ಇನ್ನು 15 ದಿನ ಸಮಯ ಕೊಡಿ Bitcoin ಹಗರಣದ ವಾಸ್ತವಾಂಶ ಹೊರಗೆ ತೆಗೆಯುತ್ತೇನೆ; HD Kumaraswamy

2018 ರ ಫೆಬ್ರವರಿ ಯುಬಿ ಸಿಟಿ ಘಟನೆ ನಡೆದಾಗ ಹಲ್ಲೆಯಾಗಿತ್ತು. ಇದು ಕೇವಲ ಎರಡು ವ್ಯಕ್ತಿಗಳ ಸಂಘರ್ಷ ಅಲ್ಲ ಅಂತ 2018 ರಲ್ಲೇ ಹೇಳಿದ್ದೆ. ಅವತ್ತು ಕಾಂಗ್ರೆಸ್ ಸರ್ಕಾರ ಇತ್ತು. ಘಟನೆ ನಡೆದ ಸಂದರ್ಭದಲ್ಲಿ ಶ್ರೀಕಿ ಕೂಡ ಇದ್ದ. ನಿಮ್ನ ಕೈಯಲ್ಲೇ ಅಧಿಕಾರ ಇತ್ತಲ್ಲ, ಆಗ ಯಾಕೆ ಶ್ರೀಕಿಯನ್ನು ಅರೆಸ್ಟ್ ಮಾಡಲಿಲ್ಲ? ಎಂದು ಕಾಂಗ್ರೆಸ್​ ನಾಯಕರಿಗೆ ಪ್ರಶ್ನೆ ಮಾಡಿದರು.

ಎಚ್​.ಡಿ ಕುಮಾರಸ್ವಾಮಿ.

ಎಚ್​.ಡಿ ಕುಮಾರಸ್ವಾಮಿ.

 • Share this:
  ಬೆಂಗಳೂರು: ಕಾಂಗ್ರೆಸ್ ನಾಯಕರು (Congress Leaders) ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಹಾದಿ ತಪ್ಪಿಸುವವ ಕೆಲಸ ಮಾಡುತ್ತಿದ್ದಾರೆ. ತನಿಖೆ ಹಾದಿ ತಪ್ಪಲು ನೀವೇ ಕಾರಣ ಆಗಬೇಡಿ. ಪ್ರಧಾನಿಗಳು (PM Narendra Modi) ಮೌನವಾಗಿದ್ದಾರೆ ಅಂತ ಇದನ್ನು ಮುಚ್ಚಿಹಾಕೋದಕ್ಕೆ ಹೊರಟಿದ್ದಾರೆ ಅಂತ ಹೇಳೋಕಾಗಲ್ಲ. ತನಿಖಾ ಹಂತದಲ್ಲಿ ಯಾವುದೇ ರೀತಿ ದಾರಿ ತಪ್ಪಿಸುವ ಕೆಲಸ ಬೇಡ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಾನು ಹೇಳುತ್ತೇನೆ. ಅಮೆರಿಕಕ್ಕೆ ಪ್ರಧಾನಿಗಳು ಹೋಗದೇ ಇದ್ದರೆ ಇದು ಇಷ್ಟು ದೊಡ್ಡ ಮಟ್ಟಕ್ಕೆ ಇದು ಹೋಗ್ತಿರಲಿಲ್ಲ. ಇನ್ನೂ ಹದಿನೈದು ದಿನ ಸಮಯ ಕೊಡಿ ಇದರ ವಾಸ್ತವಾಂಶ ಹೊರಗೆ ತೆಗೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಅವರು ಹೇಳಿದರು.

  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ರಾಜಕಾರಣ ವಿಷಯವಾಗಿ ಪ್ರತಿಕ್ರಿಯೆ ನೀಡಿದರು. ಬಿಜೆಪಿಯವರದ್ದು ಯಾವ ರಾಜಕಾರಣ? ಅಪ್ಪಚ್ಚು ರಂಜನ್ ಸಹೋದರ ಎಂಎಲ್ಸಿ, ಜಗದೀಶ್ ಶೆಟ್ಟರ್ ತಮ್ಮ ಎಂಎಲ್ಸಿ, ಉದಾಸಿ ಕುಟುಂಬ... ಹೀಗೆ ಬಿಜೆಪಿಯವರು ಕ್ಷುಲ್ಲಕ ವಿಚಾರವಾಗಿ ರಾಜಕೀಯ  ಮಾತಾಡಬೇಡಿ ಎಂದು ತಿರುಗೇಟು ನೀಡಿದರು.

  ನಿಖರವಾದ ರಾಜಕೀಯ ಮುಖಂಡರಿಗೋ ಅಥವಾ ಅಧಿಕಾರಿಗೋ ಹಣ ಟ್ರಾನ್ಸಫರ್ ಆದ ಬಗ್ಗೆ ಕಾಂಗ್ರೆಸ್ ನವರು ದಾಖಲೆ ನೀಡುವುದು ಸೂಕ್ತ. ಸಾರ್ವಜನಿಕರಲ್ಲೂ ಆತಂಕ ಉಂಟಾಗುತ್ತಿದೆ. 2016 ರಿಂದಲೇ ಇದು ಪ್ರಾರಂಭ ಆಗಿದೆ ಅಂತ ಮಾಹಿತಿ ಇದೆ. 2018 ರ ಫೆಬ್ರವರಿ ಯುಬಿ ಸಿಟಿ ಘಟನೆ ನಡೆದಾಗ ಹಲ್ಲೆಯಾಗಿತ್ತು. ಇದು ಕೇವಲ ಎರಡು ವ್ಯಕ್ತಿಗಳ ಸಂಘರ್ಷ ಅಲ್ಲ ಅಂತ 2018 ರಲ್ಲೇ ಹೇಳಿದ್ದೆ. ಅವತ್ತು ಕಾಂಗ್ರೆಸ್ ಸರ್ಕಾರ ಇತ್ತು. ಘಟನೆ ನಡೆದ ಸಂದರ್ಭದಲ್ಲಿ ಶ್ರೀಕಿ ಕೂಡ ಇದ್ದ. ನಿಮ್ನ ಕೈಯಲ್ಲೇ ಅಧಿಕಾರ ಇತ್ತಲ್ಲ, ಆಗ ಯಾಕೆ ಶ್ರೀಕಿಯನ್ನು ಅರೆಸ್ಟ್ ಮಾಡಲಿಲ್ಲ? ವೆಸ್ಟ್ ಬೆಂಗಾಲ್ ನಿಂದ ವ್ಯಕ್ತಿಯೊಬ್ಬನನ್ನು ಅರೆಸ್ಟ್ ಮಾಡಿದ್ರಲ್ಲ, ಶ್ರೀಕಿಯನ್ನು ಏಕೆ ಬಂಧಿಸಲಿಲ್ಲ ಎಂದು ಕಾಂಗ್ರೆಸ್​ ನಾಯಕರಿಗೆ ಪ್ರಶ್ನೆ ಮಾಡಿದರು.

  ಇದನ್ನು ಓದಿ: Bitcoin Scam ಬಗ್ಗೆ ಪ್ರಧಾನಿ ಮೋದಿ ಮೊದಲು ಪ್ರತಿಕ್ರಿಯೆ ನೀಡಲೇಬೇಕು: ರಣದೀಪ್ ಸುರ್ಜೆವಾಲಾ ಆಗ್ರಹ

  ಪ್ರಧಾನಿ ಪ್ರತಿಕ್ರಿಯೆ ನೀಡಲಿ ಎಂದು ಕಾಂಗ್ರೆಸ್ ಆಗ್ರಹ

  ಬಿಟ್ ಕಾಯಿನ್ ಹಗರಣ ಸಂಬಂಧ ಇಂದು ದೆಹಲಿಯಲ್ಲಿ ಮಾತನಾಡಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು, ಶ್ರೀಕಿ ಕಸ್ಢಡಿಯಲ್ಲಿದ್ದಾಗಲೇ ಬಿಟ್ ಕಾಯಿನ್ ವರ್ಗಾವಣೆ ಆಗಿದೆ. ಕಾಂಗ್ರೆಸ್ ನಾಯಕರಿದ್ದರೆ ಅವರನ್ನು ಶಿಕ್ಷಿಸಲಿಲ್ಲ ಏಕೆ?. ಅವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಪ್ರಧಾನಿ ಮೋದಿ ಪ್ರತಿಕ್ರಿಯೆ ಬಳಿಕ ಕಾಂಗ್ರೆಸ್ ಮುಂದಿನದನ್ನು ನಿರ್ಧರಿಸಲಿದೆ. ಶ್ರೀಕಿ ಬಂಧನ ಮಾಡಿ‌ ಬಿಡುಗಡೆ ಮಾಡುವವರೆಗೆ ಕರ್ನಾಟಕ ಬಿಜೆಪಿ ಸರ್ಕಾರ ಸುಮ್ಮನಿದ್ದದ್ದು ಏಕೆ? ಬಿಟ್ ಕಾಯಿನ್ ಹಗರಣದ ಹಣ ಭಯೋತ್ಪಾದನೆಗೂ ಬಳಕೆಯಾಗಿರಬಹುದು. ಈ ಬಗ್ಗೆ ಎನ್ ಐ ಎ ಅಥವಾ ಆರ್ ಬಿಐಗೆ ಏಕೆ ತಿಳಿಸಿಲ್ಲ. ಬಿಜೆಪಿ ಸರ್ಕಾರ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಹಾಲಿ ಜಡ್ಜ್ ಮೇಲ್ವಿಚಾರಣೆಯಲ್ಲಿ SIT ರಚಿಸಿ ತನಿಖೆ ಆಗಬೇಕು. ಆಗ ಮಾತ್ರ ಸತ್ಯ ಹೊರ ಬರಲು ಸಾಧ್ಯ. ಪ್ರಧಾನಿ ಮೋದಿ ಅಮೇರಿಕಾಕ್ಕೆ ತೆರಳಿದ್ದಾಗ ಈ ಬಗ್ಗೆ ಪ್ರಸ್ತಾಪವಾಗಿದೆ. ಇದರಿಂದ ಅವರು ಮುಜುಗರ ಅನುಭವಿಸಬೇಕಾಯಿತು. ಇತ್ತೀಚೆಗೆ ಇಡಿ ಎಂದರೆ ಎಲೆಕ್ಷನ್ ಡಿಪಾರ್ಟ್ಮೆಂಟ್. ಅದು ಬಿಜೆಪಿಯ ಎಲೆಕ್ಷನ್ ಡಿಪಾರ್ಟ್‌ಮೆಂಟ್ ಆಗಿದೆ.15 ಫೆಬ್ರವರಿ 2021ರಲ್ಲಿ ಇಡಿ ಕೇಳಿದೆ. ಆದರೂ ಮಾಹಿತಿ ನೀಡಿಲ್ಲ. ಬಹಳ ದಿನಗಳ ಬಳಿಕ ಕೇವಲ 1 ಕೇಸಿನ ಬಗ್ಗೆ ಇಡಿಗೆ ಮಾಹಿತಿ ನೀಡಲಾಗಿದೆ. ಇದು ಕೇವಲ ಇಡಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಇಂಟರ್ ಪೋಲ್, ಎಎನ್ ಐ, ಆರ್ ಬಿಐಗೆ ಕೂಡ ಸಂಬಂಧಿಸಿದ್ದು ಎಂದು ಅವರು ಹೇಳಿದರು.
  Published by:HR Ramesh
  First published: