರೆ, ಟ್ವೀಟ್ ಮಾಡಿದ ಸ್ವಲ್ಪ ಹೊತ್ತಿನ ಬಳಿಕ ಆ ಟ್ವೀಟ್ ಅನ್ನು ಡಿಲೀಟ್​ ಮಾಡಿದ್ದರು. ಆನಂತರ ಆ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.

First published: October 19, 2019, 5:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading