ಐಎಂಎಫ್​ ಮುಖ್ಯ ಆರ್ಥಿಕ ತಜ್ಞೆಯಾಗಿ ನೇಮಕಗೊಂಡ ಮೈಸೂರಿನ ಗೀತಾ ಗೋಪಿನಾಥ್​

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್​ ಸ್ನಾತಕೋತ್ತರ ಪದವಿ ಪಡೆದ ಗೀತಾ ಗೋಪಿನಾಥ್​ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಟರ್​ನ್ಯಾಷನಲ್ ಸ್ಟಡೀಸ್ ಮತ್ತು ಎಕನಾಮಿಕ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ವಿಶ್ವಸಂಸ್ಥೆಯ ಉನ್ನತ ಹುದ್ದೆಗೆ ಏರಿದ್ದಾರೆ.

ಗೀತಾ ಗೋಪಿನಾಥ್​

ಗೀತಾ ಗೋಪಿನಾಥ್​

  • News18
  • Last Updated :
  • Share this:
ವಾಷಿಂಗ್ಟನ್​ (ಜ. 8): ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ಮುಖ್ಯ ಆರ್ಥಿಕ ತಜ್ಞೆಯಾಗಿ ಮೈಸೂರು ಮೂಲದ ಗೀತಾ ಗೋಪಿನಾಥ್​ ನೇಮಕಗೊಂಡಿದ್ದಾರೆ. ವಿಶೇಷವೆಂದರೆ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಇವರಾಗಿದ್ದಾರೆ.

ಜಗತ್ತಿನಲ್ಲಿ ಜಾಗತೀಕರಣದಿಂದ ಹಿನ್ನಡೆಯಾಗಿರುವುದರಿಂದ ಹಲವಾರು ರೀತಿಯ ಆರ್ಥಿಕ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ಮುಖ್ಯ ಆರ್ಥಿಕ ತಜ್ಞೆಯಾಗಿ ಅಧಿಕಾರ ವಹಿಸಿಕೊಂಡಿರುವ 47 ವರ್ಷದ ಗೀತಾ ಗೋಪಿನಾಥ್​ ಅವರ ಮೇಲೆ ನಿರೀಕ್ಷೆ ಹಾಗೂ ಜವಾಬ್ದಾರಿಗಳು ಹೆಚ್ಚಾಗಿವೆ.

ಇದನ್ನೂ ಓದಿ: CBI Chief Alok Verma: ಮೋದಿ ಸರ್ಕಾರಕ್ಕೆ ಮುಖಭಂಗ, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮರು ನೇಮಕಕ್ಕೆ ಸುಪ್ರೀಂಕೋರ್ಟ್ ಆದೇಶ

ಮೈಸೂರಿನಲ್ಲಿ ಹುಟ್ಟಿದ ಗೀತಾ ಗೋಪಿನಾಥ್​ ಅವರನ್ನು ವಿಶ್ವದ ಅತ್ಯದ್ಭುತ ಆರ್ಥಿಕ ತಜ್ಞೆ ಎಂದು ಐಎಂಎಫ್​ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಕ್ರಿಸ್ಟೈನ್​ ಲಗಾರ್ಡ್​ ಬಣ್ಣಿಸಿದ್ದಾರೆ. ಗೀತಾ ತಂದೆ-ತಾಯಿ ಮೂಲತಃ ಕೇರಳದವರು. ಮೈಸೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಗೀತಾ ಗೋಪಿನಾಥ್​ ನಂತರ ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್​ ಸ್ನಾತಕೋತ್ತರ ಪದವಿ ಪಡೆದು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಟರ್​ನ್ಯಾಷನಲ್ ಸ್ಟಡೀಸ್ ಮತ್ತು ಎಕನಾಮಿಕ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ವಿಶ್ವಸಂಸ್ಥೆಯ ಉನ್ನತ ಹುದ್ದೆಗೆ ಏರಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶದ ದೇವಾಲಯದಲ್ಲಿ ಪೂರಿ-ಸಾಗು ಜೊತೆಗೆ ಮದ್ಯದ ಬಾಟಲಿ ಹಂಚಿದ ಬಿಜೆಪಿ ಶಾಸಕ

2016 ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಣಕಾಸು ಸಲಹೆಗಾರರಾಗಿ ನೇಮಕಗೊಂಡಿದ್ದ ಗೀತಾ ಗೋಪಿನಾಥ್​ ಅಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಇದೀಗ ಇವರು ವಿಶ್ವಸಂಸ್ಥೆ ಹಣಕಾಸು ನಿಧಿಯ 11ನೇ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ವಿಶ್ವ ಹಣಕಾಸು ನಿಧಿಯ ಮುಂದಿರುವ ಸವಾಲುಗಳೇನು ಎಂಬುದು ನನಗೆ ಸರಿಯಾಗಿ ತಿಳಿದಿದೆ. ಜಾಗತೀಕರಣದಿಂದ ಹಿನ್ನಡೆಯಾಗಿರುವುದು ಸದ್ಯಕ್ಕೆ ನಮ್ಮ ಮುಂದಿರುವ ಗಂಭೀರ ವಿಷಯ ಎಂದು ಗೀತಾ ಗೋಪಿನಾಥ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

First published: